Language: Kannada
ವಿಜ್ಞಾನ ರಸಪ್ರಶ್ನೆ – 2023
ಕಾರ್ಯಕ್ರಮದ ವಿವರಗಳು
ಜವಾಹರ್ ಲಾಲ್ ನೆಹರು ತಾರಾಲಯ, ಬೆಂಗಳೂರು ಆಯೋಜಿಸಿರುವ ಕನ್ನಡದಲ್ಲಿ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮಕ್ಕೆ ಆಸಕ್ತಿ ತೋರಿರುವ ನಿಮಗೆ ಧನ್ಯವಾದಗಳು ಮತ್ತು ಅಭಿನಂದನೆಗಳು.
ಒಟ್ಟು ಐದು ಸುತ್ತುಗಳನ್ನು ಹೊಂದಿರುವ ಈ ರಸಪ್ರಶ್ನೆಯು ಕೇವಲ ವಿಚಾರಗಳು, ಅಂಕಿ ಅಂಶಗಳು ಹಾಗೂ ಖಗೋಳೀಯ ಘಟನೆಗಳಿಗೆ ಸೀಮಿತವಾಗಿರದೆ ಪರಿಕಲ್ಪನೆಗಳ ತಿಳುವಳಿಕೆ, ವೈಜ್ಞಾನಿಕ ತತ್ತ್ವಗಳ ಮೂಲಕ ಸಮಸ್ಯೆಗಳನ್ನು ಬಗೆಹರಿಸುವುದು ಹಾಗೂ ತತ್ತ್ವಗಳನ್ನು ಬಳಸುವುದು – ಇವುಗಳ ಪರೀಕ್ಷೆಯಾಗಿರುತ್ತದೆ.
ಹಂತ ೧: ಇದು ಇಡೀ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಬಹು ಆಯ್ಕೆಯ ಪ್ರಶ್ನೆಗಳ ಪರೀಕ್ಷೆ, ಈ ಹಂತದಲ್ಲಿ ಶೇಕಡ ೭೦ ಕ್ಕಿಂತ ಹೆಚ್ಚು ಅಂಕ ಗಳಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಇ-ಪ್ರಶಂಸಾ ಪತ್ರವನ್ನು ನೀಡಲಾಗುವುದು.
ಕರ್ನಾಟಕದ ನಾಲ್ಕು ವಿಭಾಗಗಳಾದ ಬೆಂಗಳೂರು, ಬೆಳಗಾವಿ, ಕಲ್ಬುರ್ಗಿ ಮತ್ತು ಮೈಸೂರು, ಇವುಗಳಿಂದ, ಮೊದಲ ಹಂತದಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಮೊದಲ ನೂರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನದ ಜೊತೆಗೆ ಪುಶಂಸಾ ಪತ್ರವನ್ನು ನೀಡಲಾಗುವುದು.
ಹಂತ ೨: ಪ್ರತಿ ವಿಭಾಗದಿಂದ ಆಯ್ಕೆಯಾದ ನೂರು ವಿದ್ಯಾರ್ಥಿಗಳು ತಮ್ಮ ತಮ್ಮ ವಿಭಾಗದಲ್ಲಿನ ನಿಗದಿತ ವಿಜ್ಞಾನ ಕೇಂದ್ರದಲ್ಲಿ ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸುತ್ತಾರೆ. ಲಿಖಿತ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಹದಿನಾರು ವಿದ್ಯಾರ್ಥಿಗಳನ್ನು ಪ್ರತಿ ವಿಭಾಗದಿಂದ ಆಯ್ಕೆ ಮಾಡಲಾಗುತ್ತದೆ. ಉಳಿದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಂಸಾ ಪತ್ರವನ್ನು ನೀಡಲಾಗುವುದು.
ಹಂತ ೩: ಪ್ರತಿ ವಿಭಾಗದಲ್ಲೂ ಮೂರನೇ ಹಂತದವರೆಗೆ ಆಯ್ಕೆಯಾದ ೧೬ ವಿದ್ಯಾರ್ಥಿಗಳನ್ನು ೪ ತಂಡಗಳಾಗಿ ವಿಂಗಡಿಸಿ ರಸಪ್ರಶ್ನೆ ನಡೆಸಲಾಗುವುದು. ಪ್ರತಿ ತಂಡದಲ್ಲಿ ಮೊದಲು ಬಂದ ನಾಲ್ಕು ವಿದ್ಯಾರ್ಥಿಗಳು ಮುಂದಿನ ಸುತ್ತಿಗೆ ಆಯ್ಕೆಯಾಗುತ್ತಾರೆ. ಉಳಿದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಂಸಾ ಪತ್ರ ನೀಡಲಾಗುವುದು.
ಹಂತ ೪: ಆಯ್ಕೆಯಾದ ನಾಲ್ಕು ವಿದ್ಯಾರ್ಥಿಗಳಿಗೆ ಪುನ: ರಸಪ್ರಶ್ನೆ ನಡೆಸಿ, ಪ್ರತಿ ವಿಭಾಗದಿಂದ ಒಬ್ಬ ವಿದ್ಯಾರ್ಥಿಯನ್ನು ಆಯ್ಕೆ ಮಾಡಲಾಗುವುದು. ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪಶಂಸಾ ಪತ್ರ ನೀಡಲಾಗುವುದು. ಉಳಿದ
ಹಂತ ೫: ನಾಲ್ಕೂ ವಿಭಾಗದಿಂದ ವಿಜೇತರಾದ ವಿದ್ಯಾರ್ಥಿಗಳಿಗೆ ಕೊನೆಯ ಹಂತದ ರಸಪ್ರಶ್ನೆಯನ್ನು ಬೆಂಗಳೂರಿನಲ್ಲಿ ನಡೆಸಲಾಗುವುದು. ಇದರಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ಎರಡು ತೃತೀಯ ಬಹುಮಾನಗಳನ್ನು ನೀಡಲಾಗುವುದು.
ಪ್ರಥಮ ಬಹುಮಾನ- ರೂ.10,000
ದ್ವಿತೀಯ ಬಹುಮಾನ- ರೂ. 7,500
ತೃತೀಯ ಬಹುಮಾನ- ರೂ. 5000
(ಇಬ್ಬರಿಗೆ)
ಈ ಸ್ಪರ್ಧೆಗೆ ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ : ೩೦ ಆಗಸ್ಟ್ ೨೦೨೩
ಅಣಕು ಪರೀಕ್ಷೆಯನ್ನು ಆಗಸ್ಟ್ ೩೦ ಮತ್ತು ಆಗಸ್ಟ್ ರಂದು ತೆಗೆದುಕೊಳ್ಳಬಹುದು. ಲಿಂಕ್ ಅನ್ನು ನೋಂದಾಯಿತ ಇಮೇಲ್‌ಗೆ ಕಳುಹಿಸಲಾಗುವುದು.
ಪರೀಕ್ಷೆಯ ವಿವರಗಳು:
ಮೊದಲನೇ ಹಂತವು ಆನ್ಸನ್ ಪ್ರವೇಶ ಪರೀಕ್ಷೆ ಆಗಿರುತ್ತದೆ. ಈ ಪರೀಕ್ಷೆಯಲ್ಲಿ ೨೫ ಪ್ರಶ್ನೆಗಳನ್ನು ೩೦ ನಿಮಿಷಗಳಲ್ಲಿ ಉತ್ತರಿಸಬೇಕಾಗಿರುತ್ತದೆ. ಈ ಪರೀಕ್ಷೆಯನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎರಡು ಪ್ರತ್ಯೇಕ ದಿನಗಳಲ್ಲಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಈ ಎರಡು ದಿನದಲ್ಲಿ ತಮಗೆ ಅನುಕೂಲವಾದ ದಿನ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು ಅಥವಾ ಎರಡೂ ದಿನ ತೆಗೆದುಕೊಳ್ಳಬಹುದು. ವಿದ್ಯಾರ್ಥಿಗಳು ಎರಡೂ ಪರೀಕ್ಷೆಯನ್ನು ತೆಗೆದುಕೊಂಡ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ತೋರಿದ ಪರೀಕ್ಷೆಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಉತ್ತಮ ಪುದರ್ಶನವು ಹೆಚ್ಚಿನ ಅಂಕ ಮತ್ತು ಪರೀಕ್ಷೆಗೆ ತೆಗೆದುಕೊಂಡ ಸಮಯಗಳ ಮೇಲೆ ನಿರ್ಧರಿತವಾಗುತ್ತದೆ.
ಆನ್‌ಲೈನ್ ಪ್ರವೇಶ ಪರೀಕ್ಷೆ
೧: ೨ ಸೆಪ್ಟೆಂಬರ್ ೨೦೨೩ ಆನ್‌ಲೈನ್ ಪ್ರವೇಶ ಪರೀಕ್ಷೆ
೨ : ೩ ಸೆಪ್ಟೆಂಬರ್ ೨೦೨೩
ಸಮಯ: ಬೆಳಿಗ್ಗೆ ೧೧:೦೦ ರಿಂದ ೧೨:೦೦
ಈ ಸ್ಪರ್ಧೆಗೆ ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ : ೩೦ ಆಗಸ್ಟ್ ೨೦೨೩
ಅಣಕು ಪರೀಕ್ಷೆಯನ್ನು ಆಗಸ್ಟ್ ೩೦ ಮತ್ತು ಆಗಸ್ಟ್ ೩೧ ರಂದು ತೆಗೆದುಕೊಳ್ಳಬಹುದು. ಲಿಂಕ್ ಅನ್ನು ನೋಂದಾಯಿತ ಇಮೇಲ್‌ಗೆ ಕಳುಹಿಸಲಾಗುವುದು.
ಪರೀಕ್ಷೆಯ ವಿವರಗಳು:
ಮೊದಲನೇ ಹಂತವು ಆನ್ಸನ್ ಪ್ರವೇಶ ಪರೀಕ್ಷೆ ಆಗಿರುತ್ತದೆ. ಈ ಪರೀಕ್ಷೆಯಲ್ಲಿ ೨೫ ಪ್ರಶ್ನೆಗಳನ್ನು ೩೦ ನಿಮಿಷಗಳಲ್ಲಿ ಉತ್ತರಿಸಬೇಕಾಗಿರುತ್ತದೆ. ಈ ಪರೀಕ್ಷೆಯನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎರಡು ಪ್ರತ್ಯೇಕ ದಿನಗಳಲ್ಲಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಈ ಎರಡು ದಿನದಲ್ಲಿ ತಮಗೆ ಅನುಕೂಲವಾದ ದಿನ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು ಅಥವಾ ಎರಡೂ ದಿನ ತೆಗೆದುಕೊಳ್ಳಬಹುದು. ವಿದ್ಯಾರ್ಥಿಗಳು ಎರಡೂ ಪರೀಕ್ಷೆಯನ್ನು ತೆಗೆದುಕೊಂಡ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ತೋರಿದ ಪರೀಕ್ಷೆಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಉತ್ತಮ ಪುದರ್ಶನವು ಹೆಚ್ಚಿನ ಅಂಕ ಮತ್ತು ಪರೀಕ್ಷೆಗೆ ತೆಗೆದುಕೊಂಡ ಸಮಯಗಳ ಮೇಲೆ ನಿರ್ಧರಿತವಾಗುತ್ತದೆ.
ಆನ್‌ಲೈನ್ ಪ್ರವೇಶ ಪರೀಕ್ಷೆ ೧: ೨ ಸೆಪ್ಟೆಂಬರ್ ೨೦೨೩
ಆನ್‌ಲೈನ್ ಪ್ರವೇಶ ಪರೀಕ್ಷೆ ೨ : ೩ ಸೆಪ್ಟೆಂಬರ್ ೨೦೨೩
ಸಮಯ: ಬೆಳಿಗ್ಗೆ ೧೧:೦೦ ರಿಂದ ೧೨:೦೦
ಈ ಪ್ರವೇಶ ಪರೀಕ್ಷೆಗಳಿಗೆ ಲಿಂಕ್ ಅನ್ನು ತಮಗೆ ಈ-ಮೇಲ್ ಮೂಲಕ ಕಳುಹಿಸಲಾಗುವುದು. ಈ ಪರೀಕ್ಷೆಯ ಫಲಿತಾಂಶವನ್ನು ಈ-ಮೇಲ್ ಹಾಗೂ ನಮ್ಮ ಜಾಲತಾಣ www.taralaya.org ದ ಮೂಲಕ ತಿಳಿಸಲಾಗುವುದು. ನಮ್ಮ ಈ-ಮೇಲ್‌ಗಾಗಿ ವಿದ್ಯಾರ್ಥಿಗಳು ತಮ್ಮ inbox ಮತ್ತು spam/junk ಫೋಲ್ಮರ್‌ಗಳನ್ನೂ ಸಹ ಪರಶೀಲಿಸತಕ್ಕದ್ದು.
ಸ್ಪರ್ಧೆಯ ನಿಯಮಗಳು
೧. ಈ ಸ್ಪರ್ಧೆಯು ಪುಸಕ್ತ ಸಾಲಿನಲ್ಲಿ ಕರ್ನಾಟಕ ರಾಜ್ಯದಲ್ಲಿ ೮,೯ಮತ್ತು ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ. ಈ ಬಗ್ಗೆ ಸೂಕ್ತ ಗುರುತಿನ ಚೀಟಿಯನ್ನು ತೋರಿಸಬೇಕು ಇಲ್ಲವಾದಲ್ಲಿ ನಿಮ್ಮನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗುವುದು.
೨. ಈ ಸ್ಪರ್ಧೆಗೆ ಅಭ್ಯರ್ಥಿಗಳು ತಾವೇ ಖುದ್ದು ನೋಂದಾಯಿಸಿಕೊಳ್ಳಬೇಕು
೩. ಈ ಸ್ಪರ್ಧೆಯು ಕೇವಲ ಕನ್ನಡದಲ್ಲಿ ಇರುತ್ತದೆ.
೪. ಈ ಸ್ಪರ್ಧೆಗೆ ಸಂಬಂಧಪಟ್ಟ ಎಲ್ಲಾ ವಿಷಯಗಳು/ಮಾರ್ಪಾಟುಗಳ ಅಂತಿಮ ನಿರ್ಧಾರವನ್ನು ಜವಾಹರ್‌ಲಾಲ್ ನೆಹರು ತಾರಾಲಯ ಕಾಯ್ದಿರಿಸಿದ.
೫. ಎಲ್ಲ ಹಂತಗಳಲ್ಲೂ ಸ್ಪರ್ಧೆಯ ಆಯೋಜಕರಾದ ಜವಾಹರ್ ಲಾಲ್ ನೆಹರು ತಾರಾಲಯದ ನಿರ್ಧಾರವೇ ಅಂತಿಮವಾಗಿರುತ್ತದೆ. ಯಾವುದೇ ರೀತಿಯ ಪರಿಶೀಲನೆ, ಪುನರ್ ಪರಿಶೀಲನೆ ಅಥವಾ ಮಾರ್ಪಾಡುಗಳಿಗೆ ಅವಕಾಶವಿರುವುದಿಲ್ಲ.
೬. ಯಾವುದೇ ಮುನ್ಸೂಚನೆ ನೀಡದೆ ಸ್ಪರ್ಧೆಯ ನಿಯಮಗಳನ್ನು, ಹಂತಗಳನ್ನು ಬದಲಿಸುವ ಹಕ್ಕು ಆಯೋಜಕರಾದ ಜವಾಹರ್ ಲಾಲ್ ನೆಹರು ತಾರಾಲಯವು ಹೊಂದಿರುತ್ತದೆ.
೭. ಯಾವುದೇ ಸ್ಪರ್ಧಿಯ ವರ್ತನೆ /ಭಾಗವಹಿಸುವಿಕೆ ನಿಯಮ ಬಾಹಿರವೆಂದು ತಿಳಿದುಬಂದರೆ, ಸ್ಪರ್ಧೆಯ ಯಾವುದೇ ಹಂತದಲ್ಲಿ, ಸ್ಪರ್ಧಿಯನ್ನು ಅನರ್ಹಗೊಳಿಸುವ ಹಕ್ಕು ಜವಾಹರ್ ಲಾಲ್ ನೆಹರು ತಾರಾಲಯ, ಬೆಂಗಳೂರು ಹೊಂದಿರುತ್ತದೆ.
೮, ಯಾವುದೇ ವಿವಾದಗಳು/ತಕರಾರುಗಳು ಕೇವಲ ಬೆಂಗಳೂರು ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟಿರುತ್ತದೆ.
೯. ಸ್ಪರ್ಧಿಯು, ಸ್ಪರ್ಧೆಯ ఎల్ల ನಿಯಮಗಳನ್ನು ನೋಂದಾಯಿಸಿಕೊಂಡಿರುತ್ತಾರೆ ಎಂದು ತಿಳಿಯಲಾಗಿದೆ.
೧೦. ಭಾಗವಹಿಸುವವರ ಕಡೆಯಿಂದ ಉಂಟಾಗುವ ಯಾವುದೇ ತಾಂತ್ರಿಕ ತೊಂದರೆಗಳಿಗೆ ತಾರಾಲಯವು ಜವಾಬ್ದಾರಿಯಲ್ಲ.
Which Department : Education
Central OR State Information: State
Location : Karnataka
Published Date : 01-07-2023
Information Term : Short
Purpose of Information : Teachers
Information Format : PDF
Information Size :854kb
Number of Pages : 12
Scanned Copy : Yes
Information Editable Text : No
Password Protected : No
Image Available : Yes
Download Link Available : Yes
Copy Text : No
Information Print Enable : Yes
File Quality : High
File size Reduced : No
File Password : No
File size Reduced : No
File Password : No
Rate : Free of cost
For Personal Use Only

No comments:
Post a Comment