Sunday, August 13, 2023

Misappropriation of school grants: Order to suspend head teacher

  Wisdom News       Sunday, August 13, 2023
Heading: Misappropriation of school grants: Order to suspend head teacher

Language: Kannada


ಶಾಲೆಗೆ ಬಂದ ಅನುದಾನ ದುರುಪಯೋಗ: ಮುಖ್ಯ ಶಿಕ್ಷಕಕರನ್ನು ಅಮಾನತ್ ಮಾಡಿ ಆದೇಶ ಮಾಡಿದರು ಡಿಡಿಪಿಐ…



ಏನಿದು ಪ್ರಕರಣ?ಎಷ್ಟು ಅನುದಾನ ದುರುಪಯೋಗವಾಗಿದೆ? ಎಂಬುದರ ಕಂಪ್ಲೀಟ್ ರೀಪೊರ್ಟ್ ಇಲ್ಲಿದೆ ನೋಡಿ..

ಅಫಜಲ್ಪುರ(ಆ.10): ಶಾಲೆಗೆ ಬಂದ ಅನುದಾನ ದುರುಪಯೋಗ ಹಾಗೂ ಅಫಜಲ್ಪುರ ಶಾಸಕ ಎಂ.ವೈ. ಪಾಟೀಲ್‌ ಪುತ್ರ ಅರಣ ಪಾಟೀಲ್‌ ವಿರುದ್ಧ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದ ತಾಲೂಕಿನ ಮಾಶಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಶಿವಕುಮಾರ ಬಿರಾದಾರ ಅವರನ್ನು ಅಮಾನತು ಮಾಡಲಾಗಿದೆ.ಹಾಗೆಯೇ ಅವರ ವಿರುದ್ಧ ಇಲಾಖಾ ವಿಚಾರಣೆಗೂ ಆದೇಶಿಸಲಾಗಿದೆ.

ಇತ್ತೀಚೆಗಷ್ಟೇ ಮುಖ್ಯಶಿಕ್ಷಕ ಬಿರಾದಾರ ಅವರು, ಹಲವು ವಿಚಾರಗಳಲ್ಲಿ ಶಾಸಕ ಎಂವೈ ಪಾಟೀಲ ಪುತ್ರ ಅರುಣಕುಮಾರ ಪಾಟೀಲ ವಿರುದ್ಧ ಆರೋಪ ಮಾಡಿದ್ದರು. 


ಶಾಲಾ ಹಣಕಾಸು ನಿರ್ವಹಣೆ ಮಾಡಿ ಮುಖ್ಯಗುರುಗಳ ಹುದ್ದೆಯ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಆರೋಪವೂ ಅವರ ಮೇಲೆ ಇದ್ದುದರಿಂದ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಿ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ ಆದೇಶ ಹೊರಡಿಸಿದ್ದಾರೆ

ಸರ್ಕಾರಿ ನೌಕರರಾಗಿ ಅದರಲ್ಲೂ ಓರ್ವ ಪ್ರಭಾರಿ ಮುಖ್ಯ ಶಿಕ್ಷಕರಾಗಿ ಹಣಕಾಸಿನ ಅವ್ಯವಹಾರ, ಶಾಲೆಯ ಸಂಪೂರ್ಣ ಮೇಲು ಉಸ್ತುವಾರಿ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಎಸ್‌ಡಿಎಂಸಿ ರಚನೆ ಮಾಡದೇ ಕಾಲ ಬಿಳಂಬ ಮಾಡುತ್ತಾ, ಸಮುದಾಯ ಪಾಲ್ಗೊಳ್ಳುವಿಕೆಯನ್ನು ಉದ್ದೇಶ ಪೂರ್ವಕವಾಗಿಯೇ ತಡೆ ಹಿಡಿದಿದ್ದು, ಮತ್ತು 2021ನೇ ಸಾಲಿನಲ್ಲಿ ಶಾಲೆ ಮುಖ್ಯಗುರುಗಳಾಗಿ ಬಡ್ತಿ ಹೊಂದಿರುವ ಲಚ್ಚಪ್ಪ ಹಿಟ್ಟಿನ ಹುದ್ದೆಯ ಪ್ರಭಾರ ವಹಿಸಿಕೊಳ್ಳದೆ ಹಣಕಾಸು ನಿರ್ವಹಣೆ ಮುಖ್ಯ ಗುರುಗಳ ಹುದ್ದೆಯ ಅಧಿಕಾರ ದುರುಪಯೋಗ ಪಡೆಸಿಕೊಂಡಿರುವುದು ದೃಢಪಟ್ಟಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.

ಏನಿದು ಪ್ರಕರಣ:

ತಾಲೂಕಿನ ಮಾಶಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯಗುರುಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಶಿವಕುಮಾರ ಬಿರಾದಾರ ವಿರುದ್ಧ ಜೂ.16ರಂದು ಕರ್ತವ್ಯಲೋಪ, ಅಧಿಕಾರ ದುರ್ಬಳಕೆ ಮತ್ತು ಹಣ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಸ್ಥಳೀಯ ತಾಪಂ ಮಾಜಿ ಸದಸ್ಯ ಶಿವರುದ್ರಪ್ಪ ಅವಟಗಿ ಮತ್ತು ಗ್ರಾಮಸ್ಥರು ಸೇರಿ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ದೂರು ಸಲ್ಲಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಾಥಮಿಕ ವರದಿಗಾಗಿ ತಂಡವನ್ನು ರಚಿಸಿ ಸಮಗ್ರವಾಗಿ ವರದಿಯನ್ನು ನೀಡಿದ್ದಾರೆ. 8ನೇ ತರಗತಿಯ ಶಾಲಾ ಕೋಣೆ ನಿರ್ಮಾಣಕ್ಕೆ ರು. 5,27,000 ಮತ್ತು ಬಿಸಿಯೂಟದ ಕೋಣೆ ನಿರ್ಮಾಣಕ್ಕೆ ರು. 6,52,889 ಅನುದಾನ ಮಂಜೂರಾಗಿದ್ದು, ಶಾಲಾ ಸುಧಾರಣಾ ಮತ್ತು ಮೇಲುಸ್ತುವಾರಿ ಸಮಿತಿ ರಚಿಸಿದೆ. 

ಕೇವಲ ಹಿರಿಯ ಶಿಕ್ಷಕ ಏಕನಾಥ ಇವರೊಂದಿಗೆ ಜಂಟಿ ಖಾತೆ ಹೊಂದಿ ಮೇಲಾಧಿಕಾರಿಗಳ ಆದೇಶ ಪಡೆಯದೆ ಹಣ ದುರ್ಬಳಕೆ, ಬಿಸಿ ಊಟದ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ಕಳೆದ ಮೂರು ವರ್ಷಗಳಿಂದ ನಗದು ಪುಸ್ತಕವನ್ನು ನಿರ್ವಹಿಸದೇ ಮತ್ತು ಇವುಗಳಿಗೆ ಸಂಬಂಧಿಸಿದ ರಸೀದಿಗಳು ಕಾಯ್ದಿರಿಸಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.


ಅನುದಾನ ದುರುಪಯೋಗ:

ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ 1,76,690 ರು. ಹಣವನ್ನು ಮೇಲಾಧಿಕಾರಿಗಳ ಅನುಮತಿ ಪಡೆಯದೆ ಖರ್ಚು ಮಾಡಿರುವುದು ನಿಯಮ ಬಾಹಿರವಾಗಿದೆ.


 ಶಾಲಾ ಮಕ್ಕಳ ಸಮವಸ್ತ್ರ ಖರೀದಿಗಾಗಿ ಒಟ್ಟು 13,96,300 ರು. ಹಣ ಜಮೆಯಾಗಿದ್ದು ಅದನ್ನು ಸಹ ಖರ್ಚು ಮಾಡಿದ್ದಾರೆ. ಎಸ್‌ಡಿಎಂಸಿ ರಚಿಸದೆ ಶಿಕ್ಷಕ ಏಕನಾಥ ಹಾಗೂ ಚಂದಪ್ಪ ಚೌಧರಿ ಇವರ ಜೊತೆಯಾಗಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸುವುದಾಗಿ ತಿಳಿಸಿದ್ದಾರೆ.

 ಎಸ್‌ಡಿಎಂಸಿ ಠರಾವು ಕೈಗೊಂಡಿಲ್ಲ. ಪ್ರತಿಯೊಂದು ವ್ಯವಹಾರಕ್ಕೆ ನಗದು ಪುಸ್ತಕದಲ್ಲಿ ಸ್ಪಷ್ಟವಾಗಿ ನಮೂದಿಸಿಲ್ಲ. 

ಸ್ವತಃ ಅವರಿಗೆ ಅನುಕೂಲ ಆಗುವಂತೆ ನಿಯಮ ಬಾಹಿರವಾಗಿ ಖರೀದಿಸಿದ್ದು, ತಪಾಸಣಾ ತಂಡದವರಿಗೆ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಿದ ಅಂದರೆ ಶಾಲಾ ಮಕ್ಕಳು ಸ್ವೀಕರಿಸಿದ ವಹಿಯನ್ನು ಪರಿಶೀಲನೆಗೆ ಒಪ್ಪಿರುವುದಿಲ್ಲ. 


ಅನೇಕ ಕರ್ತವ್ಯ ಲೋಪಗಳು ಪ್ರಾಥಮಿಕ ವರದಿಯಲ್ಲಿ ಕಂಡುಬಂದಿವೆ ಎಂದು ವರದಿ ನೀಡಲಾಗಿತ್ತು.

ಇದೇ ವಿಚಾರದಲ್ಲಿ ಬಿರಾದಾರ ಅವರು ಶಾಸಕ ಎಂ.ವೈ. ಪಾಟೀಲ್‌ ಅವರ ಪುತ್ರ ಅರುಣಕುಮಾರ ಪಾಟೀಲ ವಿರುದ್ಧವೂ ಅರೋಪ ಮಾಡಿ ಗಮನ ಸೆಳೆದಿದ್ದರು. ಇದನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದರು.


Which Department : Education



Central OR State Information: State



Location : Karnataka



Published Date : 01-07-2023



Information Term : Short



Purpose of Information : Teachers



Information Format : PDF



Information Size :854kb



Number of Pages : 12



Scanned Copy : Yes



Information Editable Text : No



Password Protected : No



Image Available : Yes



Download Link Available : Yes



Copy Text : No



Information Print Enable : Yes



File Quality : High



File size Reduced : No



File Password : No



File size Reduced : No



File Password : No


Rate : Free of cost


For Personal Use Only


logoblog

Thanks for reading Misappropriation of school grants: Order to suspend head teacher

Previous
« Prev Post

No comments:

Post a Comment