ಶಾಲಾ ಶಿಕ್ಷಣ ಇಲಾಖೆಯಲ್ಲಿ ಗ್ರೂಪ್-"ಎ" ಕಿರಿಯ ಶ್ರೇಣಿಯ ಶಿಕ್ಷಣಾಧಿಕಾರಿ ತತ್ಸಮಾನ ವೃಂದಕ್ಕೆ ವೃಂದದ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಗ್ರೂಪ್-"ಎ" ಹಿರಿಯ ಶ್ರೇಣಿಯ ಉಪನಿರ್ದೇಶಕರು/ತತ್ಸಮಾನ ವೃಂದಕ್ಕೆ ಬಡ್ತಿ ನೀಡುವ ಕುರಿತು.
ಉಲ್ಲೇಖಿತ ಪತ್ರದನ್ವಯ ಶಾಲಾ ಶಿಕ್ಷಣ ಇಲಾಖೆಯಲ್ಲಿ ಗ್ರೂಪ್ ಎ ಕಿರಿಯ ಶ್ರೇಣಿಯ ಶಿಕ್ಷಣಾಧಿಕಾರಿ/ ತತ್ಸಮಾನ ವೃಂದಕ್ಕೆ ವೃಂದದ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಗ್ರೂಪ್ A ಹಿರಿಯ ಶ್ರೇಣಿಯ ಉಪನಿರ್ದೇಶಕರು/ ತತ್ಸಮಾನ ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡುವ ನಿಮಿತ್ತವಾಗಿ ಈ ಕೆಳಗಿನ ಪಟ್ಟಿಯಲ್ಲಿರುವ ಅಧಿಕಾರಿಗಳ 2018-19 ನೇ ಸಾಲಿನಿಂದ 2022-23ನೇ ಸಾಲಿನವರೆಗೆ 5 ವರ್ಷಗಳ ಮೂಲ ಕಾರಣ ವರದಿ ಹಾಗೂ ಸದರಿ ಅಧಿಕಾರಿಗಳ ಸೇವಾ ವಿವರಣೆ, ನ್ಯಾಯಾಲಯ ಪ್ರಕರಣ ಲೋಕಾಯುಕ್ತ ಪ್ರಕರಣಗಳು ಬಾಕಿ ಇರುವ ಇಲ್ಲದಿರುವ ಬಗ್ಗೆ ಮಾಹಿತಿಯೊಂದಿಗೆ ಚಕ್ ಲಿಸ್ಟ್ ನಲ್ಲಿ ಭರ್ತಿಮಾಡಿ ಸಲ್ಲಿಸಲು ತಿಳಿಸಿರುತ್ತಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕ್ಷೇತ್ರ ಶಿಕ್ಷಣಾಧಿ ಕಾರಿ ಗಳು, ಉಪನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರಲ್ಲಿ ಕೆಲವರಿಗೆ ಬಡ್ತಿ ನೀಡಿ, ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲವು ಅಧಿಕಾರಿಗಳಿಗೆ ಉಪನಿರ್ದೇಶಕ ಹಾಗೂ ತತ್ಸಮಾನ ವೃಂದದ ಹುದ್ದೆಗೆ ಬಡ್ತಿ ನೀಡಲಾಗಿದೆ.
ಉಪನಿರ್ದೇಶಕರು ಹಾಗೂ ತತ್ಸಮಾನ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲವು ಹಿರಿಯ ಅಧಿಕಾರಿಗಳನ್ನು ಜಂಟಿ ನಿರ್ದೇಶಕರ ಹುದ್ದೆಗೆ ಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ. ಹಾಗೆಯೇ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿಯೂ ಆದೇಶ ಹೊರಡಿಸಿದೆ
ಮೈಸೂರು ವಿಭಾಗದ ಜಂಟಿ ನಿರ್ದೇಶಕರು ಹಾಗೂ ಬೆಂಗಳೂರು ವಿಭಾಗದ ಜಿಲ್ಲಾ ಉಪ ನಿರ್ದೇಶಕರ 7 ಪ್ರಥಮ ದರ್ಜೆ ಸಹಾಯಕ ಹುದ್ದೆ ಭರ್ತಿಗೆ ಅನುಮತಿ ಕೋರಿದ್ದರು. ಇಲಾಖೆಯ ಮತ್ತು ಸರ್ಕಾ ರದ ಷರತ್ತುಗಳಿಗೆ ಅನುಸಾರವಾಗಿ 7 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಂತೆ ಇಲಾಖೆ ಅನುಮತಿ ನೀಡಿದೆ.
ವಿದ್ಯಾರ್ಹತೆ, ದಾಖಲಾತಿ, ಸಾಮಾನ್ಯ ನೇಮಕಾತಿ ನಿಯಮಾನುಸಾರ ವಯೋಮಿತಿ ಇವೆಲ್ಲವನ್ನು ಕಡ್ಡಾಯವಾಗಿ ಪಾಲಿಸಿ, ಷರತ್ತುಗಳನ್ವಯ ನೇಮಕಕ್ಕೆ ಆದೇಶ ಹೊರಡಿಸಿದೆ.

No comments:
Post a Comment