ಈ ಬಾರಿಯ SSLC ವಾರ್ಷಿಕ ಪರೀಕ್ಷೆಯನ್ನು ತುಂಬಾ ಕಟ್ಟು ನಿಟ್ಟಿನಿಂದ ನಡೆಸಲಾಗುತ್ತಿದೆ. ಯಾವುದೇ ನಕಲು ಮಾಡೋದಕ್ಕೆ ಅವಕಾಶ ನೀಡದಂತೆ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಿ, ವೆಬ್ ಕಾಸ್ಟಿಂಗ್ ಮಾಡಲಾಗುತ್ತಿದೆ.
ಇದರ ನಡುವೆಯೂ ನಕಲು ಮಾಡೋದಕ್ಕೆ ಅವಕಾಶ ಮಾಡಿಕೊಟ್ಟಂತ ನಾಲ್ವರು ಶಿಕ್ಷಕರನ್ನು ಚಿತ್ರದುರ್ಗದಲ್ಲಿ ಅಮಾನತುಗೊಳಿಸಿಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನಕಲು ಮಾಡೋದಕ್ಕೆ ಅವಕಾಶ ಮಾಡಿಕೊಟ್ಟಂತ ನಾಲ್ವರು ಶಿಕ್ಷಕರನ್ನು ಡಿಡಿಪಿಐ ರವಿಶಂಕರರೆಡ್ಡಿ ಆದೇಶಿಸಿದ್ದಾರೆ.
ಚಳ್ಳಕೆರೆಯ ಮಜರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರೇವಣ್ಣ, ಚಳ್ಳಕೆರೆಯ ಗೋಸಿಕೆರೆ ಶಾಲೆಯ ರಾಘವೇಂದ್ರ, ಪಿ.ಓಬನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಚಂದ್ರಶೇಖರ್ ಹಾಗೂ ಕೊರ್ಲಕುಂಟೆಯ ಹಿರಿಯ ಪ್ರಾಥಮಿಕ ಶಾಲೆಯ ಪ್ರಕಾಶ್ ಎಂಬುವರನ್ನು ಅಮಾನತುಗೊಳಿಸಲಾಗಿದೆ.
ವಿದ್ಯಾರ್ಥಿಗಳು ನಕಲು ಮಾಡುವುದನ್ನು ತಡೆಯದೇ ಅದಕ್ಕೆ ಸಹಕಾರ ನೀಡಿದಂತ ಆರೋಪ ಈ ನಾಲ್ವರು ಶಿಕ್ಷಕರ ವಿರುದ್ಧ ಕೇಳಿ ಬಂದಿದೆ.
ಈ ಕಾರಣದಿಂದಾಗಿ ಡಿಡಿಪಿಐ ರವಿಶಂಕರರೆಡ್ಡಿ ಅವರು ಕರ್ತವ್ಯ ಲೋಪ, ಬೇಜವಾಬ್ದಾರಿ, ನಿರ್ಲಕ್ಷ್ಯದ ಹಿನ್ನಲೆಯಲ್ಲಿ ನಾಲ್ವರು ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.


No comments:
Post a Comment