ಪಠ್ಯದಲ್ಲಿ ಭಾರತ ಬಳಕೆಗೆ NCERT ಸಮಿತಿ ಸೂಚನೆ
ಎನ್‌ಸಿಇಆರ್‌ಟಿ ಶಾಲಾ ಪಠ್ಯಗಳಲ್ಲಿ ಮುಂದಿನ ವರ್ಷದಿಂದ ಇಂಡಿಯಾ ಪದದ ಬದಲಿಗೆ ಭಾರತ ಎಂದು ಬಳಸಲು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನ ವಿಶೇಷ ಸಮಿತಿ ಸೂಚನೆ ನೀಡಿದೆ. ಈ ಕುರಿತ ಡೀಟೇಲ್ಸ್ ಇಲ್ಲಿದೆ ನೋಡಿ.
1 ರಿಂದ 12ನೇ ತರಗತಿವರೆಗಿನ ಶಾಲಾ ಪಠ್ಯಗಳಲ್ಲಿ 'India' (ಇಂಡಿಯಾ) ಹೆಸರಿನ ಬದಲಿಗೆ 'Bharat' (ಭಾರತ) ಎಂದು ಬಳಸುವಂತೆ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನ (ಎನ್‌ಸಿಇಆರ್‌ಟಿ) ಉನ್ನತಾಧಿಕಾರ ಸಮಿತಿಯು ಶಿಫಾರಸು ಮಾಡಿದೆ.
ಪಠ್ಯಕ್ರಮ ಪರಿಷ್ಕರಣೆ ಸಂಬಂಧ ಎನ್‌ಸಿಇಆರ್‌ಟಿ'ಯು ಪದ್ಮಶ್ರೀ ಪುರಸ್ಕೃತ ಪ್ರೊಫೆಸರ್ ಸಿ ಐ ಐಸಾಕ್ ನೇತೃತ್ವದಲ್ಲಿ ಸಾಮಾಜಿಕ ವಿಜ್ಞಾನಗಳ ಉನ್ನತ ಮಟ್ಟದ ಸಮಿತಿಯು ಈ ಶಿಫಾರಸು ಮಾಡಿದೆ. 7 ಸದಸ್ಯರನ್ನೊಳಗೊಂಡ ಈ ಸಮಿತಿಯು ಸರ್ವಾನುಮತದಿಂದ ಕೈಗೊಂಡಿರುವ ಶಿಫಾರಸನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಪಠ್ಯದಲ್ಲಿ ಜಾರಿಗೊಳಿಸುವುದು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತಿಗೆ ಬಿಟ್ಟ ವಿಷಯವಾಗಿದೆ.
7 ಸದಸ್ಯರನ್ನೊಳಗೊಂಡ ಸಮಿತಿಯು ಸರ್ವಾನುಮತದಿಂದ ಕೈಗೊಂಡಿರುವ ಶಿಫಾರಸನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸುವ ನಿರ್ಧಾರ ಎನ್‌ಸಿಇಆರ್‌ಟಿ ನಿರ್ಧಾರಕ್ಕೆ ಬಿಟ್ಟ ವಿಚಾರವಾಗಿದೆ ಎಂದು ಮೂಲಗಳು ಹೇಳಿವೆ. ಎನ್‌ಸಿಇಆರ್‌ಟಿ ರಚಿಸಿದ ಸಮಿತಿಯು, 'ಇಂಡಿಯಾ' ಹೆಸರಿನ ಬದಲಿಗೆ 'ಭಾರತ' ಎಂದು ಬದಲಿಸುವುದರ ಜತೆಗೆ ಪ್ರಾಚೀನ ಇತಿಹಾಸದ ಬದಲಿಗೆ ಶಾಸ್ತ್ರೀಯ ಇತಿಹಾಸ ಎಂದು ಪರಿಚಯಿಸಲು ಶಿಫಾರಸು ಮಾಡಿದೆ. ಅಲ್ಲದೇ, "ಅಷ್ಟಾಗಿ ಗಣನೆಗೆ ಬಾರದೇ ಇತಿಹಾಸದ ಪುಟಗಳಿಂದ ಹೊರಗುಳಿದಿರುವ ಮೊಘಲರ ವಿರುದ್ಧದ ಹಿಂದೂ ದೊರೆಗಳ ಗೆಲುವನ್ನು ಪಠ್ಯಕ್ರಮದಲ್ಲೂ ಸೇರ್ಪಡೆ ಮಾಡಬೇಕು ಹಾಗೂ 1947 ರಿಂದ ಇಂದಿನವರೆಗಿನ ಐತಿಹಾಸಿಕ ಘಟನೆಗಳನ್ನು ಪಠ್ಯಪುಸ್ತಕಗಳಲ್ಲಿ ಸೇರಿಸಬೇಕು," ಎಂದು ಸಮಿತಿಯು ಶಿಫಾರಸು ಮಾಡಿದೆ.
ಇನ್ನು ಭಾರತ ಪದದ ಬಳಕೆಗೆ ಸಮರ್ಥನೆ ನೀಡಿರುವ ಸಮಿತಿಯು, ಭಾರತ ಎಂಬುದು ಪ್ರಾಚೀನ ಹೆಸರು. 7 ಸಾವಿರ ವರ್ಷಗಳ ಪ್ರಾಚೀನ ವಿಷ್ಣುಪುರಾಣ ಸೇರಿದಂತೆ ಅನೇಕ ಗ್ರಂಥಗಳಲ್ಲಿ ಭಾರತ ಎಂಬ ಹೆಸರಿನ ಉಲ್ಲೇಖವಿದೆ. 1757ರ ಪ್ಲಾಸಿ ಕದನದ ನಂತರ ಈಸ್ಟ್ ಇಂಡಿಯಾ ಕಂಪನಿಯು ಭಾರತಕ್ಕೆ ಇಂಡಿಯಾ ಎಂದು ಬಳಸಲು ಆರಂಭಿಸಿತ್ತು. ಹಾಗಾಗಿ ಇಂಡಿಯಾ ಪದ ಬದಲಿಗೆ ಭಾರತ ಎಂಬ ಪದ ಬಳಸುವುದು ಸೂಕ್ತವಾಗಿದೆ. ಬ್ರಿಟಿಷರು ಭಾರತೀಯ ಇತಿಹಾಸವನ್ನು ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಎಂದು ಮೂರು ಹಂತಗಳಲ್ಲಿ ವರ್ಗೀಕರಿಸಿದ್ದಾರೆ. ಇದರಲ್ಲಿ ಭಾರತವನ್ನು ಕತ್ತಲೆಯಲ್ಲಿ ತೋರಿಸಲಾಗಿದ್ದು, ಅದರ ಮೇಲೆ ಬೆಳಕು ಚೆಲ್ಲುವ ಅಗತ್ಯವಿದೆ ಎಂದು ಹೇಳುವ ಮೂಲಕ ಸಮಿತಿ ಸಮರ್ಥನೆ ನೀಡಿದೆ.
No comments:
Post a Comment