ಕರ್ನಾಟಕ ರಾಜ್ಯದ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ COBSE ಪಟ್ಟಿಯಲ್ಲಿರುವ ಬೋರ್ಡ್ ಗಳಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಪ್ರಥಮ ಪಿಯುಸಿಗೆ ದಾಖಲಾಗಲು ಅರ್ಹರಿರುತ್ತಾರೆ.
2. 2024-25ನೇ ಶೈಕ್ಷಣಿಕ ಸಾಲಿಗೆ ಇತರೆ ರಾಜ್ಯಗಳಿಂದ/ಸಿ.ಬಿ.ಎಸ್.ಇ/ಐ.ಸಿ.ಎಸ್.ಇ ಬೋರ್ಡ್ ಗಳಿಂದ ರಾಜ್ಯ ಪಠ್ಯಕ್ರಮದಲ್ಲಿ ಪ್ರಥಮ ಪಿಯುಸಿಗೆ ದಾಖಲಾತಿ ಬಯಸುವ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಈ ಕೆಳಕಂಡ ವಿಧಾನದಲ್ಲಿ ತಾತ್ಕಾಲಿಕ ಅರ್ಹತಾ ಪತ್ರವನ್ನು ಪಡೆದುಕೊಳ್ಳುವುದು:
ವಿದ್ಯಾರ್ಥಿಗಳು ಅರ್ಹತಾ ಪತ್ರವನ್ನು ಪಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳು:
1 PU PORTAL (www.pue.karnataka.gov.in) ವಿದ್ಯಾರ್ಥಿಗಳಿಗೆ ಲಾಗ್ ಇನ್ ಒದಗಿಸಲಾಗಿದೆ. (OTP Based)
H ಎಲ್ಲಾ ಅಗತ್ಯ ದಾಖಲೆಗಳನ್ನು ವಿದ್ಯಾರ್ಥಿಯು upload ಮಾಡಿ, payment ಮಾಡುವುದು, ತದನಂತರ ವಿದ್ಯಾರ್ಥಿಗೆ Unique Id ಸೃಜನೆಯಾಗುತ್ತದೆ.
111 ಒಮ್ಮೆ ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ.
IV. ಸೃಜನೆಯಾದ Unique Id ನ್ನು ವಿದ್ಯಾರ್ಥಿಯು ದಾಖಲಾತಿ ಬಯಸಿದ ಕಾಲೇಜಿನ ಪ್ರಾಂಶುಪಾಲರಿಗೆ ನೀಡುವುದು.
V. ಆಯಾ ಕಾಲೇಜಿನ ಪ್ರಾಚಾರ್ಯರು ಸದರಿ ವಿದ್ಯಾರ್ಥಿಯ Unique Id ಬಳಸಿಕೊಂಡು, ದಾಖಲೆಗಳನ್ನು ಮೂಲ ದಾಖಲೆಗಳೊಂದಿಗೆ ಪರಿಶೀಲಿಸಿ, ಖಚಿತಪಡಿಸಿಕೊಂಡು ಅನುಮೋದಿಸಿ ಅರ್ಹತಾ ಪ್ರಮಾಣ ಪತ್ರ ಡೌನ್ ಲೋಡ್ ಮಾಡಿಕೊಂಡು, ನಿಯಮಾನುಸಾರ ದಾಖಲಾತಿ ಮಾಡಿಕೊಂಡು, ಸದರಿ ಪ್ರಮಾಣ ಪತ್ರದಲ್ಲಿ ಕಾಲೇಜಿನ ಹೆಸರು ನಮೂದು ಮಾಡಿ ಸಹಿ ಮಾಡುವುದು.
VI Unique Id ಯನ್ನು SATS ನಲ್ಲಿ ನಮೂದಿಸಿ ದಾಖಲಾತಿ ವಿವರಗಳನ್ನು ನಮೂದಿಸುವುದು.
VII ಒಂದು ವೇಳೆ ದಾಖಲೆಗಳು ಸಮರ್ಪಕವಾಗಿರದಿದ್ದ ಪಕ್ಷದಲ್ಲಿ. Reject ಮಾಡಿ ವಿದ್ಯಾರ್ಥಿಗೆ ಪುನ: ಸಮರ್ಪಕವಾದ ದಾಖಲೆಗಳನ್ನು Upload ಮಾಡಲು ಅವಕಾಶ ನೀಡುವುದು, (ವಿದ್ಯಾರ್ಥಿಗೆ ನೋಂದಾಯಿಸಿದ ಮೊಬೈಲ್ ನಂಬರ್ ಗೆ ಸಂದೇಶ ರವಾನೆಯಾಗುವುದು).
VIII ವಿದ್ಯಾರ್ಥಿಯು ಸಮರ್ಪಕವಾದ ದಾಖಲೆಗಳನ್ನು Upload ಮಾಡಿದ ನಂತರ ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರು ಅರ್ಹತಾ ಪ್ರಮಾಣ ಪತ್ರವನ್ನು ಡೌನ್ ಲೋಡ್ ಮಾಡಿಕೊಂಡು ನಿಯಮಾನುಸಾರ ದಾಖಲಾತಿ ಮಾಡಿಕೊಳ್ಳುವುದು.
3. ವಿದೇಶಗಳಲ್ಲಿ ಕರ್ನಾಟಕ ರಾಜ್ಯದ ಎಸ್.ಎಸ್.ಎಲ್.ಸಿ.ಗೆ ತತ್ಸಮಾನ (COBSE ಪಟ್ಟಿಯಲ್ಲಿರುವ ಸಂಸ್ಥೆ / ಮಂಡಳಿಗಳಲ್ಲಿ) ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ (CBSE ಹೊರತುಪಡಿಸಿ) ಪದವಿ ಪೂರ್ವ ಶಿಕ್ಷಣ ಇಲಾಖೆಯ ಕೇಂದ್ರ ಕಛೇರಿಯಿಂದ ನೀಡಲ್ಪಟ್ಟ ತಾತ್ಕಾಲಿಕ ಅರ್ಹತಾ ಪತ್ರವನ್ನು ಅಭ್ಯರ್ಥಿಗಳಿಂದ ಪಡೆದು ದಾಖಲಾತಿ ನೀಡಬೇಕು. ಇಲಾಖೆಯಿಂದ ತಾತ್ಕಾಲಿಕ ಅರ್ಹತಾ ಪತ್ರವನ್ನು ಪಡೆಯದಿರುವ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ದಾಖಲಾತಿ ನೀಡಬಾರದು. ದಾಖಲಾತಿ ನೀಡಿದಲ್ಲಿ ಅಂತಹ ವಿದ್ಯಾರ್ಥಿಗಳ ದಾಖಲಾತಿಯನ್ನು ರದ್ದುಪಡಿಸಲಾಗುವುದು ಮತ್ತು ಮುಂದೆ ಆಗುವ ಪರಿಣಾಮಗಳಿಗೆ ಪ್ರಾಂಶುಪಾಲರೇ ಪೂರ್ಣ ಜವಾಬ್ದಾರರಾಗುತ್ತಾರೆ. ಈ ರೀತಿಯ ದಾಖಲಾತಿಗಳನ್ನು ಮುನ್ಸೂಚನೆ ಇಲ್ಲದೇ ರದ್ದುಪಡಿಸಲಾಗುವುದು.
2024-25ನೇ ಶೈಕ್ಷಣಿಕ ಸಾಲಿಗೆ ಇತರೆ ರಾಜ್ಯಗಳಿಂದ/ಸಿ.ಬಿ.ಎಸ್.ಇ/ಐ.ಸಿ.ಎಸ್.ಇ ಬೋರ್ಡ್ ಗಳಿಂದ ರಾಜ್ಯ ಪಠ್ಯಕ್ರಮದಲ್ಲಿ ದ್ವಿತೀಯ ಪಿಯುಸಿಗೆ ದಾಖಲಾತಿ ಬಯಸುವ ವಿದ್ಯಾರ್ಥಿಗಳು ಕೇಂದ್ರ ಕಛೇರಿಯಿಂದ ಕಡ್ಡಾಯವಾಗಿ ತಾತ್ಕಾಲಿಕ ಅರ್ಹತಾ ಪ್ರಮಾಣ ಪತ್ರವನ್ನು ಪಡೆದ ನಂತರ ದಾಖಲಾಗುವುದು.
5. ಇಲಾಖೆಯಿಂದ ಅನುಮತಿ ಪಡೆದ ಭಾಷೆ ಮತ್ತು ಸಂಯೋಜನೆಗಳಿಗೆ ಮಾತ್ರ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಬೇಕು. ಇದನ್ನು ಮೀರಿ ನಿಯಮಬದ್ಧವಲ್ಲದ ಸಂಯೋಜನೆಗಳಿಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡು ಅಭ್ಯಾಸ ಮಾಡಲು ಅನುವು ಮಾಡಿಕೊಟ್ಟಲ್ಲಿ ಅಂತಹ ದಾಖಲಾತಿಗಳನ್ನು ಏಕಪಕ್ಷೀಯವಾಗಿ ರದ್ದುಪಡಿಸಲಾಗುವುದು.
6. SSLC / ತತ್ಸಮಾನ ತರಗತಿಯಲ್ಲಿ ಭಾಷಾ ವಿನಾಯಿತಿ ಪಡೆದಿರುವ ಕಲಿಕಾ ನ್ಯೂನತೆ, ಬುದ್ದಿಮಾಂದ್ಯ ಹಾಗೂ ಶ್ರವಣದೋಷ ಇರುವ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣದ ಹಂತದಲ್ಲಿ ಭಾಷಾ ವಿನಾಯಿತಿಯನ್ನು ಪಡೆಯಲು ನಿಗದಿತ ದಿನಾಂಕದೊಳಗೆ ಕಡ್ಡಾಯವಾಗಿ ನಿಯಮಾನುಸಾರ ಅರ್ಜಿಯನ್ನು ಸರ್ಕಾರದ ಆದೇಶದಂತೆ ಸಲ್ಲಿಸಬೇಕು. ಪರೀಕ್ಷೆಗಳು ಪ್ರಾರಂಭವಾಗುವ ಪೂರ್ವದಲ್ಲಿ ಈ ಸೌಲಭ್ಯವನ್ನು ಒದಗಿಸುವಂತೆ ಕೋರಿ ಬೇಡಿಕೆ ಸಲ್ಲಿಸಲು ಅವಕಾಶವಿರುವುದಿಲ್ಲ, ತಡವಾಗಿ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ತಪ್ಪಿದಲ್ಲಿ ಸಂಬಂಧಿಸಿದ ಪ್ರಾಚಾರ್ಯರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು.
7. 2024-25ನೇ ಸಾಲಿನ ಕಲಾ/ವಾಣಿಜ್ಯ/ವಿಜ್ಞಾನ ಸಂಯೋಜನೆಯ ಪ್ರತಿ ವಿಭಾಗಕ್ಕೆ ನಿಗದಿತ ಗರಿಷ್ಠ ಪ್ರವೇಶಗಳ ಸಂಖ್ಯೆ 80(ಎಂಭತ್ತು) ಮಾತ್ರ ಇದನ್ನು ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡಲ್ಲಿ ಅಂತಹ ವಿದ್ಯಾರ್ಥಿಗಳ ದಾಖಲಾತಿಯನ್ನು ಅನುಮೋದಿಸಲಾಗುವುದಿಲ್ಲ ಪ್ರಾಚಾರ್ಯರು/ಆಡಳಿತ ಮಂಡಳಿಯವರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಮುಂದಿನ ಆಗುಹೋಗುಗಳಿಗೆ
8. 1 ಪ್ರತಿ ವಿದ್ಯಾರ್ಥಿಯು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯ ನೋಂದಣಿ ಸಂಖ್ಯೆ, ವರ್ಷ ಮತ್ತು ತಿಂಗಳ SATS (Students Achievement Tracking System) ನಮೂದಿಸುವುದು, ನೋಂದಣಿ ಸಂಖ್ಯೆಯನ್ನಾಗಲಿ ಅಥವಾ ವರ್ಷ ಮತ್ತು ತಿಂಗಳ ಮಾಹಿತಿಯನ್ನಾಗಲಿ ತಪ್ಪಾಗಿ ಇಲ್ಲವೇ ಅಪೂರ್ಣವಾಗಿ ನಮೂದಿಸಕೂಡದು.
11. ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ನೀಡಿರುವ ಎಸ್ಎಸ್‌ಎಲ್‌ಸಿ ವಿವರಗಳನ್ನು ಗಣಕೀಕರಿಸಿ ತಾಳೆ ಮಾಡಲಾಗುವುದು. ಯಾವುದೇ ವಿದ್ಯಾರ್ಥಿಯ ವಿವರವು ಒಂದಕ್ಕಿಂತ ಹೆಚ್ಚಿನ ಕಾಲೇಜುಗಳಲ್ಲಿ ಇರುವುದು ಕಂಡುಬಂದಲ್ಲಿ ಅಂತಹ ವಿದ್ಯಾರ್ಥಿಗಳು ದ್ವಿಪ್ರತಿ ವರ್ಗಾವಣೆ ಪತ್ರದ ದಾಖಲೆಗಳ ಆಧಾರದ ಮೇಲೆ ದಾಖಲಾತಿ ಮಾಡಿಕೊಂಡಿರುವುದು ಸ್ಪಷ್ಟವಾಗುತ್ತದೆ. ಇಂತಹ ವಿದ್ಯಾರ್ಥಿಗಳ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ದಾಖಲಾತಿ ಮಾಡಿಕೊಂಡಿರುವ ಕಾಲೇಜಿನ ಪ್ರಾಚಾರ್ಯರ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದು.
9. ಪ್ರಥಮ ಪಿಯುಸಿಗೆ ದಾಖಲಾಗುವ ವಿದ್ಯಾರ್ಥಿಗಳಿಂದ
ಕರ್ನಾಟಕ ರಾಜ್ಯದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇತರೆ (Original Migration Certificate) ಕಡ್ಡಾಯವಾಗಿರುತ್ತದೆ.
ಸೂಚನೆ:
ಬ್ಯಾಂಕ್ ಪಾಸ್‌ಬುಕ್ ನಕಲು ಪ್ರತಿ.
ಆಯಾ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ/ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಾಲೆಯಿಂದ ಮೂಲ ವರ್ಗಾವಣೆ ಪತ್ರ ಪಡೆದು ಪ್ರಥಮ ಪಿಯುಸಿ ತರಗತಿಗೆ ದಾಖಲಾಗುವ ಮೊದಲೇ ಅಚಾತುರ್ಯದಿಂದ ಮೂಲ ವರ್ಗಾವಣೆ ಪತ್ರವನ್ನು ಕಳೆದುಕೊಂಡಿದ್ದರೆ ಹತ್ತಿರದ ಪೊಲೀಸ್ ಠಾಣೆಗೆ ದೂರು ದಾಖಲಿಸಿ, ನಂತರ ಕಾಲೇಜುಗಳಲ್ಲಿ ನಿಯಮಾನುಸಾರ ಅರ್ಜಿ ಸಲ್ಲಿಸಿ ದ್ವಿಪ್ರತಿ ವರ್ಗಾವಣೆ ಪತ್ರ ಪಡೆದಿರುವ ವಿದ್ಯಾರ್ಥಿಗೆ ಪ್ರಥಮ ಪಿಯುಸಿ ತರಗತಿಗೆ ಸಂಬಂಧಿಸಿದ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ನೈಜತೆಯನ್ನು ಖಾತರಿ ಪಡಿಸಿಕೊಂಡು ನಿರ್ದೇಶನಾಲಯದ ಪೂರ್ವಾನುಮತಿ ಪಡೆದ ನಂತರ ವಿದ್ಯಾರ್ಥಿಯನ್ನು ದಾಖಲಾತಿ ಮಾಡಿಕೊಳ್ಳಬಹುದು.
ಕಳೆದ 03 ವರ್ಷಗಳಿಂದ ಶೂನ್ಯ ದಾಖಲಾತಿಯನ್ನು ಹೊಂದಿರುವ ಕಾಲೇಜುಗಳು ಯಾವುದೇ ಕಾರಣಕ್ಕೂ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ / ದ್ವಿತೀಯ ಪಿಯುಸಿಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಬಾರದು. ಆದಾಗ್ಯೂ ಒಂದು ವೇಳೆ ದಾಖಲಾತಿ ಮಾಡಿಕೊಂಡಲ್ಲಿ ಮುಂದೆ ಸಂಭವಿಸುವ ಆಗುಹೋಗುಗಳಿಗೆ ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರು/ಆಡಳಿತ ಮಂಡಳಿ ನೇರಹೊಣೆಗಾರರನ್ನಾಗಿ ಮಾಡಿ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು.
10. IGCSE and other International Boards: ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ದಾಖಲಾತಿಯನ್ನು ನಿರ್ದೇಶನಾಲಯದಿಂದ ಅರ್ಹತಾ ಪತ್ರ ಪಡೆದ ನಂತರವೇ ದಾಖಲಾತಿ ಮಾಡಿಕೊಳ್ಳಬೇಕು. ಫಲಿತಾಂಶ ಪ್ರಕಟವಾದ ನಂತರ IGCSE Board ರವರು ನೀಡುವ ಅಧಿಕೃತ ಅಂಕಪಟ್ಟಿಯನ್ನು ಪಡೆದ ನಂತರವೇ ದಾಖಲಾತಿ ಮಾಡಿಕೊಳ್ಳಬೇಕು. ಇಲಾಖೆಯು ಕಾಲಕಾಲಕ್ಕೆ ಹೊರಡಿಸುವ ಸೂಚನೆಯ ಅನುಸಾರ ದಾಖಲಾತಿ ಮಾಡಿಕೊಳ್ಳುವುದು. ಕಾಲೇಜಿನ ಪ್ರಾಚಾರ್ಯರು ಯಾವುದೇ ಕಾರಣಕ್ಕೂ ಪರೀಕ್ಷಾ ಫಲಿತಾಂಶ ಪ್ರಕಟವಾಗುವುದಕ್ಕಿಂತ ಮೊದಲು ಶಾಲೆಯವರು ನೀಡುವ ತಾತ್ಕಾಲಿಕ ಅಂಕಪಟ್ಟಿಯ ಆಧಾರದ ಮೇಲೆ ದಾಖಲಾತಿ ಮಾಡಿಕೊಳ್ಳಬಾರದು. ಈ ರೀತಿ ದಾಖಲಾತಿ ಮಾಡಿಕೊಂಡಲ್ಲಿ ಪ್ರಾಚಾರ್ಯರೇ ಸಂಪೂರ್ಣ ಜವಾಬ್ದಾರರಾಗುತ್ತಾರೆ. ಈ ರೀತಿಯ ದಾಖಲಾತಿಗಳನ್ನು ಏಕಪಕ್ಷೀಯವಾಗಿ ರದ್ದುಪಡಿಸಲಾಗುವುದು.
IGCSE and other International Boards ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ತರಗತಿಗೆ ದಾಖಲಾತಿಯನ್ನು ಪಡೆಯಲು ದಾಖಲಾತಿಯ ಕೊನೆಯ ದಿನಾಂಕದ ಮೊದಲು 10ನೇ ತರಗತಿ ಪರೀಕ್ಷೆಯನ್ನು ಬರೆದು ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು.
ರಾಜ್ಯದ ಪ್ರಥಮ ಪಿಯುಸಿ ತರಗತಿಗೆ ದಾಖಲಾಗಲು ಈ ಕೆಳಕಂಡ ಸೆಕೆಂಡರಿ ಎಜುಕೇಷನ್ ಬೋರ್ಡ್‌ಗಳಿಂದ 10ನೇ ತರಗತಿಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಮಾತ್ರ ಅರ್ಹರಿರುತ್ತಾರೆ:
IL ಪ್ರಥಮ ಪಿಯುಸಿ ತರಗತಿಗೆ ದಾಖಲಾದ ವಿದ್ಯಾರ್ಥಿಗಳ ಭಾಷೆ/ವಿಷಯಗಳ ಬದಲಾವಣೆ:
ಪ್ರಥಮ ಪಿಯುಸಿಗೆ ದಾಖಲಾದ ವಿದ್ಯಾರ್ಥಿಯು ವಿಷಯ/ಭಾಷೆಗಳ ಬದಲಾವಣೆಗೆ 2024 ಆಗಸ್ಟ್ ತಿಂಗಳ 10ನೇ ತಾರೀಖಿನೊಳಗೆ ಬದಲಾವಣೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ಬದಲಾವಣೆ ಬಯಸುವ ವಿಷಯಗಳಲ್ಲಿ ಕನಿಷ್ಠ ಶೇಕಡ 75ರಷ್ಟು ಹಾಜರಾತಿ ದೊರಕುವ ಬಗ್ಗೆ ಖಚಿತಪಡಿಸಿಕೊಂಡ ನಂತರ ಮಾತ್ರ ವಿಷಯ ಬದಲಾವಣೆಯನ್ನು ಪ್ರಾಚಾರ್ಯರ ಹಂತದಲ್ಲೇ ಮಾಡಿಕೊಳ್ಳತಕ್ಕದ್ದು,
III ಪ್ರಥಮ ಪಿಯುಸಿ ದಾಖಲಾತಿಯ ವಿವರ:
ರಾಜ್ಯದ ಎಲ್ಲಾ ಸರ್ಕಾರಿ/ಖಾಸಗಿ ಅನುದಾನಿತ / ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳು ಪ್ರಥಮ ಪಿಯುಸಿ ದಾಖಲಾತಿಯ ಬಗ್ಗೆ ಕಡ್ಡಾಯವಾಗಿ ಅನುಸರಿಸಬೇಕಾದ ಕ್ರಮಗಳು,
ಪದವಿ ಪೂರ್ವ ಶಿಕ್ಷಣ ಇಲಾಖೆ ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಮಾತ್ರ ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳು ಉಪಯೋಗಿಸತಕ್ಕದ್ದು,
ಸದರಿ ನಮೂನೆಯನ್ನು ಇಲಾಖೆಯ ಅಂತರ್ಜಾಲದಲ್ಲಿ www.pue.karnataka.gov.in ಯಿಂದ ಡೌನ್‌ಲೋಡ್ ಮಾಡಿ ಎ-4 ಅಳತೆಯ ಶೀಟಿನಲ್ಲಿ ಮುದ್ರಿಸಿ ಕಾಲೇಜಿನ ಮೊಹರು ಹಾಕಿ ವಿದ್ಯಾರ್ಥಿಗಳಿಗೆ ನೀಡತಕ್ಕದ್ದು.
ಅರ್ಜಿ ನಮೂನೆಯನ್ನು ವಿತರಿಸುವಾಗ ಸರ್ಕಾರವು ನಿಗದಿಪಡಿಸಿರುವ ಶುಲ್ಕವನ್ನು ವಿದ್ಯಾರ್ಥಿಗಳಿಂದ ಸ್ವೀಕರಿಸಿ ಪ್ರತ್ಯೇಕ ರಸೀದಿಯನ್ನು ಕಡ್ಡಾಯವಾಗಿ ನೀಡುವುದು, ಆ ರಸೀದಿಯ ಸಂಖ್ಯೆಯನ್ನು ವಿದ್ಯಾರ್ಥಿಗಳಿಗೆ ವಿತರಿಸುವ ಅರ್ಜಿಯಲ್ಲಿ ನಮೂದಿಸುವುದು. ವಿದ್ಯಾರ್ಥಿಗಳು ದಾಖಲಾಗುವ ಸಮಯದಲ್ಲಿ ಮತ್ತೊಮ್ಮೆ ಅರ್ಜಿ ಶುಲ್ಕವನ್ನು ಪಡೆಯತಕ್ಕದ್ದಲ್ಲ.
Website Website ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಸೂಚನಾ ಫಲಕದಲ್ಲಿ ಪ್ರಕಟಿಸುವುದು. ಒಂದು ವೇಳೆ ಇಲಾಖಾ Website ನಿಂದ ವಿದ್ಯಾರ್ಥಿಗಳು / ಪೋಷಕರು ಅರ್ಜಿ ನಮೂನೆಯನ್ನು Downlaod ಮಾಡಿ ಎ-4 ಆಳತೆಯ ಶೀಟ್‌ನಲ್ಲಿ ಮುದ್ರಿಸಿಕೊಂಡು ಅರ್ಜಿ ಸಲ್ಲಿಸಿದಲ್ಲಿ, ಅಂತಹ ಅರ್ಜಿಗಳನ್ನು ಪರಿಗಣಿಸಿ ನಿಗದಿತ ಅರ್ಜಿ ಶುಲ್ಕವನ್ನು ಮಾತ್ರ ಪಡೆದುಕೊಳ್ಳುವುದು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ )ಯಿಂದ ಅನುಮತಿ ನೀಡಿರುವ ಪ್ರತಿ ಸಂಯೋಜನೆಯ ವಿಭಾಗಗಳ ಸಂಖ್ಯೆ ಮತ್ತು ಭಾಷಾ ವಿಷಯಗಳ ಬಗ್ಗೆ ಸೂಚನಾ ಫಲಕದಲ್ಲಿ (Notice Board) ಪ್ರಕಟಿಸಬೇಕು.
ಪ್ರಾಚಾರ್ಯರು ತಮ್ಮ ಕಾಲೇಜಿಗೆ ಸಂಬಂಧಿಸಿದಂತೆ ಪ್ರಥಮ ಪಿಯುಸಿ ದಾಖಲಾತಿಗೆ ಲಭ್ಯವಿರುವ ಒಟ್ಟು ಪ್ರದೇಶಗಳ ಸಂಖ್ಯೆಯನ್ನು ಸಂಯೋಜನೆವಾರು ರೋಸ್ಟರ್ ಪದ್ಧತಿ ಪ್ರಕಾರ ಮುಂದೆ ನೀಡಿರುವ ಮಾದರಿ ಪಟ್ಟಿಯಲ್ಲಿನ ಮಾಹಿತಿಯಂತೆ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು.
ಪದವಿ ಪೂರ್ವ ಶಿಕ್ಷಣ ನಿಯಮಗಳು 2006 ರ ನಿಯಮ 1(3) ರನ್ವಯ ಪ್ರತಿಯೊಂದು ವಿಭಾಗದಲ್ಲಿ (Section) ಗರಿಷ್ಠ 80(ಎಂಭತ್ತು) ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳುವುದು. 80(ಎಂಭತ್ತು) ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಬಾರದು.
IV. ಪ್ರಾಚಾರ್ಯರು/ಆಡಳಿತ ಮಂಡಳಿಯವರು ಇಲಾಖೆ/ಸರ್ಕಾರ ನಿಗದಿಪಡಿಸಿರುವ ಶುಲ್ಕಗಳ ಪಟ್ಟಿಯನ್ನು ಹಾಗೂ ತಮ್ಮ ಕಾಲೇಜಿಗೆ ಇತ್ತೀಚೆಗೆ ಮಂಜೂರಾತಿ ಆಗಿರುವ ಸಂಯೋಜನೆಗಳನ್ನು ಕಾಲೇಜಿನ ಸೂಚನಾ ಫಲಕದಲ್ಲಿ (Notice Board) ಕಡ್ಡಾಯವಾಗಿ ಪ್ರಕಟಿಸಬೇಕು.
V. ದ್ವಿತೀಯ ಪಿಯುಸಿ ದಾಖಲಾತಿಗೆ ಅರ್ಹತೆಗಳು.
ಅದೇ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡಿ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು,
ಪ್ರಥಮ ಪಿಯುಸಿ ತರಗತಿಯನ್ನು ಅದೇ ಕಾಲೇಜಿನಲ್ಲಿ ಹಿಂದಿನ ವರ್ಷಗಳಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣರಾದ ವಿದ್ಯಾರ್ಥಿಗಳು,
ಹಿಂದಿನ ವರ್ಷಗಳಲ್ಲಿ ದ್ವಿತೀಯ ಪದವಿ ಪೂರ್ವ ತರಗತಿಗೆ ದಾಖಲಾಗಿ ಹಾಜರಾತಿ ಕೊರತೆಯಿಂದ ಪರೀಕ್ಷೆಗೆ ಹಾಜರಾಗಲು ಅನುಮತಿ ನಿರಾಕರಿಸಲ್ಪಟ್ಟ ವಿದ್ಯಾರ್ಥಿಗಳು,
ಪ್ರಥಮ ಪಿಯುಸಿಯನ್ನು ರಾಜ್ಯದಲ್ಲಿರುವ ಬೇರೆ ಬೇರೆ ಪದವಿ ಪೂರ್ವ ಕಾಲೇಜುಗಳಲ್ಲಿ ಹಿಂದಿನ ವರ್ಷಗಳಲ್ಲಿ ಅಭ್ಯಾಸ ಮಾಡಿ ಉತ್ತೀರ್ಣರಾಗಿದ್ದು, ದ್ವಿತೀಯ ಪಿಯುಸಿಗೆ ದಾಖಲಾತಿ ಬಯಸುವ ವಿದ್ಯಾರ್ಥಿಗಳು,
10ನೇ ತರಗತಿ/ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಪ್ರಥಮ ಪಿಯುಸಿಗೆ ದಾಖಲಾತಿ ಹೊಂದಿ ಉತ್ತೀರ್ಣರಾದ ನಂತರ ಅನಿವಾರ್ಯ ಕಾರಣದಿಂದ ವ್ಯಾಸಂಗವನ್ನು ಮುಂದುವರೆಸಲು ಸಾಧ್ಯವಾಗದ ರಾಜ್ಯದ/ ಹೊರ ರಾಜ್ಯದ ವಿದ್ಯಾರ್ಥಿಗಳು ಕೇಂದ್ರ ಕಛೇರಿಯಿಂದ ಅನುಮತಿ ಪಡೆದು ದಾಖಲಾಗುವುದು.
ಹೊರ ರಾಜ್ಯಗಳಲ್ಲಿ / ಹೊರ ದೇಶಗಳಲ್ಲಿ ಪ್ರಥಮ ಪಿಯುಸಿಗೆ ತತ್ಸಮಾನವಾದ (COBSE ಪಟ್ಟಿಯಲ್ಲಿರುವ) ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿಗೆ ದಾಖಲಾತಿ ಬಯಸುವ ವಿದ್ಯಾರ್ಥಿಗಳು ನಿರ್ದೇಶನಾಲಯದಿಂದ ತಾತ್ಕಾಲಿಕ ಅರ್ಹತಾ ಪತ್ರ (Provisional Eligibility Certificate) ವನ್ನು ದಾಖಲಾತಿಗೆ ಮೊದಲು ಕಡ್ಡಾಯವಾಗಿ ಪಡೆದು. ಕಾಲೇಜಿನಲ್ಲಿ ದಾಖಲಾತಿ ಪಡೆಯಬೇಕು.
CBSE ICSE OTHER STATE Boards ಸಂಸ್ಥೆಗಳಲ್ಲಿ 11ನೇ ತರಗತಿಯ ಪಠ್ಯಕ್ರಮದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು 12ನೇ ತರಗತಿ/ದ್ವಿತೀಯ ಪಿಯುಸಿಗೆ ದಾಖಲಾಗಲು ಅರ್ಹರಾಗಿರುತ್ತಾರೆ. ಅಂತಹ ವಿದ್ಯಾರ್ಥಿಗಳು ನಿರ್ದೇಶನಾಲಯದಿಂದ ತಾತ್ಕಾಲಿಕ ಆರ್ಹತಾ ಪತ್ರವನ್ನು ದಾಖಲಾತಿಗೆ ಮೊದಲು ಕಡ್ಡಾಯವಾಗಿ ಪಡೆದು, ಕಾಲೇಜಿನಲ್ಲಿ ದಾಖಲಾತಿ ಪಡೆಯಬೇಕು.
ವಿಶೇಷ ಸೂಚನೆ:
CBSE/ICSE/OTHER STATE Boards n 1: sơn 5 ಮಾಡಿರುವವರು, ದ್ವಿತೀಯ ಪಿಯುಸಿಯಲ್ಲಿ 6 ವಿಷಯಗಳನ್ನು ವ್ಯಾಸಂಗ ಮಾಡುವುದು ಕಡ್ಡಾಯವಾಗಿರುತ್ತದೆ. ಒಂದು ಹೆಚ್ಚುವರಿ ಪ್ರಾಯೋಗಿಕವಲ್ಲದ ವಿಷಯವನ್ನು ದ್ವಿತೀಯ ಪಿಯುಸಿಯೊಂದಿಗೆ ಪ್ರಥಮ ಪಿಯುಸಿಯಲ್ಲೂ ಉತ್ತೀರ್ಣರಾಗಬೇಕು. ಸದರಿ ವಿದ್ಯಾರ್ಥಿಗಳ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಥಮ ಪಿಯುಸಿ ಪರೀಕ್ಷೆಯ ಉತ್ತೀರ್ಣ ಫಲಿತಾಂಶ ಪ್ರಕಟವಾದ ನಂತರವೇ ಪ್ರಕಟಿಸಲಾಗುವುದು ಎಂಬ ಷರತ್ತನ್ನು ವಿಧಿಸಿ ದಾಖಲಾತಿಗೆ ಅನುಮತಿಯನ್ನು ನೀಡಲಾಗುವುದು.
VI IGCSE/NWAS/IB and other international boards 1 огто ವಿದ್ಯಾರ್ಥಿಗಳು 12ನೇ ತರಗತಿ (ದ್ವಿತೀಯ ಪಿಯುಸಿಗೆ) ದಾಖಲಾಗಲು ಅರ್ಹರಾಗಿರುವುದಿಲ್ಲ.
ವಿಶೇಷ ಸೂಚನೆ: ಕೇಂದ್ರ ಕಛೇರಿಯಿಂದ ಅರ್ಹತಾ ಪ್ರಮಾಣ ಪತ್ರವನ್ನು ಪಡೆದುಕೊಳ್ಳಲು ತಿಳಿಸಿರುವ ವಿದ್ಯಾರ್ಥಿಗಳು ದಾಖಲಾತಿಗೆ ಮೊದಲೇ ಕೇಂದ್ರ ಕಛೇರಿಯಿಂದ Eligibility ಪತ್ರವನ್ನು ಪಡೆದು ದಾಖಲಾತಿ ಮಾಡಿಕೊಳ್ಳಬೇಕು. ಒಂದು ವೇಳೆ Eligibility ಪತ್ರವನ್ನು ಪಡೆಯದೆ ದಾಖಲಾತಿ ಮಾಡಿಕೊಂಡರೆ ಮುಂದಿನ ಆಗುಹೋಗುಗಳಿಗೆ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು ಹಾಗೂ ಪ್ರಾಂಶುಪಾಲರೇ ಜವಾಬ್ದಾರರಾಗಿರುತ್ತಾರೆ.
ಪ್ರವೇಶ/ಸೀಟುಗಳನ್ನು ರೋಸ್ಟರ್ ಪದ್ಧತಿಯಂತೆ ಹಂಚುವ ವಿಧಾನ:
L ಎಲ್ಲಾ ವರ್ಗದ ಕಾಲೇಜುಗಳಲ್ಲಿ ಅಂಕಗಳ ಆಧಾರದ ಮೇಲೆ, ಮೆರಿಟ್‌ನಲ್ಲಿ ಯಾವುದೇ ಗುಂಪಿನ ಮೀಸಲಾತಿ ವಿದ್ಯಾರ್ಥಿಗಳು, ಸಾಮಾನ್ಯ ವರ್ಗಕ್ಕೆ ನಿಗದಿಯಾಗಿರುವ ಕಟ್‌ಆಫ್ ಮಾರ್ಕ್ಸ್ (cut off marks) ಒಳಗೆ ಬಂದಲ್ಲಿ ಅಂತಹ ವಿದ್ಯಾರ್ಥಿಗಳನ್ನು ಸಾಮಾನ್ಯ ವರ್ಗ ಎಂದು ಪರಿಗಣಿಸಿ ಅವರನ್ನು ಸಾಮಾನ್ಯ ವರ್ಗದ ಪಟ್ಟಿಗೆ ಸೇರಿಸಬೇಕು.
2 ನಂತರ ಆಯಾ ಮೀಸಲಾತಿ ಗುಂಪಿನವರಿಗೆ ನಿಯಮಾನುಸಾರ ಮೀಸಲಾತಿ ನಿಯಮಗಳನ್ನು ಅನುಸರಿಸಬೇಕು.
3. ವಿವಿಧ ವರ್ಗಗಳಲ್ಲಿ ಸಂಬಂಧಿಸಿದ ವಿದ್ಯಾರ್ಥಿಗಳು ಅರ್ಜಿಯನ್ನು ಹಾಕದಿದ್ದಲ್ಲಿ, ಅಂತಹ ಪ್ರವೇಶಗಳನ್ನು ಸಾಮಾನ್ಯ ವರ್ಗಕ್ಕೆ ವರ್ಗಾಯಿಸಿ ರೋಸ್ಟರ್ ಪದ್ಧತಿಯಂತೆ ಹಂಚಬಹುದು.
4. ಯಾವುದೇ ಕಾರಣಕ್ಕೂ ಆಯಾ ವರ್ಗದಡಿಯಲ್ಲಿ ಬಂದಿರುವ ಅರ್ಜಿಗಳನ್ನು ಸಂಪೂರ್ಣವಾಗಿ ಪರಿಗಣಿಸದೇ. ಅದಕ್ಕೆ ಸಂಬಂಧಿಸಿದ ಪ್ರವೇಶಗಳನ್ನು ಸಾಮಾನ್ಯ ವರ್ಗಕ್ಕೆ ವರ್ಗಾಯಿಸಬಾರದು.
5. ಇಂತಹ ವರ್ಗಾವಣೆಗಳನ್ನು ಷರಾದಲ್ಲಿ ನಮೂದಿಸಬೇಕು.
ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ರೋಸ್ಟರ್ ಪದ್ಧತಿಯನ್ನು ಅನುಸರಿಸಿ ದಾಖಲಾತಿಯನ್ನು ಕಡ್ಡಾಯವಾಗಿ ನಿರ್ವಹಿಸುವುದು ಮತ್ತು ದಾಖಲಾತಿ ವಿವರಗಳನ್ನು ಎಸ್.ಎ.ಟಿ.ಎಸ್ ನಲ್ಲಿ ಇಂಧೀಕರಿಸುವುದು. ಸದರಿ ಪ್ರಕ್ರಿಯೆಯಲ್ಲಿ ವ್ಯತ್ಯಾಸವಾದಲ್ಲಿ ಸದರಿ ಕಾಲೇಜಿನ ಸಂಬಂಧಪಟ್ಟ ಕಾಲೇಜಿನ ಆಡಳಿತ ಮಂಡಳಿ / ಪ್ರಾಂಶುಪಾಲರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.
ಅ. ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಅನುಸರಿಸಬೇಕಾದ ಕ್ರಮ:
L ಲಭ್ಯವಿರುವ ಎಲ್ಲಾ ಪ್ರವೇಶಗಳನ್ನು ಮೆರಿಟ್ ಆಧಾರದ ಮೇಲೆ ರೋಸ್ಟರ್ ಪದ್ಧತಿಯಂತೆ ಹಂಚಿಕೆ ಮಾಡಬೇಕು.
2. ಸಹ ಶಿಕ್ಷಣ ಕಾಲೇಜುಗಳಲ್ಲಿ ಲಭ್ಯವಿರುವ ಎಲ್ಲಾ ಪ್ರವೇಶಗಳಲ್ಲಿ 50% ರಷ್ಟು ಪ್ರವೇಶಗಳನ್ನು ಲಂಬವಾಗಿ (Vertically) 1995 ನಿಯಮ 14(6) ರ ಪ್ರಕಾರ ವಿದ್ಯಾರ್ಥಿನಿಯರಿಗೆ ಮೀಸಲಿಡಬೇಕು ಹಾಗೂ ಅವುಗಳನ್ನು ಮೆರಿಟ್ ಆಧಾರದ ಮೇಲೆ ರೋಸ್ಟರ್ ಪದ್ಧತಿಯಂತೆ ವಿದ್ಯಾರ್ಥಿನಿಯರಿಗೆ ಹಂಚಿಕೆ ಮಾಡಬೇಕು.
ಆ. ಸಾಮಾನ್ಯ ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಅನುಸರಿಸಬೇಕಾದ ಕ್ರಮ:
1995ರ ನಿಯಮಗಳ ಉಪನಿಯಮ 12(ಬಿ) ರನ್ವಯ ಈ ಕಾಲೇಜುಗಳಲ್ಲಿ ಸಂಯೋಜನೆವಾರು ಲಭ್ಯವಿರುವ ಪ್ರದೇಶಗಳಲ್ಲಿ 20%ರಷ್ಟು ಪ್ರವೇಶಗಳನ್ನು ಈ ಕಾಲೇಜುಗಳ ಆಡಳಿತ ಮಂಡಳಿಯವರು ಅವರ ವಿವೇಚನೆಯಂತೆ ಹಂಚಲು ಅಧಿಕಾರವಿರುತ್ತದೆ.
L ಸಂಯೋಜನೆವಾರು ಉಳಿದ 80%ರಷ್ಟು ಪ್ರವೇಶಗಳನ್ನು ಮೆರಿಟ್ ಆಧಾರದ ಮೇಲೆ ರೋಸ್ಟರ್ ಪದ್ದತಿಯಂತೆ ಹಂಚಿಕೆ ಮಾಡಬೇಕು.
2 ಸಹ ಶಿಕ್ಷಣ ಕಾಲೇಜುಗಳಲ್ಲಿ ಲಭ್ಯವಿರುವ ಎಲ್ಲಾ ಸರ್ಕಾರದ ಪ್ರವೇಶಗಳಲ್ಲಿ 50% ರಷ್ಟು ಪ್ರವೇಶಗಳನ್ನು ಲಂಬವಾಗಿ (Vertically) 1995 ರ ನಿಯಮ 14(6) ರ ಪ್ರಕಾರ ವಿದ್ಯಾರ್ಥಿನಿಯರಿಗೆ ಮೀಸಲಿಡಬೇಕು ಹಾಗೂ ಅವುಗಳನ್ನು ಮೆರಿಟ್ ಆಧಾರದ ಮೇಲೆ ರೋಸ್ಟರ್ ಪದ್ಧತಿಯಂತೆ ವಿದ್ಯಾರ್ಥಿನಿಯರಿಗೆ ಹಂಚಿಕೆ ಮಾಡಬೇಕು.
3. ಈ ಕಾಲೇಜುಗಳಲ್ಲಿ ಒಂದು ವರ್ಗದಲ್ಲಿ ಒಂದು ಅಥವಾ ಎರಡು ವಿಷಯಗಳು ಅನುದಾನ ರಹಿತವಾಗಿದ್ದಲ್ಲಿ, ಅಂತಹ ವರ್ಗಕ್ಕೆ ಕಂಡಿಕೆ ಆ(1) ಮತ್ತು (2) ರಂತೆ ಪ್ರದೇಶಗಳನ್ನು ಹಂಚಿಕೆ ಮಾಡಬೇಕು.
4. ಈ ಕಾಲೇಜುಗಳಲ್ಲಿ ಒಂದು ವರ್ಗದಲ್ಲಿ ಎಲ್ಲಾ ವಿಷಯಗಳು ಅನುದಾನರಹಿತವಾಗಿದ್ದಲ್ಲಿ, ಅಂತಹ ವರ್ಗಕ್ಕೆ ಕಂಡಿಕೆ ಉ(1) ಮತ್ತು (2) ರಂತೆ ಪ್ರವೇಶಗಳನ್ನು ಹಂಚಿಕೆ ಮಾಡಬೇಕು.
No comments:
Post a Comment