SSLC ಗಣಿತ ಪರೀಕ್ಷೆಯಲ್ಲಿ ಅತಿಹೆಚ್ಚು ಮಾರ್ಕ್ಸ್ ಗಳಿಸಲು ಈ ರೀತಿ ಓದಿರಿ..
ಗಣಿತ ಎಂದರೆ ಭಯ ಪಡುವ ವಿದ್ಯಾರ್ಥಿಗಳೇ ಹೆಚ್ಚು. ಆದರೆ ನಿರಂತರ ಅಭ್ಯಾಸದಿಂದ ಯಾವುದೇ ಸಮಸ್ಯೆಯನ್ನು ಬಗೆಹರಿಸಬಹುದು, ಸುಲಭಗೊಳಿಸಿಕೊಳ್ಳಬಹುದು ಎಂಬುದು ಅವರಿಗೆ ತಿಳಿದಿಲ್ಲ. ನಿರಂತರ ಅಭ್ಯಾಸದ ಮಹತ್ವವು ತಿಳಿದಿರುವುದಿಲ್ಲ. ಆದ್ದರಿಂದ ಇಂದಿನ ಲೇಖನದಲ್ಲಿ ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆಗೆ ಉತ್ತಮ ತಯಾರಿ ಹೇಗಿರಬೇಕು ಎಂದು ಇಲ್ಲಿ ಸರಳವಾಗಿ ತಿಳಿಸಲಾಗಿದೆ.
ಗಣಿತ ವಿಷಯ ಎಂಬುದು ಸಂಪೂರ್ಣವಾಗಿ ಕಷ್ಟಕರ ಸಬ್ಜೆಕ್ಟ್ ಅಲ್ಲವೇ ಅಲ್ಲ. ಇಂಗ್ಲಿಷ್‌ನಲ್ಲಿ ನಾಣ್ಣುಡಿ ಒಂದಿದೆ. 'Practice Makes a Man Perfectness' ಎಂದು. ಇದರ ಅರ್ಥ 'ನಿರಂತರ ಅಭ್ಯಾಸದಿಂದ ಮನುಷ್ಯ ಪರಿಪೂರ್ಣನಾಗುತ್ತಾನೆ' ಎಂದು. ಅಂದರೆ ಯಾವುದೇ ಕಠಿಣವಾದುದನ್ನು ಪ್ರತಿದಿನ ಅಭ್ಯಾಸ ಮಾಡುವ ಮೂಲಕ ಸುಲಭಗೊಳಿಸಿಕೊಳ್ಳಬಹುದು ಎಂದರ್ಥ. ಗಣಿತ ವಿಷಯದಲ್ಲಿ ವಿದ್ಯಾರ್ಥಿಗಳೆಲ್ಲರೂ ಸಹ ಇದನ್ನು ಬಲವಾಗಿ ಅನ್ವಯಿಸಬೇಕು ಅಷ್ಟೆ. ನಿರಂತರವಾಗಿ ಅನ್ವಯಿಸಬೇಕು ಅಷ್ಟೆ. ದಿನನಿತ್ಯವು ಸಹ ಕನಿಷ್ಠ 1 ರಿಂದ 2 ಗಂಟೆಗಳಕಾಲ ನಿಮ್ಮ ಬುಕ್‌ಗಳನ್ನು ನೋಡುವ ಮೂಲಕ, ಅಭ್ಯಾಸ ಮಾಡುವ ಮೂಲಕ ಕಠಿಣ ಗಣಿತ ಸಮಸ್ಯೆ / ಸಮೀಕರಣ / ಸೂತ್ರಗಳು / ಲೆಕ್ಕಗಳನ್ನು ಬಿಡಿಸುವ ವಿಧಾನವನ್ನು ಸರಳಗೊಳಿಸಿಕೊಳ್ಳಬಹುದು.
ನೀವು 2023-24ನೇ ಸಾಲಿನ ಮಾರ್ಚ್ ತಿಂಗಳಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಬರೆಯುವವರಾಗಿದ್ದಲ್ಲಿ, ಗಣಿತ ಪರೀಕ್ಷೆಯನ್ನು ಸುಲಭವಾಗಿ ಗೆಲ್ಲಲು, ಹೆಚ್ಚು ಅಂಕಗಳನ್ನು ಗಳಿಸಲು ಈ ಕೆಳಗಿನ ಟಿಪ್ಸ್‌ಗಳನ್ನು ಫಾಲೋ ಮಾಡಿ ಸಾಕು.
ಗಣಿತವನ್ನು ಕಬ್ಬಿಣದ ಕಡಲೆ ಎಂದು ಕರೆಯುತ್ತಾರೆ. ಹಾಗಂದ ಮಾತ್ರಕ್ಕೆ ಅಷ್ಟೊಂದು ಕಠಿಣ ಸಬ್ಜೆಕ್ಟ್ ಇದಲ್ಲ. ಆದ್ದರಿಂದ ಗಣಿತ ಎಂದರೆ ಭಯಬೀತರಾಗದಿರಿ, ಒತ್ತಡ ಹಾಕಿಕೊಳ್ಳಬೇಡಿ. ಶಾಂತವಾಗಿದ್ದು ಏನನ್ನಾದರೂ ಗೆಲ್ಲಬಹುದು ಎಂಬುದರಲ್ಲಿ ನಂಬಿ, ಪರೀಕ್ಷೆ ಬರೆಯಿರಿ. ನೀವು ಅದ್ಭುತವನ್ನು ಕ್ರಿಯೇಟ್ ಮಾಡಬಲ್ಲಿರಿ. ಗಣಿತ ಪರೀಕ್ಷೆಗೆ ಉತ್ತಮ ತಯಾರಿಯ ಹಂತಗಳನ್ನು ಕೆಳಗಿನಂತೆ ಓದಿಕೊಂಡು, ಹಾಗೆಯೇ ಫಾಲೋ ಮಾಡಿ.
ಯಾವುದೇ ಇತರೆ ಸಬ್ಜೆಕ್ಟ್‌ನ ಓದು / ಬರಹದ ಪ್ಲಾನ್ ಇದ್ದರೂ ಸಹ ಮಿಸ್ ಮಾಡದೇ ಗಣಿತವನ್ನು ಸ್ವಲ್ಪ ಸಮಯದವರೆಗಾದರೂ ಮಿಸ್ ಮಾಡದೇ ಅಭ್ಯಾಸ ಮಾಡಿರಿ. ಗಣಿತವನ್ನು ಸುಲಭಗೊಳಿಸಿಕೊಳ್ಳಲು ಇದೇ ಗೋಲ್ಡನ್ ರೂಲ್. ಗಣಿತವನ್ನು ಸುಲಭಗೊಳಿಸಿಕೊಳ್ಳುವ ಏಕಮಾತ್ರ ಮಾರ್ಗವೆಂದರೆ ಪ್ರತಿದಿನ ಗಣಿತದಲ್ಲಿ ಏನಾದರೂ ಒಂದು ಸಮಸ್ಯೆಯನ್ನು ಅಭ್ಯಾಸ ಮಾಡುವುದು.
ನಿಮ್ಮ ಪರೀಕ್ಷೆ ಬೋರ್ಡ್ ನೀಡಿರುವ ಗಣಿತ ಬುಕ್ ಅನ್ನು ಅಲ್ಲಿ ನೀಡಿರುವ ಪ್ರತಿ ಉದಾಹರಣೆಯೊಂದಿಗೆ, ಲೆಕ್ಕಗಳೊಂದಿಗೆ ಮೊದಲು ಓದಿಕೊಳ್ಳಿ. ಅದು ಕರ್ನಾಟಕ ಬೋರ್ಡ್ ಆಗಿರಬಹುದು, ಸಿಬಿಎಸ್‌ಇ ಬೋರ್ಡ್ ಪಠ್ಯವಾಗಿರಬಹುದು. ಹೆಚ್ಚಿನ ಲೆಕ್ಕಗಳನ್ನು ಕಲಿಯಲು ಇತರೆ ಹೆಚ್ಚುವರಿ ಗೈಡ್ ಗಳನ್ನು ಬಳಸಿ. ಶೇಕಡ.95 ರಷ್ಟು ಪ್ರಶ್ನೆಗಳನ್ನು ನಿಮ್ಮ ಪಠ್ಯದ ಆಧಾರಿತವಾಗಿಯೇ ರಚಿಸಲಾಗಿರುತ್ತದೆ. ಆದ್ದರಿಂದ ಭಯ ಪಡುವುದು ಬೇಡ.
ಪರೀಕ್ಷೆ ಪತ್ರಿಕೆ ಮಾದರಿಯನ್ನು ಮೊದಲು ಪೂರ್ಣವಾಗಿ ನೋಡಿಕೊಳ್ಳಿ. ಯಾವೆಲ್ಲ ವಿಭಾಗಗಳಲ್ಲಿ ಎಷ್ಟು ಪ್ರಶ್ನೆಗಳಿಗೆ, ಎಷ್ಟು ಅಂಕದ ಯಾವ ಪ್ರಶ್ನೆಗಳಿವೆ, ಯಾವುದು ಅತಿಮುಖ್ಯ, ಕಡ್ಡಾಯವಾಗಿ ಯಾವೆಲ್ಲ ಚಾಪ್ಟರ್‌ಗಳಲ್ಲಿ ಹೆಚ್ಚು ಅಂಕದ ಪ್ರಶ್ನೆ ಕೇಳಲಾಗುತ್ತದೆ ಎಂದು ತಿಳಿದುಕೊಳ್ಳಿ. ಉದಾಹರಣೆಗೆ - ಪ್ರಮೇಯಗಳು, ರೇಖಾಗಣಿತದ ಪ್ರಶ್ನೆಗಳು, ಹೆಚ್ಚು ಅಂಕದ ಸಮೀಕರಣಗಳು. ಇವುಗಳ ಮೇಲೆ ಹೆಚ್ಚು ಅಭ್ಯಾಸ ಮಾಡಿ, ಬರೆದು ಬರೆದು ಕಲಿಯುವ ಮೂಲಕ ಸುಲಭಗೊಳಿಸಿಕೊಳ್ಳಿ. ಗಣಿತವನ್ನು ಗೆಲ್ಲಲು ಸೂತ್ರಗಳನ್ನು ದೀರ್ಘಕಾಲ ನೆನಪಿನಲ್ಲಿ ಇಡುವುದು, ಅವುಗಳನ್ನು ಅನ್ವಯಿಸುವ ಕಲೆಯೇ ಅತಿಮುಖ್ಯವಾಗಿದೆ.
ಸಾಧ್ಯವಾದಷ್ಟು ಹೆಚ್ಚು ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳು, ಸ್ಯಾಂಪಲ್ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ. ಅಲ್ಲಿ ಕಷ್ಟವಾಗುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ವಿಧಾನವನ್ನು ಶಿಕ್ಷಕರಲ್ಲಿ ಕೇಳಿ ತಿಳಿಯಿರಿ.
ನಿಮಗೆ ಕಷ್ಟ ಎನಿಸುವ ಗಣಿತ ಅಧ್ಯಾಯಗಳು / ಲೆಕ್ಕಗಳನ್ನು ಮೊದಲು ಆದ್ಯತೆ ನೀಡಿ ಕಲಿಯಿರಿ. ಪರೀಕ್ಷೆ ಹತ್ತಿರದ ದಿನಗಳಲ್ಲಿ ಇವುಗಳನ್ನು ಕಲಿಯಲು ಹೋದಲ್ಲಿ, ಒತ್ತಡ ಉಂಟಾಗಬಹುದು. ಒಂದೊಂದೆ ಚಾಪ್ಟರ್‌ಗಳನ್ನು ತೆಗೆದುಕೊಂಡು, ಪರಿಪೂರ್ಣವಾಗಿ ಅರ್ಥ ಮಾಡಿಕೊಂಡು, ಅಭ್ಯಾಸ ಮಾಡಿ ಮುಗಿಸಬೇಕು.
ಎಲ್ಲ ವಿಧದ ಲೆಕ್ಕಗಳನ್ನು ಪ್ರತಿ ಸೂತ್ರಗಳಿಗೆ, ಕಾನ್‌ಸೆಪ್ಟ್‌ಗಳಿಗೆ ಸಂಬಂಧಿಸಿದಂತೆ ಬಿಡಿಸಬೇಕು
ನಿಮಗೆ ಸರಿಯಾಗಿ ಅರ್ಥವಾಗದ, ಕೆಲವು ವೇಳೆ ತರಗತಿಗೆ ಹೋಗದೆ ಮಿಸ್ ಮಾಡಿಕೊಂಡ ಚಾಪ್ಟರ್ / ಲೆಕ್ಕಗಳ ಕಡೆ ಗಮನಹರಿಸಿ ಅಭ್ಯಾಸ ಮಾಡಲು ಮರೆಯದಿರಿ. ಪ್ರತಿ ದಿನವು ಸಹ ನೀವು ಅಭ್ಯಾಸ ಮಾಡುವಾಗ ಸಮಯದ ಮೇಲೆ ಗಮನವಿರಲಿ. ಪ್ರತಿ ಸಮಸ್ಯೆ ಬಿಡಿಸಲು ಎಷ್ಟು ಅವಧಿ ತೆಗೆದುಕೊಳ್ಳುತ್ತಿದ್ದೀರಾ ಎಂದು ಗಮನಿಸಿಕೊಳ್ಳಿ. ಇದರಿಂದ ನಿಮ್ಮ ವಾರ್ಷಿಕ ಪರೀಕ್ಷೆಗೆ ಸಮಯ ನಿರ್ವಹಣೆಗೆ ಸಹಾಯವಾಗುತ್ತದೆ.
ಗಣಿತ ಪರೀಕ್ಷೆ ಗೆಲ್ಲಲು ಅತಿಮುಖ್ಯವಾಗಿ ನೀವು ಪ್ರತಿ ಸೂತ್ರಗಳನ್ನು ಸಹ ಕಲಿತಿರಬೇಕು. ಒಂದೇ ಒಂದು ಸೂತ್ರ ನೆನಪಿಗೆ ಬರದಿದ್ದರೂ ಸಹ ಪರೀಕ್ಷೆಯಲ್ಲಿ ಉತ್ತರಿಸಲು ಆಗುವುದಿಲ್ಲ. ಆದ್ದರಿಂದ ಪ್ರತಿ ಸೂತ್ರವನ್ನು ಅನ್ವಯಿಸುವ ಲೆಕ್ಕಗಳನ್ನು ಬಿಡಿಸಿರಬೇಕು. ಅಭ್ಯಾಸ ಮಾಡಿರಬೇಕು. ನೀವು ಸೂತ್ರಗಳನ್ನು ಮರೆಯಬಾರದು ಎಂದರೆ ಎಲ್ಲ ಚಾಪ್ಟರ್‌ಗಳ ಅತಿಮುಖ್ಯ ಸೂತ್ರಗಳನ್ನು ಒಂದು ಕಡೆ ಬರೆದುಕೊಂಡು, ನೀವು ಓದುವ ಕೋಣೆಯಲ್ಲಿ ಒಂದು ಕಡೆ ಅಂಟಿಸಿಕೊಳ್ಳಿ. ಆಗಾಗ ಈ ಸೂತ್ರಗಳನ್ನು ನೋಡಿಕೊಳ್ಳಿ. ಪರೀಕ್ಷೆಗೆ ಒಂದು ತಿಂಗಳ ಮುಂಚೆ ಪುನರಾವರ್ತನೆ ಮಾಡುವುದನ್ನಂತು ಮರೆಯದಿರಿ.
ಈ ಮೇಲಿನ ಸಲಹೆಗಳನ್ನು ಗಮನದಲಿಟ್ಟುಕೊಂಡು ಗಣಿತವನ್ನು ಅಧ್ಯಯನ ಮಾಡಿದರೆ ಗಣಿತ ಪಾಸ್ ಮಾಡುವುದು ಮಾತ್ರವಲ್ಲ, ಔಟ್ ಆಫ್ ಔಟ್ ಅಂಕಗಳಿಸುವುದು ಸುಲಭ.
ಹಿಂದಿನ ವರ್ಷದ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆಗಳು, ಮಾದರಿ ಪತ್ರಿಕೆಗಳು, ಪ್ರಶ್ನೆ ಬ್ಯಾಂಕ್‌ಗಳು ಮತ್ತು ಕರ್ನಾಟಕ 10 ನೇ ತರಗತಿಯ ಗಣಿತ ಪರೀಕ್ಷೆಗೆ ಪ್ರಮುಖ ಟಿಪ್ಪಣಿಗಳನ್ನು ನಕಲಿಸಿದ PDF ಅನ್ನು ಡೌನ್‌ಲೋಡ್ ಮಾಡಿ. ಪರೀಕ್ಷೆಯು ಏಪ್ರಿಲ್ 03, 2023 ರಂದು ನಡೆಯಲಿದೆ . ಪತ್ರಿಕೆಗಳು ಮತ್ತು ಸಾಮಗ್ರಿಗಳು ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಮರಾಠಿ, ಉರ್ದು ಮತ್ತು ಕನ್ನಡ ಮಾಧ್ಯಮದ ಆವೃತ್ತಿಗಳಲ್ಲಿ ಲಭ್ಯವಿದೆ.
ಕರ್ನಾಟಕ ಬೋರ್ಡ್ (KSEEB) 10 ನೇ ತರಗತಿಯ ಗಣಿತದ ಕಳೆದ 5 ವರ್ಷದ ಪ್ರಶ್ನೆ ಪತ್ರಿಕೆ ಪರಿಹಾರಗಳೊಂದಿಗೆ - ಉಚಿತ PDF ಡೌನ್‌ಲೋಡ್
ವೇದಾಂತುವಿನಲ್ಲಿ, ನೀವು ಎಷ್ಟು ಹೆಚ್ಚು ಅಭ್ಯಾಸ ಮಾಡುತ್ತೀರೋ, ನೀವು ಪರೀಕ್ಷೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತೀರಿ ಎಂದು ನಾವು ನಂಬುತ್ತೇವೆ. ಅದಕ್ಕಾಗಿಯೇ ನಾವು ಕರ್ನಾಟಕ ಎಸ್‌ಎಸ್‌ಎಲ್‌ಸಿ ಬೋರ್ಡ್ ಗಣಿತ ತರಗತಿ 10 ಅನ್ನು ಕಳೆದ 5 ವರ್ಷದ ಪ್ರಶ್ನೆ ಪತ್ರಿಕೆ PDF ಅನ್ನು ಇಲ್ಲಿ ಒದಗಿಸಿದ್ದೇವೆ ಇದರಿಂದ ನೀವು ಪ್ರಶ್ನೆ ಪತ್ರಿಕೆಯ ಮಾದರಿಯೊಂದಿಗೆ ಸಂಪೂರ್ಣವಾಗಿರುತ್ತೀರಿ. ಕರ್ನಾಟಕ ಮಂಡಳಿಯ 10 ನೇ ತರಗತಿಯ ಗಣಿತದ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಈ ಪತ್ರಿಕೆಗಳು ತಿಳಿಸುವ ಪ್ರಮುಖ ಅಂಶವೆಂದರೆ ಸಮಯದ ನಿರ್ವಹಣೆ. ಅನೇಕ ವಿದ್ಯಾರ್ಥಿಗಳು ಕಷ್ಟಪಟ್ಟು ಅಧ್ಯಯನ ಮಾಡುತ್ತಾರೆ ಮತ್ತು ಪರಿಕಲ್ಪನೆಗಳನ್ನು ಚೆನ್ನಾಗಿ ಕಲಿತರು, ಆದರೆ ಇನ್ನೂ ಪತ್ರಿಕೆಗೆ ಉತ್ತರಿಸಲು ಕಷ್ಟಪಡುವುದನ್ನು ನಾವು ನೋಡಿದ್ದೇವೆ.
10 ನೇ ತರಗತಿಯ ಗಣಿತದ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಪರಿಹರಿಸುವುದು ವಿದ್ಯಾರ್ಥಿಗೆ ಪತ್ರಿಕೆಯ ಸ್ವರೂಪವನ್ನು ಮೊದಲೇ ಪರಿಚಯಿಸುತ್ತದೆ. ಸಮಯಕ್ಕೆ ಸರಿಯಾಗಿ ಮುಗಿಸಲು ಹೆಣಗಾಡುತ್ತಿರುವ ವಿದ್ಯಾರ್ಥಿಗಳು ಈ ಪೇಪರ್‌ಗಳನ್ನು ಆದಷ್ಟು ಬೇಗ ಪರಿಹರಿಸಲು ಪ್ರಾರಂಭಿಸಲು ಸಲಹೆ ನೀಡಲಾಗುತ್ತದೆ ಇದರಿಂದ ಅವರು ಹಿಂದುಳಿಯುವುದಿಲ್ಲ. ನಮ್ಮ ಹೆಚ್ಚು ಅರ್ಹತೆ ಹೊಂದಿರುವ ಶಿಕ್ಷಕರು ಈ ಕರ್ನಾಟಕ ಬೋರ್ಡ್ ಕ್ಲಾಸ್ 10 ಗಣಿತವನ್ನು ಕಳೆದ ವರ್ಷಗಳ ಪ್ರಶ್ನೆ ಪತ್ರಿಕೆಯನ್ನು ಸಂಗ್ರಹಿಸಿದ್ದಾರೆ ಮತ್ತು ಉಚಿತ ಡೌನ್‌ಲೋಡ್‌ಗೆ ಲಭ್ಯವಿರುವ PDF ಸ್ವರೂಪದಲ್ಲಿ ಮಾದರಿ ಪೇಪರ್‌ಗಳ ಸೆಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.
No comments:
Post a Comment