Tuesday, November 28, 2023

Information about SSLC Exam conducted by Karnataka School Examination and Evaluation Board

  Wisdom News       Tuesday, November 28, 2023
Hedding ; Information about SSLC Exam conducted by Karnataka School Examination and Evaluation Board...

2023, 24ನೇ ಸಾಲಿನ SSLC ಪರೀಕ್ಷೆ 1 ಕ್ಕೆ ರಿಜಿಸ್ಟ್ರೇಷನ್‌ ಆರಂಭ: ಇಲ್ಲಿವೆ ಮಾರ್ಗಸೂಚಿಗಳು
2023-24ನೇ ಸಾಲಿನ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 ಕ್ಕೆ ನೊಂದಣಿ ಆರಂಭವಾಗಿದೆ. ಇದಕ್ಕೆ ಸಂಬಂಧಿತ ಮಾರ್ಗಸೂಚಿ, ಪ್ರಮುಖ ದಿನಾಂಕಗಳು, ಇತರೆ ಮಾಹಿತಿಗಳನ್ನು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಬಿಡುಗಡೆ ಮಾಡಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2024ರ ಮಾರ್ಚ್‌ ತಿಂಗಳಲ್ಲಿ ನಡೆಸಲಿರುವ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 ಕ್ಕೆ ರಿಜಿಸ್ಟ್ರೇಷನ್‌ ಆರಂಭಿಸಿದೆ. ವಿದ್ಯಾರ್ಥಿಗಳು ಈ ಪರೀಕ್ಷೆಗೆ ನೊಂದಣಿ ಮಾಡಿಕೊಳ್ಳಲು ನವೆಂಬರ್ 04 ರವರೆಗೆ ಅವಕಾಶ ನೀಡಿದೆ ಮಂಡಳಿ.

2023-24ನೇ ಸಾಲಿನಿಂದ ಜಾರಿಗೆ ಬರುವಂತೆ ಎಸ್‌ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ 3 ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದರಲ್ಲಿ ಪರೀಕ್ಷೆ-1 ಕ್ಕೆ ಅರ್ಹ ವಿದ್ಯಾರ್ಥಿಗಳು ನೋಂದಣಿ ಮಾಹಿತಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವೆಬ್‌ಸೈಟ್‌ ನಲ್ಲಿ ಶಾಲಾ ಲಾಗಿನ್‌ ಮೂಲಕ ಪಡೆಯಲು ತಿಳಿಸಲಾಗಿದೆ.

ಕರ್ನಾಟಕ ರಾಜ್ಯದ ಎಲ್ಲ ಸರ್ಕಾರಿ, ಮಾನ್ಯತೆ ಪಡೆದಿರುವ ಅನುದಾನಿತ ಮತ್ತು ಖಾಸಗಿ ಶಾಲೆಗಳು ಆಯಾ ಶಾಲೆಯ ವಿದ್ಯಾರ್ಥಿಗಳು, ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಆಯಾ ಶಾಲೆಗಳ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳ ಮಾಹಿತಿ, ಭಾವಚಿತ್ರ, ಸಹಿ ಅಪ್‌ಲೋಡ್‌ ಮಾಡಬೇಕಿರುತ್ತದೆ. ಆದ್ದರಿಂದ ಮೊದಲೇ ಈ ಎಲ್ಲಾ ಡಾಟಾ ಸಂಗ್ರಹ ಮಾಡಿಕೊಳ್ಳಬೇಕು. ಶಾಲಾ ವಿದ್ಯಾರ್ಥಿಗಳ ಬಹುತೇಕ ಮಾಹಿತಿಯನ್ನು SATS ದತ್ತಾಂಶದಿಂದ ಪಡೆಯುತ್ತಿರುವುದರಿಂದ ಅಭ್ಯರ್ಥಿಯ ಹೆಸರು, ತಂದೆ ಹೆಸರು, ತಾಯಿ ಹೆಸರು, ಜನ್ಮ ದಿನಾಂಕ, ಪ್ರವರ್ಗ, ಲಿಂಗ, ಧರ್ಮ ಮತ್ತು ಮಾಧ್ಯಮ ಇವುಗಳಲ್ಲಿ ಯಾವುದೇ ತಿದ್ದುಪಡಿ ಇದ್ದಲ್ಲಿ ಮಂಡಳಿಯ ಜಾಲತಾಣದಲ್ಲಿ ನೇರವಾಗಿ ತಿದ್ದಲು ಸಾಧ್ಯವಿಲ್ಲ. ಆದ್ದರಿಂದ SATS ಲಾಗಿನ್‌ನಲ್ಲಿ ಸರಿಪಡಿಸಿ ನಂತರ ಮಂಡಳಿ ಶಾಲಾ ಲಾಗಿನ್‌ನಲ್ಲಿ ನೋಂದಣಿ ಪ್ರಕ್ರಿಯೆ ನಡೆಸಲು ಸಲಹೆ ನೀಡಲಾಗಿದೆ.

ಸದರಿ ಪರೀಕ್ಷೆ ನೋಂದಣಿಗೆ ಸಂಬಂಧಿಸಿದಂತೆ ಪ್ರಸ್ತುತ ಆನ್‌ಲೈನ್‌ ಮೂಲಕ ಭರ್ತಿ ಮಾಡಲಾದ ವಿದ್ಯಾರ್ಥಿಗಳ ವಿವರಗಳು ಅಂಕಪಟ್ಟಿ ಹಾಗೂ ವರ್ಗಾವಣೆ ಪತ್ರಗಳಲ್ಲಿ ನಮೂದಾಗುವುದರಿಂದ ಯಾವುದೇ ತಪ್ಪುಗಳು ಆಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ನಿಗದಿ ದಿನಾಂಕದ ನಂತರ ನೋಂದಣಿ ಮಾಹಿತಿಗಳನ್ನು ಫ್ರೀಜ್ ಮಾಡುವುದರಿಂದ ಅದರ ನಂತರ ವಿದ್ಯಾರ್ಥಿಗಳ ವಿವರಗಳಲ್ಲಿ ಯಾವುದೇ ಬದಲಾವಣೆ ಮಾಡಲು ಅವಕಾಶ ನೀಡಲಾಗುವುದಿಲ್ಲ ಎಂದು ಸೂಚಿಸಲಾಗಿದೆ.

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಈಗಿನಿಂದಲೇ ತಯಾರಿ ಹೇಗಿರಬೇಕು? ಇಲ್ಲಿವೆ ಸಿಂಪಲ್‌ ಟಿಪ್ಸ್
ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಸಾಮಾನ್ಯವಾಗಿ ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ನಡೆಯುತ್ತವೆ. ಈ ಪರೀಕ್ಷೆಗೆ ಈ ಬಾರಿ ಎಸ್‌ಎಸ್‌ಎಲ್‌ಸಿ ಓದುತ್ತಿರುವ ಅಭ್ಯರ್ಥಿಗಳು ಈಗಿನಿಂದಲೇ ತಯಾರಿ ನಡೆಸಿದರೆ ಒಳ್ಳೆಯದು. ವಿದ್ಯಾರ್ಥಿಗಳು ಈಗಿನಿಂದಲೇ ಪರೀಕ್ಷೆಗೆ ತಯಾರಿ ಆರಂಭಿಸಿದರೆ ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತದೆ. ಎಸ್‌ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಈಗಿನಿಂದಲೇ ತಯಾರಿ ಹೇಗಿರಬೇಕು ಎನ್ನುವ ಕುರಿತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಲವು ಟಿಪ್ಸ್‌ಗಳನ್ನು ಇಲ್ಲಿ ನೀಡಲಾಗಿದೆ.

ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಹಂತ ಅಂದರೆ ಅದುವೇ ಎಸ್‌ಎಸ್‌ಎಲ್‌ಸಿ ಬೋರ್ಡ್‌ ಎಕ್ಸಾಂ. ಈ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮುಂದಿನ ವಾರದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಸಾಮಾನ್ಯವಾಗಿ ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ನಡೆಯುತ್ತವೆ. ಈ ಪರೀಕ್ಷೆಗೆ ಈ ಬಾರಿ ಎಸ್‌ಎಸ್‌ಎಲ್‌ಸಿ ಓದುತ್ತಿರುವ ಅಭ್ಯರ್ಥಿಗಳು ಈಗಿನಿಂದಲೇ ತಯಾರಿ ನಡೆಸಿದರೆ ಒಳ್ಳೆಯದು. ವಿದ್ಯಾರ್ಥಿಗಳು ಈಗಿನಿಂದಲೇ ಪರೀಕ್ಷೆಗೆ ತಯಾರಿ ಆರಂಭಿಸಿದರೆ ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತದೆ.

ವಿದ್ಯಾರ್ಥಿಗಳು ಪರೀಕ್ಷೆ ಹತ್ತಿರ ಬಂದಾಗ ಅಧ್ಯಯನ ಮಾಡುವುದರಿಂದ ಎಲ್ಲಾ ವಿಷಯಗಳು ಒಮ್ಮೆಲೆ ಅರ್ಥವಾಗುವುದು ಕಷ್ಟವಾಗಬಹುದು. ಅದಕ್ಕೆ ವಿದ್ಯಾರ್ಥಿಗಳು ಎಲ್ಲಾ ವಿಷಯಗಳನ್ನು ಮತ್ತು ದಿನದ ಪಾಠವನ್ನು ಈಗಿನಿಂದಲೇ ಅಧ್ಯಯನ ಮಾಡಿ. ಹೀಗೆ ಅಧ್ಯಯನ ಮಾಡುವುದರಿಂದ ಮುಂದೆ ವಾರ್ಷಿಕ ಪರೀಕ್ಷೆಗೆ ಅನುಕೂಲವಾಗಲಿದೆ. ಅಂದಿನ ದಿನದ ಪಾಠವನ್ನು ಅಂದೇ ಓದುವುದನ್ನು ಇಂದಿನಿಂದಲೇ ಆರಂಭ ಮಾಡಿ. ಇದು ವಿದ್ಯಾರ್ಥಿಗಳಿಗೆ ಆ ಪಾಠವನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಮತ್ತು ಗ್ರಹಿಸಿಕೊಳ್ಳಲು ಅನುಕೂಲವಾಗುತ್ತದೆ. ಎಸ್‌ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಈಗಿನಿಂದಲೇ ತಯಾರಿ ಹೇಗಿರಬೇಕು ಎನ್ನುವ ಕುರಿತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಲವು ಟಿಪ್ಸ್‌ಗಳನ್ನು ಇಲ್ಲಿ ನೀಡಲಾಗಿದೆ.

ವಿದ್ಯಾರ್ಥಿಗಳು ಮೊದಲು ವಾರ್ಷಿಕ ಪರೀಕ್ಷೆಗೆ ಎಷ್ಟು ದಿನಗಳು ಉಳಿದಿವೆ ಎಂದು ಲೆಕ್ಕ ಹಾಕಿಕೊಳ್ಳಿ. ಆ ದಿನಗಳಲ್ಲಿ ವಿಷಯಗಳನ್ನು ಹಂಚಿಕೊಳ್ಳಿ. ಅವುಗಳಲ್ಲಿ ಸುಲಭವಾದ ವಿಷಯಗಳಿಗೆ ಕಡಿಮೆ ದಿನಗಳನ್ನು , ಹಾಗೂ ಕಷ್ಟಕರ ವಿಷಯಗಳಿಗೆ ಹೆಚ್ಚು ದಿನಗಳನ್ನು ಹೊಂದಿಸಿಕೊಳ್ಳಿ. ಆ ದಿನಗಳಲ್ಲಿ ನೀವು ಅಂದುಕೊಂಡ ವಿಷಯಗಳನ್ನು ಅಧ್ಯಯನ ಮಾಡಿ. ಕಷ್ಟಕರ ವಿಷಯಗಳನ್ನು ಹೆಚ್ಚು ಅಧ್ಯಯನ ಮಾಡಿ. ಹಾಗೆಂದು ಸುಲಭ ಎನ್ನುವ ವಿಷಯಗಳನ್ನು ಮರೆಯಬೇಡಿ.

ಸರಿಯಾದ ಯೋಜನೆ ಇಲ್ಲದೆ, ಗುರಿಯನ್ನು ತಲುಪುವುದು ಬಹಳ ಸವಾಲಿನ ಕೆಲಸ. ಆದ್ದರಿಂದ ಮುಂಬರುವ ಬೋರ್ಡ್‌ ಪರೀಕ್ಷೆಗಳಿಗೆ ಸಾಕಷ್ಟು ತಯಾರಿ ಅವಶ್ಯವಾಗಿದೆ. ಅದಕ್ಕಾಗಿ ಸೂಕ್ತವಾದ ವೇಳಾಪಟ್ಟಿಯನ್ನು ಹಾಕಿಕೊಳ್ಳಿ. ಪರೀಕ್ಷೆಗೆ ಇನ್ನೆಷ್ಟು ದಿನಗಳು ಉಳಿದಿವೆ ಎಂದು ಯೋಚಿಸಿ. ದಿನದ 24 ಗಂಟೆಗಳನ್ನೂ ಸರಿಯಾದ ರೀತಿಯಲ್ಲಿ ವಿಭಾಗಿಸಿಕೊಳ್ಳಿ. ಆ ಟೈಮ್‌ ಟೇಬಲ್‌ನಂತೆ ದಿನಾಲು ಓದುವುದನ್ನು ರೂಡಿಸಿಕೊಳ್ಳಿ. ಓದು, ಬರವಣಿಗೆ ಮತ್ತು ಪುನಾರಾವರ್ತನೆಗೂ ಸಮಯವನ್ನು ಮೀಸಲಿಡಿ. ನೀವು ಹಾಕಿಕೊಂಡಿರುವ ವೇಳಾಪಟ್ಟಿಯನ್ನು ಪ್ರಾಮಾಣಿಕವಾಗಿ ಪಾಲಿಸಿ. ವೇಳಾಪಟ್ಟಿಯನ್ನು ಚಾಚು ತಪ್ಪದೆ ಪಾಲಿಸಿ, ಉತ್ತಮ ಅಂಕಗಳನ್ನು ಪಡೆಯುವ ಕಡೆ ಗಮನ ಹರಿಸಿ.

ಓದಿಗೆ ಕುಳಿತುಕೊಳ್ಳುವ ಸಮಯ ಮತ್ತು ಸ್ಥಳ ಅತ್ಯಂತ ಪ್ರಾಮುಖ್ಯವಾದದು. ಏಕೆಂದರೆ ಇದು ಕೂಡ ಓದಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೆಳಗ್ಗೆ ಬೇಗನೆ ಎದ್ದು ಮುಖ ತೊಳೆದು ಓದಿದರೆ ಉತ್ತಮ. ಬೆಳಗ್ಗೆ ವಾತಾವರಣ ಶುಬ್ರವಾಗಿರುತ್ತದೆ. ಯಾವುದೇ ರೀತಿಯ ಗಲಾಟೆ ಇರುವುದಿಲ್ಲ. ನಿದ್ದೆಗೆಟ್ಟು ಓದಬೇಡಿ, ಇದು ಆರೋಗ್ಯದ ಮೇಲೆ ಪರಿಣಾಮ ಬಿರಬಹುದು. ಸಂಜೆಯ ವೇಳೆಯು ಕೂಡ ಓದಲು ಉತ್ತಮವಾದ ಸಮಯವಾಗಿದೆ.

ವಿದ್ಯಾರ್ಥಿಗಳು ಅಂದಿನ ಪಾಠವನ್ನು ಅಂದೇ ಓದಿದರೆ ಉತ್ತಮ. ಏಕೆಂದರೆ ಪರೀಕ್ಷೆಯ ಸಮಯದಲ್ಲಿ ಹೆಚ್ಚು ಒತ್ತಡ ಇರುವುದಿಲ್ಲ. ಎಲ್ಲ ವಿಷಯಗಳನ್ನು ಆಗ ನೀವು ಸುಲಭವಾಗಿ ಅಧ್ಯಯನ ಮಾಡಲು ಅನುಕೂಲವಾಗುತ್ತದೆ. ಶಾಲೆ ಆರಂಭವಾದ ದಿನದಿಂದಲೇ ನಿಯಮಿತವಾಗಿ ಓದಬೇಕು. ಅಂದಿನ ಓದನ್ನು ಅಂದೇ ಓದಿ ಮುಗಿಸಿ. ಪಠ್ಯವನ್ನು ಸರಿಯಾಗಿ ಓದಿ ಮನನ ಮಾಡಿಕೊಳ್ಳಿ.

ಶಾರ್ಟ್ ನೋಟ್ಸ್ ಮಾಡಿಟ್ಟುಕೊಳ್ಳಿ

ಅಂದಿನ ಪಾಠವನ್ನು ಅಂದೇ ಓದುವುವಾಗ ನಿಮಗೆ ಯಾವುದು ಮುಖ್ಯ ಎನಿಸುತ್ತದೆ ಆ ವಿಷಯವನ್ನು ಶಾರ್ಟ್ ನೋಟ್ಸ್ ಮಾಡಿಕೊಳ್ಳಿ. ಯಾವ ವಿಷಯ ನಿಮಗೆ ಕಠಿಣ ಅನಿಸುತ್ತದೆ ಅದನ್ನು ಶಾರ್ಟ್ ನೋಟ್ಸ್ ಮಾಡಿಕೊಂಡು ಓದುವುದನ್ನು ರೂಡಿಸಿಕೊಳ್ಳಿ. ಹೀಗೆ ಶಾರ್ಟ್ ನೋಟ್ಸ್‌ ಮಾಡಿಕೊಳ್ಳುವುದರಿಂದ ಪರೀಕ್ಷೆ ಸಮಯದಲ್ಲಿ ಅನುಕೂಲವಾಗುತ್ತದೆ. ಅದರ ಜೊತೆಗೆ ನೀವು ಆ ವಿಷಯಗಳನ್ನು ಬರೆಯುವುದರಿಂದ ಆ ವಿಷಯ ನೆನಪಿನಲ್ಲಿ ಉಳಿದುಕೊಳ್ಳುತ್ತದೆ.

ಪ್ರತಿದಿನ ಶಾಲೆಗೆ ಹೋದಾಗ ಶಾಲೆಯಲ್ಲಿ ಏನು ಪಾಠ ಹೇಳುತ್ತಾರೆ, ಏನು ಹೋಂ ವರ್ಕ್ ಕೊಟ್ಟಿರುತ್ತಾರೋ ಅದನ್ನು ಅಂದೇ ಮಾಡಿ ಮುಗಿಸಬೇಕು. ಒಂದು ವೇಳೆ ನಾಳೆ ಮಾಡಿದರಾಯಿತು ಎಂದು ತಾತ್ಸಾರ ಮಾಡಿದರೆ ಖಡಿಂತವಾಗಿಯು ಪರೀಕ್ಷಾ ಸಮಯದಲ್ಲಿ ಕಷ್ಟವಾಗುತ್ತದೆ. ಆದ್ದರಿಂದ ಅಂದಿನ ಕೆಲಸ ಅಂದೇ ಮುಗಿಸಿದರೆ ಉತ್ತಮ. ಇದರಿಂದ ಹೆಚ್ಚು ಅಂಕ ಗಳಿಸಲು ಸಾಧ್ಯವಾಗುತ್ತದೆ.

ಹಳೆಯ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅಧ್ಯಯನ ಮಾಡುವುದರಿಂದ ನಿಮಗೆ ಪರೀಕ್ಷೆಯ ಮಾದರಿ ಅರ್ಥವಾಗುತ್ತದೆ. ಮತ್ತು ಪರೀಕ್ಷೆಯಲ್ಲಿ ಎಂತಹ ಪ್ರಶ್ನೆಗಳು ಬರಬಹುದು ಎನ್ನುವ ಒಂದು ಪರಿಕಲ್ಪನೆ ನಿಮಗೆ ತಿಳಿಯುತ್ತದೆ. ಇದು ನಿಮ್ಮ ಓದಿಗೆ ಸಹಾಯಕವಾಗುತ್ತದೆ. ಕಳೆದ ವರ್ಷದ ಪ್ರಶ್ನೆ ಪತ್ರಿಕೆಗಳು ಹಾಗೂ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಹೆಚ್ಚು ಹೆಚ್ಚು ಅಧ್ಯಯನ ಮಾಡಿ. ಇದರ ಜತೆಗೆ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಲು ಪ್ರಯತ್ನಿಸಿ. ನಿವೇ ಒಂದು ಅಧ್ಯಾಯ ಮುಗಿದ ಮೇಲೆ ಆ ಅಧ್ಯಯನದ ಮೇಲೆ ಪ್ರಶ್ನೆಗಳನ್ನು ತೆಗೆದುಕೊಂಡು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿ.

ಬೋರ್ಡ್ ಎಕ್ಸಾಂ ಇನ್ನೂ ದೂರವಿದೆ ಎನ್ನುವ ಆಲಸ್ಯತನ ಬೇಡ. ಇನ್ನೂ ಸಮಯವಿದೆ ಮುಂದೆ ಓದಿಕೊಂಡರಾಯಿತು ಎಂದುಕೊಂಡರೆ ಸಮಯ ಸಾಗುತ್ತಲೇ ಇರುತ್ತದೆ. ಒಮ್ಮೆ ಸಮಯ ಹೊದರೆ ಮರಳಿ ಬಾರದು. ಆದ ಕಾರಣ ಇರುವ ಸಮಯದಲ್ಲಿ ಸರಿಯಾದ ವೇಳಾಪಟ್ಟಿಯನ್ನು ರಚಿಸಿಕೊಂಡು ಅಧ್ಯಯನ ಮಾಡಿ, ನಿಮ್ಮ ಗುರಿಯನ್ನು ತಲುಪಿ. ಇಲ್ಲವಾದರೆ ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲದಂತಾಗುತ್ತದೆ.

logoblog

Thanks for reading Information about SSLC Exam conducted by Karnataka School Examination and Evaluation Board

Previous
« Prev Post

No comments:

Post a Comment