Tuesday, August 8, 2023

Independence Day Speech in Kannad

  Wisdom News       Tuesday, August 8, 2023
Heading: Independence Day Speech in Kannad

Language: Kannada

ಕಾರ್ಯಕ್ರಮದಲ್ಲಿ ಆಸೀನರಿರುವ ನನ್ನೆಲ್ಲಾ ಸಹಪಾಠಿಗಳು, ಗುರುವೃಂದದವರು, ಹಿರಿಯರಿಗೆ ಶುಭೋದಯಗಳು (ನಮಸ್ಕಾರಗಳು). ಮೊದಲಿಗೆ ಈ ಕಾರ್ಯಕ್ರಮದಲ್ಲಿ ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಧನ್ಯವಾದಗಳು..

ಸ್ನೇಹಿತರೇ..
ಭಾರತದಲ್ಲಿ ಪ್ರತಿ ವರ್ಷವು ಸಹ ಆಗಸ್ಟ್‌ 15 ರಂದು ಸ್ವಾತಂತ್ರ್ಯ ದಿನ ಆಚರಣೆ ಮಾಡಲಾಗುತ್ತದೆ. ಈ ದಿನವನ್ನು ಬ್ರಿಟಿಷ್‌ ವಸಾಹತುಶಾಹಿ ಆಳ್ವಿಕೆಯಿಂದ 1947 ರಲ್ಲಿ ದೇಶ ಬಿಡುಗಡೆ ಹೊಂದಿದ ದಿನವಾಗಿ ಗುರುತಿಸಲು ಆಚರಣೆ ಮಾಡಲಾಗುತ್ತದೆ. ಈ ದಿನದಂದು ದೇಶಭಕ್ತಿಯ ಉತ್ಸಾಹ, ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ನಾಯಕರ ಭಾಷಣ ದೇಶದ ಎಲ್ಲೆಡೆ ಕಂಡುಬರುತ್ತವೆ. ಅಂತೆಯೇ ನಾವು ಸಹ ಇಂದು ಇಲ್ಲಿ ಎಲ್ಲರೂ ಸ್ವಾತಂತ್ರ್ಯ ದಿನ ಆಚರಣೆಗೆ ಸೇರಿದ್ದು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಬೇಕಾಗಿದೆ. ಸ್ವತಂತ್ರದ ಮಹತ್ವದ ಜತೆಗೆ, ಇಂದು ನಮ್ಮ ಹೊಣೆ, ಜವಾಬ್ದಾರಿಗಳೇನು ಎಂಬುದನ್ನು ಅರ್ಥ ಮಾಡಿಕೊಂಡು, ದೇಶಕ್ಕೆ ನಾವು ಸಹ ಏನಾದರೂ ಕೊಡುಗೆ ನೀಡಬೇಕಾಗಿದೆ.

ಭಾರತದ ಸ್ವಾತಂತ್ರ್ಯಕ್ಕೆ 1857 ರಿಂದ 1947 ರವರೆಗೆ ಹಲವು ದಶಕಗಳ ಕಾಲ ನಮ್ಮ ಪೂರ್ವಜ್ಜರು ಹೋರಾಡಿರುವುದನ್ನು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಲೇಬೇಕು. ಸ್ವಾತಂತ್ರ್ಯ ಎಂದರೆ ಪ್ರತಿಯೊಬ್ಬ ವ್ಯಕ್ತಿಗೆ ಈ ಭಾರತದಲ್ಲಿ ಎಲ್ಲ ರೀತಿಯ ಮೂಲಭೂತ ಹಕ್ಕು ಇದೆ. ಎಲ್ಲ ರೀತಿಯ ಸ್ವಾತಂತ್ರ್ಯ ಇದೆ. ಆದರೆ ಒಬ್ಬ ವ್ಯಕ್ತಿಯು ತನ್ನ ಸ್ವಾತಂತ್ರ್ಯ ಹಕ್ಕಿನಿಂದ ಮತ್ತೊಬ್ಬರ ಸ್ವಾತಂತ್ರ್ಯಕ್ಕೆ ಅಡ್ಡಿ ಆಗುವ ಯಾವುದೇ ಕೆಲಸವನ್ನು ಮಾಡಬಾರದು ಎಂಬುದನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡಿರಬೇಕು. ಈ ಮಾತನ್ನು ಪೋಷಕರು, ಶಿಕ್ಷರು ಎಲ್ಲ ಮಕ್ಕಳಿಗೆ ಹೇಳಿಕೊಟ್ಟು, ಅರ್ಥ ಮಾಡಿಸಬೇಕು. ಹೆಚ್ಚಿನ ನೈತಿಕ ಶಿಕ್ಷಣವನ್ನು ನೀಡಲೇಬೇಕು.

ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡ ನಂತರ ಭಾರತ ದೇಶವು ಹಲವು ಮೈಲಿಗಲ್ಲುಗಳನ್ನು ಕಂಡಿದೆ. ಆರ್ಥಿಕತೆ, ರಾಜಕೀಯ, ತಂತ್ರಜ್ಞಾನ, ವಿಜ್ಞಾನ, ಮೂಲಸೌಕರ್ಯಗಳು ಹೀಗೆ ಎಲ್ಲಾ ಕ್ಷೇತ್ರಗಳಲ್ಲು ಸಹ ಅನೇಕ ಸಾಧನೆಗಳಿಗೆ ಸಾಕ್ಷಿಯಾಗಿದೆ. ಈ ಸಾಧನೆ, ಅಭಿವೃದ್ಧಿಗಳ ಸಂಖ್ಯೆ ಸ್ವಾತಂತ್ರ್ಯ ಭಾರತದಲ್ಲಿ ಹೆಚ್ಚುತ್ತಲೇ ಇರುತ್ತದೆ ಹೊರತು, ಎಂದಿಗೂ ಇದಕ್ಕೆ ಅಂತ್ಯ ಎನ್ನುವುದಿಲ್ಲ. ಎಲ್ಲಿ ಪ್ರಜೆಗಳಿಗೆ ಸ್ವಾತಂತ್ರ್ಯ ಇರುತ್ತದೋ, ಯಾವ ದೇಶದ ಪ್ರಜೆಗಳಿಗೆ ಸ್ವಾತಂತ್ರ್ಯ ಇರುತ್ತದೋ, ಎಲ್ಲಿಯವರೆಗೆ ಪ್ರಜೆಗಳು ಸ್ವಾತಂತ್ರ್ಯರಾಗಿರುತ್ತಾರೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿ, ಪ್ರಜೆಗಳ ಅಭಿವೃದ್ಧಿ, ನಾಡಿನ ಅಭಿವೃದ್ಧಿ, ಒಂದು ಕುಟುಂಬದ ಅಭಿವೃದ್ಧಿ ನಿರಂತರವಾಗಿ ಸಾಗುತ್ತಿರುತ್ತದೆ. ಅದಕ್ಕೆ ಕೊನೆ ಎಂಬುದು ಇಲ್ಲ. ಅದಕ್ಕೆ ಇಂದಿನ ಭಾರತವೇ ಸಾಕ್ಷಿ.


ಕನ್ನಡ ರಾಜ್ಯೋತ್ಸವ : ವಿದ್ಯಾರ್ಥಿಗಳಿಗೆ ಭಾಷಣ, ಪ್ರಬಂಧಕ್ಕೆ ಸಲಹೆಗಳು ಇಲ್ಲಿವೆ..

ಆದರೆ ಸ್ವಾತಂತ್ರ್ಯ ಭಾರತದಲ್ಲಿ ಇಂದಿಗೂ ಸಹ ಹಲವು ಕಡೆಗಳಲ್ಲಿ ನಾವು ಅಸಮಾನತೆ, ದೌರ್ಜನ್ಯ, ಮಹಿಳೆಯರ ಮೇಲಿನ ಎಲ್ಲ ತರಹದ ಕಿರುಕುಳಗಳು, ಆಸಿಡ್‌ ದಾಳಿ, ಸರ್ಕಾರಗಳ ಮೇಲಿನ ಭ್ರಷ್ಟಾಚಾರಗಳು, ಜನರಿಂದ ಆಯ್ಕೆಯಾದ ನಾಯಕರುಗಳೇ ಎದುರಿಸುತ್ತಿರುವ ಅಪಾಧನೆಗಳು, ಅವರ ಅಪರಾಧಗಳು, ರಾಜಕೀಯ ಪಕ್ಷಗಳ ಒಬ್ಬರಮೇಲ್ಲೋಬ್ಬರ ಮಾತಿನ ಕೆಸರೆರಚಾಟಗಳು ಎಲ್ಲವನ್ನು ನೋಡಿದರೆ ವಿದ್ಯಾರ್ಥಿಯಾದ ನನಗೆ ಸಹಿಲಾಗದ ದುಃಖವಾಗುತ್ತದೆ. ಇದಕ್ಕೆ ಕೊನೆ ಎಂದು, ದೇಶ ಶಾಂತಿಯಿಂದ ಇರುವುದೆಂದು, ಐಕ್ಯತೆ ಸಾರುವುದು ಎಂದು ಎಂಬೆಲ್ಲ ಪ್ರಶ್ನೆಗಳು ನನಗೆ ಕಾಡುತ್ತವೆ. ಈ ಮಾತನ್ನು ಏಕೆ ಹೇಳುತ್ತೇನೆ ಎಂದರೆ ಇಂದಿನ ಪ್ರಜೆಗಳಾದ ನಾವು ಮುಂದೆ ದೊಡ್ಡವರಾದ ನಂತರ ನಾವೆಲ್ಲರೂ ಸಹ ಒಂದೊಂದು ಕ್ಷೇತ್ರದಲ್ಲಿ ಯಾರು ಏನಾದರೂ ಸಾಧಿಸುವ ಅವಕಾಶ ನಮಗಿದೆ. ಅಂದು ದೇಶಕ್ಕೆ ಸ್ವಾತಂತ್ರ ತಂದುಕೊಡಲು ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ತಿಲಕ್‌ ರವರು, ಶಾಸ್ತ್ರೀಜಿ ಹೀಗೆ ಅನೇಕರು ಹೋರಾಟ ಮಾಡಿದರು. ತಮ್ಮ ಜೀವನವನ್ನು ದೇಶದ ಜನರ ಸಂತೋಷಕ್ಕಾಗಿ ಮೀಸಲಿಟ್ಟರು. ಹಾಗೆಯೇ ಇಂದು ನಮ್ಮ ಸಮಾಜದಲ್ಲಿರುವ ಹಲವಾರು ಸಮಸ್ಯೆಗಳನ್ನು ಹೋಗಲಾಡಿಸಲು ನಾವು ಜ್ಞಾನವನ್ನು ಹೆಚ್ಚಿಸಿಕೊಂಡು ಕೆಲಸ ಮಾಡಬೇಕಿದೆ. ದೇಶ ಸೇವೆಗೆ ಮುಂದಾಗಬೇಕಿದೆ. ಅದು ಯಾವ ಕ್ಷೇತ್ರದಲ್ಲಾದರೂ ಸರಿಯೇ.. ಉತ್ತಮ ಕೆಲಸ, ಜವಾಬ್ದಾರಿಗಳನ್ನು ನಿಭಾಯಿಸುವ ಶಕ್ತಿ ಬೆಳೆಸಿಕೊಳ್ಳಬೇಕಿದೆ.

ಅಂದು ದೇಶದ ಸ್ವತಂತ್ರಕ್ಕಾಗಿ ಒಂದಾದ ನಾಯಕರಂತೆ ಇಂದು ನಾವು ನಮ್ಮೆಲ್ಲರ ನಡುವೆ ಇರುವ ಕೋಮುವಾದ, ಭ್ರಷ್ಟಾಚಾರ, ನಮ್ಮ ದೇಶದ ಶಾಂತಿಗೆ ಧಕ್ಕೆ ತರುವ ಯಾವುದೇ ಶಕ್ತಿಗಳ ವಿರುದ್ಧ ಹೋರಾಡಲು ನಾವು ಸೇರಬೇಕಿದೆ. ಅದಕ್ಕೆ ನಾವು ವಿದ್ಯಾರ್ಥಿ ಜೀವನದಲ್ಲಿ ಚೆನ್ನಾಗಿ ಓದಿಕೊಳ್ಳುವ ಜತೆಗೆ ಪ್ರಪಂಚ ಜ್ಞಾನವನ್ನು ಬೆಳೆಸಿಕೊಂಡು, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳೋಣ ಎಂದು ನಿಮ್ಮೆಲ್ಲರಿಗೂ ಕರೆ ನೀಡುತ್ತಾ ನನ್ನ ಭಾಷಣವನ್ನು ಮುಗಿಸುತ್ತೇನೆ.

ಇಷ್ಟು ಮಾತನಾಡಲು ಅವಕಾಶಕೊಟ್ಟ ನಿಮ್ಮೆಲ್ಲರಿಗೂ ನಾ ಸದಾ ಋಣಿ ಆಗಿರುತ್ತೇನೆ.


ಜೈ ಹಿಂದ್, ಜೈ ಭಾರತಾಂಬೆ.


Which Department : Education



Central OR State Information: State



Location : Karnataka



Published Date : 01-07-2023



Information Term : Short



Purpose of Information : Teachers



Information Format : PDF



Information Size :854kb



Number of Pages : 12



Scanned Copy : Yes



Information Editable Text : No



Password Protected : No



Image Available : Yes



Download Link Available : Yes



Copy Text : No



Information Print Enable : Yes



File Quality : High



File size Reduced : No



File Password : No



File size Reduced : No



File Password : No


Rate : Free of cost


For Personal Use Only




logoblog

Thanks for reading Independence Day Speech in Kannad

Previous
« Prev Post

No comments:

Post a Comment