Friday, March 15, 2024

7th Pay Commission Report Submission Updates

  Wisdom News       Friday, March 15, 2024
Hedding ; 7th Pay Commission Report Submission Updates...


ರಾಜ್ಯ ಸರ್ಕಾರಿ ನೌಕರರು ನಿರೀಕ್ಷೆ ಮಾಡುತ್ತಿರುವಂತ 7ನೇ ವೇತನ ಆಯೋಗದ ಜಾರಿಗೆ ದಿನಗಣನೆ ಆರಂಭಗೊಂಡಿದೆ. 




ನಾಳೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಸಲ್ಲಿಕೆ ಮಾಡಲಾಗುತ್ತಿದೆ. ಆ ನಂತ್ರ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿಯಂತೆ ವೇತನ ಹೆಚ್ಚಳದ ನಿರ್ಧಾರ ಪ್ರಕಟಿಸೋ ಸಾಧ್ಯತೆ ಇದೆ.



ರಾಜ್ಯ ಸರ್ಕಾರಿ ನೌಕರರಿಗೆ ಈಗಾಗಲೇ ತುಟ್ಟಿಭತ್ಯೆಯನ್ನು ಶೇ.3.75ರಷ್ಟು ಹೆಚ್ಚಳ ಮಾಡಿ ಕಾಂಗ್ರೆಸ್ ಸರ್ಕಾರ ಸಿಹಿಸುದ್ದಿ ನೀಡಿತ್ತು. ಅದಕ್ಕೂ ಮುನ್ನಾ ಹಳೇ ಪಿಂಚಣಿ ಯೋಜನೆಯನ್ನು ಕೆಲ ನೌಕರರಿಗೆ ಜಾರಿಗೊಳಿಸಿ ಗುಡ್ ನ್ಯೂಸ್ ನೀಡಲಾಗಿತ್ತು. 



ಇನ್ನೂ 7ನೇ ವೇತನ ಆಯೋಗದ ಜಾರಿಯೊಂದು ಬಾಕಿ ಇದೆ. ಈ 7ನೇ ವೇತನ ಆಯೋಗದ ಜಾರಿಗಾಗಿ ರಾಜ್ಯ ಸರ್ಕಾರಿ ನೌಕರರು ಕಾತುರದಿಂದ ಕಾಯುತ್ತಿದ್ದಾರೆ.

ಈ ಬೆನ್ನಲ್ಲೇ ನಾಳೆ ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ರಾಜ್ಯ 7ನೇ ವೇತನ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರಿಂದ ವರದಿ ಸಲ್ಲಿಕೆ ಮಾಡಲಾಗುತ್ತಿದೆ. 





ಈ ಮೂಲಕ 7ನೇ ವೇತನ ಆಯೋಗದ ವರದಿ ಸಿಎಂ ಸಿದ್ಧರಾಮಯ್ಯಗೆ ಸಲ್ಲಿಕೆಯಾಗುತ್ತಿದ್ದು, ಆ ಬಳಿಕ ಯಾವ ನಿರ್ಧಾರ ಪ್ರಕಟಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.


logoblog

Thanks for reading 7th Pay Commission Report Submission Updates

Previous
« Prev Post

No comments:

Post a Comment