SSLC, Second Puc ವಾರ್ಷಿಕ ಪರೀಕ್ಷೆಯ ಸಂಭವನೀಯ ವೇಳಾಪಟ್ಟಿ ಬಿಡುಗಡೆ!
SSLC PUC Exam: 2023-24 ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ (SSLC PUC Exam)ವ್ಯವಸ್ಥೆಯಲ್ಲಿ ಬದಲಾವಣೆ ತರಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ತೀರ್ಮಾನಿಸಿದೆ. ಈ ಕಾರಣದಿಂದ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟ ಮಾಡಿದೆ.
ಹಾಲಿ ಪರೀಕ್ಷಾ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ಒಂದು ವಾರ್ಷಿಕ ಪರೀಕ್ಷೆ ಮತ್ತು ಒಂದು ಪೂರಕ ಪರೀಕ್ಷೆಯನ್ನು ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಕುರಿತು ಶಾಲಾ ಶಿಕ್ಷಣ ಮಂಡಳಿ ಪ್ರಕಟಣೆ ಹೊರಡಿಸಿದೆ.
ಮಂಡಳಿಯ ಸಂಭವನೀಯ ವೇಳಾಪಟ್ಟಿ:
SSLC ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ
ಪರೀಕ್ಷೆ -1: ಮಾರ್ಚ್ 30 ರಿಂದ ಎಪ್ರಿಲ್ 15 (ಮೇ.8 ಕ್ಕೆ ಫಲಿತಾಂಶ, ಮೇ.23 ಕ್ಕೆ ಮೌಲ್ಯಮಾಪನ ಫಲಿತಾಂಶ ಪ್ರಕಟ)
ಪರೀಕ್ಷೆ -2: ಜೂನ್ 12 ರಿಂದ ಜೂನ್ 19 (ಜೂನ್ 29 ಕ್ಕೆ ಫಲಿತಾಂಶ ಪ್ರಕಟ, ಜುಲೈ 10 ರಂದು ಮರು ಮೌಲ್ಯಮಾಪನದ ಫಲಿತಾಂಶ ಪ್ರಕಟ)
ಪರೀಕ್ಷೆ -3: ಜೂನ್ 29 ರಿಂದ ಆಗಸ್ಟ್ 5 (ಆಗಸ್ಟ್ 19 ಫಲಿತಾಂಶ ಪ್ರಕಟ, ಆಗಸ್ಟ್ 26 ಮರುಮೌಲ್ಯಮಾಪನಾ ಫಲಿತಾಂಶ ಪ್ರಕಟ)
ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ
ಪರೀಕ್ಷೆ -1: ಮಾರ್ಚ್ 1 ರಿಂದ ಮಾರ್ಚ್ 25 ( ಎಪ್ರಿಲ್ 22 ಫಲಿತಾಂಶ ಪ್ರಕಟ, ಮೇ.10 ಮರುಮೌಲ್ಯಮಾಪನ ಫಲಿತಾಂಶ)
ಪರೀಕ್ಷೆ -2: ಮೇ.15 ರಿಂದ ಜೂನ್ 25 (ಜೂನ್ 21 ಫಲಿತಾಂಶ ಪ್ರಕಟ, ಜೂನ್ 29 ಮರುಮೌಲ್ಯಮಾಪನ ಫಲಿತಾಂಶ)
ಪರೀಕ್ಷೆ -3: ಜುಲೈ 12 ರಿಂದ ಜುಲೈ 30 (ಆಗಸ್ಟ್ 16 ಕ್ಕೆ ಫಲಿತಾಂಶ ಪ್ರಕಟ, ಮೇ.23 ಮರುಮೌಲ್ಯಮಾಪನದ ಫಲಿತಾಶ ಪ್ರಕಟ)
No comments:
Post a Comment