ಪ್ರಸ್ತುತ ಇಇಡಿಎಸ್ ತಂತ್ರಾಂಶ UNFREEZ ಆಗಿರುತ್ತದೆ. ಆದ್ದರಿಂದ ತಾವು ಈ ಬಗ್ಗೆ ಪರಿಶೀಲಿಸಿ ಶಿಕ್ಷಕರ ಸೇವಾ ವಿವರಗಳನ್ನು ತುರ್ತಾಗಿ ವಿಳಂಬಕ್ಕೆ ಆಸ್ಪದ ನೀಡದೇ ಇಇಡಿಎಸ್ ತಂತ್ರಾಂಶದಲ್ಲಿ ಗಣಕೀಕರಿಸಲು ಕೋರಲಾಗಿದೆ. ಸರಿಯಾದ ನಿಖರ ಮಾಹಿತಿಗಳನ್ನು ಇಇಡಿಎಸ್ ತಂತ್ರಾಂಶದಲ್ಲಿ ಅವರ ಸೇವಾ ವಹಿಯಂತೆ ಪರಿಶೀಲಿಸಿ ಕಡ್ಡಾಯವಾಗಿ ಗಣಕೀಕರಿಸುವುದು. ತನ್ಮೂಲಕ ಪ್ರಸಕ್ತ ಶಿಕ್ಷಕರ ವರ್ಗಾವಣೆಯನ್ನು ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದೇ ಯಶಸ್ವಿಯಾಗಿ ನಡೆಸಲು ಸಹಕರಿಸುವಂತೆ ವಿನಂತಿಲಾಗಿದೆ. ಈ ಅಂತಿಮ ಅವಕಾಶ ವನ್ನು ಸದುಪಯೋಗಪಡಿಸಿಕೊಳ್ಳಲು ಮತ್ತೊಮ್ಮೆ ಕೋರಿದೆ. ಒಂದು ವೇಳೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳದೇ ಮುಂದಿನ ದಿನಗಳಲ್ಲಿ ಇಇಡಿಎಸ್ ತಿದ್ದುಪಡಿಗಾಗಿ ಈ ಕಛೇರಿಗೆ ಪತ್ರ ವ್ಯವಹರಿಸಿದ್ದಲ್ಲಿ ಈ ಕಛೇರಿ ಹಂತದಲ್ಲಿ ಯಾವುದೇ ತಿದ್ದಪಡಿ ಮಾಡಲಾಗುವುದಿಲ್ಲ . ಮತ್ತು ಮಂದುವರೆದು ವರ್ಗಾವಣೆಯಲ್ಲಿ ವ್ಯತ್ಯಾಸಗಳಾದಲ್ಲಿ ಆಯಾ ಬಟವಾಡೆ ಅಧಿಕಾರಿಗಳೇ ನೇರ ಹೊಣೆಗಾರರಾಗಲಿರುವುದರಿಂದ ಈ ಬಗ್ಗೆ ವಿಶೇಷ ಗಮನ ನೀಡಿ ಕ್ರಮವಹಿಸಲು ಕೋರಲಾಗಿದೆ. ಈ ಬಗ್ಗೆ ಜಿಲ್ಲಾ ಉಪನಿರ್ದೇಶಕರು ಮೇಲ್ವಿಚಾರಣೆ ನಡೆಸಿ ಪರಿಶೀಲನಾ ದೃಢೀಕರಣ ಪತ್ರವನ್ನು ತುರ್ತಾಗಿ ಈ ಕಛೇರಿಗೆ ಸಲ್ಲಿಸಲು ಕೋರಿದೆ.
Copyright ©
JNANAKANAJA . All rights reserved. Template by CB Blogger
No comments:
Post a Comment