SSLC ಮಕ್ಕಳೇ ಓದುವುದು ಹೇಗೆ ಮತ್ತು ಅದರ ಕ್ರಮಗಳು:*
ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಪರೀಕ್ಷೆಗೆ ಸಿದ್ಧತೆ ಪ್ರಾರಂಭಿಸುವುದು ಆದರ್ಶ ವಿದ್ಯಾರ್ಥಿಯ ಲಕ್ಷಣ. ಒಂದು ವೇಳೆ ಅದು ಸಾಧ್ಯವಾಗಿಲ್ಲ ಎಂದಿಟ್ಟುಕೊಳ್ಳೋಣ. ಹಾಗೆಂದು ಎದೆಗುಂದುವ ಅಗತ್ಯವಿಲ್ಲ. ಈಗಲೂ ತಡವಾಗಿಲ್ಲ. ಪ್ರಸ್ತುತ ಉಳಿದಿರುವ ಸಮಯದಲ್ಲಿ ವ್ಯವಸ್ಥಿತವಾಗಿ ಅಧ್ಯಯನ ಮಾಡಿದಲ್ಲಿ ಖಂಡಿತಾ ಯಶಸ್ಸು ಗಳಿಸಬಹುದು. ಇಲ್ಲಿ ಹೇಳಲಾಗಿರುವ ಕೆಲವು ಸೂತ್ರಗಳನ್ನು ಪಾಲಿಸಿದಲ್ಲಿ ಪರೀಕ್ಷಾ ಭಯದಿಂದ ದೂರಾಗಬಹುದು.
*1. ವೇಳಾಪಟ್ಟಿ ರೂಪಿಸಿಕೊಳ್ಳಿ.*
ವಾರದಲ್ಲಿ ಏಳು ದಿನಗಳಿವೆ. ನೀವು ಅಧ್ಯಯನ ಮಾಡಬೇಕಾಗಿರುವ ವಿಷಯಗಳನ್ನು ಈ ದಿನಗಳಿಗೆ ಹಂಚಿ ಒಂದು ವೇಳಾಪಟ್ಟಿ ರಚಿಸಿಕೊಳ್ಳಿ. ಭಾಷೆ ಹಾಗೂ ಐಚ್ಛಿಕ ವಿಷಯಗಳಿಗೆ ತಲಾ ಒಂದು ದಿನ ಮೀಸಲಿಡಿ. ಈ ವೇಳಾಪಟ್ಟಿಯನ್ನು ನಿಮ್ಮ ಪೋಷಕರಿಗೆ ತೋರಿಸಿ, ಅವರ ಸಲಹೆ ಪಡೆದುಕೊಳ್ಳಿ. ಅವಶ್ಯವೆನಿಸಿದರೆ, ನಿಮ್ಮ ಶಿಕ್ಷಕರ ಮಾರ್ಗದರ್ಶನ ಪಡೆಯಿರಿ. ದಿನಕ್ಕೆ ನಾಲ್ಕರಿಂದ ಆರು ಗಂಟೆಗಳ ಕಾಲ ಅಧ್ಯಯನಕ್ಕೆ ಮೀಸಲಿಡಿ. ವೇಳಾಪಟ್ಟಿಯನ್ನು ನೀವು ಅಧ್ಯಯನ ಮಾಡುವ ಜಾಗದಲ್ಲಿ ಎದ್ದು ಕಾಣುವಂತೆ ತೂಗುಹಾಕಿ. ಇದರಿಂದಾಗಿ ಗುರಿ ಕಣ್ಣೆದುರೇ ಇರುತ್ತದೆ, ನೆನಪಿನಲ್ಲಿ ಉಳಿಯುತ್ತದೆ. ವ್ಯವಸ್ಥಿತ ಅಧ್ಯಯನಕ್ಕೆ ವೇಳಾಪಟ್ಟಿ ಅತ್ಯಂತ ಅವಶ್ಯಕ.
*2. ಅಧ್ಯಯನಕ್ಕೆ ಸೂಕ್ತ ಸ್ಥಳ ಆಯ್ಕೆ ಮಾಡಿ.*
ಅಧ್ಯಯನಕ್ಕೆ ಪ್ರತ್ಯೇಕ ಕೊಠಡಿ ಇದ್ದರೆ ಅನುಕೂಲ. ಇಲ್ಲವಾದಲ್ಲಿ, ಇರುವ ಸ್ಥಳಾವಕಾಶದಲ್ಲಿಯೇ ಸದ್ದು–ಗದ್ದಲಗಳಿಂದ ದೂರವಿರುವ ಜಾಗವೊಂದನ್ನು ಆಯ್ಕೆ ಮಾಡಿಕೊಳ್ಳಿ. ಅಲ್ಲಿ ಸಾಕಷ್ಟು ಗಾಳಿ, ಬೆಳಕು ಇರಬೇಕು. ಮೇಜು ಹಾಗೂ ಒಂದು ಕುರ್ಚಿಯನ್ನು ಹೊಂದಿಸಿಕೊಳ್ಳಿ. ಓದಲು ಅಗತ್ಯವಾದ ಎಲ್ಲ ಅಧ್ಯಯನ ಸಾಮಗ್ರಿಗಳನ್ನು, ( ಪಠ್ಯಪುಸ್ತಕ, ಪಾಠದ ಟಿಪ್ಪಣಿ, ಖಾಲಿ ಹಾಳೆಗಳು, ಪೆನ್, ಪೆನ್ಸಿಲ್ ಇತ್ಯಾದಿ.) ಅಲ್ಲಿ ಒಪ್ಪವಾಗಿ ಜೋಡಿಸಿಟ್ಟುಕೊಳ್ಳಿ.
*3. ಅಧ್ಯಯನದ ಸಮಯ.*
ಬೆಳಿಗ್ಗೆ 4ರಿಂದ 7ರ ಸಮಯ ಅಧ್ಯಯನಕ್ಕೆ ಪ್ರಶಸ್ತವಾದುದು. ರಾತ್ರಿಯ ನಿದ್ರೆಯ ಕಾರಣ ಬೆಳಗಿನ ಸಮಯದಲ್ಲಿ ಮೆದುಳಿಗೆ ಸಾಕಷ್ಟು ವಿಶ್ರಾಂತಿ ದೊರೆತಿರುತ್ತದೆ. ಇದು ವಿಷಯ ಗ್ರಹಿಕೆಗೆ ಹಾಗೂ ಓದಿದ್ದನ್ನು ನೆನಪಿಟ್ಟುಕೊಳ್ಳುವುದಕ್ಕೆ ಅತ್ಯಂತ ಸಹಾಯಕ.
ಸಂಜೆಯೂ ಒಂದು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿಕೊಳ್ಳಿ. ಸಾಧ್ಯವಾದಷ್ಟೂ ರಾತ್ರಿ ನಿದ್ದೆಗೆಟ್ಟು ಓದುವುದನ್ನು ತಪ್ಪಿಸಿ. ಮೈ–ಮನಸಿಗೆ ಅಗತ್ಯವಾದಷ್ಟು ನಿದ್ದೆ ಮಾಡುವುದು ಕೂಡ ಒಳ್ಳೆಯ ಓದಿಗೆ ಸಹಕಾರಿ.
*4. ಸ್ಪಷ್ಟ ಗುರಿಯಿರಲಿ.*
ನಿಮ್ಮ ಸಾಧನೆಗೆ ಒಂದು ನಿರ್ದಿಷ್ಟ ಗುರಿಯನ್ನು ಹಾಕಿಕೊಳ್ಳಿ. ಆ ಗುರಿ ನೈಜವಾಗಿರಬೇಕು, ಸಾಧಿಸುವಂತಿರಬೇಕು ಮತ್ತು ಕಾಲಮಿತಿಗೆ ಒಳಪಟ್ಟಿರಬೇಕು. ಗುರಿಯನ್ನು ತಲುಪುವ ಬಗ್ಗೆ ದೃಢ ಸಂಕಲ್ಪ ಮಾಡಿಕೊಳ್ಳಿ. ಇದಕ್ಕೆ ಸಂಬಂಧಿಸಿದಂತೆ ನಿಮ್ಮ ಆಲೋಚನೆಗಳು ಧನಾತ್ಮಕವಾಗಿರಲಿ. ಅತಿಯಾದ ಆತ್ಮವಿಶ್ವಾಸ ಬೇಡ. ಹಾಗೆಯೇ ಕೀಳರಿಮೆಯೂ ಬೇಡ.
ಅನವಶ್ಯಕ ವಿಷಯಗಳಿಂದ ದೂರವಿದ್ದಷ್ಟೂ ಗುರಿ ಸಾಧನೆಗೆ ನೀವು ಹತ್ತಿರವಾಗುತ್ತೀರಿ.
*5. ವಿಷಯದ ಆಯ್ಕೆ.*
ನೀವೇ ಸಿದ್ಧಪಡಿಸಿಕೊಂಡಿರುವ ವೇಳಾಪಟ್ಟಿಯ ಪ್ರಕಾರ ಆಯಾ ದಿನದ ಅಧ್ಯಯನಕ್ಕೆ ಸಂಬಂಧಿಸಿದ ವಿಷಯವನ್ನು ಆಯ್ಕೆ ಮಾಡಿಕೊಂಡು ಓದಲು ಪ್ರಾರಂಭಿಸಿ. ಅದಕ್ಕೆ ಮುನ್ನ ನೀವು ಕುಳಿತ ಜಾಗದಲ್ಲಿಯೇ ಕೆಲವು ನಿಮಿಷಗಳ ಕಾಲ ಕಣ್ಣು ಮುಚ್ಚಿಕೊಳ್ಳಿ. ನಾಲ್ಕೈದು ಬಾರಿ ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳಿ. ನಿಧಾನವಾಗಿ ಉಸಿರನ್ನು ಹೊರಗೆ ಬಿಡಿ. ಕೆಲವು ಸೆಕೆಂಡುಗಳ ಕಾಲ ವಿರಮಿಸಿ. ಈಗ ಮೈ–ಮನ ಹಗುರಗೊಂಡು ಅಧ್ಯಯನಕ್ಕೆ ಅಗತ್ಯವಾದ ಏಕಾಗ್ರತೆ ಲಭ್ಯವಾಗುತ್ತದೆ. ನಂತರ ಓದಲು ಪ್ರಾರಂಭಿಸಿ.
*ಅಧ್ಯಯನದ ವಿಧಾನ ಹೇಗೆ?*
ನೀವು ಓದಲು ಆಯ್ಕೆ ಮಾಡಿಕೊಂಡಿರುವ ವಿಷಯಕ್ಕೆ ಸಂಬಂಧಿಸಿದ ಘಟಕ, ಅಧ್ಯಾಯ ಹಾಗೂ ಉಪವಿಭಾಗಗಳನ್ನು ಗುರುತಿಸಿಕೊಳ್ಳಿ. ವಿಷಯದ ಬಗ್ಗೆ ನಿಮಗೆ ಈ ಹಿಂದಿನ ಓದಿನಿಂದ ಈಗಾಗಲೇ ತಿಳಿದಿರುವ ಮಾಹಿತಿಯನ್ನು ನೆನಪಿಗೆ ತಂದುಕೊಳ್ಳಿ. ಇಂದು ಯಾವ ಅಧ್ಯಾಯ ಅಥವಾ ಉಪವಿಭಾಗವನ್ನು ಓದಬೇಕೆಂಬುದನ್ನು ನಿರ್ಧರಿಸಿಕೊಳ್ಳಿ. ಓದುತ್ತಿದ್ದಂತೆ ಅದರಲ್ಲಿರುವ ಮಾಹಿತಿಯನ್ನು ನಿಮ್ಮದೇ ಆದ ಪದಗಳಲ್ಲಿ ಅರ್ಥ ಮಾಡಿಕೊಳ್ಳಿ. ಎರಡು, ಮೂರು ಬಾರಿ ಓದಿ ಪುನರ್ ಮನನ ಮಾಡಿಕೊಳ್ಳಿ. ಓದುವಾಗಲೇ ಪುಟ್ಟ ಟಿಪ್ಪಣಿಗಳನ್ನು ಮಾಡಿಕೊಳ್ಳುವುದರಿಂದ, ಓದಿದ ವಿಷಯ ನೆನಪಿನಲ್ಲಿರುತ್ತದೆ.
ಪ್ರತಿ ಒಂದು ಗಂಟೆ ಅಭ್ಯಾಸದ ನಂತರ ಐದರಿಂದ ಹತ್ತು ನಿಮಿಷಗಳ ವಿಶ್ರಾಂತಿ ಪಡೆಯಿರಿ. ಬೇಸರವಾದಲ್ಲಿ, ವಿಷಯ ಅಥವಾ ಅಧ್ಯಾಯವನ್ನು ಬದಲಾಯಿಸಿಕೊಳ್ಳಿ. ಇಲ್ಲವೇ, ಹತ್ತು ನಿಮಿಷಗಳ ಕಾಲ ಜೋರಾಗಿ ದನಿಯೆತ್ತರಿಸಿ ಓದಿ. ಒಂದರಿಂದ ನೂರರವರೆಗೆ ಇಲ್ಲವೇ ನೂರರಿಂದ ಒಂದರವರೆಗೆ ಹಿಮ್ಮುಖವಾಗಿ ಎಣಿಸಿ, ಮತ್ತೆ ಅಭ್ಯಾಸ ಪ್ರಾರಂಭಿಸಿ.
ಕ್ಲಿಷ್ಟಕರ ಎನಿಸಿದ ವಿಷಯಗಳಿಗೆ, ಅಧ್ಯಾಯಗಳಿಗೆ ಹೆಚ್ಚಿನ ಸಮಯವನ್ನು ನಿಗದಿಪಡಿಸಿಕೊಳ್ಳಿ. ಭಾನುವಾರಗಳಂದು ದೊರಕುವ ಹೆಚ್ಚಿನ ಸಮಯವನ್ನು ಇಂಥ ವಿಷಯಗಳಿಗೆ ಮೀಸಲಿಡಿ.
ಒಂದು ಅಧ್ಯಾಯ ಅಥವಾ ಉಪವಿಭಾಗವನ್ನು ಅಧ್ಯಯನ ಮಾಡಿದ ಮೇಲೆ ಖಾಲಿ ಹಾಳೆಯೊಂದರಲ್ಲಿ ಅದಕ್ಕೆ ಸಂಬಂಧಿಸಿದ ಸಾರಾಂಶವನ್ನು ಬರೆದುಕೊಳ್ಳಿ. ಹೀಗೆ ಮಾಡುವಾಗ ಪೂರ್ತಿಯಾಗಿ ವಾಕ್ಯಗಳನ್ನು ಬರೆಯುವ ಬದಲಿಗೆ ಮುಖ್ಯ ಪದಗಳನ್ನು ಮಾತ್ರ ಬರೆದುಕೊಳ್ಳಿ. ಇದೇ ವಿಷಯವನ್ನು ಮತ್ತೆ ಓದುವ ಮುನ್ನ ಈ ಟಿಪ್ಪಣಿಯನ್ನೊಮ್ಮೆ ಪೂರ್ತಿಯಾಗಿ ಅವಲೋಕಿಸಿ, ಮುಂದಕ್ಕೆ ಹೋಗಿ.
ಪ್ರತೀ ವಿಷಯದ ಪ್ರತಿ ಅಧ್ಯಾಯಕ್ಕೆ ಹೀಗೆ ನೀವು ಮಾಡಿಕೊಳ್ಳುವ ಸಾರಾಂಶದ ಹಾಳೆಗಳನ್ನು ಒಂದು ಫೈಲ್‌ನಲ್ಲಿ ಹಾಕಿ ಇಟ್ಟುಕೊಳ್ಳಿ. ಪರೀಕ್ಷೆಯ ಹಿಂದಿನ ದಿನಗಳಲ್ಲಿ ಪುನರ್‌ಮನನ ಮಾಡಿಕೊಳ್ಳಲು ಇದು ಉಪಯುಕ್ತ.
ಸಿದ್ಧತೆಯಲ್ಲಿ ನಿಮಗೆ ಸಹಾಯಕವಾಗಬಲ್ಲ ಸಹಪಾಠಿಗಳನ್ನು ಸಂಪರ್ಕದಲ್ಲಿ ಇಟ್ಟುಕೊಳ್ಳಿ. ಇಂದು ನೀವು ಓದಿದ ಅಧ್ಯಾಯದ ಬಗ್ಗೆ ಮಾರನೆಯ ದಿನ ಅವರೊಂದಿಗೆ ಚರ್ಚಿಸಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಹಾಗೂ ವಿಷಯದ ಬಗ್ಗೆ ಗೊಂದಲಗಳಿದ್ದಲ್ಲಿ ಪರಿಹರಿಸುತ್ತದೆ.
ನನ್ನ ಪ್ರೀತಿಯ ಮುದ್ದು SSLC ವಿದ್ಯಾರ್ಥಿಗಳೇ*
*ಹಿಂದಿ ವಿಷಯದ ಪ್ರಶ್ನೆ ಪತ್ರಿಕೆ ವಿನ್ಯಾಸ ಹೀಗೆ ಇರಬಹುದು. ಇದು ನನ್ನ ವೈಯಕ್ತಿಕ ವಿಚಾರವಾಗಿದೆ.*
*व्याकरण भाग*
1. लिंग ।
2. विलोम ।
3. प्रथम प्रेरणार्थक ।
4. वचन ।
5. संधि ।
6. समास ।
7. विराम चिह्न ।
8. कारक ।
*व्याकरण भाग (वस्तुनिष्ठ) में कुल 08 प्रश्न और 08 अंक*
*गद्य भाग*
1. कश्मीरी सेब - 1 (अनुरूपता) + दो अंक का प्रश्न - कुल - 3 अंक ।
2. गिल्लू - तीन या चार अंक का प्रश्न - कुल - 3 या 4 अंक ।
3. मेरा बचपन - 1 (अनुरूपता) + दो अंक का प्रश्न - कुल - 3 अंक ।
4. बसंत की सच्चाई - तीन या चार अंक का प्रश्न - कुल - 3 या 4 अंक ।
5. इंटरनेट क्रांति - तीन अंक का प्रश्न - कुल - 3 अंक ।
6. ईमानदारों के सम्मेलन में - 1 (अनुरूपता) + एक अंक का प्रश्न या तीन अंक का प्रश्न - कुल - 2 या 3 अंक ।
*Nabi Sir GHS Kinnisultan, Tq. Aland*
7. दुनिया में पहला मकान- एक अनुरूपता और एक अंक का प्रश्न या दो अंक का एक प्रश्न - कुल - 2 अंक ।
8. रोबोट - तीन अंक का प्रश्न - कुल - 3 अंक ।
9. महिला की साहस गाथा - तीन अंक का प्रश्न - कुल - 3 अंक ।
10. कर्नाटक संपदा - तीन या चार अंक का प्रश्न - कुल - 3 या 4 अंक ।
11. बालशक्ति - दो या तीन अंक का प्रश्न - कुल - 2 या 3 अंक ।
*गद्य भाग में कुल 15 प्रश्न और 32 अंक ।*
👆👆👆👆👆
*पूरक वाचन*
1. शनि सबसे सुंदर ग्रह - दो अंक का प्रश्न - 02 अंक ।
2. सत्य की महिमा - दो अंक का प्रश्न - 02 अंक ।
3. नागरिक के कर्तव्य - एक प्रश्न - 02 अंक ।
*इन तीनों में से कोई भी दो प्रश्न को लिखना है*
*पूरक वाचन में कुल 2 प्रश्न और 4 अंक ।*
*Nabi Sir GHS Kinnisultana, Tq. Aland.*
*पद्य भाग*
1. मातृभूमि - एक अंक + दो अंक या तीन अंक का एक प्रश्न - कुल - 03 अंक ।
2. अभिनव मनुष्य - एक अंक का प्रश्न + दो अंक का प्रश्न या तीन अंक का प्रश्न एक ही प्रश्न - कुल - 03 अंक ।
3. तुलसी के दोहे - एक अंक का प्रश्न + तीन अंक का प्रश्न (भावार्थ) - कुल - 04 अंक ।
4. समय की पहचान - दो या तीन अंक का प्रश्न - कुल - 02 या 03 अंक ।
5. सूर श्याम - एक अंक का अनुरूपता प्रश्न + दो अंक का प्रश्न - कुल - 03 अंक ।
6. कोशिश करनेवालों की कभी हार नहीं होती - चार अंक का प्रश्न (पद्य भाग को पूर्ण कीजिए)- कुल - 04 अंक ।
*पद्य भाग में कुल 09 प्रश्न और 20 अंक ।*
👆👆👆👆👆
*रचना भाग*
1. कन्नड़ या अंग्रेजी में अनुवाद कीजिए (शनि सबसे सुंदर ग्रह, कर्नाटक संपदा , ईमानदारों के सम्मेलन में, गिल्लू और दुनिया में पहला मकान पाठ से) - 3 अंक का प्रश्न ए कुल - 03 अंक ।
2. गद्यांश को पढ़कर प्रश्नों के उत्तर लिखिए - 4 अंक ।
3. निबंध -
क. जनसंख्या ।
ख. इंटरनेट ।
ग. राष्ट्रीय भावैक्य ।
4. पत्र लेखन -
अ. अपनी पढ़ाई के बारे पिताजी को पत्र ।
अथवा
आ. अपनी बहन की शादी में भाग लेने के लिए *अपने प्रधान अध्यापक या कक्षा अध्यापक* जी को छुट्टी पत्र ।
*(वहां पर प्रधान अध्यापक या कक्षा अध्यापक जी को लिखना है ध्यान रहे)*
*रचना भाग में कुल 04 प्रश्न और 16 अंक ।*
👆👆👆👆👆
*ತೃತೀಯ ಭಾಷೆ ಹಿಂದಿ ವಿಷಯದಲ್ಲಿ ಹೆಚ್ಚು ಅಂಕ ಹೇಗೆ ಪಡೆಯುವುದು?*
👉 *ಮೊದಲ 8 ಪ್ರಶ್ನೆಗಳು*
ಹಿಂದಿಯಲ್ಲಿ ಮೊದಲ 8 ವಸ್ತುನಿಷ್ಠ ಪ್ರಶ್ನೆಗಳು ಇರುತ್ತವೆ. ವ್ಯಾಕರಣ ಭಾಗದಿಂದ ಪ್ರಶ್ನೆಗಳಿರುತ್ತವೆ. ವಿಲೋಮ, ವಚನ, ಲಿಂಗ, ಪ್ರೇರಣಾರ್ಥಕ, ಕಾರಕ, ವಿರಾಮ ಚಿಹ್ನೆಗಳು, ಸಂಧಿ, ಸಮಾಸ ಇತ್ಯಾದಿ ವ್ಯಾಕರಣ ಅಂಶಗಳ ಮೇಲೆ ಪ್ರಶ್ನೆಗಳಿಗೆ ನಾಲ್ಕು ಆಯ್ಕೆ ಉತ್ತರಗಳನ್ನು ಕೊಡಲಾಗಿರುತ್ತದೆ. ಅದರಲ್ಲಿ ಸರಿಯಾದ ಉತ್ತರ ಆರಿಸಿ ಬರೆಯಬೇಕು.
👉 *ಪ್ರಶ್ನೆ ಸಂಖ್ಯೆ - 9 ರಿಂದ 12 - ಅನುರೂಪತಾ ಪ್ರಶ್ನೆಗಳು*
ಇದರಲ್ಲಿ ಪದಗಳ ಸಹಸಂಬಂಧ ಜೋಡಿಸಬೇಕು. ಗಮನವಿಟ್ಟು ಓದಿ ಉತ್ತರಿಸಬೇಕಾಗುತ್ತದೆ. ಇದಕ್ಕಾಗಿ ಪ್ರತೀ ಅಧ್ಯಾಯದ ಪ್ರಮುಖ ಅಂಶಗಳನ್ನು ಒಂದು ಸಾಲಿನಲ್ಲಿ ಬರೆದು ನೆನಪಿಟ್ಟುಕೊಳ್ಳಬೇಕು.
👉 *ಪ್ರಶ್ನೆ ಸಂಖ್ಯೆ - 13-16 - ಒಂದು ಅಂಕದ ಪ್ರಶ್ನೆಗಳು:*
ಇದರಲ್ಲಿ ನಾಲ್ಕು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಸರಳ -ನೇರ ಪ್ರಶ್ನೆಗಳಾಗಿದ್ದು, ಇಡೀ ವಾಕ್ಯದಲ್ಲಿ ಉತ್ತರಿಸಬೇಕಾಗುತ್ತದೆ.
👉 *ಪ್ರಶ್ನೆ ಸಂಖ್ಯೆ - 17-24 - 2 ಅಂಕದ ಪ್ರಶ್ನೆಗಳು:*
ಇದರಲ್ಲಿ 8 ಪ್ರಶ್ನೆಗಳಿರುತ್ತವೆ. 2 ಪ್ರಶ್ನೆಗಳು ಪೂರಕ ವಾಚನ ಪಾಠಗಳಾದ “ಶನಿ ಸಬ್‌ಸೇ ಸುಂದರ್ ಗ್ರಹ್’ ಮತ್ತು “ಸತ್ಯ ಕೀ ಮಹಿಮಾ’ ದಿಂದ 4 ಪ್ರಶ್ನೆಗಳು ಬರುತ್ತವೆ. ಇವುಗಳಲ್ಲಿ 2 ಪ್ರಶ್ನೆಗಳಿಗೆ ಮಾತ್ರ ಉತ್ತರಿಸಬೇಕಾಗುತ್ತದೆ. ಹೀಗಾಗಿ ಈ ಎರಡು ಪಾಠಗಳನ್ನು ಹೆಚ್ಚು ಅಧ್ಯಯನ ಮಾಡಬೇಕು.
👉 *ಪ್ರಶ್ನೆ ಸಂಖ್ಯೆ - 25-33 - 3 ಅಂಕದ ಪ್ರಶ್ನೆಗಳು:*
ಇದರಲ್ಲಿ 9 ಪ್ರಶ್ನೆಗಳು ಇರುತ್ತವೆ. ತುಲಸೀ ಕೇ ದೋಹೇ-ದೋಹಾದಿಂದ ಒಂದು ಪ್ರಶ್ನೆ ಬಂದಿರುತ್ತದೆ. 5 ದೋಹಾಗಳ ಭಾವಾರ್ಥ ತಯಾರಿ ಮಾಡಿಕೊಂಡಿದ್ದಲ್ಲಿ ಅದನ್ನು ಬರೆದು 3 ಅಂಕಗಳನ್ನು ಗಳಿಸಬಹುದು. ಇನ್ನೊಂದು ಪ್ರಶ್ನೆ ಮಾತೃಭಾಷೆಗೆ ಅನುವಾದ ಮಾಡುವುದಿರುತ್ತದೆ. ಇನ್ನುಳಿದವು ಗದ್ಯ ಪದ್ಯಗಳಿಂದ ಬಂದಿರುತ್ತದೆ. 4 ಪದ್ಯಗಳು (ಮಾತೃಭೂಮಿ, ಅಭಿನವ ಮನುಷ್ಯ, ಸಮಯ್ ಕೀ ಪಹಚಾನ್ ಮತ್ತು ಕೋಶಿಶ್ ಕರ್ನೇವಾಲೋಂಕೀ ಕಭೀ ಹಾರ್ ನಹೀಂ ಹೋತೀ) ಹಾಗೂ ದೋಹಾ ಓದಿ ನೆನಪಿಟ್ಟುಕೊಳ್ಳಬೇಕು.
ಆಗ ಪದ್ಯಭಾಗದಿಂದ ಯಾವುದೇ ಪ್ರಶ್ನೆ ಬಂದರೂ ಸುಲಭವಾಗಿ ಉತ್ತರಿಸಲು ಸಾಧ್ಯವಿದೆ.
👉 *ಪ್ರಶ್ನೆ ಸಂಖ್ಯೆ - 34-35 - 4 ಅಂಕದ ಪ್ರಶ್ನೆಗಳು:*
ದೀರ್ಘ ಉತ್ತರ ವಿಭಾಗದಲ್ಲಿ ಕೇಳಲಾಗುವ ಪ್ರಶ್ನೆಗಳನ್ನು ಉತ್ತರಿಸುವುದಕ್ಕಾಗಿ ಗಿಲ್ಲು, ಬಸಂತ ಕೀ ಸಚ್ಚಾಯಿ, ಕರ್ನಾಟಕ ಸಂಪದಾ ಪಾಠಗಳ ತಯಾರಿ ಮಾಡಿಕೊಳ್ಳಬೇಕು. ನಿಬಂಧ ತಯಾರಿಗಾಗಿ ಪಠ್ಯದ ಕರ್ನಾಟಕ ಸಂಪದಾ ಮತ್ತು ಇಂಟರ್‌ನೆಟ್ ಕ್ರಾಂತಿ ಅಧ್ಯಾಯವನ್ನು ಹೆಚ್ಚು ಗಮನವಿಟ್ಟು ಓದಿಕೊಳ್ಳಬೇಕು.
*ಪದ್ಯ ಭಾಗ ಪೂರ್ಣಗೊಳಿಸಿ.*
ಕೋಶಿಶ್ ಕರನೆ ವಾಲೋಂಕಿ ಕಭೀ ಹಾರ್ ನಹೀ ಹೋತಿ ಪದ್ಯದ ಕೊನೆಯ ಆರು ಸಾಲುಗಳಲ್ಲಿ ನಾಲ್ಕು ಸಾಲುಗಳು ಕೇಳಲಾಗುತ್ತದೆ. ಈ ಸಾಲುಗಳನ್ನು ಬರೆದು, ಬರೆದು ಕಂಠಪಾಠ ಮಾಡಿಕೊಳ್ಳುವುದು ಉತ್ತಮ.
👉 *5 ಅಂಕದ ಪ್ರಶ್ನೆ ಪತ್ರಲೇಖನ:*
ವ್ಯವಹಾರಿಕ ಪತ್ರದಲ್ಲಿ ರಜೆ ಕೇಳುವ ಪತ್ರವನ್ನು ಮುಖ್ಯ ಶಿಕ್ಷಕರನ್ನು ಉದ್ದೇಶಿಸಿ ಬರೆಯಬೇಕು. ವೈಯಕ್ತಿಕ ಪತ್ರದಲ್ಲಿ ಅಭ್ಯಾಸ ಅಥವಾ ಆರೋಗ್ಯದ ಕುರಿತು ತಂದೆ, ತಾಯಿ ಅಥವಾ ಸಂಬಂಧಿಕರಿಗೆ ಪತ್ರ ಬರೆಯಬೇಕಾಗುತ್ತದೆ. ಯಾವುದಾದರೊಂದು ಪತ್ರ ಆಯ್ಕೆ ಮಾಡಿ ಬರೆಯಬೇಕಾಗುತ್ತದೆ.
👉 *ಇನ್ನಷ್ಟು ಸಲಹೆಗಳು:*
ಮಾದರಿ ಪ್ರಶ್ನೆ ಪತ್ರಿಕೆಯ ಸಣ್ಣ ಮತ್ತು ದೊಡ್ಡ ಉತ್ತರಗಳ ಪ್ರಶ್ನೆಗಳನ್ನು ಗಮನಿಸಬೇಕು. ಪ್ರಶ್ನೆಯೊಂದಿಗೆ ಉತ್ತರ ಎಷ್ಟಿರಬೇಕು, ಹೇಗೆ ಬರೆದರೆ ಅನುಕೂಲ ಎಂಬುದನ್ನು ಆಯಾ ಪಠ್ಯದ ಕೊನೆಗೆ ಇರುವ ನೋಟ್ಸ್ ಓದಿ ತಿಳಿದುಕೊಂಡು ನೆನಪಿಟ್ಟುಕೊಳ್ಳುವುದು. ಮುಖ್ಯವಾದ ಪಾಠಗಳನ್ನು ಗಮನಿಸಿ, ಸಣ್ಣ ಸಣ್ಣ ಅಂಶಗಳನ್ನು ನೆನಪಿಟ್ಟುಕೊಳ್ಳಿ. ಹಿಂಜ ರಿಕೆ ಬೇಡ. ಚೆನ್ನಾಗಿ ಓದಿ, ಪುನರಾವರ್ತಿಸಿ. ಸಂದೇಹಗಳೇನೇ ಇದ್ದರೂ ನಿಮ್ಮ ಗುರು ಗಳನ್ನು ಕೇಳಿ ಬಗೆಹರಿಸಿಕೊಳ್ಳಬೇಕು. ಟಿ.ವಿ., ಮೊಬೈಲ್‌ನಿಂದ ದೂರವಿದ್ದು, ಓದು, ಪರೀಕ್ಷೆಯ ಕಡೆಯೇ ಗಮನ ಇರಲಿ. ಸರಿಯಾಗಿ ನಿದ್ದೆ ಹಾಗೂ ನಿತ್ಯದ ವ್ಯಾಯಾಮವನ್ನು ಅವಗಣಿಸಬೇಡಿ. ಒತ್ತಡಗಳಿಂದ ದೂರವಾಗಿ ಪರೀಕ್ಷೆಯನ್ನು ಸಂತೋಷದಿಂದ ಎದುರುಗೊಳ್ಳಿ. ಖಂಡಿತ ಯಶಸ್ಸು ನಿಮ್ಮದಾಗಲಿದೆ.
ಹಿಂದಿ ಪಠ್ಯವನ್ನು ಓದುವ ಸಂದರ್ಭದಲ್ಲಿ ಪ್ರತಿಯೊಂದೂ ಅಧ್ಯಾಯದ ಪ್ರಮುಖಾಂಶಗಳನ್ನು ಟಿಪ್ಪಣಿ ಮಾಡಿಕೊಳ್ಳ ಬೇಕು. ಇದು ಪರೀಕ್ಷೆ ಸಮೀಪಿಸಿದಾಗ ವಿದ್ಯಾರ್ಥಿಗಳಿಗೆ ಅನುಕೂಲವಾಗು ತ್ತದೆ. ವ್ಯಾಕರಣವನ್ನು ಸರಿಯಾಗಿ ಅರ್ಥೈಸಿಕೊಂಡಲ್ಲಿ ಉತ್ತರಗಳ ಆಯ್ಕೆ ಸುಲಭವಾಗು ತ್ತದೆ. ಸಾಧ್ಯವಾ ದಷ್ಟು ಈ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳಲ್ಲಿ ಕೇಳ ಲಾದ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆದು ಅಭ್ಯಾಸ ಮಾಡಿಕೊಂಡರೆ ಉತ್ತಮ. ಪುನರಾವರ್ತನೆಯಾದ ಮತ್ತು ಪ್ರಮುಖ ಪಾಠಗಳ ಪ್ರಶ್ನೆಗಳತ್ತ ಗಮನವನ್ನು ಕೇಂದ್ರೀಕರಿಸಿ ಓದಿದಲ್ಲಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆಯಬಹುದು.

No comments:
Post a Comment