ಡಿಸೆಂಬರ್ 11; ಕರ್ನಾಟಕ ಸರ್ಕಾರ ಸರ್ಕಾರಿ/ ಅನುದಾನಿತ ಪ್ರೌಢ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರುಗಳು ಮತ್ತು ಉಪನ್ಯಾಸಕರುಗಳಿಗೆ ವಿಶೇಷ ಭತ್ಯೆ ಮಂಜೂರು ಮಾಡುವ ಕುರಿತು ಆದೇಶ ಹೊರಡಿಸಿದೆ.
ಈ ಕುರಿತು ವಿಜಯ್. ಎನ್. ಶಾಖಾಧಿಕಾರಿ (ಪ್ರೌಢ-ಬಿ), ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಜಯಶ್ರೀ.
ಎಂ. ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸೇವೆಗಳು-2) ಆದೇಶವನ್ನು ಹೊರಡಿಸಿದ್ದಾರೆ. ಕೋರ್ಟ್ ತೀರ್ಪುಗಳನ್ನು ಉಲ್ಲೇಖ ಮಾಡಿದ್ದಾರೆ.
ಈ ಆದೇಶ ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿ (ಕೆಎಟಿ) ಆದೇಶದ ಬೆಳಕಿನಲ್ಲಿ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ನೀಡಿರುವ ತೀರ್ಪಿನ ಅನುಜ್ಞಾನಗೊಳಿಸುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ. ಸರ್ಕಾರಿ/ ಅನುದಾನಿತ ಪ್ರೌಢ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರುಗಳು ಮತ್ತು ಉಪನ್ಯಾಸಕರುಗಳಿಗೆ ವಿಶೇಷ ಭತ್ಯೆ ಮಂಜೂರು ಮಾಡಿ ವೇತನ ತಾರತಮ್ಯು ಸರಿಪಡಿಸುವ ಕುರಿತಂತೆ ಹೈಕೋರ್ಟ್ ನೀಡಿರುವ ತೀರ್ಪಿನ ಆಧಾರದ ಮೇಲೆ ಎಂಬ ಅಂಶವನ್ನು ಒಳಗೊಂಡಿದೆ.
ಕರ್ನಾಟಕ ಹೈಕೋರ್ಟ್ ನಿರ್ದೇಶನದಂತೆ ಮಾನ್ಯ ಆಡಳಿತ ನ್ಯಾಯ ಮಂಡಳಿಯ ಆದೇಶದನ್ವಯ ಕರ್ನಾಟಕ ನಾಗರೀಕ ಸೇವಾ (ಪರಿಷ್ಕೃತ ವೇತನ) ನಿಯಮಗಳು 2018ರ ನಿಯಮ 11 ಮತ್ತು 13ರಲ್ಲಿ ಪ್ರದತ್ತವಾದ ಅಧಿಕಾರದನ್ವಯ 2008ರ ಅಧಿಸೂಚನೆ/ ಜ್ಞಾಪನದನ್ವಯ ದಿನಾಂಕ 01/08/2008ಕ್ಕೂ ನಿಕಟ ಪೂರ್ವದಲ್ಲಿ ನೇಮಕಾತಿ ಪ್ರಕ್ರಿಯ ಪೂರ್ಣಗೊಂಡು ಪ್ರಕಟಗೊಂಡ ಆಯ್ಕೆ ಪಟ್ಟಿಯಲ್ಲಿರುವಂತೆ ನೇರ ನೇಮಕಾತಿ ಹೊಂದಿದ ಸರ್ಕಾರಿ/ ಅನುದಾನಿತ ಪ್ರೌಢಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳ ಶಿಕ್ಷಕರು/ ಉಪನ್ಯಾಸಕರುಗಳಿಗೆ ಸೀಮಿತಗೊಳಿಸಿ ದಿನಾಂಕ 29/08/2008ರ ಆದೇಶದಲ್ಲಿನ ಅವಕಾಶದಂತೆ ವಿಶೇಷ ಭತ್ಯೆಯ ಸೌಲಭ್ಯವನ್ನು ವಿಸ್ತರಿಸಿ ಹಿರಿಯ ಶಿಕ್ಷಕರುಗಳ ವೇತನದಲ್ಲಿನ ತಾರತಮ್ಯವನ್ನು ಕೆಲವು ಷರತ್ತು ಮತ್ತು ನಿಬಂಧನೆಗಳ ಪೂರೈಕೆಗೊಳಪಟ್ಟು ಸರಿದೂಗಿಸಲು ಆದೇಶಿಸಿದೆ ಎಂದು ಹೇಳಿದೆ.
ಸದರಿ ಆದೇಶವನ್ನು ಜರೂರಾಗಿ ಅನುಷ್ಠಾನಗೊಳಿಸುವಂತೆ ಹಾಗೂ ರಿಟ್ ಪಿಟಿಷನ್ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರತಿವಾದಿ ರಾಜ್ಯ ಸರ್ಕಾರವು ಅನುಷ್ಠಾನಗೊಳಿಸಿರುವ ಮಾಹಿತಿಯನ್ನು ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಗಮನಕ್ಕೆ ತಂದು, ನ್ಯಾಯಾಂಗ ನಿಂದನಾ ಪ್ರಕರಣವನ್ನು ಮುಕ್ತಾಯಗೊಳಿಸಲು ಕ್ರಮವಹಿಸುವಂತ ತಮಗೆ ನಿರ್ದೇಶಿಸಲ್ಪಟ್ಟಿದ್ದೇನೆ ಎಂದು ವಿವರಿಸಲಾಗಿದೆ.
ಆರ್ಥಿಕ ಇಲಾಖೆ ಆದೇಶ ಆರ್ಥಿಕ ಇಲಾಖೆ ಕರ್ನಾಟಕ ಆಡಳಿತ ನ್ಯಾಯಮಂಡಳಿಯ ತೀರ್ಪಿನಲ್ಲಿನ ನಿರ್ದೇಶನದಂತೆ, ಪ್ರೌಢ ಶಿಕ್ಷಣ ಇಲಾಖೆಯ ಶಿಕ್ಷಕರುಗಳಿಗೆ ಮಂಜೂರು ಮಾಡಲಾದ ವಿಶೇಷ ಭತ್ಯೆಯನ್ನು 2007-08ರ ಅಧಿಸೂಚನೆಯನ್ವಯ ನೇಮಕಗೊಂಡು ದಿನಾಂಕ 01/08/2008ರ ನಂತರ ಕಾರ್ಯವರದಿ ಮಾಡಿಕೊಂಡ ಶಿಕ್ಷಕರುಗಳಿಗೆ ವಿಸ್ತರಿಸುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.
ರಾಜ್ಯ ಸರ್ಕಾರದ ನೀತಿಯಂತೆ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು ರಾಜ್ಯ ಸರ್ಕಾರವು ಕಾಲದಿಂದ ಕಾಲಕ್ಕೆ ರಚಿಸುವ ವೇತನ ಆಯೋಗ/ ಅಧಿಕಾರಿ ವೇತನ ಸಮಿತಿಗಳಂತಹ ತಜ್ಞ ಸಮಿತಿಗಳ ಶಿಫಾರಸ್ಸಿನ ಬೆಳಕಿನಲ್ಲಿ ಪರಿಶೀಲಿಸಿ ಕಾಲದಿಂದ ಕಾಲಕ್ಕೆ ಪರಿಷ್ಕರಿಸಲಾಗುತ್ತದೆ. ಇದು ಸರ್ಕಾರದ ಸ್ಥಾಪಿತ ನೀತಿಯಾಗಿರುತ್ತದೆ. 5ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ಸರ್ಕಾರಿ/ ಅನುದಾನಿತ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ಶಿಕ್ಷಕರುಗಳಿಗೆ ಮಾಸಿಕ ರೂ. 200ಗಳ ವಿಶೇಷ ಭತ್ಯೆಯನ್ನು ಮಂಜೂರು ಮಾಡಿ ಆದೇಶಗಳನ್ನು ಹೊರಡಿಸಲಾಗಿತ್ತು.
ವಿಶೇಷ ಭತ್ಯೆ ಸೌಲಭ್ಯ ಪಡೆಯುತ್ತಿದ್ದ ಸರ್ಕಾರಿ/ ಅನುದಾನಿತ ಪ್ರೌಢ ಶಿಕ್ಷಣ ಸಂಸ್ಥೆಗಳ ಹಾಲಿ ಈ ಸೌಲಭ್ಯವನ್ನು ಪಡೆಯುತ್ತಿದ್ದ ಶಿಕ್ಷಕರುಗಳಿಗೆ ವಿಶೇಷ ಭತ್ಯೆಯನ್ನು ಮುಂದುವರೆಸಿ ಆದೇಶಗಳನ್ನು ಹೊರಡಿಸಲಾಗಿರುತ್ತದೆ. ತದನಂತರದಲ್ಲಿ ಪ್ರೌಢ ಶಿಕ್ಷಣ ಇಲಾಖೆಯ ಶಿಕ್ಷಕರುಗಳಿಗೆ ಮಂಜೂರು ಮಾಡಲಾಗಿದ್ದ ವಿಶೇಷ ಭತ್ಯೆಯ ದರಗಳನ್ನು ಪರಿಷ್ಕರಿಸಿ ಆದೇಶಗಳನ್ನು ಹೊರಡಿಸಲಾಗಿರುತ್ತದೆ.
6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಶಿಕ್ಷಕರುಗಳಿಗೆ ಮಂಜೂರು ಮಾಡಲಾಗಿದ್ದ ವಿಶೇಷ ಭತ್ಯೆಯನ್ನು ಶಿಕ್ಷಕರುಗಳ ಮೂಲ ವೇತನದೊಂದಿಗೆ ವಿಲೀನಗೊಳಿಸಿ ಶಿಕ್ಷಕರುಗಳ ವೇತನವನ್ನು ಪರಿಷ್ಕರಿಸಿ ಆದೇಶ ಹೊರಡಿಸಲಾಗಿರುತ್ತದೆ. ವಿಶೇಷ ಭತ್ಯೆಯ ಆದೇಶಗಳನ್ನು ದಿನಾಂಕ 01/04/2018ರಿಂದ ಜಾರಿಗೆ ಬರುವಂತೆ ನಿರಸನಗೊಳಿಸಲಾಗಿರುತ್ತದೆ.
ಶಿಕ್ಷಣ ಇಲಾಖೆಯಿಂದ ಹೊರಡಿಸಲಾದ ಆದೇಶವನ್ನು ಪ್ರಶ್ನಿಸಿ ಪ್ರೌಢ ಶಿಕ್ಷಣ ಇಲಾಖೆಯ ಶಿಕ್ಷಕರುಗಳು ಕೆಎಟಿಗೆ ಅರ್ಜಿ ಸಲ್ಲಿಸಿದ್ದು, ಬಳಿಕ ಕರ್ನಾಟಕ ಹೈಕೋರ್ಟ್ ಸಹ ನಿರ್ದೇಶನವನ್ನು ನೀಡಿದ ಬಳಿಕ ಸರ್ಕಾರಿ ಆದೇಶಗಳನ್ನು ಹೊರಡಿಸಲಾಗಿರುತ್ತದೆ. ಕರ್ನಾಟಕ ನಾಗರಿಕ ಸೇವಾ (ಪರಿಷ್ಕೃತ ವೇತನ) ನಿಯಮಗಳು, 2018ರ ನಿಯಮ 11 ಮತ್ತು 13ರಲ್ಲಿ ಪ್ರದತ್ತವಾದ ಅಧಿಕಾರದನ್ವಯ, 2007-08ರ ಅಧಿಸೂಚನೆ/ ಜ್ಞಾಪನದನ್ವಯ ದಿನಾಂಕ 01/08/2008ಕ್ಕೂ ನಿಕಟ ಪೂರ್ವದಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡು ಪ್ರಕಟಗೊಂಡ ಆಯ್ಕೆ ಪಟ್ಟಿಯಲ್ಲಿನ ಶಿಕ್ಷಕರುಗಳಿಗೆ (ಉಪನ್ಯಾಸಕರುಗಳನ್ನೂ ಒಳಗೊಂಡಂತೆ) ವಿಶೇಷ ಭತ್ಯೆಯನ್ನು ಮತ್ತು ತದನಂತರ ಪರಿಷ್ಕರಿಸಲಾದ ವಿಶೇಷ ಭತ್ಯೆಯನ್ನು ಮಂಜೂರು ಮಾಡಿದೆ.
ಈ ಸೌಲಭ್ಯವು 2007-08ರ ಅಧಿಸೂಚನೆಯನ್ವಯ ಪ್ರಕಟಿಸಲಾದ ಆಯ್ಕೆ ಪಟ್ಟಿಯಲ್ಲಿನ ನಿರ್ದಿಷ್ಟ ಉಪನ್ಯಾಸಕರು/ ಶಿಕ್ಷಕರರಿಗೆ ಮಾತ್ರ ಸೀಮಿತವಾಗಿರತಕ್ಕದ್ದು. ಅಧಿಸೂಚನೆಯನ್ವಯ ನೇರ ನೇಮಕಾತಿ ಹೊಂದಿದ್ದು, ದಿನಾಂಕ 01/08/2008ರ ನಂತರ ಕಾರ್ಯವರದಿ ಮಾಡಿಕೊಂಡ ಉಪನ್ಯಾಸಕರು/ ಶಿಕ್ಷಕರುಗಳ ಪ್ರಕರಣಗಳಲ್ಲಿ ವಿಶೇಷ ಭತ್ಯೆಯು ಅವರು ಕಾರ್ಯ ವರದಿ ಮಾಡಿಕೊಂಡ ದಿನಾಂಕದಿಂದ ಪರಿಗಣಿಸಿ ಮಂಜೂರು ಮಾಡುವುದು ಮತ್ತು ಸದರಿ ಭತ್ಯೆಯ ಪರಿಷ್ಕರಣೆ ಸೌಲಭ್ಯವನ್ನೂ ಸಹ ವಿಸ್ತರಿಸುವುದು.
ಈಗಾಗಲೇ ವಿಶೇಷ ಭತ್ಯೆ ಮಂಜೂರು ಮಾಡಿರುವ ಶಿಕ್ಷಕರುಗಳಿಗೆ ಈ ಸೌಲಭ್ಯ ಅನ್ವಯಿಸುವುದಿಲ್ಲ. ಅಂದರೆ, ಮಾನ್ಯ ನ್ಯಾಯಾಲಯದ ಆದೇಶಗಳಂತೆ/ ವಿಶೇಷ ಭತ್ಯೆಯ ಮಂಜೂರಾತಿ ಕುರಿತಂತ ಸಕ್ಷಮ ಪ್ರಾಧಿಕಾರಗಳಿಂದ ಹೊರಡಿಸಲಾದ ಆದೇಶದನ್ವಯ ಈಗಾಗಲೇ ವಿಶೇಷ ಭತ್ಯೆ ಸೌಲಭ್ಯವನ್ನು ಪಡೆದಿರುವ ಶಿಕ್ಷಕರುಗಳಿಗೆ ಈ ಆದೇಶವು ಅನ್ವಯಿಸುವುದಿಲ್ಲ. ಈ ವಿಶೇಷ ಭತ್ಯೆ ಮಂಜೂರಾತಿಯ ಪ್ರಕರಣವು ವಿಶೇಷ ಪ್ರಕರಣವಾಗಿದ್ದು, ಇದು 2007-08ರ ಅಧಿಸೂಚನೆಯನ್ವಯ ನೇಮಕಗೊಂಡ ಶಿಕ್ಷಕರುಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಇತರ ಪ್ರಕರಣಗಳಿಗೆ ಅನ್ವಯಿಸಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

No comments:
Post a Comment