2024 ಮೇ-5 ರಂದು ನಡೆಸಲು ಉದ್ದೇಶಿಸಲಾಗಿದ್ದ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ Prelims Exam ನ್ನು ಇದೀಗ ಮುಂದೂಡಿ, 2024 ಜುಲೈ-7 ರಂದು ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ.
ಈ ಬಗ್ಗೆ ಆಯೋಗವು ತಿದ್ದುಪಡಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ರಾಜ್ಯ ಸರ್ಕಾರ 2023-24ನೇ ಸಾಲಿನಲ್ಲಿ 384 ಗ್ರೂಪ್-ಎ ಮತ್ತು ಗ್ರೂಪ್- ಬಿ ಪ್ರೊಬೇಷನರಿ ಹುದ್ದೆಗಳಿಗೆ ಫೆಬ್ರವರಿ 26 ರಂದು ಅಧಿಸೂಚನೆಯನ್ನು ಹೊರಡಿಸಿತ್ತು.
ಮಾರ್ಚ್ 4 ರಿಂದ ಏಪ್ರಿಲ್ 3ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿತ್ತು, ಮತ್ತು ಪೂರ್ವಭಾವಿ ಪರೀಕ್ಷೆಯನ್ನು ಮೇ5 ರಂದು ನಡೆಸಲು ತೀರ್ಮಾನಿಸಿತ್ತು ಆದರೇ ಈ ಆದೇಶವನ್ನು ಪರಿಷ್ಕರಿಸಿ ಹೊಸ ಪ್ರಕಟಣೆಯನ್ನು ಹೊರಡಿಸಿದೆ.
ಇದೀಗ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಸಂಬಂಧಿಸಿ ಪ್ರಕಟಣೆಯೊಂದನ್ನು ಹೊರಡಿಸಿರುವ ಲೋಕಸೇವಾ ಆಯೋಗ ಪರೀಕ್ಷಾ ದಿನಾಂಕವನ್ನು ಮುಂದೂಡಿದೆ.
ಅಷ್ಟೆ ಅಲ್ಲದೇ ಅರ್ಜಿಸಲ್ಲಿಸುವ ಅವಧಿಯನ್ನು ಸಹ ಹೆಚ್ಚಿಸಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 15 ಕೊನೆಯ ದಿನವಾಗಿದ್ದು. ಪರೀಕ್ಷಾ ದಿನವನ್ನು ಜುಲೈ 7 ರಂದು ನಡೆಸಲು ತೀರ್ಮಾನಿಸಿದೆ.

No comments:
Post a Comment