Tuesday, April 9, 2024

Midday meal programme to be extended for children in drought-hit taluks during summer vacation- Useful Information.

  Wisdom News       Tuesday, April 9, 2024
Hedding ; Midday meal programme to be extended for children in drought-hit taluks during summer vacation- Useful Information...


ಕರ್ನಾಟಕ ರಾಜ್ಯ ಸರ್ಕಾರದ ನಡವಳಿಯಂತೆ ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಬರ ಪೀಡಿತ 31 ಕಂದಾಯ ಜಿಲ್ಲೆಗಳಲ್ಲಿ ಒಟ್ಟು 236 ರ ಪೈಕಿ 223 ಬರ ಪೀಡಿತ ತಾಲ್ಲೂಕುಗಳೆಂದು ಘೋಷಿಸಿ ಸರ್ಕಾರವು ಆದೇಶಿಸಿದೆ. 




ಘನ ಸರ್ವೋಚ್ಚ ನ್ಯಾಯಾಲಯುದ ಆದೇಶಾನುಸಾರ ಬರಗಾಲ ಪೀಡಿತ ಪ್ರದೇಶದಲ್ಲಿ ಬೇಸಿಗೆ ರಜೆಯಲ್ಲಿಯೂ ಸಹ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1-10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟವನ್ನು ನೀಡಬೇಕಾಗಿರುತ್ತದೆ. 




ಪ್ರಸ್ತುತ 2024-25ನೇ ಸಾಲಿನಬೇಸಿಗೆ ರಜೆಯ ಅವಧಿಯು ದಿನಾಂಕ 11.04.2024 ರಿಂದ ದಿನಾಂಕ 28.05.2024 ರವರೆಗೆ ಒಟ್ಟು 41 ದಿನಗಳ ಅವಧಿಯಲ್ಲಿ ಮಧ್ಯಾಹ್ನ ಉಪಾಹಾರ ಯೋಜನೆ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಕೈಗೊಳ್ಳಬೇಕಾಗಿದೆ. 



ಈ ಸಂಬಂಧ ದಿನಾಂಕ 10.01.2024 ರಂದು ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ, ಇವರ ಅಧ್ಯಕ್ಷತೆಯಲ್ಲಿ 2024-25ರಲ್ಲಿ ನಡೆದ ಎಸ್ ಎಸ್ ಎಂ ಸಿ ಸಭೆಯಲ್ಲಿ ಪಿ.ಎಂ. ಪೋಷಣ್ ಮಧ್ಯಾಹ್ನ ಉಪಾಹಾರ ಯೋಜನೆಯನ್ನು 1-10 ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಅನುಷ್ಠಾನಕ್ಕಾಗಿ ಸಿದ್ಧಪಡಿಸಿದ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯ ಬಗ್ಗೆ, ಸಭೆಯ ಸಹಮತ ನಿರ್ಣಯದಂತೆ ಮತ್ತು ದಿನಾಂಕ: 27.03.2024 ರಂದು ಶಿಕ್ಷಣ ಮಂತ್ರಾಲಯ ನವದೆಹಲಿ ಇಲ್ಲಿ ನಡೆದ ಪಿ.ಎ.ಬಿ ಸಭೆಯಲ್ಲಿ ಅನುಮೋದನೆ ಆಗಿರುವಂತೆ ಈ ಕೆಳಕಂಡ ಕ್ರಮಗಳನ್ನು ಮತ್ತು ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ಈ ಮೂಲಕ ಸೂಚಿಸಿದೆ.


logoblog

Thanks for reading Midday meal programme to be extended for children in drought-hit taluks during summer vacation- Useful Information.

Previous
« Prev Post

No comments:

Post a Comment