Saturday, April 27, 2024

For New KGID policy, it is convenient to fill the information online if your details are as per the above PDF.

  Wisdom News       Saturday, April 27, 2024
Hedding  ; For New KGID policy, it is convenient to fill the information online if your details are as per the above PDF.


ಕರ್ನಾಟಕ ಸರ್ಕಾರಿ ವಿಮಾ ಇಲಾಖೆ (ಕೆ.ಜಿ.ಐಡಿ)
ಪರಿಚಯ:
ಜಿಲ್ಲಾ ವಿಮೆ ಕಚೇರಿ (K.G.I.D.) ಎಂಬುದು 1958 ರಲ್ಲಿ ಸ್ಥಾಪಿತವಾದ ಒಂದು ಸ್ವತಂತ್ರ ಮತ್ತು ಕಡ್ಡಾಯ ವಿಮಾ ಕಾರ್ಯಕ್ರಮವಾಗಿದೆ. ಕರ್ನಾಟಕ ಸರ್ಕಾರದಲ್ಲಿ ಕೆಲಸ ಮಾಡುವ ಎಲ್ಲಾ ಶುದ್ಧ ಸರ್ಕಾರಿ ನೌಕರರಿಗೆ ಕಡ್ಡಾಯ ವಿಮಾ ಕಾರ್ಯಕ್ರಮವನ್ನು ಜಾರಿಗೊಳಿಸಲು ಇಲಾಖೆ ಜವಾಬ್ದಾರವಾಗಿದೆ.

 ಇಲಾಖೆ ಸಾಮಾನ್ಯ ಮಾಹಿತಿ:
ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯು ಅವರ ಶ್ರೇಷ್ಠ ಶ್ರೀ ಶ್ರೀ. 1891 ರಲ್ಲಿ ಎಲ್ಲ ರಾಜ್ಯ ಸರ್ಕಾರಿ ನೌಕರರಿಗೆ ಭದ್ರತೆಯನ್ನು ಸ್ಥಾಪಿಸಲು ಚಾಮರಾಜ ಒಡೆಯರ್ ಎಕ್ಸ್.ಸೇವೆಯ ಅವಧಿಯಲ್ಲಿ ಮಧ್ಯಂತರ ಸಾವಿನ ಸಂದರ್ಭದಲ್ಲಿ ಸರ್ಕಾರಿ ನೌಕರರ ಕುಟುಂಬಕ್ಕೆ ನಿವೃತ್ತ ನಿಧಿಯನ್ನು ಸರ್ಕಾರಿ ಉದ್ಯೋಗಿ ಮತ್ತು ಡೆತ್ ಕ್ಲೈಮ್ ಸೆಟಲ್ಮೆಂಟ್ಗೆ ಸೇರಿಸಿಕೊಳ್ಳಲು ಡಿವನ್ ಸರ್ ಕೆ. ಶೇಷಾದ್ರಿ ಅಯ್ಯರ್ ಅವರು ಮತ್ತಷ್ಟು ಅಭಿವೃದ್ಧಿಪಡಿಸಿದ್ದಾರೆ. ಇದು ಎಲ್ಲರಿಗೂ ಆರ್ಥಿಕ ಸ್ಥಿರತೆಯನ್ನು ಒದಗಿಸುವುದು ರಾಜ್ಯ ಸರ್ಕಾರಿ ನೌಕರರು.ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಭೇಟಿ ನೀಡಿ – http://www.kgid.kar.nic.in/

ಇತರ ಮಾಹಿತಿ:
1981 ರಲ್ಲಿ ತುಮಕೂರು ಜಿಲ್ಲೆಯಲ್ಲಿ ತುಮಕೂರು ಜಿಲ್ಲೆಯ ಡಿಸ್ಟ್ರಿಕ್ಟ್ ಇನ್ಶುರೆನ್ಸ್ ಆಫೀಸ್ ಸ್ಥಾಪನೆಯಾಯಿತು. ಸಾಮಾಜಿಕ ಭದ್ರತೆಗಾಗಿ ವಿಮೆ ನೀಡುವ ನಿಬಂಧನೆಯನ್ನು ಇಲಾಖೆ ಒದಗಿಸಿದೆ. ಎಲ್ಲಾ ಪಾಲಿಸಿ ಹೊಂದಿರುವವರಿಗೆ ಸಾಲವನ್ನು ಮಂಜೂರಾತಿ ನೀಡಲಾಗುತ್ತದೆ. ಪಾಲಿಸಿದಾರರ ಮೆಚುರಿಟಿ ಮೊತ್ತದ 55 ವರ್ಷ ವಯಸ್ಸಿನ (ಪಾಲಿಸಿ ಮೊತ್ತ + ಬೋನಸ್) ಅನ್ನು ನೀಡಲಾಗುತ್ತದೆ 55 ವರ್ಷಗಳ ವಯಸ್ಸಿನ ಮೊದಲು ಪಾಲಿಸಿದಾರನ ಮರಣದ ಸಂದರ್ಭದಲ್ಲಿ, ನಾಮಿನಿ / ಕುಟುಂಬಕ್ಕೆ ಡೆತ್ ಕ್ಲೈಮ್ ಮೊತ್ತವನ್ನು ನೀಡಲಾಗುತ್ತದೆ.


ಏನಿದು ಕರ್ನಾಟಕ ಸರ್ಕಾರಿ ವಿಮಾ ಇಲಾಖೆ, KGID,
ಏನಿದರ ಇತಿಹಾಸ ?

ಕರ್ನಾಟಕ ಸರ್ಕಾರಿ ವಿಮಾ ಇಲಾಖೆ, ಇತಿಹಾಸ.
ದಿನಾಂಕ 23ನೆ ಆಗಸ್ಟ್ 1889, ರಂದು ಅಂದಿನ ಮೈಸೂರಿನ ಸಂಸ್ಥಾನದ ದಿವಾನರು, ಮಹಾನ್ ರಾಜತಾಂತ್ರಿಕ ನಿಪುಣರೂ ಆದ ಸರ್ ಕೆ.ಶೇಷಾದ್ರಿ ಐಯ್ಯರ್ ರವರು ತಮ್ಮ ದೂರದೃಷ್ಟಿತ್ವ ಮತ್ತು ವಿವೇಚನಾಶೀಲತೆಗಳಿಂದ ಸರ್ಕಾರಿ ನೌಕರರ ಅಕಾಲಿಕ ಮರಣದಿಂದ ಆತನ ಕುಟುಂಬದ ಮೇಲಾಗುವ ಪರಿಣಾಮವನ್ನರಿತು ರಕ್ಷಣೆಯ ಭರವಸೆಯನ್ನು ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಿ, “ಸರ್ಕಾರಿ ನೌಕರರು ವಯೋ ನಿವೃತಿ ಹೊಂದಿದ ಸಂದರ್ಭದಲ್ಲಿ ಜೀವನ ಸಂಧ್ಯಾಕಾಲದ ಆರ್ಥಿಕ ಅಗತ್ಯತೆಗಳನ್ನು ನಿರ್ವಹಿಸಲು, ದುರ್ದೈವವಶಾತ್ ಸೇವಾವಧಿಯಲ್ಲಿ ಮೃತಪಟ್ಟರೆ ಆ ನೌಕರನ ಕುಟುಂಬದ ಭವಿಷ್ಯ ಜೀವನ ಸುಭದ್ರತೆಯಿಂದ ಸಾಗಲು ಅಗತ್ಯವಾದ ಆರ್ಥಿಕ ಭದ್ರತೆಯನ್ನು ಒದಗಿಸುವ” ಕಡ್ಡಾಯ ಜೀವ ವಿಮಾ ಯೋಜನೆಯನ್ನು ಪ್ರಾರಂಭಿಸುವ ಸಲುವಾಗಿ ರಾಜ ಸಮ್ಮುಖದಲ್ಲಿ ಟಿಪ್ಪಣಿಯೊಂದನ್ನು ಮಂಡಿಸಿದರು. ಹೀಗೆ ವಿಮೆಯ ಅಗತ್ಯತೆ ಯನ್ನು ಮನಗಂಡು “ಕಡ್ಡಾಯ ವಿಮಾ ಯೋಜನೆ” ಯು ಹಲವು ದರಬಾರಿ ವಿಚಾರಧಾರೆಯ ಕೂಡಿದ ಫಲವಾಗಿದೇ, ತಜ್ಞರ ಅಭಿಪ್ರಾಯಗಳನ್ನೊಳಗೊಂಡು ಪರಿಪಕ್ವವಾಗಿ, 1891ರ ಜುಲೈ 20ನೇ ದಿನಾಂಕ ದಂದು ಮೈಸೂರು ಸರ್ಕಾರದ ಆದೇಶದ ಸಂಖ್ಯೆ 4544-273 ರ ಮೂಲಕ ಮೈಸೂರು ಸರ್ಕಾರದ ವಿಮಾ ಇಲಾಖೆ ಯನ್ನು ಪ್ರಾರಂಭಿಸಲ್ಪಟ್ಟಿತು. ಭಾರತ ದೇಶದಲ್ಲಿ ಜನಸಾಮಾನ್ಯನೊಬ್ಬನಿಗೆ ವಿಮೆಯ ಬಗ್ಗೆ ಯಾವುದೇ ಪರಿಕಲ್ಪನೆಯೂ ಇರದ ಸಂದರ್ಭದಲ್ಲಿ ಇಡಿ ರಾಷ್ಟ್ರದಲ್ಲೇ ಪ್ರಪ್ರಥಮವಾಗಿ ರಾಜ್ಯ ಸರ್ಕಾರಿ ನೌಕರರಿಗೆ, ಸರಕಾರಿ ನೌಕರರ ವಿಮಾ ಇಲಾಖೆಯಾಗಿ ಸ್ಥಾಪಿತಗೊಂಡು, ಕಡಿಮೆ ದರದ ಪ್ರೀಮಿಯಮ್ ಗೆ ಉನ್ನತ ದರದ ವಿಮಾ ಮೊತ್ತವನ್ನು ಹಾಗೂ ರಾಷ್ಟ್ರದ ಬಹುತೇಕ ವಿಮಾ ಸಂಸ್ಥೆಗಳ ಪೈಕಿ ಅತಿ ಹೆಚ್ಚಿನ ದರದ ಅಧಿಲಾಭಾಂಶವನ್ನು ನೀಡುತ್ತಾ ಅತ್ಯಲ್ಪ ಆಡಳಿತ ವೆಚ್ಚದೊಂದಿಗೆ ಸಾಗಿ 121 ವರ್ಷಗಳ ಕಾಲ ಕಡೆದರು ಈ ವಿಮಾ ಇಲಾಖೆ ಸಕ್ಚಮ ದಾಪುಗಾಲೂ ಈ ಇಲಾಖೆಯು ಹಾಕಿದೆ.  

ಪ್ರಮುಖ ಅಂಶಗಳು ಹಾಗೂ ಘಟನಾವಳಿಗಳು:

ಘನವೆತ್ತ ಮೈಸೂರು ಮಹಾರಾಜರ ಸಮ್ಮುಖದಲ್ಲಿ ಅನುಮೋದನೆಗಾಗಿ ಮಂಡಿಸಲು ಮೈಸೂರು ಸರ್ಕಾರ ಜೀವ ವಿಮಾ ನಿಯಮಾವಳಿಯನ್ನು ಸಿದ್ಧಪಡಿಸುವ ಸಲುವಾಗಿ ದಿನಾಂಕ 12-07-1891 ರಂದು ಅಂದಿನ ಮೈಸೂರು ರಾಜ್ಯ ನಿಯಂತ್ರನ್ನಾಧಿಕರಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.
ಮೈಸೂರು ರಾಜ್ಯ ಪತ್ರದ ಪ್ರಕಟಣೆಯಂತೆ “ಮೈಸೂರು ಸರ್ಕಾರ ಕಡ್ಡಾಯ ಜೀವ ವಿಮಾ ಯೋಜನೆ ಅನುಷ್ಟಾನ ಸಮಿತಿ” ಯು ದಿನಾಂಕ 27-10-1891 ರಂದು ರಚಿನ್ಗೊಂಡು ದಿನಾಂಕ 1-12-1891 ರಿಂದ “ಮೈಸೂರು ಸರ್ಕಾರ ಕಡ್ಡಾಯ ಜೀವ ವಿಮಾ ಯೋಜನೆ” KGID ಜಾರಿಗೆ ಬಂದಿತು.

ಆರಂಭಿಕವಾಗಿ ಪುರುಷ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿದ್ದ KGID ಯೋಜನೆಯನ್ನು ದಿನಾಂಕ 11-7-1894 ರಿಂದ ಮಹಿಳಾ ಸರ್ಕಾರಿ ನೌಕರರಿಗೂ ವಿಸ್ತರಿಸಲಾಯಿತು.

ಈ ಜನಪ್ರಿಯವಾದ ಯೋಜನೆಯನ್ನು ದಿನಾಂಕ 16-12-1915 ರಿಂದ ಸಾರ್ವಜನಿಕರಿಗೂ ವಿಸ್ತರಿಸಿ, ಸರ್.ಎಂ.ಎನ್.ಕೃಷ್ಣರಾವ್ ರವರನ್ನು ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಲಾಯಿತು.

ವಿಮಾ ಆದಾಯದ ಮೇರೆಗೆ ಪಾಲಿಸಿದಾರರಿಗೆ ಬೋನಸ್ Bonus ನೀಡುವ ವ್ಯವಸ್ಥೆಯು 1917ನೇ ಸಾಲಿನಿಂದ ಜಾರಿಗೆ ಬಂದಿತು.
1935ರಲ್ಲಿ ವಿಧಾನವೀಧಿಯಲ್ಲಿ ಅಧಿಕಾರಿ ಶಾಖೆಯ KGID ವೆಚ್ಚದಲ್ಲಿ ಇಲಾಖೆಯ ಕಛೇರಿಗಾಗಿ ಸ್ವಂತ ಕಟ್ಟಡವನ್ನು ನಿರ್ಮಿಸಲಾಯಿತು.
ದಿನಾಂಕ 05-07-1946 ರಲ್ಲಿ ರಾಜ್ಯದ ಎಲ್ಲಾ ಬಗೆಯ ವಾಹನಗಳಿಗೂ ವಿಮೆ ಮಾಡಲು ಅನುವಾಗುವಂತೆ ವಾಹನ ವಿಮಾ ವ್ಯವಹಾರವನ್ನು ಪ್ರಾರಂಭಿಸಲಾಯಿತು.
ದಿನಾಂಕ 01-09-1956 ರಲ್ಲಿ ಜೀವ ವಿಮಾ ವ್ಯವಹಾರವನ್ನು ರಾಷ್ಟ್ರೀಕರಣಗೊಳಿಸಿ ಭಾರತೀಯ ಜೀವ ವಿಮಾ ನಿಗಮವನ್ನು ಸ್ಥಾಪಿಸಲಾಯಿತು. ಇದರಿಂದ ಇಲಾಖೆಯಲ್ಲಿ ರಾಜ್ಯ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) ವ್ಯವಹಾರ ಯೋಜನೆ ಮಾತ್ರ ಉಳಿಯಿತು.
ದಿನಾಂಕ 23-09-1963 ರಿಂದ ವಿಮಾ ಪಾಲಿಸಿಗಳ ಆಧಾರದ ಮೇಲೆ ಸಾಲ ನೀಡುವ “ಸಾಲ ಮಂಜೂರಾತಿ ಕಾರ್ಯ” ಆರಂಭವಾಯಿತು.
ದಿನಾಂಕ 01-01-1973 ರಲ್ಲಿ ಸಾಮಾನ್ಯ ವಿಮಾ ವ್ಯವಹಾರವನ್ನು ರಾಷ್ಟ್ರೀಕರಣಗೊಳಿಸಿ ಸಾಮಾನ್ಯ ವಿಮಾ ನಿಗಮವನ್ನು ಸ್ಥಾಪಿಸಲಾಯಿತು.
ಇದರಿಂದ ಈ ಇಲಾಖೆಯಲ್ಲಿ ರಾಜ್ಯ ಸರ್ಕಾರಿ ವಾಹನಗಳ ಮತ್ತು ರಾಜ್ಯ ಸರ್ಕಾರವು ಆರ್ಥಿಕ ಹಿತಾಸಕ್ತಿಹೊಂದಿದ ವಾಹನಗಳ ವಿಮಾ ವ್ಯವಹಾರ ಯೋಜನೆ ಮಾತ್ರ ಉಳಿಯಿತು.

ಪ್ರಸ್ತುತ ಇಲಾಖೆಯು ಭಾರತ ಸಂವಿಧಾನದ 309ನೇ ಪರಿಚ್ಫೇದದನ್ವಯ ದತ್ತವಾದ ಅಧಿಕಾರ ವ್ಯಾಪ್ತಿಯಲ್ಲಿ ಕರ್ನಾಟಕದ ಘನತೆವೆತ್ತ ರಾಜ್ಯಪಾಲರು ರಚಿಸಿರುವ “ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) ನಿಯಮಾವಳಿ – 1958” ಹಾಗೂ ಕಾಲಕಾಲಕ್ಕೆ ಮಾಡಲಾದ ತಿದ್ದುಪಡಿಗಳ ಮೇರೆಗೆ ಕಡ್ಡಾಯ ವಿಮೆ ಜಾರಿಗೊಳಿಸುವ ಕಾರ್ಯನಿರ್ವಹಿಸುತ್ತಿದೆ. ಅಂತೆಯೇ ವಾಹನ ವಿಮೆ ಮತ್ತು ಕುಟುಂಬ ಕಲ್ಯಾಣ ನಿಧಿ ನಿರ್ವಹಣೆ ಕಾರ್ಯವನ್ನೂ ನಿರ್ವಹಿಸುತ್ತಿದೆ. ದಿನಾಂಕ 10-03-2011 ರಿಂದ ಜಾರಿಗೆ ಬಂದಂತೆ ರಾಜ್ಯ ಸರ್ಕಾರಿ ನೌಕರರ ಸಾಮೂಹಿಕ ವಿಮಾ ಯೋಜನೆಯ ಆಡಳಿತ ಜವಾಬ್ದಾರಿಯು ಈ ಇಲಾಖೆಗೆ ವಹಿಸಲ್ಪಟ್ಟಿದೆ.

-:ಪೀಠಿಕೆ:-

ವಿಮಾ ಇಲಾಖೆಯು 1891 ರಲ್ಲಿ ದಿವಾನ್ “ಸರ್ ಕೆ. ಶೇಷಾದ್ರಿ ಅಯ್ಯರ್” ರವರಿಂದ ಸ್ಥಾಪಿಸಲ್ಪಟ್ಟಿತು. ಸರ್ಕಾರಿ ನೌಕರರಿಗೆ 60 ವರ್ಷದವರೆವಿಗೆ ವಿಮಾ ರಕ್ಷಣೆ ಹಾಗೂ ಸೇವೆಯಲ್ಲಿದ್ದಾಗ ಅಕಾಲಮರಣಕ್ಕೀಡಾದರೆ ಅವರ ಆಶ್ರಿತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಸದುದ್ದೇಶದಿಂದ ಜೀವ ವಿಮೆ ಪ್ರಾರಂಭಿಸಲಾಯಿತು. ಈ ಇಲಾಖೆಯ ನಿರ್ದೇಶನಾಲಯವು ಬೆಂಗಳೂರಿನಲ್ಲಿದ್ದು ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ವಿಮಾ ಕಛೇರಿಗಳು ಕಾರ್ಯ ನಿರ್ವಹಿಸುತ್ತಿವೆ. ನಿರ್ದೇಶಕರು, ನಾಲ್ಕು ಉಪ ನಿರ್ದೇಶಕರು ಹಾಗೂ 39 ಜಿಲ್ಲಾ ವಿಮಾಧಿಕಾರಿ/ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ವಿಮಾ ಇಲಾಖೆಯು ಕಾರ್ಯನಿರ್ವಹಿಸುತ್ತಿದೆ.

2. ದೃಷ್ಠಿಕೋನ

ಸರ್ಕಾರಿ ನೌಕರರಿಗೆ 55 ವರ್ಷದವರೆವಿಗೆ ವಿಮಾ ರಕ್ಷಣೆ ಹಾಗೂ ಸೇವೆಯಲ್ಲಿದ್ದಾಗ ಅಕಾಲಮರಣಕ್ಕೀಡಾದರೆ ಅವರ ಆಶ್ರಿತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಸದುದ್ದೇಶದಿಂದ ಜೀವ ವಿಮೆ ಪ್ರಾರಂಭಿಸಲಾಯಿತು.

3. ಧ್ಯೇಯೋದ್ದೇಶಗಳು

* ಅರ್ಹ ಸರ್ಕಾರಿ ನೌಕರರಿಗೆ ಕಡ್ಡಾಯ ಜೀವ ವಿಮೆ.

* ವಿಮಾದಾರರ ಅಗತ್ಯಗಳಿಗೆ ಸಾಲ ಮಂಜೂರಾತಿ.

* ಸಕಾಲದಲ್ಲಿ ಹಕ್ಕು ಪ್ರಕರಣಗಳ ಇತ್ಯರ್ಥ.

4. ಕಾರ್ಯಚಟುವಟಿಕೆಗಳು

ಈ ಇಲಾಖೆಯ ಕಾರ್ಯಚಟುವಟಿಕೆಗಳನ್ನು 4 ಭಾಗಗಳಾಗಿ ವಿಭಜಿಸಿದ್ದು, ಅವು ಈ ಕೆಳಕಂಡಂತಿದೆ.

(ಅ) ಅಧಿಕಾರಿ ಶಾಖೆ.

* ರಾಜ್ಯ ಸರ್ಕಾರದ ಅರ್ಹ ನೌಕರರಿಗೆ ಕಡ್ಡಾಯ ಜೀವ ವಿಮೆ.

* ಸಾಲ ಮಂಜೂರಾತಿ.

* ಅವಧಿಪೂರೈಕೆ, ಮರಣಜನ್ಯ, ವಿಮಾ ತ್ಯಾಗಮೌಲ್ಯ ಪ್ರಕರಣ ಇತ್ಯರ್ಥ.


ಆ) ವಾಹನ ಶಾಖೆ

* ಸರ್ಕಾರೀ ವಾಹನಗಳಿಗೆ ವಿಮೆ.

* ಸರ್ಕಾರದ ಆರ್ಥಿಕ ಹಿತಾಸಕ್ತಿಯುಳ್ಳ ವಾಹನಗಳಿಗೆ ವಿಮೆ.

* ವಿಮಾ ನವೀಕರಣ.

* ಅಪಘಾತ ಸಂದರ್ಭದಲ್ಲಿ ಕ್ಲೇಮ್ ಇತ್ಯರ್ಥ.

(ಇ) ಕುಟುಂಬ ಕಲ್ಯಾಣ ನಿಧಿ ಶಾಖೆ.

* ನಿಗಮ, ಮಂಡಳಿ, ಕಾರ್ಪೋರೇಶನ್, ಅನುದಾನಿತ ಶಾಲೆ,ಪುರಸಭೆ ನೌಕರರ ಕುಟುಂಬ ಕಲ್ಯಾ ನಿಧಿ ಪ್ರಕರಣದ ಇತ್ಯರ್ಥದಲ್ಲಿ ಮೇಲ್ವಿಚಾರಣೆ ಹಾಗೂ ಮಂಜೂರಾತಿ.

(ಈ) ಸಾಮೂಹಿಕ ವಿಮಾ ಯೋಜನೆ.

* ಎಲ್ಲಾ ರಾಜ್ಯ ಸರ್ಕಾರಿ ನೌಕರರಿಗೆ ದಿನಾಂಕ 1-1-1982 ರಿಂದ ಕಡ್ಡಾಯವಾಗಿ ಜಾರಿಗೆ ಬಂದಿದೆ.

* ಇದು ಸ್ವಯಂ ಆರ್ಥಿಕತೆಯಿಂದ ಕೂಡಿದ ಸ್ವಾವಲಂಬಿ ಸಮೂಹ ಯೋಜನೆ.

* ನೌಕರರನ್ನು 4 ವರ್ಗಗಳಾಗಿ ವಿಂಗಡಿಸಲಾಗಿದೆ.

ಎ- (4 ಯೂನಿಟ್) ಬಿ- (3 ಯೂನಿಟ್)

ಸಿ- (2 ಯೂನಿಟ್) ಡಿ- (1 ಯೂನಿಟ್)

* ಮಾಸಿಕ ವಂತಿಗೆಯನ್ನು ರೂ.60/- ರ ಗುಣಲಬ್ಧದಲ್ಲಿ ವೇತನದ ಮೂಲಕ ವಸೂಲಿ ಮಾಡಲಾಗುತ್ತದೆ.

* ಸಂಬಂಧಪಟ್ಟ ವೇತನ ವಿತರಣಾಧಿಕಾರಿಗಳೇ ಮಂಜೂರಾತಿ ಪ್ರಾಧಿಕಾರಿಗಳಾಗಿರುತ್ತಾರೆ.

5. ವಿಮಾದಾರರ ಸನ್ನದು

* ವಿಮಾದಾರರಿಗೆ ತ್ವರಿತಗತಿಯಲ್ಲಿ ಸೇವೆ.

* ಪಾಲಿಸಿಗಳ ಮೇಲೆ ದ್ವೈವಾರ್ಷಿಕ ಬೋನಸ್.

* ವಿಚಾರಣಾ ಕೌಂಟರ್/ಕುಂದುಕೊರತೆ ನಿವಾರಣೆಯ ನಿರ್ವಹಣೆ.

* ವಾರ್ಷಿಕ ಲೆಕ್ಕ ಚೀಟಿ ನೀಡುವಿಕೆ.

* ಕಛೇರಿ ಕಾರ್ಯಗಳ ಗಣಕೀಕರಣ.

* ವಿಮಾದಾರರಿಗೆ ಸೇವಾ ಸೌಲಭ್ಯ ಒದಗಿಸಲು ಕಛೇರಿಗಳ ಆಧುನೀಕರಣ.

* ಪ್ರತೀ ತಿಂಗಳ ಎರಡನೇ ಶುಕ್ರವಾರ ಅಪರಾಹ್ನ 3.00 ರಿಂದ 5.00 ರವರೆಗೆ ಗ್ರಾಹಕಪರ ಚಟುವಟಿಕೆ.

6. ವಿಮಾದಾರರ ಸಹಭಾಗಿತ್ವ

ಇಲಾಖೆಯ ವಿಮಾ ಸೇವೆಯು ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ. ಸರ್ಕಾರಿ ನೌಕರರೆ ಇಲಾಖೆಯ ಗ್ರಾಹಕ ರಾಗಿದ್ದಾರೆ. ಪ್ರೀಮಿಯಂ ಹಾಗೂ ಸಾಲದ ಕಂತುಗಳ ಕಾಲೋಚಿತ (up to date) ನಿರ್ವಹಣೆಗೆ ಸಂಬಂಧಪಟ್ಟ ವಿಮಾ ಕಛೇರಿಗಳಿಗೆ ಕಾಲಕಾಲಕ್ಕೆ ವರ್ಗಾವಣಾ ಮಾಹಿತಿ ನೀಡುವ ಮೂಲಕ ಯಶಸ್ವೀ ವಿಮಾ ಸೇವೆಯಲ್ಲಿ ವಿಮಾದಾರರ ಸಹಭಾಗಿತ್ವ ಅಗತ್ಯ.

ಕರ್ನಾಟಕ ಸರ್ಕಾರಿ ವಿಮಾ ಇಲಾಖೆ KGID ಪುಕಟಣೆ.

ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಸೇವೆಗಳನ್ನು ಆನ್‌ಲೈನ್‌ನಲ್ಲಿ ಪಡೆಯುವಲ್ಲಿ ಎದುರಾಗುವ ಸಮಸ್ಯೆಗಳನನ್ನು ನಿವಾರಿಸಲು ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಿರುವ ಬಗ್ಗೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಗಣಕೀಕರಣ ಪ್ರಗತಿಯಲ್ಲಿದ್ದು, ವಿಮಾದಾರರು ವಿಮಾ ಇಲಾಖೆಯ ಸೇವೆಗಳನ್ನು ಆನ್‌ಲೈನ್ ನಲ್ಲಿ ಪಡೆಯುವಲ್ಲಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸಲು ವಿಮಾ ಇಲಾಖೆಯ ಕೇಂದ್ರ ಕಛೇರಿಯಲ್ಲಿ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಕೆಳಕಂಡ 4 ದೂರವಾಣಿ ಸಂಖ್ಯೆಗಳನ್ನು ಸಹಾವಾಣಿ ಕೇಂದ್ರಕ್ಕೆ ಪ್ರತ್ಯೇಕವಾಗಿ ನಿಗಧಿಪಡಿಸಲಾಗಿದ್ದು, ವಿಮಾದಾರರು ಆನ್‌ಲೈನ್ ಸೇವೆಗಳ ಬಗ್ಗೆ ಸಮಸ್ಯೆ ಉದ್ಭವಿಸಿದಲ್ಲಿ, ಬಗೆಹರಿಸಿಕೊಳ್ಳಲು ಈ ಸಹಾಯವಾಣಿಗಳನ್ನು ಉಪಯೋಗಿಸಲು ಕೋರಲಾಗಿದೆ.


Government Employees: ರಾಜ್ಯ ಸರ್ಕಾರಿ ನೌಕರರಿಗೊಂದು ಮಾಹಿತಿ: ‘KGID Online` ಬಳಕೆ ಹೇಗೆ ಗೊತ್ತಾ?

ರಾಜ್ಯ ಸರ್ಕಾರಿ ನೌಕರರು ಹಲವು ವರ್ಷಗಳಿಂದ ಕಾತುರದಿಂದ ಕಾಯುತ್ತಿದ್ದಂತ ಕೆಜಿಐಡಿ ವ್ಯವಸ್ಥೆ, ಕೊನೆಗೂ ಆನ್ ಲೈನ್ ಆಗಿದೆ. ಇನ್ಮುಂದೆ ಕೆಜಿಐಡಿ ಮಾಹಿತಿಯನ್ನು ಸರ್ಕಾರಿ ನೌಕರರು ಆನ್ ಲೈನ್ ಮೂಲಕವೇ ಮಾಡಬಹುದಾಗಿದೆ. ಹಾಗಿದ್ದರೇ.. ಕೆಜಿಐಡಿ ಆನ್ ಲೈನ್ ಮೂಲಕ ಹೇಗೆ ಬಳಕೆ ಮಾಡಬೇಕು ಎಂಬುವುದನ್ನ ತಿಳಿಯಿರಿ.


ಕರ್ನಾಟಕ ಸರ್ಕಾರ ವಿಮಾ ಇಲಾಖೆ(KGID) ವ್ಯವಸ್ಥೆ, ಈಗ ಸರ್ಕಾರಿ ನೌಕರರಿಗೆ ಆನ್ ಲೈನ್ ವ್ಯವಸ್ಥೆ ಕಲ್ಪಿಸಿದೆ. ಇದಕ್ಕಾಗಿ https://kgidonline.karnataka.gov.in ಎನ್ನುವಂತ ಆನ್ ಲೈನ್ ವೆಬ್ ಸೈಟ್ ಬಿಡುಗಡೆ ಮಾಡಲಾಗಿದ್ದು, ರಾಜ್ಯ ಸರ್ಕಾರಿ ನೌಕರರ ಕೆಜಿಐಡಿ ಮಾಹಿತಿ, ಈಗ ಆನ್ ಲೈನ್ ನಲ್ಲೂ ಲಭ್ಯವಾಗಲಿದೆ.


ಇದಾದ ನಂತ್ರ, ಮೊದಲಿಗೆ ಮೂಲ ವಿವರಗಳನ್ನು ಭರ್ತಿ ಮಾಡಬೇಕು. ಅಂದ್ರೇ.. ರಾಜ್ಯ ಸರ್ಕಾರಿ ನೌಕರರ ಶಾಶ್ವತ ವಿಳಾಸ ಮತ್ತು ಪಿನ್ ಕೋಡ್ ಅನ್ನು ಮಾತ್ರ ಭರ್ತಿ ಮಾಡಬೇಕು. ಆನಂತ್ರ ವೈವಾಹಿಕ ಸ್ಥಿತಿ ಅನ್ನು ಬದಲಿಸುವುದಿದ್ದರೇ ಬದಲಿಸಬಹುದು. ಇಲ್ಲದೇ ಹಾಗೆಯೇ ನೆಕ್ಟ್ ಆಯ್ಕೆ , ಮುಂದುವರೆಯಿರಿ. 


ಕೆಜಿಐಡಿ ಟ್ಯಾಬ್(KGDI Tab) ನಲ್ಲಿ ಕಡಿತಗೊಳಿಸಬೇಕಾದ ಮಾಸಿಕ ವಿಮಾ ಕಂತಿನ ವಿವರ (ಕನಿಷ್ಠ) ರೂ ತೋರಿಸುತ್ತದೆ. ಪ್ರೀಮಿಯಂ ಮೊತ್ತವನ್ನು ನಮೂದಿಸಿ. ಒಂದು ವೇಳೆ ನೀವು ತಮ್ಮ ಪ್ರೀಮಿಯಂ ಮೊತ್ತವನ್ನು ಹೆಚ್ಚಿಸಲು ಬಯಸಿದ್ರೇ.. ಅಂತಹ ಅರ್ಜಿದಾರರು ತಮ್ಮ ಸಂಬಳದ ಶೇ.50ಕ್ಕಿಂತ ಕಡಿಮೆ ಮೊತ್ತವನ್ನು ಉಲ್ಲೇಖಿಸಬಹುದಾಗಿದೆ. ಆನಂತ್ರ ನೆಕ್ಟ್ ಆಯ್ಕೆ , ಮುಂದೆ ಸಾಗಿ..

ಕುಟುಂಬದ ವಿವರ ಭರ್ತಿಯ ಪುಟದಲ್ಲಿ ಕುಟುಂಬದ ವಿವರ ಆಯ್ಕೆ ಮಾಡಿಕೊಂಡು, ನೌಕರರು ಕುಟುಂಬ(Employees Family)ದ ಸದಸ್ಯರ ಅಂದರೆ ಸಂಬಂಧ, ಸದಸ್ಯರ ಹೆಸರು, ಹುಟ್ಟಿದ ದಿನಾಂಕ, ಜೀವಂತವೇ ಅಥವಾ ಮರಣ ಸ್ಥಿತಿಯ ವಿವರ ನಮೂದಿಸಿ ನೆಕ್ಟ್ ಮುಂದುವರೆದ್ರೇ ನಂತ್ರದ ಪುಟ ತೆರೆದುಕೊಳ್ಳಲಿದೆ.


ಅರ್ಜಿದಾರರು ಈಗಿನ ಪುಟದಲ್ಲಿ ನಾಮಿನಿ ವಿವರ(Nominee Details)ಗಳನ್ನು ಭರ್ತಿ ಮಾಡಬೇಕಾಗಿರುತ್ತದೆ. ನಾಮ ನಿರ್ದೇಶಿತ ವ್ಯಕ್ತಿಯ ಹೆಸರು ಆಯ್ಕೆ ಮಾಡಿ ಮತ್ತು ಶೇಕಡಾವಾರು ಹಂಚಿಕೆಯನ್ನು ನಮೂದಿಸಿ. ಇಲ್ಲಿ ಗಮನಿಸಿ, ನೀವು ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ಸೇರಿಸಬಹುದು. ಆದ್ರೇ.. ಒಟ್ಟು % ಪಾಲು 100%ಕ್ಕಿಂತ ಹೆಚ್ಚು ಅಥವಾ ಕಡಿಮೆ ಇರಬಾರದು.

ಇದಾದ ಬಳಿಕ ಆನಂತ್ರದ ಪುಟದಲ್ಲಿ ನೀವು ವೈಯಕ್ತಿಕ ವಿವರಗಳನ್ನು, ಡಿಕ್ಲೆರೇಷನ್ ಕಂಡಿಷನ್ ಒಪ್ಪಿ, ಮಾಸಿಕ ಪ್ರೀಮಿಯಂ(Monthly Premium) ಮೊತ್ತ ನಮೂದಿಸಿ, ನೌಕರರು ಪಾವತಿ ವಿಧಾನ ಆಯ್ಕೆ ಮಾಡಿಕೊಂಡರೇ.. ನೌಕರರ ಭೌತಿಕ ವಿವರಗಳ ಭರ್ತಿಯ ನಂತ್ರ, ನೌಕರರ ಆರೋಗ್ಯ ಸ್ಥಿತಿಯ ವಿವರ ಭರ್ತಿ ಮಾಡಿ, ವೈದ್ಯರ ವಿವರಗಳಲ್ಲಿ ರಾಜ್ಯ ಪರಿಮಿತಿಯೊಳಗಿನ ವೈದ್ಯರು, ಇತರೆ ರಾಜ್ಯ ವೈದ್ಯರು ಆಯ್ಕೆ ಮಾಡಿಕೊಂಡು ಒಪ್ಪಿಗೆ ಸೂಚಿಸಿದ್ರೇ.. ನಿಮ್ಮ ಕೆಜಿಐಡಿ ಖಾತೆ ಆನ್ ಲೈನ್ ಮೂಲಕ ಸಕ್ರೀಯವಾಗಲಿದೆ.

ಸರಕಾರಿ ನೌಕರರು ಮತ್ತು ನಿವೃತ್ತ ಸಿಬ್ಬಂದಿ ಕಡ್ಡಾಯ ಜೀವ ವಿಮಾ ಯೋಜನೆಯಡಿ ಮಾಡಿಸಿರುವ ವಿಮಾ ಮೊತ್ತದ ಮೇಲೆ ಪ್ರತಿ ಸಾವಿರ ರೂ.ಗಳಿಗೆ 90 ರೂ. ಲಾಭಾಂಶವನ್ನು ಕರ್ನಾಟಕ ಸರಕಾರಿ ವಿಮಾ ಇಲಾಖೆ (ಕೆಜಿಐಡಿ) ಪ್ರಕಟಿಸಿದೆ.


ವಿಮಾ ಗಣಕರು ಮಾಡಿರುವ ಶಿಫಾರಸಿನಂತೆ ಲಾಭಾಂಶ ಪ್ರಕಟಿಸಿ ಇಲಾಖೆ ಅಧಿಸೂಚನೆ ಹೊರಡಿಸಿದೆ. ಇದು 2010ರಿಂದ 2012ರವರೆಗಿನ ವಿಮಾ ಮೊತ್ತಕ್ಕೆ ಅನ್ವಯವಾಗಲಿದೆ. 2012ರ ಏ.1ರಿಂದ 2014ರ ಮಾ.31ರ ಅವಧಿಯಲ್ಲಿ ಮೆಚ್ಯೂರಿಟಿಯಾಗಿರುವ ವಿಮಾ ಪಾಲಿಸಿಗಳಿಗೆ ಪ್ರತಿ ಸಾವಿರಕ್ಕೆ 90 ರೂ. ಮಧ್ಯಾಂತರ ಲಾಭಾಂಶವನ್ನೂ ಘೋಷಿಸಲಾಗಿದೆ.

logoblog

Thanks for reading For New KGID policy, it is convenient to fill the information online if your details are as per the above PDF.

Previous
« Prev Post

No comments:

Post a Comment