Wednesday, December 6, 2023

College Education Department Vacancies Details

  Wisdom News       Wednesday, December 6, 2023
Hedding; College Education Department Vacancies Details...

2023ರವರೆಗಿನ ಖಾಲಿ ಶಿಕ್ಷಕರ ಹುದ್ದೆ ಭರ್ತಿ: ಮಧು ಬಂಗಾರಪ್ಪ ಭರವಸೆ.


ವಿಧಾನ ಪರಿಷತ್: ಸರ್ಕಾರದ ಅನುದಾನಕ್ಕೆ ಒಳಪಟ್ಟಿರುವ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ 2023ರವರೆಗೂ ಖಾಲಿ ಇರುವ ಎಲ್ಲ ಹುದ್ದೆಗಳ ಭರ್ತಿಗೆ ಅನುಮತಿ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.

ಬಿಜೆಪಿಯ ಶಶೀಲ್‌ ನಮೋಶಿ ಅವರ ಗಮನಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, 2015ರ ಪೂರ್ವದಲ್ಲಿ ಖಾಲಿ ಇದ್ದ ಬೋಧಕ, ಬೋಧಕೇತರ ಹುದ್ದೆಗಳ ಭರ್ತಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಒಂದು ಶಾಲೆ–ಕಾಲೇಜಿಗೆ ಕಟ್ಟಡಕ್ಕಿಂತ ಶಿಕ್ಷಕ ಸಂಪನ್ಮೂಲ ಮುಖ್ಯ ಎನ್ನುವ ಅರಿವು ಇದೆ. 

ಹಾಗಾಗಿ, 2016ರಿಂದ 2020ರವರೆಗೆ ಖಾಲಿ ಇದ್ದ ಪ್ರೌಢಶಾಲೆಗಳ 4,521 ಬೋಧಕ, ಪಿಯು ಕಾಲೇಜುಗಳ 267 ಉಪನ್ಯಾಸಕರ ಹುದ್ದೆ ಭರ್ತಿಗೆ ಅನುಮೋದನೆ ಕೋರಿ ಈಗಾಗಲೇ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷವನ್ನೂ ಪರಿಗಣಿಸಿ, ಖಾಲಿ ಇರುವ ಎಲ್ಲ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳಲಾಗುವುದು ಎಂದರು.

ನೇಮಕಾತಿಯ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೂ ಕಾರ್ಯಭಾರದ ಒತ್ತಡ ಕಡಿಮೆ ಇರುವ ಉಪನ್ಯಾಸಕರನ್ನು ನಿಯೋಜನೆ ಮಾಡಲಾಗುವುದು ಎಂದು ಹೇಳಿದರು.

ಸರ್ಕಾರದ ಗಮನ ಸೆಳೆದ ಶಶೀಲ್‌ ನಮೋಶಿ, ಅನುದಾನಿತ ಶಾಲಾ–ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡದೇ ಇದ್ದರೆ ಬಾಗಿಲು ಮುಚ್ಚುವ ಸ್ಥಿತಿ ಎದುರಾಗಲಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಬಿಜೆಪಿಯ ತೇಜಸ್ವಿನಿ ಗೌಡ, ವೈ.ಎ.ನಾರಾಯಣ ಸ್ವಾಮಿ, ಕಾಂಗ್ರೆಸ್‌ನ ಅಬ್ದುಲ್‌ ಜಬ್ಬಾರ್,ಎಸ್.ವಿ. ಸಂಕನೂರ ಮತ್ತಿತರರು ನಮೋಶಿ ಮಾತಿಗೆ ಧ್ವನಿಗೂಡಿಸಿದರು.

ಬೆಳಗಾವಿ ಅಧಿವೇಶನದಲ್ಲಿ ಸದನದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಅಡಿಯ ಕಾಲೇಜುಗಳಲ್ಲಿ ರಾಜ್ಯದಲ್ಲಿ ಕಳೆದ 3 ವರ್ಷಗಳಿಂದ ಖಾಲಿ ಇರುವ , ಭರ್ತಿಯಾದ ಮತ್ತು ಮಂಜೂರಾದ ಹುದ್ದೆಗಳ ಕುರಿತು ಮಾನ್ಯ ಶ್ರೀ ಸೂರಜ್ ರೇವಣ್ಣ ಅವರು ಕೇಳಿದ ಪ್ರಶ್ನೆಗೆ ಮಾನ್ಯ ಉನ್ನತ ಶಿಕ್ಷಣ ಸಚಿವರು ನೀಡಿರುವ ಅಧಿಕೃತ ಮಾಹಿತಿ ಇಲ್ಲಿದೆ.






ಆಯ್ಕೆ ಪ್ರಕ್ರಿಯೆ/ Selection Method:

ಅತಿಥಿ ಉಪನ್ಯಾಸಕರ ಹುದ್ದೆಗಳನ್ನು ಕೆಳಗೆ ನೀಡಲಾದ ಮಾನದಂಡಗಳನ್ವಯ ಆಯ್ಕೆ ಮಾಡಲಾಗುತ್ತದೆ.

ವಿದ್ಯಾರ್ಹತೆ:
 

ಗರಿಷ್ಟ ಅಂಕಗಳು
ವಿದ್ಯಾರ್ಹತೆ: ಅಭ್ಯರ್ಥಿಯು ಎರಡು ವರ್ಷ ಸ್ನಾತಕೋತ್ತರ ಪದವಿಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ 25%ನ್ನು ಗಣನೆಗೆ ತೆಗೆದುಕೊಳ್ಳುವುದು. (ಉದಾ: ಸ್ನಾತಕೋತ್ತರ ಪದವಿಯಲ್ಲಿ ಶೇಕಡ 60 ಅಂಕ ಪಡೆದಿದ್ದಲ್ಲಿ ಅದರ ಶೇಕಡ 25ರಷ್ಟು ಅಂದರೆ 15 ಅಂಕಗಳು ಎಂಬುದಾಗಿ ಗಣನೆಗೆ ತೆಗೆದುಕೊಳ್ಳುವುದು).
 

25 ಅಂಕಗಳು
ಹೆಚ್ಚುವರಿ ವಿದ್ಯಾರ್ಹತೆ:
 

1) ಪಿಹೆಚ್.ಡಿ ವಿದ್ಯಾರ್ಹತೆ ಪಡೆದಿದ್ದಲ್ಲಿ

 

2) ಎನ್‌ಇಟಿ/ಕೆ-ಸೆಟ್/ಎಸ್ಎಲ್‌ಇಟಿ ವಿದ್ಯಾರ್ಹತೆ ಪಡೆದಿದ್ದಲ್ಲಿ

 

3) ಎಂ.ಫಿಲ್. ವಿದ್ಯಾರ್ಹತೆ ಪಡೆದಿದ್ದಲ್ಲಿ

 

 
 

12 ಅಂಕಗಳು

 

09 ಅಂಕಗಳು

 

06 ಅಂಕಗಳು

ಅನುಭವ: ಹಿಂದಿನ ವರ್ಷಗಳಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವಧಿಗೆ ಪ್ರತಿ ಶೈಕ್ಷಣಿಕ ವರ್ಷಕ್ಕೆ 3 ಅಂಕಗಳಂತೆ ಗರಿಷ್ಠ 16 ವರ್ಷಗಳಿಗೆ 48 ಅಂಕಗಳು (ಪ್ರತಿ ಶೈಕ್ಷಣಿಕ ವರ್ಷದ ಪೂರ್ಣ ಅವಧಿ ಸೇವೆಗೆ 3 ಅಂಕಗಳು, ಶೈಕ್ಷಣಿಕ ವರ್ಷದಲ್ಲಿ 1 ಸೆಮಿಸ್ಟರ್ ನಲ್ಲಿ ಮಾತ್ರ ಸೇವೆ ಸಲ್ಲಿಸಿದರೆ 1.5 ಅಂಕಗಳು, ಸೆಮೆಸ್ಟರ್ ನ1 ತಿಂಗಳ ಸೇವಾ ಅವಧಿಗೆ 0.5 ಅಂಕ, 1 ತಿಂಗಳು ಮೇಲ್ಪಟ್ಟು 2 ತಿಂಗಳವರೆಗಿನ ಸೇವಾ ಅವಧಿಗೆ 1 ಅಂಕ ಹಾಗೂ 2 ತಿಂಗಳು ಮೇಲ್ಪಟ್ಟ ಸೇವಾ ಅವಧಿಗೆ 1.5 ಅಂಕಗಳು)
 

 ಮೇಲೆ ತಿಳಿಸಿದ ಮಾನದಂಡಗಳನ್ನು ಅನುಸರಿಸಿ, ಅಭ್ಯರ್ಥಿಗಳು ಅರ್ಜಿಯಲ್ಲಿ ನೀಡಿರುವ ವಿದ್ಯಾರ್ಹತೆ ಮತ್ತು ಸೇವಾ ವಿವರಗಳ ಆಧಾರದ ಮೇಲೆ ರಾಜ್ಯವ್ಯಾಪಿ ಮೆರಿಟ್ ಪಟ್ಟಿ (State-wise Merit List) ಅನ್ನು ಪ್ರಕಟಿಸಲಾಗುವುದು.
ರಾಜ್ಯವ್ಯಾಪಿ ಮೆರಿಟ್ ಪಟ್ಟಿಯಲ್ಲಿನ ಅಭ್ಯರ್ಥಿಗಳಲ್ಲಿ ವಿಷಯವಾರು ಲಭ್ಯವಿರುವ ಕಾರ್ಯಭಾರಕ್ಕನುಗುಣವಾಗಿ ಅಗತ್ಯವಿರುವ ಅರ್ಹ ಅಭ್ಯರ್ಥಿಗಳ ರಾಜ್ಯವ್ಯಾಪಿ ಆಯ್ಕೆಪಟ್ಟಿ (State-wise Selection List) ಅನ್ನು ಪ್ರಕಟಿಸಲಾಗುವುದು ಹಾಗೂ ರಾಜ್ಯವ್ಯಾಪಿ ಆಯ್ಕೆಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಆನ್‌ಲೈನ್ ಕೌನ್ಸಿಲಿಂಗ್ ಮೂಲಕ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು.
ವೇತನ/ Salary:

ಆಯ್ಕೆಯಾಗುವ ಅತಿಥಿ ಉಪನ್ಯಾಸಕರಿಗೆ ಕೆಳಗಿನಂತೆ ನಿಗಧಿಪಡಿಸಿರುವ ಗೌರವಧನವನ್ನು ನಿಯಮಾನುಸಾರ ನಿರ್ವಹಿಸುವ ಕಾರ್ಯಭಾರಕ್ಕೆ ಹಾಗೂ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿರುವ ಅರ್ಹತೆಗೆ (ವಿದ್ಯಾರ್ಹತೆ/ಸೇವಾ ಅವಧಿ) ಅನುಗುಣವಾಗಿ ಪರಿಗಣಿಸಲಾಗುವುದು.
ಅ) 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯು.ಜಿ.ಸಿ. ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ ರೂ.32,000/- (ಮೂವತ್ತೆರಡು ಸಾವಿರ ಮಾತ್ರ)

ಆ) 5 ವರ್ಷಕ್ಕಿಂತ ಕಡಿಮೆ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯು.ಜಿ.ಸಿ. ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ ರೂ.30,000/- (ಮೂವತ್ತು ಸಾವಿರ ಮಾತ್ರ)


ಇ) 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ತ್ತು ಯು.ಜಿ.ಸಿ. ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ ರೂ.28,000/- (ಇಪ್ಪತ್ತೆಂಟು ಸಾವಿರ ಮಾತ್ರ)

ಈ) 5 ವರ್ಷಕ್ಕಿಂತ ಕಡಿಮೆ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯು.ಜಿ.ಸಿ. ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ ರೂ.26,000/- (ಇಪ್ಪತ್ತಾರು ಸಾವಿರ ಮಾತ್ರ)

ಆಯ್ಕೆಯಾಗುವ ಅತಿಥಿ ಉಪನ್ಯಾಸಕರಿಗೆ ಕಲಾ/ವಾಣಿಜ್ಯ/ಭಾಷಾ ವಿಷಯಗಳಿಗೆ ಗರಿಷ್ಠ 15 ಗಂಟೆಗಳ ಹಾಗೂ ವಿಜ್ಞಾನ ವಿಷಯಗಳು/ಪ್ರಾಯೋಗಿಕ ತರಗತಿಗಳಿರುವ ವಿಷಯಗಳಿಗೆ ಗರಿಷ್ಠ 19 ಗಂಟೆಗಳ ಕಾರ್ಯಭಾರವನ್ನು ಮಾತ್ರ ಹಂಚಿಕೆ ಮಾಡಲಾಗುವುದು ಹಾಗೂ 15/19 ಗಂಟೆಗಳಿಗಿಂತ ಕಡಿಮೆ ಕಾರ್ಯಭಾರವಿದ್ದಲ್ಲಿ ಎಷ್ಟು ಗಂಟೆಗಳ ಕಾರ್ಯಭಾರ ಲಭ್ಯವಿದೆಯೋ ಅದಕ್ಕೆ ಅನುಗುಣವಾಗಿ ಗೌರವಧನವನ್ನು ಪರಿಗಣಿಸಲಾಗುವುದು.


ಮುಂದುವರೆದು, ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಗ್ರಂಥಪಾಲಕರ ಹುದ್ದೆಗಳು ಖಾಲಿ ಇರುವ ಕಾಲೇಜುಗಳಲ್ಲಿ ಅತಿಥಿ ದೈಹಿಕ ಶಿಕ್ಷಣ ಹಾಗೂ ಅತಿಥಿ ಗ್ರಂಥಪಾಲಕರ ಸೇವೆಯನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದ್ದು, ಅವರಿಗೆ 19 ಗಂಟೆಗಳ ಕಾರ್ಯಭಾರವನ್ನು ನಿಗಧಿಗೊಳಿಸಿ ಆಯ್ಕೆ ಮಾಡಲಾಗುತ್ತದೆ.
ಅಭ್ಯರ್ಥಿಗಳು ಸೇವಾ ಅವಧಿಯ ವಿವರಗಳನ್ನು ಪ್ರಾಂಶುಪಾಲರಿಂದ ಈ ಪತ್ರಕ್ಕೆ ಲಗತ್ತಿಸಿರುವ ನಿಗಧಿತ ನಮೂನೆಯಲ್ಲಿ ಪಡೆದು ಸದರಿ ಸೇವಾ ವಿವರಗಳನ್ನು ಆನ್‌ಲೈನ್ ಅರ್ಜಿಯಲ್ಲಿ ಯಥಾವತ್ತಗಿ ನಮೂದಿಸುವುದು.

ಮುಂದುವರೆದು, ಸದರಿ ನಮೂನೆಯಲ್ಲಿ ಈಗಾಗಲೇ ಈ ಹಿಂದಿನ ವರ್ಷಗಳ ಸೇವಾ ವಿವರಗಳನ್ನು ಪ್ರಾಂಶುಪಾಲರಿಂದ ಪಡೆದಿದ್ದಲ್ಲಿ, ಪುಸಕ್ತ ಸಾಲಿನ ಅಂದರೆ 2022-23ನೇ ಸಾಲಿನ ಸೇವಾ ವಿವರಗಳನ್ನು ಮಾತ್ರ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರಿಂದ ಪಡೆದು, ಒಟ್ಟು ಸೇವಾ ವಿವರಗಳನ್ನು ಅರ್ಜಿಯಲ್ಲಿ ನಮೂದಿಸುವುದು.


ಕರ್ನಾಟಕ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ/ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಸೇವೆಯನ್ನು ಮಾತ್ರ ಆಯ್ಕೆಗೆ ಪರಿಗಣಿಸಲಾಗುವುದು.
ಕೌನ್ಸಿಲಿಂಗ್ ಮೂಲಕ ಕಾಲೇಜು ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳ ಪಟ್ಟಿ ಪಕಟಣೆಯಾದ ನಂತರ 02 ದಿನಗಳೊಳಾಗಿ ಸಂಬಂಧಪಟ್ಟ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ಸಲ್ಲಿಸಿರುವ ವಿವರಗಳಂತೆ, ಅವರ ವಿದ್ಯಾರ್ಹತೆ ಮತ್ತು ಸೇವಾ ವಿವರದ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರ ಸಮಕ್ಷಮ ಹಾಜರುಪಡಿಸುವುದು ಕಡ್ಡಾಯವಾಗಿರುತ್ತದೆ.


ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ವಿದ್ಯಾರ್ಹತೆ, ಸೇವಾ ವಿವರಗಳು ಹಾಗೂ ಇನ್ನಿತರೆ ಅಗತ್ಯ ಮಾಹಿತಿಗಳನ್ನು ನಮೂದಿಸುವಾಗ ತಪ್ಪಾಗದಂತೆ ಗಮನಹರಿಸಿ ಸರಿಯಾದ/ನಿಖರ ಮಾಹಿತಿಯನ್ನು ದಾಖಲಿಸುವುದು.
ಅಭ್ಯರ್ಥಿಗಳು ಒಂದು ವೇಳೆ ವಿದ್ಯಾರ್ಹತೆ, ಸೇವಾ ವಿವರಗಳು ಹಾಗೂ ಇನ್ನಿತರೆ ಮಾಹಿತಿಗಳನ್ನು ತಪ್ಪಾಗಿ ನಮೂದಿಸಿದ್ದಲ್ಲಿ, ಮುಂದಿನ ಪರಿಣಾಮಗಳಿಗೆ ಸಂಬಂಧಪಟ್ಟ ಅಭ್ಯರ್ಥಿಗಳೇ ನೇರ ಹೊಣೆಗಾರರಾಗಿರುತ್ತಾರೆ ಹಾಗೂ ಅಂತಹ ಅಭ್ಯರ್ಥಿಗಳನ್ನು ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಿಂದ ಅನರ್ಹಗೊಳಿಸಿ, ಅವರುಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

14. 2023-24ನೇ ಶೈಕ್ಷಣಿಕ ಸಾಲಿನಲ್ಲಿ ಆಯ್ಕೆಯಾಗುವ / ಕರ್ತವ್ಯ ನಿರ್ವಹಿಸುವ ಅತಿಥಿ ಉಪನ್ಯಾಸಕರನ್ನು ಸಂಬಂಧಪಟ್ಟ ವಿಶ್ವವಿದ್ಯಾಲಯಗಳ ಶೈಕ್ಷಣಿಕ ವೇಳಾಪಟ್ಟಿಯಂತೆ 202324ನೇ ಶೈಕ್ಷಣಿಕ ಸಾಲಿನ ಮುಕ್ತಾಯದವರೆಗೆ (ಬೋಧನಾ ಕಾರ್ಯಭಾರದ ಲಭ್ಯತೆಗನುಸಾರವಾಗಿ) ಅಥವಾ 10 ತಿಂಗಳಿಗೆ ಮಾತ್ರ ಇದರಲ್ಲಿ ಯಾವುದೂ ಮೊದಲು ಅಲ್ಲಿಯವರೆಗೆ ಮುಂದುವರೆಸಿ, ನಂತರ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗುವುದು.

ಕೌನ್ಸಿಲಿಂಗ್ ಮೂಲಕ ಆಯ್ಕೆಗೊಂಡ ಅಭ್ಯರ್ಥಿಗಳು ಆಯಾ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿದ್ದಲ್ಲಿ ಅವರ ಬದಲಿಗೆ ನಂತರದ ಅಭ್ಯರ್ಥಿಯನ್ನು ಕೌನ್ಸಿಲಿಂಗ್ ಮೂಲಕ ಆಯ್ಕೆ ಮಾಡಿ ಆಯ್ಕೆಪಟ್ಟಿಯನ್ನು ಸಂಬಂಧಪಟ್ಟ ಕಾಲೇಜಿಗೆ ರವಾನಿಸಲಾಗುವುದು.
16.ನಿಗಧಿತ ಕೌನ್ಸಿಲಿಂಗ್‌ನಲ್ಲಿ ಭಾಗವಹಿಸದ ಅಥವಾ ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಿ ಕಾಲೇಜು ಆಯ್ಕೆ ಮಾಡಿಕೊಳ್ಳದ ಹಾಗೂ ಕೌನ್ಸಿಲಿಂಗ್‌ನಲ್ಲಿ ಕಾಲೇಜು ಆಯ್ಕೆ ಮಾಡಿಕೊಂಡು ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾಗದ ಅಭ್ಯರ್ಥಿಗಳಿಗೆ ಪುನಃ 2ನೇ ಬಾರಿಗೆ ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.

ಆನ್‌ಲೈನ್ ಮೂಲಕ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಕುರಿತು ಎಲ್ಲಾ ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಕಾಲೇಜುಗಳ ನೋಟೀಸ್ ಬೋರ್ಡ್‌ನಲ್ಲಿ ಪಕಟಿಸುವುದರೊಂದಿಗೆ, ಅಭ್ಯರ್ಥಿಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾಹಿತಿಯನ್ನು ನೀಡುವುದು.
ಅತಿಥಿ ಉಪನ್ಯಾಸಕರ ಆಯ್ಕೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಇಲಾಖೆಯ ಅಂತರ್ಜಾಲ ತಾಣ https://dce.karnataka.gov.in ರಲ್ಲಿ ರ್ಪಕಟಿಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಸದರಿ ಅಂತರ್ಜಾಲ ತಾಣವನ್ನು ಪ್ರತಿನಿತ್ಯ ಗಮನಿಸಲು ತಿಳಿಸಲಾಗಿದೆ.



logoblog

Thanks for reading College Education Department Vacancies Details

Previous
« Prev Post

No comments:

Post a Comment