Language: Kannada
ಬೆಂಗಳೂರು: ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರ ದೊಡ್ಡ ಪ್ರಮಾಣದ ವರ್ಗಾವರ್ಗಿ ಪ್ರಕ್ರಿಯೆ ನಡೆದಿದ್ದು, ಸರ್ಕಾರಿ ಶಾಲೆಗಳನ್ನೇ ಮುಚ್ಚಬೇಕಾದ ಭೀತಿ ಮೂಡಿದೆ.
ಅಂತರವಿಭಾಗ ವರ್ಗಾವಣೆ ಲಾಭ ಪಡೆದ ಸಾವಿರಾರು ಶಿಕ್ಷಕರು ಸ್ವಂತ ಜಿಲ್ಲೆಗೆ ವರ್ಗಾವಣೆ ಆಗಿದ್ದು, ನೂರಾರು ಶಾಲೆಗಳು ಕಾಯಂ ಶಿಕ್ಷಕರಿಲ್ಲದೆ ಬೆರಳೆಣಿಕೆಯಷ್ಟು ಅತಿಥಿ ಶಿಕ್ಷಕರನ್ನೇ ನೆಚ್ಚಿಕೊಳ್ಳಬೇಕಾಗಿದೆ.
ಇದರಿಂದಾಗಿ ಸರ್ಕಾರಿ ಶಾಲೆಗಳ ಮಕ್ಕಳ ಕಲಿಕೆಗೆ ಹೊಡೆತ ಬಿದ್ದಿದ್ದು, ಅದರಲ್ಲೂ ಶೈಕ್ಷಣಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕದ ಶಾಲೆಗಳನ್ನು ಬಿಸಿಯೂಟಕ್ಕಷ್ಟೇ ತೆರೆದಿಡಬೇಕಾದ ದುಃಸ್ಥಿತಿಯ ಆತಂಕ ವ್ಯಕ್ತವಾಗಿದೆ.
ಆ.11ಕ್ಕೆ ಪ್ರಕ್ರಿಯೆ ಪೂರ್ಣ: ಪ್ರಾಥಮಿಕ, ಪ್ರೌಢ ಶಾಲೆಗಳ ಸಹಶಿಕ್ಷಕರ ತಾಲೂಕು, ಜಿಲ್ಲೆ, ವಿಭಾಗೀಯ, ನಂತರ ಅಂತರ ವಿಭಾಗದ ವರ್ಗಾವಣೆಗೆ ಕೌನ್ಸೆಲಿಂಗ್ ಚಾಲ್ತಿಯಲ್ಲಿದೆ. ಆ.11ಕ್ಕೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಈಗಾಗಲೇ ಅಂತರವಿಭಾಗೀಯ ವರ್ಗಾವಣೆ ಜತೆಗೆ ಚಾಲನಾ (ಮೂವ್ವೆುಂಟ್) ಆದೇಶ ಪಡೆದ ಅನೇಕ ಶಿಕ್ಷಕರು, ಕರ್ತವ್ಯದಿಂದ ಬಿಡುಗಡೆಯಾಗಿ ಬಯಸಿದ ಜಿಲ್ಲೆ, ಸ್ಥಳಕ್ಕೆ ತೆರಳಿದ್ದಾರೆ.
ದೊಡ್ಡ ಪಲ್ಲಟ: ಈ ಬೆಳವಣಿಗೆಯ ನಂತರ ಸರ್ಕಾರಿ ಶಾಲೆಗಳಲ್ಲಿ ದೊಡ್ಡ ಪಲ್ಲಟವಾಗಿದೆ. ಕಲ್ಯಾಣ ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಗಡಿಗಳಿಗೆ ಹೊಂದಿಕೊಂಡ ಸರ್ಕಾರಿ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಸಂಖ್ಯೆ ಶೂನ್ಯಕ್ಕೆ ಇಳಿದಿದೆ.
ಪೂರ್ಣ ಪ್ರಮಾಣದ ವರ್ಗಾವಣೆ ಮುಗಿದ ಬಳಿಕ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳ ಮತ್ತಷ್ಟು ಕ್ಷೋಭೆ, ಕಟು ವಾಸ್ತವದ ಸ್ಥಿತಿ ಹೊರಬೀಳಲಿದೆ ಎಂಬ ದಿಗಿಲು ವ್ಯಕ್ತವಾಗಿದೆ.
ತೆರೆದ ಫ್ಲಡ್ಗೇಟ್!: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಸರ್ಕಾರಿ ಶಾಲೆಗಳ ಸಿಂಹಪಾಲು ಹುದ್ದೆಗಳನ್ನು ರಾಜ್ಯದ ದಕ್ಷಿಣದ ಭಾಗದ ಜಿಲ್ಲೆಗಳ ಶಿಕ್ಷಕರು ಅರ್ಹತೆ, ಪ್ರತಿಭೆ ಆಧಾರದಲ್ಲಿ ತಮ್ಮದಾಗಿಸಿಕೊಂಡಿದ್ದಾರೆ.
ಹಿಂದುಳಿದ ಕಲ್ಯಾಣ ಕರ್ನಾಟಕದ ಶಿಕ್ಷಕ ಹುದ್ದೆಗಳಿಗೆ ಮುಂದುವರಿದ ಜಿಲ್ಲೆಯ ಅಭ್ಯರ್ಥಿಗಳು ನೇಮಕವಾಗುವುದು, ಒಂದು ವರ್ಷದ ನಂತರ ಸ್ವಂತ ಜಿಲ್ಲೆಗೆ ವರ್ಗಾವಣೆಯಾಗಿ ಮತ್ತೆ ಆ ಹುದ್ದೆ ಖಾಲಿ ಉಳಿಯುತ್ತಿದ್ದವು. ಈ ಪರಿಪಾಠ ತಪ್ಪಿಸಲು ಎಸ್.ಎಂ. ಕೃಷ್ಣ ಆಡಳಿತಾವಧಿಯಲ್ಲಿ ಸಚಿವ ಸಂಪುಟದ ಉಪಸಮಿತಿ ಅಧ್ಯಕ್ಷರಾಗಿದ್ದ ಎಚ್.ಕೆ. ಪಾಟೀಲ್ ಮಹತ್ವದ ಶಿಫಾರಸು ಮಾಡಿದರು.
ಶಿಕ್ಷಕರ ಹುದ್ದೆಗೆ ನೇಮಕವಾದ ಸ್ಥಳದಿಂದ ಕನಿಷ್ಠ ಐದು ವರ್ಷಗಳ ತನಕ ಬೇರೆ ತಾಲೂಕು ಅಥವಾ ಜಿಲ್ಲೆಗೆ ವರ್ಗಾವಣೆಯಾಗುವಂತಿಲ್ಲ ಎಂಬ ನಿರ್ಬಂಧ ವಿಧಿಸುವ ಶಿಫಾರಸು ಆದೇಶವಾಯಿತು. ವರ್ಗಾವಣೆಗೆ ಅವಕಾಶ ಕೊಟ್ಟಾಗಲೂ ಶೇ.25ಕ್ಕಿಂತ ಹೆಚ್ಚು ಹುದ್ದೆಗಳ ಖಾಲಿಯಿದ್ದರೆ ಶೇ.2ರ ಮಿತಿ ಮೀರಬಾರದೆಂಬ ಷರತ್ತು ಹೊರ ಜಿಲ್ಲೆಗಳ ಶಿಕ್ಷಕರಿಗೆ ಕಬ್ಬಿಣದ ಕಡಲೆಯಾಗಿತ್ತು
ಆದರೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಶಿಕ್ಷಕರ ವಿಷಯದಲ್ಲಿ ಉದಾರತೆ ತೋರಿಸಿ ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ವರ್ಗಾವಣೆಗೆ ಅಸ್ತು ಎಂದರು.
ಅಭಿವೃದ್ಧಿ ಹೊಂದಿದ ಮಲೆನಾಡು, ಕಲ್ಯಾಣ ಕರ್ನಾಟಕ ಮತ್ತು ಆರ್ಥಿಕವಾಗಿ ಹಿಂದುಳಿದ 43 ತಾಲೂಕುಗಳಲ್ಲಿ ಶೇ.25ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿಯಿದ್ದರೂ ವರ್ಗಾವಣೆಗೆ ಅವಕಾಶ ಕಲ್ಪಿಸಿದರು.
ಯಾವುದೇ ಮಿತಿ ನಿಗದಿ ಪಡಿಸದಿದ್ದರೂ 10 ರಿಂದ 15 ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು ಎಂಬ ನಿರ್ಬಂಧ ವಿಧಿಸಲಾಯಿತು. ಇಷ್ಟಾಗಿದ್ದೇ ತಡ, ಶಿಕ್ಷಕರ ವರ್ಗಾವಣೆಯ ಫ್ಲಡ್ಗೇಟ್ ತೆರೆದಿದ್ದು, 15-16 ಹೆಚ್ಚು ವರ್ಷಗಳಿಂದ ಕಾಯುತ್ತಿದ್ದ ಶಿಕ್ಷಕರು ಸ್ವಂತ ಜಿಲ್ಲೆಗೆ ವರ್ಗಾವಣೆಯಾಗಿದ್ದಾರೆ.
ತಕರಾರಿಲ್ಲ, ಪರ್ಯಾಯ ವ್ಯವಸ್ಥೆ ಬೇಕಲ್ಲ: ಸ್ವಂತ ಊರು, ಮನೆ ಬಿಟ್ಟು ದೂರದ ಜಿಲ್ಲೆಗಳಲ್ಲಿ ದಶಕಗಳ ಕಾಲ ಶಿಕ್ಷಕರಾಗಿದ್ದವರು ಸ್ವಂತ ಜಿಲ್ಲೆಗೆ ಕೋರಿಕೆಯಂತೆ ವರ್ಗಾವಣೆ ಆಗಿರುವುದಕ್ಕೆ ತಕರಾರಿಲ್ಲ. ಆದರೆ, ತೆರವಾಗುವ ಹುದ್ದೆಗಳ ಭರ್ತಿ, ಪರ್ಯಾಯ ವ್ಯವಸ್ಥೆ ಬೇಕಲ್ಲ. ಹೊಸದಾಗಿ 13,352 ಶಿಕ್ಷಕರ ನೇಮಕ ವ್ಯಾಜ್ಯದಿಂದ ನನೆಗುದಿಗೆ ಬಿದ್ದಿದ್ದು, ವಾಸ್ತವಾಂಶ ಗೊತ್ತಿದ್ದೂ ಶೈಕ್ಷಣಿಕ ವರ್ಷದ ನಡುವೆ ಶಿಕ್ಷಕರನ್ನು ವರ್ಗಾವಣೆ ಮಾಡಿದ್ದಕ್ಕೆ ಎಸ್ಡಿಎಂಸಿಯವರು, ಶಿಕ್ಷಣ ತಜ್ಞರು ಆಕ್ಷೇಪಿಸಿದ್ದಾರೆ.
ಬಡ ಮಕ್ಕಳ ಶಿಕ್ಷಣದ ಬಗ್ಗೆ ಸರ್ಕಾರಕ್ಕೆ ನಿಜವಾಗಿಯೂ ಕಾಳಜಿಯಿದ್ದರೆ ಎಜಿ ಮುಖಾಂತರ ತುರ್ತಾಗಿ ಕೋರ್ಟ್ ಮುಂದೆ ಹೋಗಬೇಕಿತ್ತು. ಅಂತಿಮ ತೀರ್ಪಿನ ಷರತ್ತಿಗೆ ಒಳಪಟ್ಟು 13,362 ಹೊಸ ಶಿಕ್ಷಕರ ನೇಮಕಕ್ಕೆ ಅನುಮತಿ ಪಡೆದಿದ್ದರೆ ಸಮಸ್ಯೆಯಾಗುತ್ತಿದ್ದಿಲ್ಲ. ನನಗೆ ಗೊತ್ತಿರುವ ಪ್ರಕಾರ ಈ ವ್ಯಾಜ್ಯದ ಬಗ್ಗೆ ಎಜಿ ಜತೆ ಸರ್ಕಾರ ರ್ಚಚಿಸಿಲ್ಲ, ಸಂಬಳ ನೀಡಲು ಹಣವಿಲ್ಲವೆಂಬ ಕಾರಣಕ್ಕೆ ಹೊಸ ಶಿಕ್ಷಕರ ನೇಮಕಕ್ಕೆ ವಿಳಂಬ ಮಾಡುತ್ತಿದೆ.
Which Department : Education
Central OR State Information: State
Location : Karnataka
Published Date : 01-07-2023
Information Term : Short
Purpose of Information : Teachers
Information Format : PDF
Information Size :854kb
Number of Pages : 12
Scanned Copy : Yes
Information Editable Text : No
Password Protected : No
Image Available : Yes
Download Link Available : Yes
Copy Text : No
Information Print Enable : Yes
File Quality : High
File size Reduced : No
File Password : No
File size Reduced : No
File Password : No
Rate : Free of cost
For Personal Use Only

No comments:
Post a Comment