Saturday, November 25, 2023

The Karnataka Government Servants (Procedure for Change of Names) Rules, 1967

  Wisdom News       Saturday, November 25, 2023
Hedding ; The Karnataka Government Servants (Procedure for Change of Names) Rules, 1967...

ಸರ್ಕಾರಿ ನೌಕರರು ದಾಖಲಾತಿಯಲ್ಲಿ ಹೆಸರು ಬದಲಾಯಿಸುವುದು ಹೇಗೆ?

ಸರ್ಕಾರಿ ದಾಖೆಲೆಗಳಲ್ಲಿ ಹೆಸರು ಬದಲಾವಣೆ ಪ್ರಕ್ರಿಯೆ ಹಲವಾರು ಜನರಲ್ಲಿ ಗೊಂದಲ ಉಂಟು ಮಾಡುತ್ತದೆ. ಅದರಲ್ಲೂ ಸರ್ಕಾರಿ ನೌಕರರು ಹೆಸರು ಬದಲಾವಣೆ ಮಾಡುವಾಗ ಈ ಪ್ರಕ್ರಿಯೆ ಹೇಗೆ ಮಾಡಬೇಕು? ಎಂಬ ಮಾಹಿತಿ ಹುಡುಕುವುದು ಸಾಮಾನ್ಯವಾಗಿದೆ.


ತಂದೆ-ತಾಯಿ, ಸಾಂಪ್ರದಾಯಿಕವಾಗಿ ಅಥವ ಗ್ರಾಮಾಂತರ ಹಾಗೂ ಜನಪದ ಶೈಲಿಯಲ್ಲಿ ಮೊದಲು ಹೆಸರು ಇಡಲಾಗಿರುತ್ತದೆ. ಹಂತ ಹಂತವಾಗಿ ಅವರ ಹೆಸರು ಬದಲಾವಣೆ ಮಾಡಬೇಕಾದರೆ ಸರ್ಕಾರಿ ದಾಖಲೆಗಳಲ್ಲಿ ಮೂಲ ಹೆಸರು ಉಳಿದುಬಿಡುತ್ತದೆ.

ಅದನ್ನು ಬದಲಾವಣೆ ಮಾಡುವ ಪ್ರಕ್ರಿಯೆ ಹೇಗೆ?, ಹೇಗೆ ಅರ್ಜಿ ಸಲ್ಲಿಸಬೇಕು?. ಎಲ್ಲಿಗೆ ಅರ್ಜಿ ಸಲ್ಲಿಸಬೇಕು? ಎಂಬ ಮಾಹಿತಿಗಳನ್ನು ತಿಳಿದಿರುವುದು ಅತ್ಯಗತ್ಯವಾಗಿದೆ. ಇದಕ್ಕಾಗಿ ಕಾನೂನಿನ ನಿಯಮಗಳು ಏನು ಹೇಳುತ್ತವೆ? ಎಂದು ಮೊದಲು ತಿಳಿಯಬೇಕಿದೆ.

ಸರ್ಕಾರಿ ನೌಕರರು ಹೆಸರು ಬದಲಿಸಿಕೊಳ್ಳುವ ಬಗ್ಗೆ 9/12/1960ರ ಅಧಿಕೃತ ಜ್ಞಾಪನ ಜೆಎಡಿ 62 ಪಿಎಲ್‌ಎಕ್ಸ್‌ 60ರಲ್ಲಿ ಕೆಲವು ಮಾರ್ಗದರ್ಶನಗಳನ್ನು ಸೂಚಿಸಲಾಗಿತ್ತು. ಬಳಿಕ ಕರ್ನಾಟಕ ಸರ್ಕಾರಿ ನೌಕರರ (ಹೆಸರು ಬದಲಾವಣೆ ವಿಧಾನ) ನಿಯಮಗಳು, 1967ನ್ನು ಸರ್ಕಾರಿ ಆದೇಶ ಸಂಖ್ಯೆ ಜಿಎಡಿ 1 ಡಿಸಿಎನ್ 66 8/3/67ರಲ್ಲಿ ಹೊರಡಿಸಲಾಗಿದೆ.

1967ರ ಕರ್ನಾಟಕ ಸರ್ಕಾರಿ ನೌಕರರ (ಹೆಸರು ಬದಲಾವಣೆ ವಿಧಾನ) ನಿಯಮಗಳು ಕರ್ನಾಟಕ ರಾಜ್ಯಪತ್ರ ದಿನಾಂಕ 6/4/1967ರಲ್ಲಿ ಪ್ರಕಟಿಸಿದ್ದರೂ ದಿನಾಂಕ 11/4/1967ರಿಂದಲೇ ಜಾರಿಗೆ ಬರುವಂತೆ ಉಪಬಂಧದ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರಿ ನೌಕರರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುವ ಪ್ರಕ್ರಿಯೆ, ಅರ್ಜಿ ಸಲ್ಲಿಕೆ ಮಾಡುವ ಮಾಹಿತಿ ಮುಂತಾದವ ವಿವರಗಳನ್ನು ಇಲ್ಲಿ ನೀಡಲಾಗಿದೆ.

ರಾಜ್ಯ ಸರ್ಕಾರಿ ನೌಕರರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುವ ಅನುಮತಿಗಾಗಿ ಅರ್ಜಿಯನ್ನು 3 ಪ್ರತಿಯಲ್ಲಿ ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಇಲ್ಲಿ ನೇಮಕಾತಿ ಪ್ರಾಧಿಕಾರ ಎಂದರೆ ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ರೀತ್ಯಾ ಅರ್ಥವನ್ನು ಹೊಂದಿರುತ್ತದೆ.

ಸ್ಪಷ್ಟವಾದ ಅಕ್ಷರಗಳಲ್ಲಿ ತಿಳಿಸಬೇಕು
ನೌಕರರು ತಮ್ಮ ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸುವಾಗ ಸ್ಪಷ್ಟವಾದ ಅಕ್ಷರಗಳಲ್ಲಿ ಈಗಿರುವ ಹೆಸರು ಹಾಗೂ ಬದಲಾಯಿಸಿಕೊಳ್ಳುವ ಇಚ್ಚಿಸಿದ ಹೆಸರು ತಿಳಿಸಬೇಕು ಹಾಗೂ ಕೆಲವು ನೌಕರರು ಹುಟ್ಟಿದ ಸ್ಥಳ, ವ್ಯಾಸಂಗ ಮಾಡಿದ ಸ್ಥಳ, ವಾಸವಾಗಿರುವ ಸ್ಥಳ, ಸ್ಥಿರಾಸ್ತಿ ಹೊಂದಿರುವ ವಿಷಯ ವಿವರಗಳನ್ನು ಅರ್ಜಿಯಲ್ಲಿ ತಿಳಿಸಬೇಕು. ಮುದ್ರಣ ಮತ್ತು ಲೇಖನ ಸಾಮಾಗ್ರಿ ಪ್ರಕಟಣೆಗಳ ಇಲಾಖೆ- ಹೆಸರು ಬದಲಾವಣೆ ಎಂಬ ಶೀರ್ಷಿಕೆಗೆ 15 ರೂ. ಪಾವತಿಸಿ ಅದರ ಚಲನ್‌ ಅನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.

ಎಲ್ಲ ವಿವಿರ ಪರಿಶೀಲಿಸಿ ಅನುಮತಿ
ನೇಮಕಾತಿ ಪ್ರಾಧಿಕಾರವು ಹೆಸರು ಬದಲಾವಣೆ ಬಯಸಿದ ಸರ್ಕಾರಿ ನೌಕರನ ಎಲ್ಲಾ ವಿವರಗಳನ್ನು ಪರಿಶೀಲಿಸಿ ಅನುಮತಿ ನೀಡಬಹುದು. ಅನುಮತಿ ನೀಡುವ ಮುನ್ನ ನೇಮಕಾತಿ ಪ್ರಾಧಿಕಾರ ಸರ್ಕಾರಿ ನೌಕರನು ದುರುದ್ದೇಶದಿಂದ ಅಥವ ಕಾನೂನು ಉಪಕ್ರಮಗಳನ್ನು ತಪ್ಪಿಸಿಕೊಳ್ಳುವ ದೃಷ್ಟಿಯುಂದ ಈ ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸಿದ್ದಾನೆಯೇ? ಎಂಬ ಬಗ್ಗೆ ಪರಿಶೀಲನೆ ನಡೆಸಲಿದೆ.

ಸಂಬಂಧಿಸಿದ ಪೊಲೀಸ್ ಅಧೀಕ್ಷಕರು ಅಥವ ಇನ್ಯಾವುದೇ ಪ್ರಾಧಿಕಾರಕ್ಕೆ ಅವಶ್ಯ ಎಂದು ಎನಿಸಿದರೆ ಅಂತವರನ್ನು ಲಿಖಿತವಾಗಿ ಸಂಪರ್ಕಿಸಿ, ವಿವರಗಳನ್ನು ಪಡೆಯಬಹುದು. ಹೆಸರು ಬದಲಾವಣೆಯ ಮೂಲಕ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂಬ ಅಭಿಪ್ರಾಯವನ್ನು ನೇಮಕಾತಿ ಪ್ರಾಧಿಕಾರ ಹೊಂದಿದ್ದಲ್ಲಿ ಸೂಕ್ತ ಕಾರಣಗಳೊಂದಿಗೆ ಅನುಮತಿ ನಿರಾಕರಿಸಬಹುದು. ಇಂತಹ ನಿರಾಕರಣೆ ವಿರುದ್ಧ ಮೇಲ್ಮನವಿ ಸಲ್ಲಿಕೆಗೆ ಅವಕಾಶವಿಲ್ಲ.

ರಾಜ್ಯಪತ್ರದಲ್ಲಿ ಪ್ರಕಟವಾಗಬೇಕು
ಹೆಸರು ಬದಲಾವಣೆ ಪ್ರಕ್ರಿಯೆಗಾಗಿ ನೇಮಕಾತಿ ಪ್ರಾಧಿಕಾರ ಅನುಮತಿಸಿದ ಅಧಿಸೂಚನೆಯನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಲು ನಿರ್ದೇಶಕರು, ಮುದ್ರಣ ಮತ್ತು ಲೇಖನ ಸಾಮಾಗ್ರಿಗಳ ಪ್ರಕಟಣಾ ಇಲಾಖೆಗೆ ನೇಮಕಾತಿ ಪ್ರಾಧಿಕಾರ ರವಾನೆ ಮಾಡಬೇಕು. ಅಂತಹ ಪ್ರಕಟಣೆ ಮಾಡಿದ ರಾಜ್ಯ ಪತ್ರದ ಪ್ರತಿಗಳನ್ನು ನೇಮಕಾತಿ ಪ್ರಾಧಿಕಾರಕ್ಕೆ ಕಳುಹಿಸಬೇಕು. ಸಂಬಂಧಿತ ನೌಕರನಿಗೆ ಸಹ ಈ ಪ್ರತಿಯನ್ನು ನೀಡಲಾಗುತ್ತದೆ.

"ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು
ಹೆಸರು ಬದಲಾವಣೆ ಮಾಡಿಕೊಂಡ ನೌಕರನು ತಮ್ಮ ಸ್ವಂತ ವೆಚ್ಚದಲ್ಲಿ ಇಂಡಿಯನ್ ರಿಜಿಸ್ಟ್ರೇಷನ್ ಆಕ್ಟ್ ಉಪಬಂಧಗಳ ಅಡಿಯಲ್ಲಿ ನೌಕರರು ಪ್ರಮಾಣಿಸಿದ ಪ್ರತಿಯನ್ನು ಸಲ್ಲಿಸಬೇಕು. ಪುನಃ ರಾಜ್ಯಪತ್ರದಲ್ಲಿ ಪ್ರಕಟಿಸುವ ಬಗ್ಗೆ ಮುದ್ರಣ ಮತ್ತು ಲೇಖನ ಸಾಮಾಗ್ರಿಗಳ ಪ್ರಕಟಣೆ ಇಲಾಖೆಗೆ ಸಲ್ಲಿಸಬೇಕು. ಆಗ ಇಂತಹ ಅಧಿಕೃತ ಹೆಸರು ಬದಲಾದ ಬಗ್ಗೆ ರಾಜ್ಯಪತ್ರದಲ್ಲಿ ಪ್ರಕಟಿಸಲಾಗುತ್ತದೆ. ಸರ್ಕಾರಿ ನೌಕರನು ತನ್ನ ಹೆಸರು ಬದಲಾಯಿಸಿದ ಬಗ್ಗೆ ತನ್ನದೇ ವೆಚ್ಚದಲ್ಲಿ ಸಾರ್ವಜನಿಕರ ಪ್ರಕಟಣೆಗಾಗಿ ದಿನಪತ್ರಿಕೆಗಳಲ್ಲಿ ಪ್ರಕಟಿಸಿಕೊಳ್ಳಬಹುದು."
 

logoblog

Thanks for reading The Karnataka Government Servants (Procedure for Change of Names) Rules, 1967

Previous
« Prev Post

No comments:

Post a Comment