Tuesday, May 28, 2024

4th Class Second Language English Subject Setubandha Success Test Question Paper and Answers 2024...

  Wisdom News       Tuesday, May 28, 2024
Hedding ; 4th Class Second Language English Subject Setubandha Success Test Question Paper and Answers 2024...


ಸೇತುಬಂಧ ಕಾರ್ಯಕ್ರಮ

                    ಹಿಂದಿನ ತರಗತಿಯಿಂದ ಉತ್ತೀರ್ಣರಾಗಿ ಬಂದ ವಿಧ್ಯಾರ್ಥಿಗಳಲ್ಲಿ ಪ್ರಸಕ್ತ ತರಗತಿಯ ಕಲಿಕೆಗೆ ಬೇಕಾದ ಕನಿಷ್ಠ ಸಾಮರ್ಥ್ಯ ಹಾಗೂ ಕಲಿಕಾಂಶಗಳು ಎಷ್ಟರ ಮಟ್ಟಗೆ ಇವೆ ಎಂಬುದನ್ನು ದೃಡಪಡಿಸಿಕೊಳ್ಳುವ ಚಟುವಟಿಕೆಯೇ ಸೇತುಬಂಧ ಕಾರ್ಯಕ್ರಮ. ಈ ಕಾರ್ಯಜ್ರಮ ಜೂನ್ 25ರ ವರೆಗೆ ನಡೆಯುತ್ತದೆ…

ಸೇತುಬಂಧ 4 ಹಂತಗಳನ್ನು ಹೊಂದಿದೆ.
1)ನೈದಾನಿಕ ಪರೀಕ್ಷೆ/ಪೂರ್ವ ಪರೀಕ್ಷೆ
2)ದೋಷನಿದಾನ-ಪೂರಕ ಬೋಧನೆ
3)ಸಾಫಲ್ಯ ಪರೀಕ್ಷೆ-ಪೂರಕ ಬೋಧನೆ
4)ಪರಿಹಾರ ಬೋಧನೆ

1) ನೈದಾನಿಕ ಪರೀಕ್ಷೆ

★ಪ್ರಸಕ್ತ ತರಗತಿಯ ಕಲಿಕೆಗೆ ಪೂರಕವಾಗಿ ವಿಧ್ಯಾರ್ಥಿ ಗಳಿಸಿರಬೇಕಾದ ಕನಿಷ್ಠ ಸಾಮರ್ಥ್ಯ/ಕಲಿಕಾಂಶಗಳ ಪಟ್ಟಿ
★ಒಂದು ಪ್ರಶ್ನೆ ಪತ್ರಿಕೆ
★ಮೌಖಿಕ ಪರೀಕ್ಷೆಗೂ ಅವಕಾಶದ ವ್ಯವಸ್ಥೆ
★ಪ್ರಶ್ನೆಗಳು ಇಂತಿಷ್ಟೆ ಇರಬೇಕೆಂಬ ನಿರ್ಬಂಧವಿಲ್ಲ
★ಪ್ರತಿಯೊಂದು ಕಲಿಕಾಂಶದ ಮೇಲೆ ನೈದಾನಿಕ ಪರೀಕ್ಷೆ ನಡೆಸುವುದು.
★ಪ್ರಶ್ನೆಪತ್ರಿಕೆಯು ಅಂಕಗಳ ಆಧಾರದಿಂದ ರಚನೆಯಾಗಿರುವುದಿಲ್ಲ.
★ನೈದಾನಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ರಚಿಸುವಾಗ
ಅದೇ ಮಟ್ಟದ ಬೇರೆ ಪ್ರಶ್ನೆಗಳನ್ನು ಒಳಗೊಂಡ ಇನ್ನೊಂದು ಪ್ರಶ್ನೆ ಪತ್ರಿಕೆಯನ್ನು ರಚಿಸುವುದು.


ವಿಶ್ಲೇಷಣೆ

★ಉತ್ತರಗಳ ವಿಶ್ಲೇಷಣೆ ಮಾಡುವುದು
★ವಿಶ್ಲೇಷಣೆಯಲ್ಲಿ ವಿಗಳ ಸರಿ ತಪ್ಪು ಉತ್ತರಗಳೆಷ್ಷು ಎಂಬುದನ್ನು ದಾಖಲಿಸಬೇಕು.
★ಸರಿ ಉತ್ತರಗಳಿಗೆ, ಎ ಎಂದು ತಪ್ಪು ಉತ್ತರಗಳಿಗೆ ಬಿ ಎಂದೂ ಪ್ರಶ್ನೆಗಳ ಸಂಖ್ಯೆ ಕೆಳಗೆ ನಮೂದಿಸುವುದು.

2)ದೋಷನಿದಾನ

ವಿಶ್ಲೇಷಣೆ ಮಾಡಿದ ಬಳಿಕ ಪ್ರತಿ ವಿಧ್ಯಾರ್ಥಿಯ ಕಲಿಕಾ ದೋಷಗಳನ್ನು ಪತ್ತೆ ಹಂಚುವ ವಿಧಾನ ಇದಾಗಿದೆ…

ಪೂರಕ ಬೋಧನೆ

ದೋಷನಿದಾನದಲ್ಲಿ ದೊರಕಿದ ಮಾಹಿತಿಗನುಸಾರವಾಗಿ ವಿಧ್ಯಾರ್ಥಿಗಳಲ್ಲಿರುವ ಕಲಿಕಾ ಕೊರತೆಯನ್ನು ನೀಗಿಸುವ ಪ್ರಕ್ರಿಯೆಯೇ ಪೂರಕ ಬೋಧನೆ.

3)ಸಾಫಲ್ಯ ಪರೀಕ್ಷೆ

     ವಿಧ್ಯಾರ್ಥಿಗಳ ಕಲಿಕಾ ಕೊರತೆಗಳ ನಿವಾರಣೆಗೆ ಮಾಡಿದ ಪರಿಹಾರ ಬೋಧನೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬುದನ್ನು ತಿಳಿಯುವ ಹಂತವೇ ಸಾಫಲ್ಯ ಪರೀಕ್ಷೆ.

1) ನೈದಾನಿಕ ಪರೀಕ್ಷೆಗಾಗಿ ಪ್ರಶ್ನೆಪತ್ರಿಕೆ ತಯಾರಿಸುವಾಗ ರಚಿಸಿಕೊಂಡಿರುವ ಇನ್ನೊಂದು ಪ್ರಶ್ನೆ ಪತ್ರಿಕೆಯನ್ನು ಇಲ್ಲಿ ಬಳಸಿಕೊಳ್ಳಬಹುದು.
2)ಹೀಗೆ ಬಳಸಿಕೊಳ್ಳಯವಾಗ ನೈದಾನಿಕ ಪರೀಕ್ಷೆಯಲ್ಲಿ ಕಲಿಕಾ ಕೊರತೆಯಿರುವ ಅಂಶಗಳ ಮೇಲೆ ಈ ಪರೀಕ್ಷೆ ನಡೆಸಬೇಕು.
3)ಗಳಿಸಿರುವ ಸಾಮರ್ಥ್ಯ/ಕಲಿಕಾಂಶಗಳಿಗೆ ಸಂಬಂದಿಸಿದ ಪ್ರಶ್ನೆಗಳನ್ನು ಕೈಬಿಡಬೇಕು.
4) ಕಲಿಕಾ ಕೊರತೆಯಿಲ್ಲದ ವಿಧ್ಯಾರ್ಥಿಗಳಿಗೆ ಈ ಪರೀಕ್ಷೆ ನಡೆಸಬಾರದು.

ಪೂರಕ ಪರೀಕ್ಷೆ

1) ಮತ್ತೆ ಹಿಂದೆಬೀಳುವ ವಿಧ್ಯಾರ್ಥಿಗಳಿಗೆ ವಿಶೇಷ ತರಬೇತಿ ಏರ್ಪಾಡುಮಾಡುವುದು.
2)ಕಲಿಕಾ ದೋಷಗಳ ನಿವಾರಣೆಗೆ ಸಹಾಯಕವಾದ ಮತ್ತು ವಿಧ್ಯಾರ್ಥಿಗಳಿಗೆ ಇಷ್ಟವಾದ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವದು.
3) ಪೂರಕ ಬೋಧನೆಯನ್ನು ದಿನದ 06 ನೇ ಅವಧಿಯಲ್ಲಿ ನಿರ್ವಹಿಸುವುದು.

4)ಪರಿಹಾರ ಬೊಧನೆ

                      ಪರಿಹಾರ ಬೋಧನೆಯನ್ನು ಪ್ರತಿ ಅಧ್ಯಾಯದ ತರುವಾಯ ಪರೀಕ್ಷೆ /ವೀಕ್ಷಣೆ/ ಯೋಜನೆಕಾರ್ಯ ವರದಿ ತಯಾರಿಕೆ ಯಂತಹ ಕಾರ್ಯಗಳನ್ನು ನಡೆಸಿ ಮಕ್ಕಳ ಕಲಿಕಾ ಕೊರತೆ ಯನ್ನು ಗುರುತಿಸಿ ಪರಿಹಾರಾತ್ಮಕ ಚಟುವಟಿಕೆ ಗಳನ್ನು ಕೈಗೊಳ್ಳುವುದು, ರೂಢಿಯಲ್ಲಿರುವ ಪರಿಹಾರ ಬೋ
ಧನೆಯ ಪರಿಕಲ್ಪನೆ ಇದಾಗಿದೆ.



1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ಆರಂಭದಲ್ಲೇ ಸೇತುಬಂಧ ಶಿಕ್ಷಣ, ಇತರೆ ತರಬೇತಿಗಳು



2024-25ನೇ ಸಾಲಿನ ಶೈಕ್ಷಣಿಕ ಅವಧಿ ಆರಂಭ ಸನ್ನಿಹಿತವಾಗಿದೆ. ಶಾಲೆಗೆ ಬರುವ ಮಕ್ಕಳ ಕಲಿಕಾ ಗುಣಮಟ್ಟವನ್ನು ಆರಂಭದಲ್ಲೇ ತಿಳಿದು, ವೃದ್ಧಿಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಹಲವು ಕಾರ್ಯತಂತ್ರಗಳನ್ನು ರೂಪಿಸಿದೆ. ಮಕ್ಕಳಿಗೆ ಸೇತುಬಂಧ ಶಿಕ್ಷಣ, ತರಬೇತಿಗಳನ್ನು ನೀಡಲು ಶಾಲೆಗಳಿಗೆ ಸೂಚನೆ ನೀಡಿದೆ.


2023-24ನೇ ಸಾಲಿನ ಶೈಕ್ಷಣಿ ಅವಧಿ ಮುಗಿದಿದೆ. ಇನ್ನು ಕೆಲವೇ ದಿನಗಳಲ್ಲಿ 2024-25ನೇ ಸಾಲಿನ ಶೈಕ್ಷಣಿಕ ಅವಧಿ ಆರಂಭವಾಗಲಿದೆ. ಈ ಸಾಲಿನ ಶಾಲೆಗಳ ಆರಂಭದಲ್ಲೇ ಮಕ್ಕಳ ಕಲಿಕಾ ಗುಣಮಟ್ಟ ಪರಿಶೀಲನೆ, ಸುಧಾರಣೆ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಿಗೆ ಸೇತುಬಂಧ ಕಾರ್ಯಕ್ರಮ, ಇತರೆ ತರಬೇತಿಗಳನ್ನು ಕೈಗೊಳ್ಳಲು ಮುಂದಾಗಿದೆ. ಇದಕ್ಕೆ ಸಂಬಂಧ ಶಾಲೆಗಳಿಗೆ ಸೂಚನೆಗಳನ್ನು ನೀಡಿದೆ.

ಶಾಲಾ ವಿದ್ಯಾರ್ಥಿಗಳ ವಯೋಮಾನ ಮತ್ತು ತರಗತಿಗೆ ಅನುಗುಣವಾಗಿ ಕಲಿಕಾಮಟ್ಟ ಸಾಮರ್ಥ್ಯ ಗುರುತಿಸಿ ಮುಂದಿನ ಕಲಿಕೆಗೆ ಸಿದ್ಧ ಗೊಳಿಸುವ ನಿಟ್ಟಿನಲ್ಲಿ ಶಾಲಾರಂಭದ ಮೊದಲ 30 ದಿನಗಳಲ್ಲಿ 1 ರಿಂದ 3ನೇ ಕ್ಲಾಸ್‌ಗೆ ಹಾಗೂ ಮೊದಲ 15 ದಿನ 4 ರಿಂದ 10ನೇ ಕ್ಲಾಸ್‌ ವಿದ್ಯಾರ್ಥಿಗಳಿಗೆ ಸೇತುಬಂಧ ಶಿಕ್ಷಣ ನೀಡುವಂತೆ ಶಾಲೆಗಳಿಗೆ ಶಿಕ್ಷಣ ಇಲಾಖೆ ಸೂಚಿಸಿದೆ. ಈ ಸಂಬಂಧ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಸುತ್ತೋಲೆ ಹೊರಡಿಸಿದೆ.


ತರಗತಿವಾರು, ವಿಷಯವಾರು ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಹಾಗೂ ಪ್ರಥಮ ಭಾಷೆಗಳಾದ ಕನ್ನಡ, ತಮಿಳು, ಉರ್ದು, ಮರಾಠಿ ಮತ್ತು ತೆಲುಗಿಗೆ ಸಂಬಂಧಿಸಿದ ಕಲಿಕಾ ಸಾಮಾಗ್ರಿಗಳನ್ನು ಡಿಎಸ್‌ಇಅರ್‌ಟಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಇವುಗಳನ್ನು ಬಳಸಿಕೊಂಡು ಸೇತುಬಂಧ ಯಶಸ್ವಿಗೊಳಿಸಬೇಕು ಎಂದು ಡಿಎಸ್‌ಇಆರ್‌ಟಿ ನಿರ್ದೇಶಕರು ಶಾಲೆಗಳಿಗೆ ತಿಳಿಸಿದ್ದಾರೆ.

2024-25ನೇ ಸಾಲಿಗೆ ಪೂರಕವಾಗಿ ಕನ್ನಡ ಮತ್ತು ಉರ್ದು ಮಾಧ್ಯಮದ ನಲಿ-ಕಲಿ ತರಗತಿಗಳಿಗೆ ಸಮಗ್ರ ಶಿಕ್ಷಣ ಕರ್ನಾಟಕದ ವತಿಯಿಂದ ವಿದ್ಯಾ ಪ್ರವೇಶ ಹಾಗೂ ಸೇತುಬಂಧ ಚಟುವಟಿಕೆಗಳನ್ನು ಸಿದ್ಧಪಡಿಸಿ ನೂತನ ಅಭ್ಯಾಸ ಸಹಿತ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಳಿಸಲಾಗಿದೆ. 8 ನೇ ತರಗತಿಯಿಂದ 10ನೇ ತರಗತಿ ವರೆಗಿನ ಸ್ಟೂಡೆಂಟ್‌ಗಳಿಗೆ ಕನ್ನಡ, ಇಂಗ್ಲಿಷ್, ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ವಿಷಯಗಳಿಗೆ 'ಮರುಸಿಂಚನ' ಕಾರ್ಯಕ್ರಮದಡಿ ಸಿದ್ಧಪಡಿಸಿರುವ ವಿದ್ಯಾರ್ಥಿ ಕೈಪಿಡಿಗಳನ್ನು ನೀಡಲಾಗಿದೆ., ಈ ಸಾಹಿತ್ಯದ ಬುನಾದಿ ಹಂತದ ಚಟುವಟಿಕೆಗಳನ್ನು ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳ ಕಲಿಕೆಗೆ ಅನುಗುಣವಾಗಿ ಪ್ರತಿ ವಿದ್ಯಾರ್ಥಿಗೆ ಕಲಿಕಾ ತಂತ್ರಗಳನ್ನು ರೂಪಿಸಿ ನಿರಂತರ ಕಲಿಕೆಯನ್ನು ಅನುಕೂಲಗೊಳಿಸಲು ಕ್ರಿಯಾಯೋಜನೆ ರೂಪಿಸುವುದು ಅಗತ್ಯವಾಗಿದೆ.

ಕಲಿಕೆಯನ್ನು ಖಾತರಿಪಡಿಸಿಕೊಳ್ಳಲು ಪೂರ್ವ ಪರೀಕ್ಷೆ ಮತ್ತು ಸಾಫಲ್ಯ ಪರೀಕ್ಷೆಗಳನ್ನು ನಡೆಸಲು ಮಾದರಿ ಪ್ರಶ್ನೆಗಳನ್ನು ನೀಡಲಾಗಿದ್ದು, ತಮ್ಮ ಹಂತದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ಮೌಲ್ಯಮಾಪನ ಕೈಗೊಳ್ಳುವುದು ಹಾಗೂ ಮಕ್ಕಳಲ್ಲಿ ಅಪೇಕ್ಷಿತ ಕಲಿಕೆಯ ಫಲಗಳ ಕಲಿಕೆಯಾಗಿದೆ ಎಂಬುದನ್ನು ದಾಖಲಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

ಮಕ್ಕಳ ಪ್ರಗತಿಯನ್ನಾಧರಿಸಿ ಶಾಲಾ ಶೈಕ್ಷಣಿಕ ಯೋಜನೆಯನ್ನು ಸಿದ್ಧಪಡಿಸಿ ಪ್ರತಿ ಮಗುವಿನ ಕಲಿಕಾ ಪ್ರಗತಿಗೆ ನಿರಂತರ ಅನುಪಾಲನೆ ನಿರ್ವಹಿಸಬೇಕು. ಕಲಿಕೆಯನ್ನು ಆಧರಿಸಿ ಸರಳ ಯೋಜನೆಗಳು, ರಸಪ್ರಶ್ನೆ, ಲಿಖಿತ ಅಥವಾ ಮೌಖಿಕ ಪ್ರಶ್ನೋತ್ತರ, ಸಂಭಾಷಣೆ, ಸರಳ ಚಟುವಟಿಕೆಗಳು ಹಾಗೂ ಅಭ್ಯಾಸ ಹಾಳೆಗಳನ್ನು ಪೂರ್ಣಗೊಳಿಸಿ ಗೃಹ ಪಾಠ ಮತ್ತು ಇನ್ನಿತರ ಚಟುವಟಿಕೆಗಳನ್ನು ಆಧರಿಸಿ ಮೌಲ್ಯಮಾಪನ ಮಾಡುವಂತೆ ತಿಳಿಸಿದ್ದಾರೆ.


logoblog

Thanks for reading 4th Class Second Language English Subject Setubandha Success Test Question Paper and Answers 2024...

Previous
« Prev Post

No comments:

Post a Comment