Saturday, August 12, 2023

Parents are reluctant to enroll their children in state curriculum school, what is the reason???

  Wisdom News       Saturday, August 12, 2023
Heading: Parents are reluctant to enroll their children in state curriculum school, what is the reason??


Language: Kannada


ಕರ್ನಾಟಕ, ಆಗಸ್ಟ್‌, 10: ಮಕ್ಕಳನ್ನು ರಾಜ್ಯ ಪಠ್ಯಕ್ರಮ ಶಾಲೆಗೆ ಸೇರಿಸಲು ಪಾಲಕರು ಹಿಂದೇಟು ಹಾಕುತ್ತಾ ಇದ್ದಾರಾ ಅನ್ನುವ ಅನುಮಾನಗಳು ಕಾಡುತ್ತಿದೆ. 



ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ.



 ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ದಾಖಲಾತಿ ಸಂಖ್ಯೆಯಲ್ಲಿ ತುಂಬಾ ಇಳಿಕೆ ಕಂಡಿದ್ದು, ಪೋಷಕರು ಕೂಡ ಈ ವಿಚಾರಕ್ಕೆ ಶಿಕ್ಷಣ ಇಲಾಖೆಯತ್ತ ಬೊಟ್ಟು ಮಾಡಿ ತೋರಿಸುತ್ತಾ ಇದ್ದಾರೆ.



ಕಳೆದ ವರ್ಷಕ್ಕಿಂತ ಈ ಬಾರಿ ದಾಖಲಾತಿ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡಿರುವುದಕ್ಕೆ ಕೇಂದ್ರೀಯ ಶಿಕ್ಷಣದತ್ತ ಮಕ್ಕಳು ಮನಸ್ಸು ಮಾಡಲು ಶಿಕ್ಷಣ ಇಲಾಖೆ ಕಾರಣ ಅಂತ ಕಿಡಿ ಕಾರಿದ್ದಾರೆ.



ಅಷ್ಟಕ್ಕೂ ಈ ಬಾರಿ ರಾಜ್ಯ ಪಠ್ಯಕ್ರಮ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ.


 ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು ಲಕ್ಷ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. 


ಶಿಕ್ಷಣ ಇಲಾಖೆ ವ್ಯಾಪ್ತಿಯ ರಾಜ್ಯ ಪಠ್ಯಕ್ರಮ ಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಕುಸಿತ ಆಗುತ್ತಿರುವುದು ಸ್ಯಾಟ್ಸ್ ಅಲ್ಲಿ ಅಪ್ಲೋಡ್ ಮಾಡಿದ ಮಾಹಿತಿಯಲ್ಲಿ ಸಿಕ್ಕಿದೆ.



ಜುಲೈ 31ರವರೆಗೆ 1-10ನೇ ತರಗತಿ ವಿದ್ಯಾರ್ಥಿಗಳ ಮಾಹಿತಿಯನ್ನು ಶಿಕ್ಷಣ ಇಲಾಖೆ ಸಲ್ಲಿಕೆ ಮಾಡಿದ್ದು, ಇಲಾಖೆ ಮಾಹಿತಿ ಪ್ರಕಾರ ಇದುವರೆಗೂ 1,01,51,162 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.


 ಇನ್ನೂ ಕಳೆದ ವರ್ಷ 1,06,45,ಸಾವಿರ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.


 ಈ ರೀತಿ ದಾಖಲಾತಿ ಕುಸಿಯಲು ಮುಖ್ಯ ಕಾರಣ ಏನೆಂಬುದನ್ನು ಮಕ್ಕಳ ಪೋಷಕರು ಬಿಚ್ಚಿಟ್ಟಿದ್ದಾರೆ.


ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಕಳೆದ ವರ್ಷ ಕೆಲ ಕೇಂದ್ರೀಯ ಶಿಕ್ಷಣ ಅನುಸರಿಸುವ ಶಾಲೆಗಳಲ್ಲಿ ಫೀಸ್ ಒನ್ ಟು ಡಬಲ್ ಇತ್ತು. ಈ ಹಿನ್ನಲೆ ಅನೇಕರು ಕಳೆದ ಬಾರಿ ರಾಜ್ಯ ಪಠ್ಯಕ್ರಮದ ಶಾಲೆಗೆ ದಾಖಲು ಮಾಡಿದ್ದರು. ಈ ವರ್ಷ ಮತ್ತೆ ಫೀಸ್ ಮೊದಲಿನ ಹಾಗೇ ಆಗಿರುವುದರಿಂದ ಕೇಂದ್ರ ಪಠ್ಯ ಕ್ರಮಕ್ಕೆ ಬೇಡಿಕೆ ಜಾಸ್ತಿ ಆಗಿದೆ.



ಇದರ ಜೊತೆಗೆ ಒಂದನೇ ತರಗತಿಗೆ ದಾಖಲಾತಿಗೆ 6 ವರ್ಷ ಕನಿಷ್ಠ ವಯೋಮಾನ ನಿಗದಿ ಮಾಡಿರುವ ಸರ್ಕಾರದ ನಿಯಮ ಕೂಡ ದಾಖಲಾತಿ ಕುಸಿಯಲು ಕಾರಣ ಆಗುತ್ತಿದೆ. ಈ ನಿಯಮ 2025/26ನೇ ಸಾಲಿನಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಆದರೂ ಕೆಲವು ಕಡೆ ಈಗಾಗಲೇ ಜಾರಿ ಮಾಡಿರುವ ಕಾರಣ ಮಕ್ಕಳ ಸಂಖ್ಯೆ ಕುಸಿತಕ್ಕೆ ಕಾರಣ ಆಗುತ್ತಿದೆ.

ವಯೋಮಿತಿ ಕಾರಣಕ್ಕೆ ನರ್ಸರಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳು ಉಳಿಯುವಂತಾಗಿದೆ. ಇನ್ನು ಸರ್ಕಾರಿ ಶಾಲೆ ಮಧ್ಯಾಹ್ನದ ಬಿಸಿಯೂಟ ಸಮವಸ್ತ್ರ ಸರ್ಕಾರಿ ಸೌಲಭ್ಯ ಪಡೆಯಲು ನಕಲುವಿದ್ಯಾರ್ಥಿಗಳ ಮಾಹಿತಿ ಸಲ್ಲಿಕೆ ಮಾಡುತ್ತಿದ್ದರು. 



ಆದರೆ ಈಗ ಸೇರ್ಪಡೆಯಾಗುವ ಪ್ರತೀ ವಿದ್ಯಾರ್ಥಿಗೂ ಆಧಾರ್ ನಂಬರ್ ಕಡ್ಡಾಯ ಮಾಡಿರುವುದರಿಂದ ಹಾಗೂ ವಿದ್ಯಾರ್ಥಿಗಳಿಗೆ ಸ್ಯಾಟ್ಸ್ ನಂಬರ್ ನೀಡುವುದರಿಂದ ನಕಲಿ ಮಾಹಿತಿಗೆ ಬ್ರೇಕ್ ಬಿದ್ದಿದೆ.



Which Department : Education



Central OR State Information: State



Location : Karnataka



Published Date : 01-07-2023



Information Term : Short



Purpose of Information : Teachers



Information Format : PDF



Information Size :854kb



Number of Pages : 12



Scanned Copy : Yes



Information Editable Text : No



Password Protected : No



Image Available : Yes



Download Link Available : Yes



Copy Text : No



Information Print Enable : Yes



File Quality : High



File size Reduced : No



File Password : No



File size Reduced : No



File Password : No


Rate : Free of cost


For Personal Use Only


logoblog

Thanks for reading Parents are reluctant to enroll their children in state curriculum school, what is the reason???

Previous
« Prev Post

No comments:

Post a Comment