Tuesday, August 15, 2023

Adarsh ​​Vidyalayas, which have been started in the state with the objective of providing education in English medium on the Kendriya Vidyalaya model to the students of the most backward taluks of the state, have not appointed permanent teachers till now.

  Wisdom News       Tuesday, August 15, 2023
Heading: Adarsh Vidyalayas, which have been started in the state with the objective of providing education in English medium on the Kendriya Vidyalaya model to the students of the most backward taluks of the state, have not appointed permanent teachers till now.

Language: Kannada

ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ): ‌ರಾಜ್ಯದ ಅತ್ಯಂತ ಹಿಂದುಳಿದ ತಾಲ್ಲೂಕುಗಳ ವಿದ್ಯಾರ್ಥಿಗಳಿಗೆ ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ಒದಗಿಸುವ ಉದ್ದೇಶದಿಂದ ರಾಜ್ಯದಲ್ಲಿ ಆರಂಭಿಸಿರುವ ಆದರ್ಶ ವಿದ್ಯಾಲಯಗಳಿಗೆ ಇದುವರೆಗೂ ಶಾಶ್ವತ ಶಿಕ್ಷಕರ ನೇಮಕವಾಗಿಲ್ಲ.

ಪ್ರಾದೇಶಿಕ ಅಸಮಾನತೆ ನೀಗಿಸಲು ನಂಜುಂಡಪ್ಪ ವರದಿ ಆಧರಿಸಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು, ಚಳ್ಳಕೆರೆ ಸೇರಿದಂತೆ ರಾಜ್ಯದ 74 ತಾಲ್ಲೂಕುಗಳಲ್ಲಿ ಈ ಶಾಲೆಗಳನ್ನು 2010ರಲ್ಲಿ ಆರಂಭಿಸಲಾಗಿತ್ತು.

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ವಿಶಾಲ ಕಟ್ಟಡ ನಿರ್ಮಿಸಿ, 6ನೇ ತರಗತಿಯಿಂದ 10ನೇ ತರಗತಿವರೆಗೆ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ.

 ಪ್ರತಿ ಶಾಲೆಗೆ 16 ಶಿಕ್ಷಕರನ್ನು ನಿಯೋಜಿಸಲು ಅವಕಾಶವಿದೆ. ಆದರೆ, ಇದುವರೆಗೂ ಯಾವ ಶಾಲೆಗಳಿಗೂ ಪ್ರತ್ಯೇಕವಾಗಿ, ಕಾಯಂ ಶಿಕ್ಷಕರನ್ನು ನೇಮಕ ಮಾಡಿಲ್ಲ. ಎಲ್ಲ ಹುದ್ದೆಗಳೂ ಖಾಲಿ ಇವೆ.

ಸಾರ್ವಜನಿಕ ಶಿಕ್ಷಣ ಇಲಾಖೆಯು ವಿವಿಧ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಈ ಶಾಲೆಗೆ ನಿಯೋಜಿಸಿ, ಅತಿಥಿ ಶಿಕ್ಷಕರನ್ನು ನೇಮಿಸಿ ಪಾಠ ಮಾಡಿಸುವುದು ಅನಿವಾರ್ಯವಾಗಿದೆ. 

ಇದುವರೆಗೆ ಒಟ್ಟು 400 ಮಕ್ಕಳ ಪ್ರವೇಶಕ್ಕೆ ಅವಕಾಶ ಇದ್ದು, ಈ ವರ್ಷದಿಂದ ಸಂಖ್ಯೆಯನ್ನು 600ಕ್ಕೆ ಹೆಚ್ಚಿಸಲಾಗಿದೆ. 5ನೇ ತರಗತಿ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದು ಈ ಶಾಲೆಗೆ ಆಯ್ಕೆಯಾಗಬೇಕಿದೆ.

'ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂದು ಮಕ್ಕಳನ್ನು ಸೇರಿಸಿದ್ದೇವೆ. ಆದರೆ, ಇಂಗ್ಲಿಷ್‌ ಹೇಳಿಕೊಡುವ ಅನುಭವಿ ಶಿಕ್ಷಕರ ಕೊರತೆಯಿಂದ ನಮ್ಮ ಕನಸುಗಳಿಗೆ ತಣ್ಣೀರು ಎರಚಿದಂತಾಗಿದೆ' ಎಂದು ಪಾಲಕರಾದ ಎಚ್‌. ನಾಗರಾಜಪ್ಪ, ಆರ್‌. ಮೃತ್ಯುಂಜಯ ಮತ್ತಿತರರು ಬೇಸರ ವ್ಯಕ್ತಪಡಿಸಿದರು.

ನಂಜುಂಡಪ್ಪ ವರದಿಯಲ್ಲಿ ಉಲ್ಲೇಖಿಸಿರುವ ತಾಲ್ಲೂಕುಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿವೆ. ಶಿಕ್ಷಣದಿಂದ ಮಾತ್ರ ಇಲ್ಲಿ ಅಭಿವೃದ್ಧಿ ಸಾಧ್ಯ ಎಂದೇ ಆದರ್ಶ ಶಾಲೆ ಆರಂಭಿಸಲಾಗಿದೆ. 

ಆಂಗ್ಲ ಮಾಧ್ಯಮದಲ್ಲಿ ಬೋಧಿಸುವ ಶಿಕ್ಷಕರನ್ನು ಪ್ರತ್ಯೇಕವಾಗಿ ನೇಮಕ ಮಾಡಿದ್ದಲ್ಲಿ ನವೋದಯ ಶಾಲೆಗಳ ಮಾದರಿಯಲ್ಲಿ ಶಿಕ್ಷಣ ಸಿಗುತ್ತಿತ್ತು. 

'ಡಿ' ಗ್ರೂಪ್ ಹುದ್ದೆಗಳ ನೇಮಕವೂ ಆಗಬೇಕಿದೆ. ಜತೆಗೆ ಕಂಪ್ಯೂಟರ್ ಪ್ರಯೋಗಾಲಯ ಸ್ಥಾಪನೆ ಆಗುವ ಅಗತ್ಯವಿದೆ ಎಂದು ಪಾಲಕರು ಹೇಳಿದರು.

ವಿವಿಧ ಶಾಲೆಗಳಿಂದ ಇಲ್ಲಿಗೆ ನಿಯುಕ್ತರಾಗಿರುವ ಶಿಕ್ಷಕರು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳದಿಂದ ಹೆಚ್ಚು ಹೊರೆಯಾಗುತ್ತಿದೆ ಎಂದು ಮೊದಲು ಇದ್ದಲ್ಲಿಗೇ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಪ್ರಾಚಾರ್ಯರೊಬ್ಬರು ಹೇಳಿದರು.


Which Department : Education



Central OR State Information: State



Location : Karnataka



Published Date : 01-07-2023



Information Term : Short



Purpose of Information : Teachers



Information Format : PDF



Information Size :854kb



Number of Pages : 12



Scanned Copy : Yes



Information Editable Text : No



Password Protected : No



Image Available : Yes



Download Link Available : Yes



Copy Text : No



Information Print Enable : Yes



File Quality : High



File size Reduced : No



File Password : No



File size Reduced : No



File Password : No


Rate : Free of cost


For Personal Use Only


logoblog

Thanks for reading Adarsh ​​Vidyalayas, which have been started in the state with the objective of providing education in English medium on the Kendriya Vidyalaya model to the students of the most backward taluks of the state, have not appointed permanent teachers till now.

Previous
« Prev Post

No comments:

Post a Comment