ಹೊಸದಾಗಿ ನೇಮಕವಾದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ವೃಂದದ (6-8 ನೇ ತರಗತಿ) ಶಿಕ್ಷಕರನ್ನು ಸೇವೆಗೆ ಹಾಜರುಪಡಿಸಿಕೊಳ್ಳುವ ಕುರಿತು ಆದೇಶವನ್ನು ಹೊರಡಿಸಲಾಗಿದೆ.
ಆದೇಶದಲ್ಲಿ ಎಲ್ಲಾ ಸರಕಾರಿ ಹಿರಿಯ/ಮಾದರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು/ಹಿರಿಯ ಮುಖ್ಯ ಶಿಕ್ಷಕರಿಗೆ ಸೂಚಿಸುವುದೇನೆಂದರೆ, 2021-22 ನೇ ಸಾಲಿನ ಪದವೀಧರ ಪ್ರಾಥಮಿಕ ಶಿಕ್ಷಕ ವೃಂದದ(6-8 ನೇ ತರಗತಿ) ನೇಮಕಾತಿಯ ಅಭ್ಯರ್ಥಿಗಳ ಸ್ಥಳ ನಿಯುಕ್ತಿ ಕೌನ್ಸಿಲಿಂಗ್‌ನಲ್ಲಿ ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ನೇಮಕಾತಿ ಆದೇಶದೊಂದಿಗೆ ಹಾಜರುಪಡಿಸಿಕೊಳ್ಳುವಾಗ ಈ ಕೆಳಕಂಡ ಸೂಚನೆಗಳನ್ನು ಪಾಲಿಸುವುದು.
ಮುಖ್ಯ ಶಿಕ್ಷಕರು/ಹಿರಿಯ ಮುಖ್ಯ ಶಿಕ್ಷಕರಿಗೆ ಸೂಚನೆಗಳು:-
1. ಹೊಸದಾಗಿ ನೇಮಕಗೊಂಡ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ(6 ರಿಂದ 8ನೇ ತರಗತಿ) ಅಭ್ಯರ್ಥಿಯ ನೇಮಕಾತಿ ಆದೇಶದಂತೆ ಸೇವೆಗೆ ಹಾಜರುಪಡಿಸಿಕೊಳ್ಳುವುದು. (ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಚಾಲನಾ ಆದೇಶದ ಅವಶ್ಯಕತೆ ಇರುವುದಿಲ್ಲಾ).
2. ನೇಮಕಾತಿ ಆದೇಶವು ನೇಮಕಾತಿ ಆದೇಶ ಹೊರಡಿಸಿದ ದಿನಾಂಕದಿಂದ 15 ದಿನಗಳ ವರೆಗೆ ಚಾಲ್ತಿಯಲ್ಲಿರುತ್ತದೆ. ಆದ್ದರಿಂದ ಅಭ್ಯರ್ಥಿಯು ನೇಮಕಾತಿ ಆದೇಶ ತಲುಪಿದ 15 ದಿನಗಳೊಳಗೆ ಹಾಜರಾಗತಕ್ಕದ್ದು, ಇಲ್ಲದಿದ್ದಲ್ಲಿ ಆದೇಶವು ತಾನಾಗಿಯೇ ರದ್ದಾಗುತ್ತದೆ. ಆದ್ದರಿಂದ ನೇಮಕಾತಿ ಆದೇಶ ಜಾರಿ ಮಾಡಿದ ದಿನಾಂಕದಿಂದ 15 ದಿನಗಳೊಳಗೆ ಹಾಜರಾಗಿದ್ದಲ್ಲಿ ಮಾತ್ರ ಹಾಜರಾದ ವರದಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಒಂದು ಪ್ರತಿಯನ್ನು ಈ ಕಛೇರಿಗೆ ಸಲ್ಲಿಸುವುದು.
3. ನೇಮಕಗೊಂಡು ಸೇವೆಗೆ ಹಾಜರುಪಡಿಸಿಕೊಳ್ಳುವ ಅಭ್ಯರ್ಥಿಯ ಇತ್ತೀಚಿನ ತಮ್ಮ ಮಾನಸಿಕ ಮತ್ತು ಶಾರೀರಿಕ ದೇಹದಾರ್ಡ್ಯತೆಯ(Physical Fitness Certificate) ಕುರಿತು ಜಿಲ್ಲಾ ವೈದ್ಯಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರದೊಂದಿಗೆ ಹಾಜರುಪಡಿಸಿಕೊಳ್ಳುವುದು.
4. ನೇಮಕಗೊಂಡು ಸೇವೆಗೆ ಹಾಜರಾಗುವ ಅಭ್ಯರ್ಥಿಯಿಂದ " ನನಗೆ ಮದುವೆ ಆಗಿಲ್ಲ ಅಥವಾ ಆಗಿದ್ದರೆ ಒಬ್ಬರಿಗಿಂತ ಹೆಚ್ಚು ಪತಿ/ಪತ್ನಿ ಹೊಂದಿಲ್ಲವೆಂಬ ಬಗ್ಗೆ ರೂ.50/- ಮೌಲ್ಯದ ದಸ್ತಾವೇಜಿನಲ್ಲಿ ಮುಚ್ಚಳಿಕೆ ಪ್ರಮಾಣ ಪತ್ರ ಪಡೆದು ಹಾಜರುಪಡಿಸಿಕೊಳ್ಳುವುದು.
5. ಅಭ್ಯರ್ಥಿಯು ಸ್ಥಳ ಆಯ್ಕೆ ಮಾಡಿಕೊಂಡ ಹುದ್ದೆಯಲ್ಲಿ ಅತಿಥಿ ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದಲ್ಲಿ ಅಭ್ಯರ್ಥಿಯನ್ನು ಹಾಜರುಪಡಿಸಿಕೊಂಡ ಕೂಡಲೇ ಅತಿಥಿ ಶಿಕ್ಷಕರನ್ನು ಬಿಡುಗಡೆಗೊಳಿಸುವುದು.(ಅತಿಥಿ ಶಿಕ್ಷಕರ ನೇಮಕಾತಿ ನಿಯಮದಂತೆ ಅತಿಥಿ ಶಿಕ್ಷಕರನ್ನು ಬಿಡುಗಡೆಗೊಳಿಸಿದ ಬಗ್ಗೆ ಯಾವುದೇ ಲಿಖಿತವಾಗಿ ಬಿಡುಗಡೆ ವರದಿ ನೀಡತಕ್ಕದ್ದಲ್ಲ.
ಈ ಮೇಲಿನಂತೆ ಪರಿಶೀಲಿಸಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ(6 ರಿಂದ 8ನೇ ತರಗತಿ) ನೇಮಕಾತಿಯಾದ ಶಿಕ್ಷಕರನ್ನು ಸೇವೆಗೆ ಹಾಜರು ಪಡಿಸಿಕೊಂಡು ಹಾಜರಾದ ಮೂಲ ವರದಿ, ಮಾನಸಿಕ ಮತ್ತು ಶಾರೀರಿಕ ದೇಹದಾರ್ಡ್ಯತೆಯ(Physical Fitness Certificate) ಮೂಲ ಪ್ರಮಾಣ ಪತ್ರ, ಮೂಲ ಮುಚ್ಚಳಿಕೆ ಪ್ರಮಾಣ ಪತ್ರವನ್ನು ಜಿಲ್ಲಾ ಉಪನಿರ್ದೇಶಕರ ಕಛೇರಿಗೆ ಸಲ್ಲಿಸುವುದು, ಹಾಗೂ ಅದರ ಒಂದು ಪ್ರತಿಯನ್ನು ಸಂಬಂದಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸುವುದು, ಮುಂದುವರೆದು, ಶಿಕ್ಷಕರ ವೈಯಕ್ತಿಕ ಕಡತ ಪ್ರಾರಂಭಿಸಿ ಒಂದು ಪ್ರತಿಯನ್ನು ಶಾಲೆಯ ಅಭಿರಕ್ಷೆಯಲ್ಲಿರಿಸತಕ್ಕದ್ದು.(ವಿ.ಸೂ. ಸದರಿ ಅಭ್ಯರ್ಥಿಯ ಎಲ್ಲಾ ಮೂಲ ದಾಖೆಗಳ ನೈಜತ್ವ ಸ್ವೀಕರಿಸಲಾಗಿದ್ದು, ಅವರಿಗೆ ನೇಮಕಾತಿ ಆದೇಶವಬನ್ನು ನೀಡಲಾಗಿರುತ್ತದೆ.)
No comments:
Post a Comment