Friday, May 3, 2024

Biennial Election to the Karnataka Legislative Council from 03 Graduates and 03 Teachers Constituencies

  Wisdom News       Friday, May 3, 2024
Hedding ; Biennial Election to the Karnataka Legislative Council from 03 Graduates and 03 Teachers Constituencies...


ಲೋಕಸಭೆ ಚುನಾವಣೆಗೆ ಎರಡನೇ ಹಂತದ ಮತದಾನದ ಬಳಿಕ ಮತ ಎಣಿಕೆಯೂ ಮುಗಿಯುತ್ತಿದ್ದಂತೆ ಕರ್ನಾಟಕದಲ್ಲಿ ಮತ್ತೊಂದು ಚುನಾವಣೆ ನಡೆಯಲಿದೆ. ಇನ್ನೂ ಎರಡನೇ ಹಂತದ ಚುನಾವಣೆಗೆ ಐದು ದಿನ ಇರುವಾಗಲೇ ಕರ್ನಾಟಕದಲ್ಲಿ ಶಿಕ್ಷಕರು ಹಾಗೂ ಪದವೀಧರರ ವಿಧಾನಪರಿಷತ್‌ ಚುನಾವಣೆಗೆ ದಿನಾಂಕವನ್ನು ಕೇಂದ್ರ ಚುನಾವಣೆ ಆಯೋಗವು ಗುರುವಾರ ಘೋಷಿಸಿದೆ.

ಕರ್ನಾಟಕದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ 2024ರ ಮೇ 09ರಂದು ಅಧಿಸೂಚನೆ ಹೊರ ಬೀಳಲಿದ್ದು,ಅಂದಿನಿಂದಲೇ ನಾಮಪತ್ರ ಸಲ್ಲಿಕೆಯೂ ಶುರುವಾಗಲಿದೆ. 2024 ರ ಜೂನ್‌ 03ರಂದು ಆರು ವಿಧಾನಪರಿಷತ್‌ ಮತದಾನ ನಡೆಯಲಿದೆ. ಜೂನ್‌ 06ರಂದು ಮತ ಎಣಿಕೆ ನಡೆಯಲಿದೆ.

ಯಾವ ಕ್ಷೇತ್ರಗಳಿಗೆ ಮತದಾನ

ಕರ್ನಾಟಕದ ತಲಾ ಮೂರು ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಹಲಿದೆ. ಇದರಲ್ಲಿ ರಾಜ್ಯದ ಕಲಬುರಗಿ ಕೇಂದ್ರಿತ ಈಶಾನ್ಯ ಪದವೀಧರರ ಕ್ಷೇತ್ರ, ಮಂಗಳೂರು ಕೇಂದ್ರಿತ ನೈರುತ್ಯ ಪದವೀಧರರ ಕ್ಷೇತ್ರ, ಬೆಂಗಳೂರು ಪದವೀಧರರ ಕ್ಷೇತ್ರ, ತುಮಕೂರು ಕೇಂದ್ರಿತ ಆಗ್ನೇಯ ಶಿಕ್ಷಕರ ಕ್ಷೇತ್ರ, ಮಂಗಳೂರು ಕೇಂದ್ರಿತ ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ಮೈಸೂರು ಕೇಂದ್ರಿತ ದಕ್ಷಿಣ ಶಿಕ್ಷಕರ ಕ್ಷೇತ್ರದಅವಧಿ ಇದೇ ವರ್ಷ ಜೂನ್‌ 21 ರಂದು ಕೊನೆಗೊಳ್ಳಲಿದೆ. ಮೇಲಿನ ಸ್ಥಾನಗಳಿಗೆ ಜೂನ್‌ 12ರ ಒಳಗೆ ಚುನಾವಣೆ ಪ್ರಕ್ರಿಯೆ ಮುಗಿಯಬೇಕಾಗಿದೆ ಎಂದು ಚುನಾವಣೆ ಆಯೋಗವು ತಿಳಿಸಿದೆ.

ಯಾರು ಸದಸ್ಯರಿದ್ದಾರೆ?

ಇದರಲ್ಲಿ ರಾಜ್ಯದ ಕಲಬುರಗಿ ಕೇಂದ್ರಿತ ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಡಾ.ಚಂದ್ರಶೇಖರ್‌ ಬಿ. ಪಾಟೀಲ್‌ ಇದ್ದಾರೆ. ಇದು ಕಲಬುರಗಿ, ರಾಯಚೂರು, ಬೀದರ್‌, ಕೊಪ್ಪಳ, ಬಳ್ಳಾರಿ ಹಾಗೂ ಯಾದಗಿರಿ ಜಿಲ್ಲಾ ವ್ಯಾಪ್ತಿ ಒಳಗೊಂಡಿದೆ. ಮಂಗಳೂರು ಕೇಂದ್ರಿತ ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಜಾ.ದಳದ ಆಯನೂರು ಮಂಜುನಾಥ್‌ ಸದಸ್ಯರಿದ್ದು ಆ ಸ್ಥಾನ ಈಗ ಖಾಲಿಯಿದೆ. ಇದು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಹಾಗೂ ಶಿವಮೊಗ್ಗ ವ್ಯಾಪ್ತಿ ಒಳಗೊಂಡಿದೆ. ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯ ಎ.ದೇವೇಗೌಡ ಇದ್ಧಾರೆ. ಇದು ಬೆಂಗಳೂರು ನಗರ ವ್ಯಾಪ್ತಿಯನ್ನು ಒಳಗೊಂಡಿರುವ ಕೇತ್ರ.

ತುಮಕೂರು ಕೇಂದ್ರ ಇರುವ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಹಾಲಿ ಸದಸ್ಯರು. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜೀನಾಮೆ ನೀಡಿದ್ದ ನಾರಾಯಣಸ್ವಾಮಿ ಸೋತರೂ ಮತ್ತೆ ವಿಧಾನಪರಿಷತ್‌ಗೆ ನಡೆದಿದ್ದ ಚುನಾವಣೆಯಲ್ಲಿ ಗೆದ್ದಿದ್ದರು. ಈಗ ಮತ್ತೆ ಚುನಾವಣೆ ಎದುರಿಸಲು ಅಣಿಯಾಗುತ್ತಿದ್ದಾರೆ.


ಮಂಗಳೂರು ಕೇಂದ್ರಿತ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ ನ ಎಸ್‌.ಎಲ್‌.ಭೋಜೇಗೌಡ ಇದ್ದಾರೆ. ಈ ಕ್ಷೇತ್ರವು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ವ್ಯಾಪ್ತಿಯಲ್ಲಿದೆ. ಇನ್ನು ಮೈಸೂರು ಕೇಂದ್ರಿತ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜಾ.ದಳದಿಂದ ಗೆದ್ದು ರಾಜೀನಾಮೆ ನೀಡಿ ಈಗ ಕಾಂಗ್ರೆಸ್‌ ಸೇರಿರುವ ಹಿರಿಯ ಸದಸ್ಯ ಮರಿತಿಬ್ಬೇಗೌಡ ಇದ್ದಾರೆ. ಈ ಕ್ಷೇತ್ರವು ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಯ ವ್ಯಾಪ್ತಿ ಒಳಗೊಂಡಿದೆ. ಮಂಗಳೂರು. ಬೆಂಗಳೂರು, ಕಲಬುರಗಿ, ಮೈಸೂರು ಹಾಗೂ ತುಮಕೂರು ಜಿಲ್ಲಾಧಿಕಾರಿಗಳು ಈ ಚುನಾವಣೆಗಳಿಗೆ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುವರು. ನೋಂದಾಯಿತ ಶಿಕ್ಷಕರು ಚುನಾವಣೆ ಮತದಾರರು.

ಹೀಗಿದೆ ವೇಳಾಪಟ್ಟಿ ವಿವರ

ವಿಧಾನಪರಿಷತ್‌ ಚುನಾವಣೆ ಅಧಿಸೂಚನೆ: ಮೇ 09, 2024

ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕ: ಮೇ 16, 2024

ನಾಮಪತ್ರಗಳ ಪರಿಶೀಲನೆ: ಮೇ 17, 2024

ನಾಮಪತ್ರ ಹಿಂದಕ್ಕೆ ಪಡೆಯಲು ಕೊನೇ ದಿನಾಂಕ: ಮೇ 20, 2024

ಮತದಾನ ದಿನ: ಜೂನ್‌ 03, 2024

ಮತ ಎಣಿಕೆ ದಿನ: ಜೂನ್‌ 06, 2024

ಹೆಚ್ಚಿನ ಮಾಹಿತಿಗಾಗಿ ಆದೇಶ ಡೌನ್ಲೋಡ್ ಮಾಡಿಕೊಳ್ಳಿ.


ಮುಂದಿನ ತಿಂಗಳು ಅವಧಿ ಮುಕ್ತಾಯವಾ ಗುವ ಮತ್ತು ಖಾಲಿ ಇರುವ ವಿಧಾನಪರಿಷತ್ ನ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಆರು ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋ ಗವು ದಿನಾಂಕ ಘೋಷಣೆ ಮಾಡಿದ್ದು, ಜೂ.3ರಂದು ಮತದಾನ ನಡೆಯಲಿದೆ. ಈಶಾನ್ಯ ಪದವೀಧರ, ನೈಋತ್ಯ ಪದವೀ ಧರ ಮತ್ತು ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಹಾಗೂ ಆನ್ನೇಯ ಶಿಕ್ಷಕರ, ನೈಋತ್ಯ ಶಿಕ್ಷಕರ ಮತ್ತು ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಮಾಡಲಾಗಿದೆ.

ಇದೇ ತಿಂಗಳು 9 ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಜೂ.3ರಂದು ಮತ ದಾನ ನಡೆಯಲಿದ್ದು, ಜೂ.6ರಂದು ಮತ


ಎಣಿಕೆ ನಡೆಯಲಿದೆ.

ಈಶಾನ್ಯ ಪದವೀಧರ ಕ್ಷೇತ್ರದಿಂದ ಆಯ್ಕೆ ಯಾಗಿರುವ ಡಾ.ಚಂದ್ರಶೇಖ‌ರ್, ಬೆಂಗಳೂರು ಪದವೀಧರ ಕ್ಷೇತ್ರದ ಎ. ದೇವೇಗೌಡ, ಆಗ್ನೆಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವಡಾ.ವೈ.ಎ.ನಾರಾಯಣ ಸ್ವಾಮಿ, ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಯಾಗಿರುವ ಎಸ್.ಎಲ್. ಭೋಜೇಗೌಡ ಅವರ ಅವಧಿಯು ಜೂ.21ಕ್ಕೆ ಅವಧಿ ಮುಕ್ತಾಯಗೊಳ್ಳಲಿದೆ. ಇದೇ ವೇಳೆ ಆಯನೂರು ಮಂಜುನಾಥ್ ರಾಜೀನಾಮೆ ಯಿಂದ ಖಾಲಿ ಇರುವ ನೈಋತ್ಯ ಕ್ಷೇತ್ರಕ್ಕೆ ಮತ್ತು ಮರಿತಿಬ್ಬೇಗೌಡ ರಾಜೀನಾಮೆ ಯಿಂದ ಖಾಲಿ ಇರುವ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.


logoblog

Thanks for reading Biennial Election to the Karnataka Legislative Council from 03 Graduates and 03 Teachers Constituencies

Previous
« Prev Post

No comments:

Post a Comment