Saturday, November 11, 2023

OLD PENSION SCHEME REG...

  Wisdom News       Saturday, November 11, 2023
Subject ;OLD PENSION SCHEME REG...


ಅನುದಾನಿತ ಶಾಲೆಗಳ ನಿವೃತ್ತ ಶಿಕ್ಷಕರಿಗೆ ಪಿಂಚಣಿ ಸೌಲಭ್ಯ ಕಲ್ಪಿಸಿ’

2006ರ ಪೂರ್ವದ ಕರ್ನಾಟಕ ರಾಜ್ಯ ಅನುದಾನಿತ ಶಾಲಾ–ಕಾಲೇಜುಗಳ ಪಿಂಚಣಿ ವಂಚಿತರ ವೇದಿಕೆ ಒತ್ತಾಯ.

ಬೆಂಗಳೂರು: ನಿವೃತ್ತಿಯಾಗಿರುವ ಅನುದಾನಿತ ಶಾಲಾ–ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವಂತೆ ‘2006ರ ಪೂರ್ವದ ಕರ್ನಾಟಕ ರಾಜ್ಯ ಅನುದಾನಿತರ ಶಾಲಾ–ಕಾಲೇಜುಗಳ ಪಿಂಚಣಿ ವಂಚಿತರ ವೇದಿಕೆ’ ಒತ್ತಾಯಿಸಿದೆ.

‘ವಯೋ ನಿವೃತ್ತಿ ನಂತರ ಪಿಂಚಣಿ ರಹಿತವಾಗಿ ಜೀವನ ಸಾಗಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಅನುದಾನಿತ ಶಾಲೆಗಳ ನಿವೃತ್ತ ಶಿಕ್ಷಕರನ್ನು ಉಪವಾಸಗೆಡಿಸಿ ಶಿಕ್ಷಕರ ದಿನಾಚರಣೆ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ’ ಎಂದು ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಡಾ.ಜಿ.ಆರ್‌. ಹೆಬ್ಬೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ರಾಜ್ಯದಲ್ಲಿ ಜಾರಿಗೊಳಿಸಿರುವ ನೂತನ ಪಿಂಚಣಿ ಯೋಜನೆಯೇ (ಎನ್‌ಪಿಎಸ್‌) ಇದಕ್ಕೆ ಕಾರಣವಾಗಿದೆ. ಎನ್‌ಪಿಎಸ್‌ ನಮಗೆ ಅನ್ವಯಿಸುವುದಿಲ್ಲ ಮತ್ತು ಸಂಬಂಧವೇ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

2006ರ ಏಪ್ರಿಲ್‌ 1ರ ಪೂರ್ವದಲ್ಲಿ ಅನುದಾನ ರಹಿತವಾಗಿ ನೇಮಕಾತಿಯಾಗಿ ವೇತನ ಪಡೆದು ಸುಮಾರು 10 ವರ್ಷಗಳಿಂದ ಪಿಂಚಣಿ ಇಲ್ಲದೆಯೇ ಊಟ ಮತ್ತು ಔಷಧ ಖರೀದಿಗೂ ಹಣವಿಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ಹಳೆ ಪಿಂಚಣಿ ವ್ಯವಸ್ಥೆಗೆ ಸೇರಿದ್ದೇವೆ. ಶಾಲೆಗಳ ಶಾಶ್ವತ ಅನುದಾನ ರಹಿತ ಅವಧಿಯ ಸೇವೆಯನ್ನು ಪರಿಗಣಿಸಿದರೆ ಮಾತ್ರ ವಯೋನಿವೃತ್ತಿ ಪಿಂಚಣಿ ಪಡೆಯಲು ಸಾಧ್ಯ’ ಎಂದು ತಿಳಿಸಿದ್ದಾರೆ.

‘ಈ ಹೊಸ ಪಿಂಚಣಿ ವ್ಯವಸ್ಥೆಯಲ್ಲಿ ಉದ್ಯೋಗದಾತನಿಂದ ಶೇ 10 ರಷ್ಟು ಮತ್ತು ಸರ್ಕಾರ ಶೇ 14ರಷ್ಟು ಹಣ ಕೊಡಬೇಕು. ಈ ಮೊತ್ತವನ್ನು ಸರ್ಕಾರ ಬೇರೊಂದು ಕಡೆಗೆ ಹೂಡಿಕೆ ಮಾಡಿ ಅದರಿಂದ ಪಿಂಚಣಿ ನೀಡಲಾಗುತ್ತದೆ. ಈ ವ್ಯವಸ್ಥೆ 2006ರ ಏಪ್ರಿಲ್‌ 1ರಿಂದ ಜಾರಿಯಾಗಿದೆ. ಆದರೆ, ಶಿಕ್ಷಣ ಇಲಾಖೆಯಲ್ಲಿ ಅನುದಾನಿತ ಹಾಗೂ ಅನುದಾನರಹಿತ ಎಂಬ ವ್ಯವಸ್ಥೆ ಇರುವುದರಿಂದ ಈ ಸಮಸ್ಯೆ ಎದುರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಸೇವೆಯನ್ನು ಪರಿಗಣಿಸಿ ವಯೋನಿವೃತ್ತಿ ಪಿಂಚಣಿ ಬಿಡುಗಡೆಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಸುಮಾರು ಐದು ಸಾವಿರ ಜನರಿಗೆ ಪಿಂಚಣಿ ಸಮಸ್ಯೆಯಾಗಿದೆ. ಪಿಂಚಣಿ ಇಲ್ಲದೆಯೇ ನಿಕೃಷ್ಟವಾಗಿ ಜೀವನ ನಡೆಸುತ್ತಿದ್ದೇವೆ. ಜತೆಗೆ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದೇವೆ. ಔಷಧಿ ಪಡೆಯಲು ಹಣವಿಲ್ಲ, ಬಿಪಿಎಲ್‌ ಕಾರ್ಡ್‌ ಸಹ ಸಿಗುತ್ತಿಲ್ಲ. ಶಿಕ್ಷಕರಾದ ನಮಗೆ ಭಿಕ್ಷೆ ಬೇಡಲು ಆಗುತ್ತಿಲ್ಲ’ ಎಂದು ತಿಳಿಸಿದ್ದಾರೆ.

ಹಳೆಯ ಪಿಂಚಣಿ ಯೋಜನೆ ಅಥವಾ ಹೊಸ ಪಿಂಚಣಿ ಯೋಜನೆ ಇದರಲ್ಲಿ ಯಾವುದು ಬೆಸ್ಟ್?
ಆರಂಭದಲ್ಲಿ ಈ ಪಿಂಚಣಿ ವ್ಯವಸ್ಥೆಯು ಸರಕಾರಿ ನೌಕರರಿಗೆ ಮಾತ್ರವೇ ಲಭ್ಯವಿತ್ತು. ಇದೀಗ ಖಾಸಗಿ ನೌಕರರು ಈ ಪಿಂಚಣಿ ವ್ಯವಸ್ಥೆಯ

ಪಿಂಚಣಿಯು ಹಿರಿಯ ನಾಗರಿಕರಿಗೆ ಆರಾಮದಾಯಕ ಜೀವನಕ್ಕೆ ಭದ್ರತೆಯಾಗಿ ಕೆಲಸ ಮಾಡುತ್ತದೆ. ಅದರಲ್ಲೂ ಸಾಮಾನ್ಯ ಜನರಿಗೆ ಪಿಂಚಣಿ ಒಂದು ಪ್ರಮುಖ ಆರ್ಥಿಕ ಬೆಂಬಲವಾಗಿ ಕಾರ್ಯನಿರ್ವಹಿಸುತ್ತದೆ. ರಾಷ್ಟ್ರೀಯ ಪಿಂಚಣಿ ಯೋಜನೆಯು ಹಿರಿಯ ನಾಗರಿಕರಿಗೆ ಪ್ರಮುಖ ಹೂಡಿಕೆ ಆಯ್ಕೆಯಾಗಿ ಲಭ್ಯವಿದೆ. 2004 ರಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಪರಿಚಯಿಸಿದ ರಾಷ್ಟ್ರೀಯ ಪಿಂಚಣಿ ಯೋಜನೆಯು ಈ ಹಿಂದೆ ಇದ್ದ ಹಳೆಯ ಪಿಂಚಣಿ ವ್ಯವಸ್ಥೆಯನ್ನು (System) ಬದಲಾಯಿಸಿದೆ. ಈ ಹೊಸ ಪಿಂಚಣಿ ವ್ಯವಸ್ಥೆ ಸರಕಾರಿ ಹಾಗೂ ಖಾಸಗಿ

ವಲಯದ ಉದ್ಯೋಗಿಗಳಿಗೂ ಅನ್ವಯಿಸುತ್ತದೆ. ಎನ್‌ಪಿಎಸ್ (NPS) ಪಿಂಚಣಿಯನ್ನು ಖಾತ್ರಿಪಡಿಸುವುದು ಮಾತ್ರವಲ್ಲದೆ ಹೂಡಿಕೆಯ ಅವಕಾಶಗಳನ್ನು ನೀಡುತ್ತದೆ. ಹೂಡಿಕೆಯ ಮೇಲೆ ಹೆಚ್ಚಿನ ಆದಾಯದ ಸಾಮರ್ಥ್ಯವನ್ನೂ ಹೊಂದಿದೆ.


ಸರಕಾರಿ ಹಾಗೂ ಖಾಸಗಿ ಉದ್ಯೋಗಿಗಳಿಗೂ ಯೋಜನೆ ಅನ್ವಯ

ಆರಂಭದಲ್ಲಿ ಈ ಪಿಂಚಣಿ ವ್ಯವಸ್ಥೆಯು ಸರಕಾರಿ ನೌಕರರಿಗೆ ಮಾತ್ರವೇ ಲಭ್ಯವಿತ್ತು. ಇದೀಗ ಖಾಸಗಿ ನೌಕರರು ಈ ಪಿಂಚಣಿ ವ್ಯವಸ್ಥೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.

ಎನ್‌ಪಿಎಸ್ ನಲ್ಲಿ ಎರಡು ವಿಧಗಳಿದ್ದು, ಶ್ರೇಣಿ ಒಂದು ಹಾಗೂ ಶ್ರೇಣಿ ಎರಡು ಎಂಬ ಆಯ್ಕೆಗಳಿವೆ. ಶ್ರೇಣಿ ಒಂದರ ಖಾತೆಯನ್ನು ಆಯ್ಕೆ ಮಾಡುವುದು ನಿವೃತ್ತಿಯ ನಂತರ ಮಾತ್ರ ಹಣ ಹಿಂಪಡೆಯುವ ಅವಕಾಶವನ್ನೊದಗಿಸುತ್ತದೆ.

ಶ್ರೇಣಿ ಎರಡರಲ್ಲಿ ಪಿಂಚಣಿದಾರರು ಅವಧಿಗೂ ಮುನ್ನವೇ ಹಣ ಹಿಂಪಡೆಯುವ ಸೌಲಭ್ಯವನ್ನು ಹಿರಿಯ ಉದ್ಯೋಗಿಗಳಿಗೆ ಒದಗಿಸಿಕೊಡುತ್ತದೆ. NPS ನಲ್ಲಿ ಹೂಡಿಕೆ ಮಾಡುವುದರಿಂದ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 CCD ಅಡಿಯಲ್ಲಿ ರೂ 1.5 ಲಕ್ಷದವರೆಗೆ ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ.

ಎನ್‌ಪಿಎಸ್ ಕಾರ್ಪಸ್‌ನ ಶೇಕಡಾ 60 ರಷ್ಟು ಹಿಂತೆಗೆದುಕೊಂಡರೆ, ತೆರಿಗೆ ವಿನಾಯಿತಿ ಎಂದೆನಿಸುತ್ತದೆ. ಹಾಗಾಗಿ ಇದು ನಿವೃತ್ತ ಯೋಜನೆಗೆ ಆಕರ್ಷಕವಾದ ಆಯ್ಕೆ ಎಂದೆನಿಸಿದೆ. ದೊಡ್ಡ ಮೊತ್ತವನ್ನೇ ಪಾವತಿಯನ್ನಾಗಿ ಪಡೆದುಕೊಳ್ಳಬಹುದಾಗಿದೆ.

ಅನಾನುಕೂಲತೆಗಳೇನು?

ಎನ್‌ಪಿಎಸ್‌ನಲ್ಲಿ ಅನುಕೂಲತೆಗಳು ಇದ್ದಂತೆ ಅನಾನುಕೂಲಗಳೂ ಇವೆ. ಒಬ್ಬರ ಸಂಬಳದಿಂದ ಕಡ್ಡಾಯವಾದ ಕಡಿತವನ್ನು ಒಳಗೊಂಡಿರುತ್ತದೆ. ಅಲ್ಲದೆ ನಿವೃತ್ತಿಯ ನಂತರ ಪಡೆದ ಹಣ ಕೂಡ ತೆರಿಗೆಗೆ ಒಳಪಟ್ಟಿರುತ್ತದೆ.

ಶ್ರೇಣಿ ಒಂದರ ಹಣ ಪಡೆಯಬೇಕು ಎಂದಾದರೆ ಪಿಂಚಣಿದಾರರು 60 ವರ್ಷದ ಗಡಿಯನ್ನು ತಲುಪಿರಬೇಕಾಗುತ್ತದೆ ಅಂದರೆ ಪಿಂಚಣಿದಾರರಿಗೆ 60 ವರ್ಷವಾಗದೇ ಅವರ ಹಣವನ್ನು ಪಡೆದುಕೊಳ್ಳಲಾಗುವುದಿಲ್ಲ.

ಹಳೆಯ ಪಿಂಚಣಿ ಯೋಜನೆಯ ಪದ್ಧತಿ ಹೇಗಿತ್ತು?

1950 ರ ದಶಕದಲ್ಲಿ ಸ್ಥಾಪಿಸಲಾದ ಹಳೆಯ ಪಿಂಚಣಿ ಯೋಜನೆ (OPS), ಸರ್ಕಾರಿ ನೌಕರರಿಗೆ ಮಾತ್ರ ಲಭ್ಯವಿತ್ತು. ಈ ಯೋಜನೆಯಡಿಯಲ್ಲಿ, ನೌಕರರು ತಮ್ಮ ಕೊನೆಯ ವೇತನದ 50 ಪ್ರತಿಶತವನ್ನು ಮಾಸಿಕ ಪಿಂಚಣಿಯಾಗಿ ತುಟ್ಟಿ ಭತ್ಯೆಯೊಂದಿಗೆ ಪಡೆದರು. NPS ಗಿಂತ ಭಿನ್ನವಾಗಿ, ಸಂಬಳವು ಕಡಿತಗಳಿಗೆ ಒಳಪಟ್ಟಿಲ್ಲ ಮತ್ತು ಈ ಯೋಜನೆಯ ಮೂಲಕ ಪಡೆದ ಆದಾಯವು ತೆರಿಗೆ ಮುಕ್ತವಾಗಿತ್ತು.

ಹಳೆಯ ಪಿಂಚಣಿ ಯೋಜನೆ (OPS) ಸರ್ಕಾರವು ಅನುಮೋದಿಸಿದ ನಿವೃತ್ತಿ ಯೋಜನೆಯಾಗಿದೆ. ಸರ್ಕಾರಿ ನೌಕರರು OPS ಅಡಿಯಲ್ಲಿ ಮಾಸಿಕ ಪಿಂಚಣಿ ಪಡೆಯುತ್ತಾರೆ. ಇದು ಕನಿಷ್ಠ ಹತ್ತು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಸರ್ಕಾರಿ ನೌಕರರಿಗೆ ಅವರ ಕೊನೆಯ ಮೂಲ ವೇತನ ಮತ್ತು ಸೇವೆಯ ವರ್ಷಗಳ ಆಧಾರದ ಮೇಲೆ ಖಾತರಿ ಪಿಂಚಣಿಯನ್ನು ಒದಗಿಸುತ್ತದೆ.

OPS ಅಡಿಯಲ್ಲಿ, ನಿವೃತ್ತಿಯ ನಂತರ ಸರ್ಕಾರಿ ನೌಕರರಿಗೆ ಸರ್ಕಾರವು ಸಂಪೂರ್ಣ ಪಿಂಚಣಿ ಮೊತ್ತವನ್ನು ಪಾವತಿಸುತ್ತದೆ. ಹೀಗಾಗಿ, ನೌಕರರು ಸೇವೆಯಲ್ಲಿದ್ದಾಗ ಅವರ ಸಂಬಳದಿಂದ ಯಾವುದೇ ಮೊತ್ತವನ್ನು ಕಡಿತಗೊಳಿಸುವುದಿಲ್ಲ.

ನಿವೃತ್ತಿಯ ನಂತರ, ಸರ್ಕಾರಿ ನೌಕರರು ಪಿಂಚಣಿ ಮೊತ್ತವನ್ನು ಮತ್ತು ತುಟ್ಟಿಭತ್ಯೆಯ (ಡಿಎ) ಪರಿಷ್ಕರಣೆಯ ಪ್ರಯೋಜನವನ್ನು ವರ್ಷಕ್ಕೆ ಎರಡು ಬಾರಿ ಪಡೆಯುತ್ತಾರೆ.

ಅವರು ತಮ್ಮ ಕೊನೆಯ ಸಂಬಳ ಮತ್ತು ಡಿಎ ಆಧಾರದ ಮೇಲೆ ಪಿಂಚಣಿಗಳನ್ನು ಪಡೆಯುವುದರಿಂದ, ವರ್ಷಕ್ಕೆ ಎರಡು ಬಾರಿ ಡಿಎ ಹೆಚ್ಚಾದಾಗ ಅವರ ಪಿಂಚಣಿ ಹೆಚ್ಚಾಗುತ್ತದೆ. ಆದರೆ, ಒಪಿಎಸ್ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯಿಸುತ್ತದೆ.



logoblog

Thanks for reading OLD PENSION SCHEME REG...

Previous
« Prev Post

No comments:

Post a Comment