Wednesday, November 22, 2023

Information from education experts about SSLC students writing procedure and final exam preparation...

  Wisdom News       Wednesday, November 22, 2023
Hedding ; Information from education experts about SSLC students writing procedure and final exam preparation...

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಈ ಪೂರ್ವ ಸಿದ್ಧತಾ ಪರೀಕ್ಷೆ ಬೂಸ್ಟರ್ ಪರೀಕ್ಷೆಯಾಗಿದೆ. ಮೊದಲ ಬಾರಿಗೆ ವಾರ್ಷಿಕ ಪರೀಕ್ಷೆಗೆ ಹಾಜರಾಗುವ ಮಕ್ಕಳಿಗೆ ಆತ್ಮವಿಶ್ವಾಸ ತುಂಬಲು ಈ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಈಗಾಗಲೇ ತಯಾರಿ ಆರಂಭಿಸಿದ್ದಾರೆ. ಪೂರ್ವ ಸಿದ್ಧತಾ ಪರೀಕ್ಷೆ ಆರಂಭವಾಗಲು ವೇಳಾಪಟ್ಟಿಯ ಪ್ರಕಾರ ಕೇವಲ 8 ದಿನಗಳು ಮಾತ್ರ ಬಾಕಿ ಉಳಿದಿವೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ ಫೆಬ್ರುವರಿ 23,2023 ರಿಂದ ಆರಂಭವಾಗಲಿವೆ. ವಾರ್ಷಿಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ಬೂಸ್ಟರ್ ಪರೀಕ್ಷೆಯಾಗಿದೆ. ಮೊದಲ ಬಾರಿಗೆ ವಾರ್ಷಿಕ ಪರೀಕ್ಷೆಗೆ ಹಾಜರಾಗುವ ಮಕ್ಕಳಿಗೆ ಆತ್ಮವಿಶ್ವಾಸ ತುಂಬಲು ಈ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಉಳಿದ 8 ದಿನಗಳಲ್ಲಿ ಪೂರ್ವ ಸಿದ್ಧತಾ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಹೇಗೆ ತಯಾರಿ ನಡೆಸಬೇಕು ಎನ್ನುವ ಕುರಿತು ಕೆಲವು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ.

ಪ್ರಶ್ನೆಪತ್ರಿಕೆಯ ಸ್ವರೂಪ ತಿಳಿದುಕೊಳ್ಳಿ...
ಪೂರ್ವ ಸಿದ್ಧತಾ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳು ಮೊದಲು ಪ್ರಶ್ನೆಪತ್ರಿಕೆಗಳ ಮಾದರಿಯನ್ನು ತಿಳಿದುಕೊಳ್ಳಿ. ಅದಕ್ಕಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಾದರಿ ಪ್ರಶ್ನೆಪತ್ರಿಕೆಗಳನ್ನು ಪ್ರಕಟ ಮಾಡಲಾಗಿದೆ. ಅವುಗಳನ್ನು ಡೌನ್‌ಲೋಡ್‌ ಮಾಡಿಕೊಂಡಿ ಅವುಗಳನ್ನು ಅಧ್ಯಯನ ಮಾಡಿ. ಆ ಪ್ರಶ್ನೆಪತ್ರಿಕೆಗಳನ್ನು ಅಧ್ಯಯನ ಮಾಡುವುದರಿಂದ ಯಾವ ಪಠ್ಯದಿಂದ ಯಾವ ಪ್ರಶ್ನೆಗಳು, ಎಷ್ಟು ಅಂಕದ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎನ್ನುವ ಮಾಹಿತಿ ಸಿಗುತ್ತದೆ. ಈ ಆಧಾರದ ಮೇಲೆ ಅಧ್ಯಯನ ಮಾಡಿ.

ಹಳೆಯ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅಧ್ಯಯನ ಮಾಡಿ...
ಹಳೆಯ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಅಧ್ಯಯನ ಮಾಡಿ. ಹಳೆಯ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳು ವಾರ್ಷಿಕ ಪರೀಕ್ಷೆ ಮತ್ತು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಬರೆಯಲು ಅನುಕೂಲವಾಗುತ್ತದೆ. ಹಾಗೂ ಪರೀಕ್ಷೆಗಳ ಮೇಲಿನ ಭಯವನ್ನು ಹೋಗಲಾಡಿಸುತ್ತದೆ. ಅಲ್ಲದೆ ಪ್ರಶ್ನೆ ಪತ್ರಿಕೆಯ ಸ್ವರೂಪ ಮತ್ತು ಯಾವ ಪಾಠದಿಂದ ಎಷ್ಟು ಪ್ರಶ್ನೆಗಳು ಬರುತ್ತವೆ ಎನ್ನುವ ಒಂದು ಐಡಿಯಾ ಸಿಕ್ಕಂತಾಗಿದೆ. ಇನ್ನು ಹೆಚ್ಚಿಗೆ ತಿಳಿಯಲು ವಿದ್ಯಾರ್ಥಿಗಳು ಹಳೆಯ ಪ್ರಶ್ನೆ ಪತ್ರಿಕೆ ಮತ್ತು ಮಾದರಿ ಪ್ರಶ್ನೆಪತ್ರಿಕೆಗಳನ್ನು ಅಧ್ಯಯನ ಮಾಡಿ. ಈ ಪ್ರಶ್ನೆಪತ್ರಿಕೆಗಳು ನಿಮ್ಮ ವಾರ್ಷಿಕ ಪರೀಕ್ಷೆಗೆ ದಾರಿ ದೀಪವಾಗುತ್ತವೆ. ಅವುಗಳ ಸಹಾಯದಿಂದ ತಯಾರಿ ನಡೆಸಬಹುದು.

ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ತಪ್ಪಿಸಬೇಡಿ...
ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ತಪ್ಪಿಸಬೇಡಿ. ಇವು ನೀವು ವಾರ್ಷಿಕ ಪರೀಕ್ಷೆ ಎದುರಿಸಲು ಈ ಪರೀಕ್ಷೆಗಳು ಬೂಸ್ಟರ್ ಡೋಸ್‌ ಇದ್ದಂತೆ. ಈಗಾಗಲೇ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಪಠ್ಯ ಮುಗಿದ ಕಾರಣ ಒಂದೆರೆಡು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಗಳು ಯಾವ ಕಾರಣಕ್ಕೂ ಈ ಪರೀಕ್ಷೆಗಳನ್ನು ತಪ್ಪಿಸಿಕೊಳ್ಳಬೇಡಿ. ಮುಖ್ಯ ಪರೀಕ್ಷೆಗೆ ನಡೆಸುವ ತಾಲಿಮು ಇದು. ಇಲ್ಲಿ ನೀವು ನಿಮ್ಮ ತಪ್ಪುಗಳನ್ನು ಸುಧಾರಿಸಿಕೊಳ್ಳಲು ಅನುಕೂಲವಾಗುತ್ತದೆ. ನೀವು ಹೇಗೆ ಉತ್ತರ ಬರೆಯಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದು. ಹಾಗಾಗಿ ತಪ್ಪದೆ ಪೂರ್ವ ಸಿದ್ಧತಾ ಪರೀಕ್ಷೆಗೆ ಹಾಜರಾಗಿ.


ಹೆಚ್ಚು ಹೆಚ್ಚು ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳಿ...
ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಲ್ಲಿ ನಡೆಸುವ ಪೂರ್ವ ಸಿದ್ಧತಾ ಪರೀಕ್ಷೆ ತಯಾರಿ ಜೊತೆಗೆ ವಾರ್ಷಿಕ ಪರೀಕ್ಷೆಗೂ ಸಿದ್ಧತೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಆದ್ದರಿಂದ ವಿದ್ಯಾರ್ತಿಗಳು ಪೂರ್ವ ಸಿದ್ಧತಾ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಅಣುಕು ಪರೀಕ್ಷೆಗಳನ್ನು ತೆಗೆದುಕೊಳ್ಳುವುದು ಹೆಚ್ಚು ಉಪಯುಕ್ತವಾಗಿದೆ. ವಿದ್ಯಾರ್ಥಿಗಳು ಅಧ್ಯಯನ ಮಾಡುವಾಗ ಸ್ವತಃ ಮನೆಯಲ್ಲಿ ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳಿ. ಅಣಕು ಪರೀಕ್ಷೆಯನ್ನು ಬರೆದ ನಂತರ ನಿಮ್ಮ ಉತ್ತರಗಳನ್ನು ನೀವೇ ಅವಲೋಕಿಸಿಕೊಳ್ಳಿ. ಇದರಿಂದ ನಿಮ್ಮ ಆತ್ಮಸ್ಥೈರ್ಯ, ಭರವಸೆ ಮತ್ತು ಪರೀಕ್ಷೆಯ ಬಗ್ಗೆ ನಿಮ್ಮ ಹಿಡಿತ ಹೆಚ್ಚುತ್ತದೆ. ಪ್ರತಿಯೊಂದು ಪಾಠದ ಮೇಲೆ ಅಣಕು ಪರೀಕ್ಷೆಗಳನ್ನು ತೆಗೆದುಕೊಂಡರೆ ಉತ್ತಮ.

ಇರುವ ಸಮಯವನ್ನು ಮೌಲ್ಯಯುತವಾಗಿ ಬಳಸಿಕೊಳ್ಳಿ...
ಪೂರ್ವ ಸಿದ್ಧತಾ ಪರೀಕ್ಷೆ ಜೊತೆಗೆ ವಾರ್ಷಿಕ ಪರೀಕ್ಷೆಗೆ ವಿದ್ಯಾರ್ಥಿಗಳು ಕಠಿಣ ತಯಾರಿ ನಡೆಸುವ ಅನಿವಾರ್ಯವಾಗಿದೆ. ವರ್ಷವಿಡಿ ಅಧ್ಯಯನ ಮಾಡಿ ಒಂದು ಹಂತಕ್ಕೆ ಬಂದಿರುವ ಸಮಯವಿದು. ಈ ಸಮಯ ನಿಮ್ಮ ಜೀವನವನ್ನು ರೂಪಿಸಿಕೊಳ್ಳಲು ಉತ್ತಮವಾದ ಆಯ್ಕೆಯಾಗಿದೆ. ಈ ಅವಧಿಯನ್ನು ಚೆನ್ನಾಗಿ ಬಳಕೆ ಮಾಡಿಕೊಂಡು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಕಡೆ ಹೆಚ್ಚು ಗಮನ ನೀಡಿ. ಈ ಸಮಯದಲ್ಲಿ ಬೇರೆ ಯಾವುದೇ ವಿಚಾರಕ್ಕೆ ಸಮಯ ವ್ಯರ್ಥ ಮಾಡದೇ ಕೇವಲ ಪರೀಕ್ಷೆ ದೃಷ್ಟಿಯಿಂದ ಅಧ್ಯಯನ ಮಾಡಿ ಸಮಯವನ್ನು ಬಳಸಿಕೊಳ್ಳಿ. ಪರೀಕ್ಷೆಗೆ ಕಡಿಮೆ ಸಮಯ ಉಳಿದಿರುವ ಕಾರಣ, ಈ ಸಮಯದ ಪ್ರಾಮಾಣಿಕ ಓದು ಅಂತಿಮ ಪರೀಕ್ಷೆಯಲ್ಲಿ ನಿಮ್ಮ ಕೈ ಹಿಡಿಯುತ್ತದೆ.

ಕಷ್ಟದ ವಿಷಯಗಳನ್ನು ಹೆಚ್ಚು ಅಧ್ಯಯನ ಮಾಡಿ...
ಈಗ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾ ಪರೀಕ್ಷೆಯ ಜೊತೆಗೆ ವಾರ್ಷಿಕ ಪರೀಕ್ಷೆ ತಯಾರಿಗೆ ಹೆಚ್ಚು ಸಮಯ ಉಳಿದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡುವ ಅವಶ್ಯಕತೆ ಇದೆ. ವಿದ್ಯಾರ್ಥಿಗಲು ನಿಮಗೆ ಕಷ್ಟ ಎನಿಸುವ ವಿಷಯಗಳನ್ನು ಹೆಚ್ಚು ಸಮಯ ನೀಡಿ, ಅಧ್ಯಯನ ಮಾಡಿ. ನಿಮಗೆ ಕಠಿಣವಲ್ಲದ ವಿಷಯಗಳ ಅಧ್ಯಯನಕ್ಕೆ ಕಡಿಮೆ ಅವಧಿಯನ್ನು ನೀಡಿ. ಏಕೆಂದರೆ ನಿಮಗೆ ಕಷ್ಟ ಎನಿಸಿದ ವಿಷಯಗಳಲ್ಲಿ ಕಡಿಮೆ ಅಂಕ ಬಂದರೆ ಅದು ನಿಮ್ಮ ಒಟ್ಟಾರೆ ಫಲಿತಾಂಶದ ಮೇಲೆ ಪರಿಣಾಮ ಬಿರಲಿದೆ. ಅದಕ್ಕಾಗಿ ವಿದ್ಯಾರ್ಥಿಗಳು ಬಹಳ ಜಾಗೃತಿಯಿಂದ ಅಧ್ಯಯನ ಮಾಡಿ.

ಈಗಾಗಲೇ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಪಠ್ಯ ಮುಗಿದ ಕಾರಣ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಗಳು ಯಾವ ಕಾರಣಕ್ಕೂ ಈ ಪರೀಕ್ಷೆಗಳನ್ನು ತಪ್ಪಿಸಿಕೊಳ್ಳಬೇಡಿ. ಮುಖ್ಯ ಪರೀಕ್ಷೆಗೆ ನಡೆಸುವ ತಾಲಿಮು ಇದು. ಇಲ್ಲಿ ನೀವು ನಿಮ್ಮ ತಪ್ಪುಗಳನ್ನು ಸುಧಾರಿಸಿಕೊಳ್ಳಲು ಅನುಕೂಲವಾಗುತ್ತದೆ.

ವರ್ಷವಿಡಿ ಅಧ್ಯಯನ ಮಾಡಿ ಒಂದು ಹಂತಕ್ಕೆ ಬಂದಿರುವ ಸಮಯವಿದು. ಈ ಸಮಯ ನಿಮ್ಮ ಜೀವನವನ್ನು ರೂಪಿಸಿಕೊಳ್ಳಲು ಉತ್ತಮವಾದ ಆಯ್ಕೆಯಾಗಿದೆ. ಎಷ್ಟೋ ಜನರು ಈ ಅವಧಿಯನ್ನು ಚೆನ್ನಾಗಿ ಬಳಕೆ ಮಾಡಿಕೊಂಡು ಪರೀಕ್ಷೆಯಲ್ಲಿ ಗೆದ್ದವರು ತುಂಬಾ ಜನ ಇದ್ದಾರೆ. ಹಾಗಾಗಿ ಬೇರೆ ಯಾವುದೇ ವಿಚಾರಕ್ಕೆ ಸಮಯ ವ್ಯರ್ಥ ಮಾಡದೇ ಕೇವಲ ಪರೀಕ್ಷೆ ದೃಷ್ಟಿಯಿಂದ ಅಧ್ಯಯನ ಮಾಡಿ ಸಮಯವನ್ನು ಬಳಸಿಕೊಳ್ಳಿ. ಪರೀಕ್ಷೆಗೆ ಕಡಿಮೆ ಸಮಯ ಉಳಿದಿರುವ ಕಾರಣ, ಈ ಸಮಯದ ಪ್ರಾಮಾಣಿಕ ಅಧ್ಯಯನ ಮಾಡಿ ಪರೀಕ್ಷೆಗೆ ತಯಾರಾಗಿ.

SSLC ಪೂರಕ ಪರೀಕ್ಷೆಗೆ ಕೇವಲ 15 ದಿನ ಮಾತ್ರ ಬಾಕಿ.. ಈಗ ತಯಾರಿ ಹೇಗಿರಬೇಕು? ಇಲ್ಲಿವೆ ಸಿಂಪಲ್‌ ಟಿಪ್ಸ್

ರಾಜ್ಯದಲ್ಲಿ 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮುಗಿದಿದ್ದು, ಫಲಿತಾಂಶವು ಬಂದಾಗಿದೆ. ಈ ಫಲಿತಾಂಶದಲ್ಲಿ ಕೆಲವು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು ಅಂತಹ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪೂರಕ ಪರೀಕ್ಷೆಯನ್ನು ನಡೆಸುತ್ತಿದೆ. ಈ ಪರೀಕ್ಷೆಯನ್ನು ಬರೆದು ವಿದ್ಯಾರ್ಥಿಗಳು ಉತ್ತೀರ್ಣರಾಗಬಹುದು. ಈಗ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಪೂರಕ ಪರೀಕ್ಷೆಗಳು ಜೂನ್‌ ತಿಂಗಳಲ್ಲಿ ನಡೆಯಲಿವೆ. ಪರೀಕ್ಷೆಯಲ್ಲಿ ಅನುತೀರ್ಣರಾದ ವಿದ್ಯಾರ್ಥಿಗಳು, ಈ ಪೂರಕ ಪರೀಕ್ಷೆಯನ್ನು ಬರೆಯಬಹುದಾಗಿದೆ. ಆದರೆ ಈ ಪರೀಕ್ಷೆಗೆ ಹಾಜರಾಗಲು ಸಿದ್ಧತೆ ಬಹಳ ಮುಖ್ಯ. ಈ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ ಹೇಗಿರಬೇಕು ಎನ್ನುವುದರ ಬಗ್ಗೆ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಇವುಗಳನ್ನು ಅನುಸರಿಸಿಕೊಂಡು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ.

ಪೂರಕ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳು ಗಮನಿಸಬೇಕಾದ ಮೊದಲ ಅಂಶವೆಂದರೆ, ನೀವು ಹಿಂದೆ ಮಾಡಿದ ತಪ್ಪುಗಳನ್ನ ಗಮನದಲ್ಲಿಟ್ಟುಕೊಂಡು ಅಧ್ಯಯನ ಮಾಡಿ. ನೀವು ಈಗಾಗಲೇ ಪರೀಕ್ಷೆಯನ್ನು ಬರೆದ ಅನುಭವವಿದೆ. ಹೀಗಾಗಿ ನಿಮ್ಮ ತಪ್ಪುಗಳನ್ನು ಗುರುತಿಸಿಕೊಳ್ಳಿ. ನೀವು ಮುಂಚೆ ಎಲ್ಲಿ ತಪ್ಪುಗಳನ್ನ ಮಾಡಿದ್ದೀರಿ ಎಂದು ಮನವರಿಕೆ ಮಾಡಿಕೊಳ್ಳಿ. ಆ ತಪ್ಪುಗಳನ್ನು ಗಮನದಲ್ಲಿಟ್ಟುಕೊಂಡು ಅಧ್ಯಯನ ಮಾಡಿ. ಆ ತಪ್ಪುಗಳು ಪುನರಾವರ್ತನೆ ಆಗದ ಹಾಗೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಿ.
ಪೂರಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು, ಯಾವ ವಿಷಯದಲ್ಲಿ ಕಡಿಮೆ ಅಂಕ ಬಂದಿವೆ ಆ ವಿಷಯಗಳ ಮೇಲೆ ಹೆಚ್ಚು ಫೋಕಸ್‌ ಮಾಡಿ. ಒಂದೇ ವಿಯಷದಲ್ಲಿ ಅನುತ್ತೀರ್ಣರಾದರೆ ಯಾವ ಸಮಸ್ಯೆಯಿಲ್ಲ. ಏಕೆಂದರೆ ಅದೇ ಒಂದು ವಿಷಯಕ್ಕೆ ತಯಾರಿ ಮಾಡಿಕೊಳ್ಳಿ. ಆದರೆ ಎರಡು- ಮೂರು ಅದಕ್ಕಿಂತ ಜಾಸ್ತಿ ವಿಷಯಗಳಲ್ಲಿ ಅನುತೀರ್ಣರಾಗಿದ್ದರೆ, ನಿಮಗೆ ಅದರಲ್ಲಿ ಯಾವ ವಿಷಯ ಬಹಳ ಕಠಿಣ ಎನಿಸುತ್ತದೆ, ಆ ವಿಷಯದ ಮೇಲೆ ಹೆಚ್ಚಿನ ಗಮನಹರಿಸಿ, ಅಧ್ಯಯನ ಮಾಡಿ.

ಯಾವುದೇ ಒಂದು ಪರೀಕ್ಷೆ ಉತ್ತೀರ್ಣರಾಗಬೇಕೆಂದರೆ ಕಠಿಣ ಅಧ್ಯಯನ ಬಹಳ ಮುಖ್ಯ. ಈಗಾಗಲೇ ನೀವು ಒಮ್ಮೆ ಅನುತೀರ್ಣರಾಗಿ ಮಾನಸಿಕವಾಗಿ ಒತ್ತಡದಲ್ಲಿರುತ್ತಿರಾ. ಅದನ್ನು ಕಡಿಮೆ ಮಾಡಿಕೊಂಡು, ಹೆಚ್ಚಿನ ಅಧ್ಯಯನ ಮಾಡಿ ಪರೀಕ್ಷೆಯನ್ನು ಪಾಸ್‌ ಮಾಡುವತ್ತ ಗಮನಹರಿಸಿ. ಹಾಗೇಯೆ ಒಳ್ಳೆಯ ವೇಳಾಪಟ್ಟಿಯನ್ನು ತಯಾರು ಮಾಡಿಕೊಂಡು, ಆ ವೇಳಾಪಟ್ಟಿ ಪ್ರಕಾರ ಅಧ್ಯಯನ ಮಾಡಿದ್ರೆ ಒಳ್ಳೆಯದು.

ಪರೀಕ್ಷೆ ಆರಂಭವಾಗಲು ಎಷ್ಟು ದಿನಗಳಿವೆ ಎಂದು ಲೆಕ್ಕ ಹಾಕಿ, ದಿನ 24 ಗಂಟೆಗಳನ್ನು ವಿಭಾಗಿಸಿಕೊಳ್ಳಬೇಕು. ಓದು, ನಿದ್ರೆ, ಊಟ, ಮನರಂಜನೆ, ನಿತ್ಯ ಕೆಲಸಗಳಿಗೆ ವೇಳಾಪಟ್ಟಿಯನ್ನು ತಯಾರಿಸಿಕೊಳ್ಳಿ. ನಿರಂತರ ಓದಬಾರದು. ಅದರ ಬದಲಾಗಿ ದಿನದ ನಾಲ್ಕು ಹೊತ್ತುಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿಕೊಳ್ಳಬೇಕು. ಅಂದರೆ ಬೆಳಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಸಮನಾಗಿ ನಾಲ್ಕು ಭಾಗಗಳನ್ನು ಮಾಡಿಕೊಂಡು ಈ ಟೈಮ್‌ ಟೇಬಲ್‌ ಪ್ರಕಾರ ಓದು, ಬರವಣಿಗೆ, ರಿವಿಜನ್‌ಗೆ ಸಮಯ ಮೀಸಲಿಡಿ.

ನೀವು ಪರೀಕ್ಷೆಗಳಲ್ಲಿ ಎದುರಿಸಹುದಾದ ಪ್ರಶ್ನೆಗಳ ಮಾದರಿ ಮತ್ತು ಪರಿಕಲ್ಪನೆಗಳ ಬಗ್ಗೆ ಈಗಾಗಲೇ ನಿಮಗೆ ಅರಿವಿದೆ. ಆದರೂ ಹಿಂದಿನ ವರ್ಷಗಳ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ. ಇದರಿಂದ ಪರೀಕ್ಷೆಯಲ್ಲಿ ಎಂತಹ ಪ್ರಶ್ನೆಗಳು ಬರಬಹುದು ಎನ್ನುವ ಸಂಪೂರ್ಣ ಕಲ್ಪನೆ ನಿಮ್ಮ ಅರಿವಿಗೆ ಬರುತ್ತದೆ. ಹಾಗಾಗಿ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಹೆಚ್ಚು ಹೆಚ್ಚು ಬಿಡಿಸುವುದು ಉತ್ತಮ. ನೀವು ಹಿಂದೆ ಎದುರಿಸಿದ ಪ್ರಶ್ನೆ ಪತ್ರಿಕೆ ನಿಮ್ಮ ಬಳಿ ಇದ್ದರೆ ಅದನ್ನು ಸಹ ಅಧ್ಯಯನ ಮಾಡಿ.

ನೀವು ಈಗಾಗಲೇ ವಾರ್ಷಿಕ ಪರೀಕ್ಷೆಬರೆದ ಅನುಭವವನ್ನು ಪಡೆದಿದ್ದೀರಿ. ಹಿಂದೆ ವಾರ್ಷಿಕ ಪರೀಕ್ಷೆಗ ಹೇಗೆ ತಯಾರಿ ಮಾಡಿದ್ದಿರೋ ಆ ಮಾದರಿಯನ್ನು ಬಿಟ್ಟು ಹೊಸ ಅಧ್ಯಯನ ತಂತ್ರಗಳನ್ನು ಬಳಸಿ ಅಧ್ಯಯನ ಮಾಡಿ. ನಿಮಗೆ ಯಾವ ಅಧ್ಯಯನದ ವಿಧಾನ ಬೇಗ ಅರ್ಥವಾಗುತ್ತದೇ ಆ ವಿಧಾನವನ್ನು ಹೆಚ್ಚು ಬಳಸಿ ಅಧ್ಯಯನ ಮಾಡಿ ಯಶಸ್ಸು ಪಡೆಯಿರಿ. ನಿಮ್ಮ ಸ್ನೇಹಿತರು ಯಾವ ಅಧ್ಯಯನ ತಂತ್ರಗಳನ್ನು ಬಳಸುತ್ತಾರೆ ಎಂಬುದನ್ನ ಕೇಳಿ ತಿಳಿದು ಅದನ್ನು ಪಾಲಿಸಿ ನೋಡಿ.

ಪರೀಕ್ಷೆಯೇನೂ ಜೀವನದ ಅಂತಿಮವಲ್ಲ. ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹೀಗಾಗಿ ಒಂದು ವೇಳೆ ಸೋತರೆ ಎಂಬ ಭಯದಿಂದ ಪರೀಕ್ಷೆಯ ಬಗ್ಗೆ ಭೀತಿ ಬೆಳೆಸಿಕೊಳ್ಳಬೇಡಿ. ಆ ಪರೀಕ್ಷೆನ್ನು ಪಾಸ್‌ ಮಾಡಲು ಮತ್ತೊಂದು ಅವಕಾಶ ಸಿಕ್ಕಿದೆ ಎಂದುಕೊಂಡು ಧೈರ್ಯದಿಂದ ಅಧ್ಯಯನ ಮಾಡಿ. ಪರೀಕ್ಷೆ ಕೊಠಡಿಗೆ ಹೋಗಿ ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕೊಡನೆ ಗೊಂದಲ ಗೂಡು ಆಗಬೇಡಿ. ಮೊದಲು ನಿಮಗೆ ಉತ್ತರ ಗೊತ್ತಿರುವ ಪ್ರಶ್ನೆಗಳತ್ತ ಗಮನ ನೀಡಿ. ಉತ್ತರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುವ ಪ್ರಶ್ನೆಗಳನ್ನು ಕೊನೆಗೆ ಇಟ್ಟು ಬಿಡಿ. ಒಟ್ಟಿನಲ್ಲಿ ಆತ್ಮ ವಿಶ್ವಾಸದಿಂದ ಪರೀಕ್ಷೆಯನ್ನ ಎದುರಿಸಿ.

logoblog

Thanks for reading Information from education experts about SSLC students writing procedure and final exam preparation...

Previous
« Prev Post

No comments:

Post a Comment