Evaluation Model Question Papers 2024...
ಮಾ.11 ರಿಂದ 5, 8, 9ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಪರೀಕ್ಷೆ 2 : ಮಾದರಿ ಪ್ರಶ್ನೆ ಪತ್ರಿಕೆಗಳು ಪ್ರಕಟ
ಕರ್ನಾಟಕ ರಾಜ್ಯ ಕೆಎಸ್‌ಇಎಬಿ ಬೋರ್ಡ್ ಇದೀಗ 5, 8, 9ನೇ ತರಗತಿ ಮೌಲ್ಯಾಂಕನ ಪರೀಕ್ಷೆ-2 ಗೆ ಮಾದರೀ ಪ್ರಶ್ನೋತ್ತರ ಹಾಗೂ ಉತ್ತರ ಬುಕ್‌ಲೆಟ್ ಅನ್ನು ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಡೌನ್‌ಲೋಡ್ ಮಾಡುವ ವಿಧಾನ ಇಲ್ಲಿ ತಿಳಿಸಲಾಗಿದೆ.
2023-24ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5, 8, 9ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಾಂಕನ-2 ಕಾರ್ಯವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ವತಿಯಿಂದ ನಡೆಸಲಾಗುತ್ತಿದೆ. ಸದರಿ ಮೌಲ್ಯಾಂಕನಕ್ಕೆ ಸಂಬಂಧಿಸಿದಂತೆ 5, 8, 9ನೇ ತರಗತಿಯ ಮಾದರಿ ಪ್ರಶ್ನೋತ್ತರ ಪತ್ರಿಕೆಗಳನ್ನು ಬಿಡುಗಡೆ ಮಾಡಲಾಗಿದೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಮಾದರಿ ಪ್ರಶ್ನೋತ್ತರ ಬುಕ್‌ಲೆಟ್‌ಗಳನ್ನು ಬಿಡುಗಡೆ ಮಾಡಲಾಗಿದ್ದು, ಮಿಸ್ ಮಾಡದೇ ಡೌನ್‌ಲೋಡ್ ಮಾಡಿಕೊಳ್ಳಿ. ಈಗಾಗಲೇ 5, 8, 9ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಾಂಕನ-2 ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮಾರ್ಚ್ 11ರಿಂದ ಎಲ್ಲ ತರಗತಿ ವಿದ್ಯಾರ್ಥಿಗಳಿಗೆ ಈ ಮೌಲ್ಯಾಂಕನ ಪರೀಕ್ಷೆ ಆರಂಭವಾಗಲಿದೆ. ಕಂಪ್ಲೀಟ್ ವೇಳಾಪಟ್ಟಿಯನ್ನು ಕೆಳಗಿನಂತೆ ಚೆಕ್ ಮಾಡಬಹುದು.
ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯು 2023-24ನೇ ಸಾಲಿನ 5, 8, 9ನೇ ತರಗತಿ ಮೌಲ್ಯಾಂಕನ ಪರೀಕ್ಷೆಗೆ ಸಂಬಂಧ ಪರಿಷ್ಕೃತ ಪಠ್ಯವಸ್ತು ಮತ್ತು ಅಂಕಗಳನ್ನು ನಿಗದಿಪಡಿಸಿದೆ.
2023ರ ಜುಲೈ 01 ರಂದು ಪ್ರಕಟಿಸಿದ್ದ ಸುತ್ತೋಲೆಗಳಿಗೆ ಇಲಾಖೆ ಕೆಲವು ಪರಿಷ್ಕರಣೆ ತಂದಿದೆ. ಈ ಆಧಾರದಲ್ಲಿ ಮೌಲ್ಯಾಂಕನ ಪರೀಕ್ಷೆಯನ್ನು ಯಾವ ರೀತಿ ನಡೆಸಬೇಕು? ಅಂಕಗಳನ್ನು ಹೇಗೆ ನಿಗದಿಪಡಿಸಬೇಕು? ಎಂಬ ಸೂಚನೆಗಳನ್ನು ನೀಡಿ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಈ ಮೊದಲು 5 ಮತ್ತು 8ನೇ ತರಗತಿಗೆ ಮಧ್ಯವಾರ್ಷಿಕ ಪರೀಕ್ಷೆ (ಎಸ್‌ಎ-1) ಮತ್ತು ಮೌಲ್ಯಾಂಕನ ಸೇರಿ ಫಲಿತಾಂಶ ನೀಡಬೇಕು. 9ನೇ ತರಗತಿಗೆ ಅಂತಿಮ ವಾರ್ಷಿಕ ಪರೀಕ್ಷೆಯಲ್ಲಿನ ಅಂಕಗಳ ಮೇಲೆ ಫಲಿತಾಂಶ ಪ್ರಕಟಿಸಲು ಸೂಚನೆ ನೀಡಲಾಗಿತ್ತು. ಈಗ ಪರಿಷ್ಕೃತ ಪಠ್ಯವಸ್ತು, ಅಂಕ ನಿಗದಿ ಮಾಡಲಾಗಿದೆ. ಅದರ ಪ್ರಕಾರಯ ಯಾವ್ಯಾವ ತರಗತಿಗೆ ಮೌಲ್ಯಾಂಕನ ಪರೀಕ್ಷೆ ಹೇಗೆ, ಇತರೆ ವಿವರಗಳನ್ನು ಇಲ್ಲಿ ತಿಳಿಸಲಾಗಿದೆ.
ಮೌಲ್ಯಾಂಕನದಲ್ಲಿ ಪ್ರಥಮ ಭಾಷೆಗೆ 100 ಅಂಕ, ದ್ವಿತೀಯ, ತೃತೀಯ ಭಾಷೆ ಮತ್ತು ಕೋರ್ ವಿಷಯಗಳಿಗೆ 80 ಅಂಕಗಳಂತೆ 500 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಬೇಕು. ಅಂತಿಮವಾಗಿ ಆಂತರಿಕ ಮೌಲ್ಯಮಾಪನದ ಅಂಕಗಳು ಮತ್ತು ಎಸ್‌ಎ-2 ಬದಲಾಗಿ ನಡೆಸುವ ಲಿಖೀತ ಪರೀಕ್ಷೆಯ ಅಂಕಗಳನ್ನು ಪರಿಗಣಿಸಬೇಕೆಂದು ಸೂಚಿಸಲಾಗಿದೆ.
5ನೇ ತರಗತಿ ಮೌಲ್ಯಾಂಕನ ಪ್ರಕ್ರಿಯೆ ಯಲ್ಲಿ 2023-24ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ನೀಡಿರುವಂತೆ ನವೆಂಬರ್-2023ರಿಂದ ಫೆಬ್ರವರಿ -2024ರ ವರೆಗಿನ ಪಠ್ಯವಸ್ತುವನ್ನು ಪರಿಗಣಿಸಬೇಕು. ಎಲ್ಲ ಭಾಷೆ ಮತ್ತು ಕೋರ್ ವಿಷಯಗಳಿಗೆ 10 ಅಂಕಗಳಿಗೆ ಮೌಖೀಕ ಮತ್ತು 40 ಅಂಕಗಳಿಗೆ ಲಿಖೀತ, ಒಟ್ಟು 50 ಅಂಕಗಳಿಗೆ ಮೌಲ್ಯಾಂಕನ ನಡೆಸಿ 20 ಅಂಕಗಳಿಗೆ ಪರಿವರ್ತಿಸುವುದು. ಫಲಿತಾಂಶ ನಿರ್ಣಯಿಸಲು ಎಫ್‌ಎ-1,2,3 ಮತ್ತು 4ಕ್ಕೆ ತಲಾ 15 ಅಂಕಗಳು ಎಸ್‌ಎ-1 ಮತ್ತು ಎಸ್‌ಎ-2ನ ತಲಾ 20 ಅಂಕ ಸೇರಿ 100 ಅಂಕಗಳಿಗೆ ಪರಿಗಣಿಸು ವುದು.
ಎಸ್‌ಎ-2 ಹೊರತುಪಡಿಸಿ ಸ್ಯಾಟ್ಸ್‌ನಲ್ಲಿ ಅಂಕ ದಾಖಲಿಸಿರು ವುದರಿಂದ ಎಸ್-2 ಅಂಕ ಸೇರಿಸಿ ಫಲಿತಾಂಶ ಪ್ರಕಟಿಸಲು ಸೂಚಿಸಲಾಗಿದೆ.
8ನೇ ತರಗತಿ ಮೌಲ್ಯಾಂಕನ ಎಸ್‌ಎ-2 ಮೌಲ್ಯಾಂಕನವನ್ನು ವಾರ್ಷಿಕ ಪಠ್ಯವಸ್ತುವನ್ನು ಪರಿಗಣಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ 9 ಮತ್ತು 10ನೇ ತರಗತಿ ಪರೀಕ್ಷೆ ಬರೆಯಲು ಅಭ್ಯಾಸಕ್ಕೆ ಸಹಕಾರಿಯಾಗಲಿದೆ.
ಈ ಹಿನ್ನೆಲೆಯಲ್ಲಿ 2023ರ ಜೂನ್‌ನಿಂದ ಫೆಬ್ರವರಿ-2024ರ ವರೆಗಿನ ವಾರ್ಷಿಕ ಪಠ್ಯವಸ್ತುವನ್ನು ಪರಿಗಣಿಸಬೇಕು. ಎಲ್ಲ ಭಾಷೆ ಮತ್ತು ಕೋರ್ ವಿಷಯ ಗಳಿಗೆ 10 ಅಂಕಗಳಿಗೆ ಮೌಖೀಕ ಮತ್ತು 50 ಅಂಕಗಳಿಗೆ ಲಿಖೀತ ಸಹಿತ 60 ಅಂಕಗಳನ್ನು 30ಕ್ಕೆ ಪರಿವರ್ತಿಸಿ ಫಲಿತಾಂಶ ನೀಡಬೇಕು. ಎಫ್‌ಎ-1,2,3 ಮತ್ತು 4ಕ್ಕೆ ತಲಾ 10 ಅಂಕಗಳಂತೆ 40 ಅಂಕ ಎಸ್‌ಎ-1 ಮತ್ತು ಎಸ್‌ಎ-2 ತಲಾ 30 ಅಂಕಗಳಂತೆ 60 ಅಂಕವನ್ನು 100ಕ್ಕೆ ಪರಿವರ್ತಿಸಲು ಸೂಚಿಸಲಾಗಿದೆ.
2023-24ನೇ ಸಾಲಿನ 5, 8 ಮತ್ತು 9ನೇ ತರಗತಿಯ ಮೌಲ್ಯಂಕನ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ. ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಮಕ್ಕಳಿಗೆ ನಡೆಸಲಾಗುವ ಸಂಕಲನಾತ್ಮಕ ಮೌಲ್ಯಾಂಕನ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ.
5 ನೇ ತರಗತಿ ವೇಳಾಪಟ್ಟಿ
11.03.2024 (ಸೋಮವಾರ)- ಪ್ರಥಮ ಭಾಷೆ-ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು.
12. 3.2024 (ಮಂಗಳವಾರ)- ದ್ವೀತಿಯ ಭಾಷೆ – ಇಂಗ್ಲಿಷ್, ಕನ್ನಡ.
13.03.2024 (ಬುಧವಾರ)- ಪರಿಸರ ಅಧ್ಯಯನ.
14.03.2024 (ಗುರುವಾರ)- ಗಣಿತ
8ನೇ ತರಗತಿ ವೇಳಾಪಟ್ಟಿ
11.03.2024 (ಸೋಮವಾರ)- ಪ್ರಥಮ ಭಾಷೆ-ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು, ಸಂಸ್ಕೃತ.
12. 3.2024 (ಮಂಗಳವಾರ)- ದ್ವೀತಿಯ ಭಾಷೆ – ಇಂಗ್ಲಿಷ್, ಕನ್ನಡ
13.3.24- ತೃತೀಯ ಭಾಷೆ- ಹಿಂದಿ, ಹಿಂದಿ NCERT, ಕನ್ನಡ, ಇಂಗ್ಲಿಷ್ ,ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು.
14.03.2024 (ಗುರುವಾರ)- ಗಣಿತ.
15.03.2024- ಶುಕ್ರವಾರ- ವಿಜ್ಞಾನ.
16.03.2024- ಶನಿವಾರ- ಸಮಾಜ ವಿಜ್ಞಾನ.
18.03.2024- ದೈಹಿಕ ಶಿಕ್ಷಣ.
9ನೇ ತರಗತಿ ವೇಳಾಪಟ್ಟಿ
11.03.2024 (ಸೋಮವಾರ)- ಪ್ರಥಮ ಭಾಷೆ-ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು, ಸಂಸ್ಕೃತ.
12. 3.2024 (ಮಂಗಳವಾರ)- ದ್ವೀತಿಯ ಭಾಷೆ – ಇಂಗ್ಲಿಷ್, ಕನ್ನಡ.
13.3.24- ತೃತೀಯ ಭಾಷೆ- ಹಿಂದಿ, ಹಿಂದಿ NCERT, ಕನ್ನಡ, ಇಂಗ್ಲಿಷ್ ,ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು.
14.03.2024 (ಗುರುವಾರ)- ಗಣಿತ.
15.03.2024- ಶುಕ್ರವಾರ- ವಿಜ್ಞಾನ.
16.03.2024- ಶನಿವಾರ- ಸಮಾಜ ವಿಜ್ಞಾನ.
18.03.2024- ದೈಹಿಕ ಶಿಕ್ಷಣ

No comments:
Post a Comment