Saturday, April 13, 2024

Vehicles Colour Number Plates Meaning

  Wisdom News       Saturday, April 13, 2024
Hedding ; Vehicles Colour Number Plates Meaning...

ಯಾವುದೇ ವಾಹನ್ನು ಖರೀದಿ ಮಾಡಿದರೆ ನಂಬರ್ ಪ್ಲೇಟ್ ಹಾಕಿಸುವುದು ಕಡ್ಡಾಯವಾಗಿದೆ. ನೀವು ಇತ್ತೀಚೆಗೆ ವಾಹನದಲ್ಲಿ ಬಳಿ, ಹಸಿರು, ಕೆಂಪು ಹೀಗೆ ಹಲವು ಬಣ್ಣದ ನಂಬರ್ ಪ್ಲೇಟ್ ಅನ್ನು ನೋಡಿರಬಹುದು. ಆದರೆ ಇದರ ಅರ್ಥವೇನೆಂದು ಯೋಚಿಸಿದ್ದೀರಾ?. ಕಪ್ಪು ಅಕ್ಷರಗಳನ್ನು ಹೊಂದಿರುವ ಬಿಳಿ ಫಲಕವನ್ನು ಸಾಮಾನ್ಯವಾಗಿ ಬಳಸಲಾಗಿದ್ದರೂ, ಹಲವಾರು ವಿಧದ ನಂಬರ್ ಪ್ಲೇಟ್‌ಗಳು ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತವೆ.

ಈ ನಂಬರ್ ಪ್ಲೇಟ್‌ ಏನನ್ನು ಸೂಚಿಸುತ್ತದೆ ಎಂಬುದನ್ನು ತಿಳಿಯಲು ಇಲ್ಲಿದೆ ಸಂಪೂರ್ಣ ಮಾಹಿತಿ.
ಹಳದಿ ಫಲಕದಲ್ಲಿ ಕಪ್ಪು ಸಂಖ್ಯೆಗಳು : ಈ ನಂಬರ್ ಪ್ಲೇಟ್‌ಗಳನ್ನು ವಾಣಿಜ್ಯ ಕೆಲಸಗಳಿಗೆ ಬಳಸುವ ವಾಹನಗಳಿಗೆ ಬಳಸಲಾಗುತ್ತದೆ. ಇದು ಟ್ಯಾಕ್ಸಿಗಳು, ಬಸ್ಸುಗಳು, ಟ್ರಕ್ಗಳು ಮತ್ತು ಇತರ ವಾಣಿಜ್ಯ ವಾಹನಗಳಲ್ಲಿ ಕಂಡುಬರುತ್ತದೆ. ಇದು ಹಳದಿ ಬಣ್ಣದ ನಂಬರ್ ಪ್ಲೇಟ್‌ನಲ್ಲಿ ಕಪ್ಪು ಅಕ್ಷರಗಳನ್ನು ಹೊಂದಿದೆ.



ಹಸಿರು ಫಲಕದಲ್ಲಿ ಬಿಳಿ ಬಣ್ಣದ ಸಂಖ್ಯೆಗಳು: ಎಲೆಕ್ಟ್ರಿಕ್ ವಾಹನಗಳು ಹಸಿರು ಫಲಕದ ಮೇಲೆ ಬಿಳಿ ಬಣ್ಣದಲ್ಲಿ ಬರೆದ ಸಂಖ್ಯೆಗಳಿರುವ ನಂಬರ್ ಪ್ಲೇಟ್‌ಗಳನ್ನು ಬಳಸುತ್ತವೆ. ಇದು ಎಲೆಕ್ಟ್ರಿಕ್ ಕಾರುಗಳು, ಎಲೆಕ್ಟ್ರಿಕ್ ಬಸ್‌ಗಳು ಮತ್ತು ಇತರ ಎಲೆಕ್ಟ್ರಿಕ್ ವಾಹನಗಳಲ್ಲಿ ಕಂಡುಬರುತ್ತದೆ.

ಬಿಳಿ ಫಲಕದಲ್ಲಿ ಕಪ್ಪು ಅಕ್ಷರಗಳು: ಈ ನಂಬರ್ ಪ್ಲೇಟ್ ಅತ್ಯಂತ ಸಾಮಾನ್ಯವಾದ ನಂಬರ್ ಪ್ಲೇಟ್ ಆಗಿದೆ. ಖಾಸಗಿ ವಾಹನಗಳಿಗೆ ನೀಡಲಾಗುತ್ತದೆ. ಈ ಸಂಖ್ಯೆಯು ಅನೇಕ ಕಾರುಗಳು, ಮೋಟಾರ್ ಸೈಕಲ್‌ಗಳು, ಸ್ಕೂಟರ್‌ಗಳು ಇತ್ಯಾದಿಗಳಲ್ಲಿ ಕಂಡುಬರುತ್ತದೆ.

ಹಸಿರು ಫಲಕದಲ್ಲಿ ಮೇಲೆ ಹಳದಿ ಸಂಖ್ಯೆಗಳು : ವಾಣಿಜ್ಯ ಎಲೆಕ್ಟ್ರಿಕ್ ವಾಹನಗಳಿಗೆ ನಂಬರ್ ಪ್ಲೇಟ್‌ಗಳನ್ನು ನೀಡಲಾಗಿದ್ದು, ಹಸಿರು ಫಲಕದ ಮೇಲೆ ಹಳದಿ ಬಣ್ಣದಲ್ಲಿ ಸಂಖ್ಯೆಗಳನ್ನು ಬರೆಯಲಾಗಿದೆ. ಅದು ಎಲೆಕ್ಟ್ರಿಕ್ ಕಾರ್, ಎಲೆಕ್ಟ್ರಿಕ್ ಬಸ್, ಇತರ ಎಲೆಕ್ಟ್ರಿಕ್ ವಾಹನಗಳು.



ನಂಬರ್ ಪ್ಲೇಟ್ ಮೇಲೆ ಬಾಣದ ಗುರುತು: ರಕ್ಷಣಾ ವಾಹನಗಳಿಗೆ ಮೇಲ್ಮುಖ ಬಾಣವಿರುವ ನಂಬರ್ ಪ್ಲೇಟ್‌ಗಳನ್ನು ನೀಡಲಾಗುತ್ತದೆ. ರಕ್ಷಣಾ ಸಚಿವಾಲಯದ ವಾಹನಗಳಲ್ಲಿ ಈ ನಂಬರ್ ಪ್ಲೇಟ್ ಕಾಣಿಸುತ್ತದೆ. ಸೇನಾ ಅಧಿಕಾರಿಗಳು ಈ ನಂಬರ್ ಪ್ಲೇಟ್ ಹೊಂದಿರುವ ಕಾರುಗಳನ್ನು ಓಡಿಸುತ್ತಾರೆ.

ಕೆಂಪು ನಂಬರ್ ಪ್ಲೇಟ್ನಲ್ಲಿ ಅಶೋಕ ಚಿಹ್ನೆ: ಕೆಂಪು ಫಲಕದ ಮೇಲೆ ಅಶೋಕ ಚಿಹ್ನೆಯನ್ನು ಹೊಂದಿರುವ ನಂಬರ್ ಪ್ಲೇಟ್‌ಗಳನ್ನು ಭಾರತದ ರಾಷ್ಟ್ರಪತಿ ಮತ್ತು ರಾಜ್ಯಪಾಲರ ವಾಹನಗಳ ಮೇಲೆ ಮಾತ್ರ ಅಳವಡಿಸಲಾಗಿದೆ. ಈ ನಂಬರ್ ಪ್ಲೇಟ್‌ಗಳು ಸಂಖ್ಯೆಯ ಬದಲಿಗೆ ಅಶೋಕ ಚಿಹ್ನೆಯನ್ನು ಹೊಂದಿರುತ್ತವೆ.

ಕೆಂಪು ನಂಬರ್ ಪ್ಲೇಟ್ನಲ್ಲಿ ಅಶೋಕ ಚಿಹ್ನೆ: ಕೆಂಪು ಫಲಕದ ಮೇಲೆ ಅಶೋಕ ಚಿಹ್ನೆಯನ್ನು ಹೊಂದಿರುವ ನಂಬರ್ ಪ್ಲೇಟ್‌ಗಳನ್ನು ಭಾರತದ ರಾಷ್ಟ್ರಪತಿ ಮತ್ತು ರಾಜ್ಯಪಾಲರ ವಾಹನಗಳ ಮೇಲೆ ಮಾತ್ರ ಅಳವಡಿಸಲಾಗಿದೆ. ಈ ನಂಬರ್ ಪ್ಲೇಟ್‌ಗಳು ಸಂಖ್ಯೆಯ ಬದಲಿಗೆ ಅಶೋಕ ಚಿಹ್ನೆಯನ್ನು ಹೊಂದಿರುತ್ತವೆ.

ಕಪ್ಪು ಹಲಗೆಯ ಮೇಲೆ ಹಳದಿ ಸಂಖ್ಯೆಗಳು: ಕಪ್ಪು ಫಲಕಗಳ ಮೇಲೆ ಹಳದಿ ಸಂಖ್ಯೆಗಳನ್ನು ಹೊಂದಿರುವ ನಂಬರ್ ಪ್ಲೇಟ್‌ಗಳು ಬಾಡಿಗೆ ಕಾರುಗಳಿಗೆ. ಐಷಾರಾಮಿ ಹೋಟೆಲ್‌ಗಳು ಬಳಸುವ ವಾಣಿಜ್ಯ ಕಾರುಗಳಲ್ಲಿ ಇದೇ ಸಂಖ್ಯೆ ಕಂಡುಬರುತ್ತದೆ.



logoblog

Thanks for reading Vehicles Colour Number Plates Meaning

Previous
« Prev Post

No comments:

Post a Comment