2023-24 ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಹಾಗೂ ಮುಖ್ಯೋಪಾಧ್ಯಾಯರು ಮತ್ತು ಸರ್ಕಾರಿ ಪ್ರೌಢಶಾಲಾ ಶಿಕ್ಷಕರು/ತತ್ಸಮಾನ ವೃಂದದ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರು/ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಗಳ ವಲಯ ವರ್ಗಾವಣೆಗೆ ಪರಿಷ್ಕೃತ ದಿನಾಂಕ
ನಿಗಧಿಪಡಿಸಿದ ಬಗ್ಗೆ......
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು [ಶಿಕ್ಷಕರ ವರ್ಗಾವಣೆ ನಿಯಂತ್ರಣ] ಅಧಿನಿಯಮ-2020 [2020ರ ಕರ್ನಾಟಕ ಅಧಿನಿಯಮ ಸಂಖ್ಯೆ:04] ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು [ಶಿಕ್ಷಕರ ವರ್ಗಾವಣೆ ನಿಯಂತ್ರಣ] ನಿಯಮಗಳು-2020ರ ನಿಯಮಗಳಲ್ಲಿನಂತೆ ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರನ್ನು ಒಳಗೊಂಡಂತೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರು/ತತ್ಸಮಾನ ವೃಂದದ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢ ಶಾಲಾ ಮುಖ್ಯಶಿಕ್ಷಕರು/ತತ್ಸಮಾನ ವೃಂದದ ಅಧಿಕಾರಿಗಳಿಗೆ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಗೆ ಉಲ್ಲೇಖಿತ ಪತ್ರದಲ್ಲಿ ವರ್ಗಾವಣಾ ಅಧಿಸೂಚನೆಯನ್ನು ಹೊರಡಿಸಲಾಗಿತ್ತು.
ಇದಕ್ಕೆ ಪೂರ್ವಭಾವಿಯಾಗಿ, ವಲಯ ವರ್ಗಾವಣೆಗೆ ಅರ್ಹರಿರುವ ಶಿಕ್ಷಕರ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆದರೆ ಇನ್ನೂ ಕೆಲವು ಶಿಕ್ಷಕರ ಮಾಹಿತಿ ತಂತ್ರಾಂಶದಲ್ಲಿ ಇಂದೀಕರಣವಾಗದ ಪ್ರಯುಕ್ತ ಕೆಲವು ಶಿಕ್ಷಕರ ಹೆಸರು ಬಿಟ್ಟುಹೋಗಿರುತ್ತದೆ. ಕ್ರಮ ಕೈಗೊಳ್ಳುವ ಕುರಿತಂತೆ ದಿನಾಂಕ: 16/04/2024 ರಂದು ವಿಡಿಯೋ ಸಂವಾದದಲ್ಲಿ ರಾಜ್ಯ ಎಲ್ಲಾ ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಉಪನಿರ್ದೇಶಕರು(ಆಡಳಿತ) ಇವರೊಂದಿಗೆ ಚರ್ಚಿಸಿ ಈ ಕೆಳಗಿನಂತೆ ವಲಯ ವರ್ಗಾವಣೆಗೆ ಅನುವಾಗುವಂತೆ ವರ್ಗಾವಣಾ ವೇಳಾಪಟ್ಟಿಯಲ್ಲಿ ದಿನಾಂಕಗಳನ್ನು ವಿಸ್ತರಿಸಿ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಕ್ರಮ ಕೈಗೊಳ್ಳಲು ಸೂಚಿಸಿದೆ.
ಶಾಲೆಗಳ ವಲಯಗಳ ಇಂದೀಕರಣ : ತಾಲ್ಲೂಕು ಮತ್ತು ಸ್ಥಳೀಯ ಸಂಸ್ಥೆಗಳಾದ ಪಟ್ಟಣ ಪಂಚಾಯತ್, ನಗರ ಸಭೆ, ಪುರಸಭೆ, ಇತ್ಯಾದಿಗಳನ್ನು ಸರ್ಕಾರವು ಕಾಲಕಾಲಕ್ಕೆ ಮೇಲ್ದರ್ಜೆಗೆ ಪುನರ್‌ವಿಂಗಡಣೆ/ಮೇಲ್ದರ್ಜೆಗೆ ಏರಿಸಿದ್ದ ಕಾರಣ ಶಾಲೆಗಳ ವಲಯ ಸಾಧ್ಯತೆಗಳಿರುತ್ತವೆ. ಬದಲಾವಣೆಗಳು ಸರ್ಕಾರದ ಸದರಿ ಆಗಿರುವ ಆದೇಶಗಳನ್ನು ಪರಿಶೀಲಿಸಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ಶಿಕ್ಷಕರ ವರ್ಗಾವಣಾ ನಿಯಂತ್ರಣ ನಿಯಮಗಳು-2020ರ ನಿಯಮ 2(2) ರಂತೆ ಕ್ರಮವಹಿಸುವುದು, ಮೇಲ್ಕಂಡ ಬದಲಾವಣೆಗಳನ್ನು ವರ್ಗಾವಣೆ ತಂತ್ರಾಂಶದಲ್ಲಿ ಮನವಿ...
ವರ್ಗಾವಣೆ ಕುರಿತಂತೆ ಈ ಕೆಳಕಂಡಂತೆ ಹೆಚ್ಚುವರಿ ಸೂಚನೆಗಳನ್ನು ನೀಡಲಾಗಿದ್ದು ಇದನ್ನು ಸಕ್ಷಮ ಪ್ರಾಧಿಕಾರಿಗಳು ಗಮನಿಸಿ ಅಗತ್ಯ ಕ್ರಮವಹಿಸತಕ್ಕದ್ದು.
2020ರ ವರ್ಗಾವಣೆ ಅಧಿನಿಯಮ ಜಾರಿಯಾದ ನಂತರದಲ್ಲಿ ಇಡೀ ಸೇವಾವಧಿಯಲ್ಲಿ ಒಂದು ಬಾರಿ ಮಾತ್ರ ವರ್ಗಾವಣೆಗೆ ಆದ್ಯತೆ ಪಡೆಯಲು ನಿಯಮಗಳಲ್ಲಿ ಅವಕಾಶವಿರುತ್ತದೆ. ಆದರೆ ಹೆಚ್ಚುವರಿ/ವಲಯ ವರ್ಗಾವಣಾ ವಿನಾಯಿತಿ ಪಡೆಯಲು ಯಾವುದೇ ಮಿತಿ ಇರುವುದಿಲ್ಲ. ಇದನ್ನು ಕ್ಷೇತ್ರಶಿಕ್ಷಣಾಧಿಕಾರಿಗಳು ಕಡ್ಡಾಯವಾಗಿ ಖಚಿತಪಡಿಸಿಕೊಳ್ಳತಕ್ಕದ್ದು.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ಶಿಕ್ಷಕರ ವರ್ಗಾವಣಾ ನಿಯಮ-10(5) ರಲ್ಲಿ ಶಿಕ್ಷಕರ ಪತಿ-ಪತ್ನಿ ನೌಕರರ ಪ್ರಕರಣದಲ್ಲಿ ಸೇವಾ ಪ್ರಮಾಣ ಪತ್ರವನ್ನು ಆಯಾ ವೇತನ ಬಟಾವಾಡೆ ಅಧಿಕಾರಿಗಳು ನೀಡಿದ್ದಲ್ಲಿ ಅಂತಹಾ ಪ್ರಮಾಣ ಪತ್ರವನ್ನು ಕ್ಷೇತ್ರಶಿಕ್ಷಣಾಧಿಕಾರಿಗಳು ಪರಿಗಣಿಸುವುದು. ಮತ್ತು ಸದರಿ ನಿಯಮ-10 ರಡಿಯಲ್ಲಿ ನಿರ್ಧಿಷ್ಟಪಡಿಸಿದ ಸಕ್ಷಮ ಪ್ರಾಧಿಕಾರದಿಂದ ಪ್ರಮಾಣ ಪತ್ರಗಳನ್ನು ಪಡೆಯುವುದು ಕಡ್ಡಾಯಪಡಿಸಲಾಗಿದೆ.
ಅಧಿಸೂಚನೆ ಹೊರಡಿಸಿದ ದಿನಾಂಕದಲ್ಲಿದ್ದಂತೆ ವರ್ಗಾವಣಾ ವೇಳಾಪಟ್ಟಿಯಲ್ಲಿ 5 ವರ್ಷಗಳ ಗರಿಷ್ಟ ಸೇವಾವಧಿ ಪೂರೈಸಿದ ನಿರ್ಧಿಷ್ಟಪಡಿಸಿದ ಹುದ್ದೆಯಲ್ಲಿ ಕರ್ತವ್ಯ ನಿರತ ಶಿಕ್ಷಕರ ಪಟ್ಟಿಯನ್ನು ಹೊರಡಿಸಲಾಗುವುದುದೆಂದು ತಿಳಿಸಲಾಗಿತ್ತು. ಅದರೆ ಆಡಳಿತಾತ್ಮಕ ದೃಷ್ಟಿಯಿಂದ ०४: 31/05/2024ರಲ್ಲಿದ್ದಂತೆ ಗರಿಷ್ಠ 5 ವರ್ಷಗಳ ಸೇವಾವಧಿಯನ್ನು ಪೂರೈಸಿದ ಶಿಕ್ಷಕರ ಪಟ್ಟಿಯನ್ನು ಈಗಾಗಲೇ ಸಿದ್ದಪಡಿಸಲಾಗಿದೆ. ಆದ್ದರಿಂದ ದಿನಾಂಕ: 31/05/2024ರಲ್ಲಿದ್ದಂತೆ ಪರಿಗಣಿಸಲಾಗುವುದು.
ವಲಯಗಳ ಇಂದೀಕರಣ ಮತ್ತು ಇ.ಇ.ಡಿ.ಎಸ್ ನಲ್ಲಿ ಶಿಕ್ಷಕರ ಮಾಹಿತಿಯ ಇಂಡೀಕರಣ ಪ್ರಕ್ರಿಯೆಯನ್ನು ವ್ಯಾಪ್ತಿಯ ಕ್ಷೇತ್ರಶಿಕ್ಷಾಧಿಕಾರಿಗಳು ಸ್ವತಃ ಮುತುವರ್ಜಿ ವಹಿಸಿ ಕ್ರಮವಹಿಸತಕ್ಕದ್ದು. ಈ ಬಗ್ಗೆ ವ್ಯಾಪ್ತಿಯ ಎಲ್ಲಾ ಶಿಕ್ಷಕರ ಸೇವಾ ವಿವರ ಸೇವಾವಹಿಯಲ್ಲಿರುವಂತೆ ಪರಿಶೀಲಿಸಿ ತಂತ್ರಾಂಶದಲ್ಲಿ ಇಂದೀಕರಿಸಲಾಗಿದೆ ತಿದ್ದುಪಡಿಯಾಗಬೇಕಾದ ಯಾವುದೇ ಪ್ರಕರಣ ಇರುವುದಿಲ್ಲ ಎಂದು ಉಪನಿರ್ದೇಶಕರು(ಆಡಳಿತ) ಇವರಿಗೆ ದಿನಾಂಕ: 23/04/2024 d ದೃಢೀಕರಣ ಪತ್ರವನ್ನು ಸಲ್ಲಿಸತಕ್ಕದ್ದು.
No comments:
Post a Comment