Tuesday, March 19, 2024

State Government Employees DA HIKE Calculation

  Wisdom News       Tuesday, March 19, 2024
Hedding ; State Government Employees DA HIKE Calculation...



ರಾಜ್ಯ ಸರ್ಕಾರವು ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು (Dearness Allowance) ಶೇ.3.75ರಷ್ಟು ಹೆಚ್ಚಳ ಮಾಡಿ (DA Hike) ಆದೇಶ ಹೊರಡಿಸಿದೆ.




 ಹೀಗಾಗಿ ತುಟ್ಟಿಭತ್ಯೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇ. 38.75ರಿಂದ ರಿಂದ ಶೇ. 42.50ಕ್ಕೆ ಪರಿಷ್ಕರಿಸಿದಂತಾಗಿದೆ.

ಇದರಿಂದ ಯಾವ ವೇತನ ಶ್ರೇಣಿಯವರಿಗೆ ಎಷ್ಟು ತುಟ್ಟಿಭತ್ಯೆ ಲಭ್ಯವಾಗಲಿದೆ (DA Hike calculator 2024) ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.



ಉದಾಹರಣೆಗೆ ನೌಕರರೊಬ್ಬರಿಗೆ (Government Employee) ಮೂಲ ವೇತನ (Basic Salary) 17,000 ರೂ. ಇದ್ದು, ಅದಕ್ಕೆ ಶೇ.42.5 ತುಟ್ಟಿಭತ್ಯೆ ಎಂದರೆ 7225 ರೂ. ದೊರೆಯಲಿದೆ. 



ತುಟ್ಟಿಭತ್ಯೆ 38.75 % ಇದ್ದಾಗ 6558 ರೂ. ಸಿಗುತ್ತಿದ್ದ ಮೊತ್ತ ಈಗ 638 ರೂ. ಹೆಚ್ಚಲಿದೆ. ಹೀಗೆ ಯಾವ ವೇತನ ಶ್ರೇಣಿಯವರಿಗೆ ಎಷ್ಟು ಡಿಎ ಸಿಗಲಿದೆ ಎಂಬುದರ ಪಟ್ಟಿ ಇಲ್ಲಿದೆ. ಮೂಲ ವೇತನ 1.50 ಲಕ್ಷ ಇದ್ದರೆ, 5600 ರೂ ತುಟ್ಟಿಭತ್ಯೆ ಹೆಚ್ಚುವರಿಯಾಗಿ ಸಿಗಲಿದೆ.


ತುಟ್ಟಿ ಭತ್ಯೆಗೆ ಪರಿಗಣಿಸಿದ ಮೂಲ ವೇತನ ಯಾವುದು?



ತುಟ್ಟಿಭತ್ಯೆಯ ಉದ್ದೇಶಕ್ಕಾಗಿ 'ಮೂಲ ವೇತನ" ಎಂದರೆ ಸರ್ಕಾರಿ ನೌಕರನು ಧಾರಣ ಮಾಡಿರುವ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಯಲ್ಲಿ ಪಡೆಯುತ್ತಿರುವ ವೇತನ ಮತ್ತು ಅದರಲ್ಲಿ,



(ಅ) ವೇತನ ಶ್ರೇಣಿಯ ಗರಿಷ್ಠಕ್ಕಿಂತ ಹೆಚ್ಚಾಗಿ ಅವನಿಗೆ ಸ್ಥಗಿತ ವೇತನ ಆ ಸ್ಥಗಿತ ವೇತನ ಬಡ್ತಿಯನ್ನು ನೀಡಲಾಗಿದ್ದರೆ, ಆ ಸ್ಥಗಿತ ವೇತನ ಭಡ್ತಿ..



(ಅ) 2018ರ ಕರ್ನಾಟಕ ನಾಗರಿಕ ಸೇವಾ (ಪರಿಷ್ಕೃತ ವೇತನ) ನಿಯಮಗಳ ನಿಯಮ 3(ಸಿ) ಯನ್ನು ಓದಿಕೊಂಡು ನೇ ನಿಯಮದ (3)ನೇ ಉಪನಿಯಮದ ಮೇರೆಗೆ ಅವನಿಗೆ ನೀಡಲಾದ ವೈಯಕ್ತಿಕ ವೇತನ ಯಾವುದಾದರೂ ಇದ್ದರೆ, ಆ ವೈಯಕ್ತಿಕ ವೇತನ.



(ಇ) ವೇತನ ಶ್ರೇಣಿಯ ಗರಿಷ್ಠಕ್ಕಿಂತ ಹೆಚ್ಚಾಗಿ ಅವನಿಗೆ ಮಂಜೂರು ಮಾಡಲಾಗಿರುವ ಹೆಚ್ಚುವರಿ ವೇತನ ಬಡ್ತಿ ಯಾವುದಾದರೂ ಇದ್ದಲ್ಲಿ, ಅವುಗಳು ಸೇರುತ್ತವೆ- ಎಂದು ತಿಳಿಸಲಾಗಿದೆ.





ಮೂಲ ವೇತನಕ್ಕೆ ಮೇಲೆ ಸೂಚಿಸಿರುವುದನ್ನು ಹೊರತುಪಡಿಸಿ ಇತರೆ ಯಾವುದೇ ಉಪಲಬ್ಧಗಳನ್ನು ಸೇರಿಸತಕ್ಕದ್ದಲ್ಲ.


logoblog

Thanks for reading State Government Employees DA HIKE Calculation

Previous
« Prev Post

No comments:

Post a Comment