Language: Kannada
ಇಲಾಖಾ ವಿಚಾರಣೆಯಲ್ಲಿನ ಪ್ರಕ್ರಿಯೆಗಳು ಶಿಸ್ತು ಪ್ರಾಧಿಕಾರ / ವಿಚಾರಣಾಧಿಕಾರಿ ಇಲಾಖಾ ವಿಚಾರಣೆಯಲ್ಲಿ ಶಿಸ್ತು ಪ್ರಾಧಿಕಾರ ಮಾಡುವ ಪ್ರಕ್ರಿಯೆಯನ್ನು ಶಿಸ್ತು ಪ್ರಾಧಿಕಾರಿಗಳು ನೇಮಿಸುವ ವಿಚಾರಣಾಧಿಕಾರಿಗಳು ಮಾಡಬಹುದೇ?
ಇಲಾಖಾ ವಿಚಾರಣೆಯಲ್ಲಿನ ಪ್ರಕ್ರಿಯೆಗಳು ಶಿಸ್ತು ಪ್ರಾಧಿಕಾರ / ವಿಚಾರಣಾಧಿಕಾರಿ ಇಲಾಖಾ ವಿಚಾರಣೆಯಲ್ಲಿ ಶಿಸ್ತು ಪ್ರಾಧಿಕಾರ ಮಾಡುವ ಪ್ರಕ್ರಿಯೆಯನ್ನು ಶಿಸ್ತು ಪ್ರಾಧಿಕಾರಿಗಳು ನೇಮಿಸುವ ವಿಚಾರಣಾಧಿಕಾರಿಗಳು ಮಾಡಬಹುದೇ?
ಇಲಾಖಾ ವಿಚಾರಣೆಯಲ್ಲಿ ಕ.ನಾ.ಸೇ (ಸಿಸಿಎ) ನಿಯಮಗಳು 1957ರಲ್ಲಿನ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ. ಇಲ್ಲವಾದಲ್ಲಿ ಅಂತಹ ಪ್ರಕ್ರಿಯೆ ಲೋಪಗಳಿಂದ ಒಳಗೊಂಡ ಇಲಾಖಾ ವಿಚಾರಣೆಯು ಸಿಂಧುವಾಗುವುದಿಲ್ಲ. ಮೇಲ್ಮನವಿ/ಪರಿಷ್ಕರಣಾ ಮೇಲ್ಮನವಿ ಪ್ರಾಧಿಕಾರ / ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ ಅಂತಹ ಇಲಾಖಾ ವಿಚಾರಣೆ ಮತ್ತು ಆದೇಶಗಳು ರದ್ದುಗೊಳ್ಳುತ್ತವೆ.
ಕರ್ನಾಟಕ ಸಿವಿಲ್ ಸೇವಾ (ಸಿಸಿಎ) ನಿಯಮಗಳು 1957ರ ನಿಯಮಗಳ 11 ರಡಿ ಕೈಗೊಳ್ಳುವ ವಿಚಾರಣೆಯಲ್ಲಿನ ಉಪ ನಿಯಮ(3) ರನ್ವಯ ಆರೋಪ ಪಟ್ಟಿಯನ್ನು ಶಿಸ್ತು ಪ್ರಾಧಿಕಾರವು ಸಿದ್ಧಪಡಿಸಬೇಕು, ಅಂತಹ ಆರೋಪಪಟ್ಟಿಯನ್ನು ಉಪನಿಯಮ (4) ರನ್ವಯ ಆಪಾದಿತನಿಗೆ ಜಾರಿ ಮಾಡಿ ಸಮಜಾಯಿಷಿ ಪಡೆಯಬೇಕು. ಉಪವಿನಿಯಮ (5)(ಎ) ರನ್ವಯ ಸಮಜಾಯಿಷಿಯನ್ನು ಒಪ್ಪದಿದ್ದಲ್ಲಿ ಶಿಸ್ತು ಪ್ರಾಧಿಕಾರವೇ ವಿಚಾರಣೆ ಮಾಡಬಹುದು ಅಥವಾ ವಿಚಾರಣಾಧಿಕಾರಿಯನ್ನು ಮತ್ತು ಮಂಡನಾಧಿಕಾರಿಯನ್ನು ಉಪನಿಯಮ (5)(ಸಿ) ರನ್ವಯ ನೇಮಕ ಮಾಡಬೇಕು. ಉಪನಿಯಮ (6)(i) ರನ್ವಯ ಆರೋಪ ಪಟ್ಟಿ, (6) (ii) ರನ್ವಯ ಆರೋಪಗಳ ವಿವರ (6)(iii) ರನ್ವಯ ಆರೋಪಗಳಿಗೆ ಪೂರಕವಾದ ಸಾಕ್ಷಿಗಳ ವಿವರ ಹಾಗೂ (6)(vi) ರನ್ವಯ ಮಂಡನಾಧಿಕಾರಿ ನೇಮಕಾತಿ ಆದೇಶವನ್ನು ವಿಚಾರಣಾಧಿಕಾರಿಯವರಿಗೆ ಕಳುಹಿಸಬೇಕು. ಆರೋಪಪಟ್ಟಿಯನ್ನು ಶಿಸ್ತು ಪ್ರಾಧಿಕಾರಿಯ ಸಹಿಯ ಅಡಿಯಲ್ಲಿ ಮಾತ್ರ ಹೊರಡಿಸಬೇಕು. ಆದರೆ, ಈ ನಿಯಮಗಳನ್ನು ಪಾಲಿಸದೆ ದೋಷಾರೋಪಣಾ ಪಟ್ಟಿಯನ್ನು ಹೊರಡಿಸಿ ಇಲಾಖಾ ವಿಚಾರಣೆ ಕೈಗೊಂಡರೆ ಅಂತಹ ವಿಚಾರಣೆ ಅಸಿಂಧುವಾಗುತ್ತದೆ.
ಶಿಸ್ತು ಪ್ರಾಧಿಕಾರವಲ್ಲದ ಪ್ರಾಧಿಕಾರವು ಆರೋಪ ಪಟ್ಟಿಯನ್ನು ಹೊರಡಿಸುವಂತಿಲ್ಲವೆಂದು ಭಾರತದ ಸರ್ವೋಚ್ಛ ನ್ಯಾಯಾಲಯವು ಮಧ್ಯಪ್ರದೇಶ ಸರ್ಕಾರ ಶ್ರೀ ಶಾರ್ದೂಲ ಸಿಂಗ್ 1970 1 ಎಸ್ಪಿಎನ್ 108 ಈ ಪ್ರಕರಣದಲ್ಲಿ ಆದೇಶ ನೀಡಿದೆ. ಹಾಗೂ ನೌಕರನ ವಿರುದ್ಧ ಅಪಾದನೆಗಳು ನಿಖರವಾಗಿ, ನೇರವಾಗಿ, ನಿರ್ದಿಷ್ಟವಾಗಿ ಇರಬೇಕು. ಆದರೆ ನಿರಾಧಾರ, ಅಸ್ಪಷ್ಟ ಸಂಶಯಾಸ್ಪದ ಆಗಿರಬಾರದೆಂದು ಸಹಾ ತಿಲಿಸಿದೆ ಈ ಬಗ್ಗೆ ಕರ್ನಾಟಕ ಸಿವಿಲ್ ಸೇವಾ (ಸಿಸಿಎ) ನಿಯಮಗಳು 1957ರ ನಿಯಮ 11(3)(4) ರಲ್ಲಿ ಸ್ಪಷ್ಟವಾಗಿರಬೇಕು ಎಂದು ತಿಳಿಸಲಾಗಿದೆ. ಅಪಾದಿತರ ವಿರುದ್ಧ ಆರೋಪ ಪಟ್ಟಿಯನ್ನು ಸಿದ್ಧಪಡಿಸುವಾಗ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕೇವಲ ಸಂಶಯ ಅಥವಾ ಗುಮಾನಿ ಅಥವಾ ಹಾರಿಕೆಯ ಮೇಲಿನ ಆರೋಪಗಳು ಸತ್ಯದ ಸ್ಥಾನ ಪಡೆಯುವುದಿಲ್ಲವೆಂದು ಭಾರತದ ಸರ್ವೋಚ್ಛ ನ್ಯಾಯಾಲಯವು ಎಚ್.ಸಿ. ಗೋಯಿಲ್ ವಿರುದ್ಧ ಭಾರತೀಯ ಒಕ್ಕೂಟ (ಎಐಆರ್ 1964 ಎಸ್ಸಿ 364) ಹಾಗೂ ಉತ್ತರ ಪ್ರದೇಶ ರಾಜ್ಯ ವಿರುದ್ಧ ಮೊಹಮದ್ ಶರೀಫ್ (ಎಐಆರ್ 1982 ಎಸ್ಸಿ 937) ಪ್ರಕರಣಗಳಲ್ಲಿ ಸ್ಪಷ್ಟವಾಗಿ ತಿಳಿಸಿದೆ.
Which Department : Education
Central OR State Information: State
Location : Karnataka
Published Date : 01-07-2023
Information Term : Short
Purpose of Information : Teachers
Information Format : PDF
Information Size :854kb
Number of Pages : 12
Scanned Copy : Yes
Information Editable Text : No
Password Protected : No
Image Available : Yes
Download Link Available : Yes
Copy Text : No
Information Print Enable : Yes
File Quality : High
File size Reduced : No
File Password : No
File size Reduced : No
File Password : No
Rate : Free of cost
For Personal Use Only

No comments:
Post a Comment