Saturday, August 26, 2023

About running the process of purchase of shoes and socks being provided free of charge to all children studying in class 1 to 10 in government schools in the state for the year 2023-24.

  Wisdom News       Saturday, August 26, 2023
Heading: About running the process of purchase of shoes and socks being provided free of charge to all children studying in class 1 to 10 in government schools in the state for the year 2023-24.

Language: Kannada

2023-24ನೇ ಶೈಕ್ಷಣಿಕ ಸಾಲಿಗೆ ರಾಜ್ಯದಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ನಡೆಸಲ್ಪಡುವ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉಚಿತವಾಗಿ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್‌ಗಳನ್ನು ವಿತರಣೆ ಮಾಡುವಂತೆ ಉಲ್ಲೇಖ(1)ರ ಪತ್ರದಲ್ಲಿ ಸರ್ಕಾರವು ಆದೇಶಿಸಲಾಗಿರುತ್ತದೆ.

01 ರಿಂದ 08ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಶಾಲೆಗಳ ಎಲ್ಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಗಳನ್ನು ವಿತರಣೆ ಮಾಡಲು ತಾಲ್ಲೂಕುವಾರು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೇರವಾಗಿ ಕೆ-2 ಮುಖಾಂತರ ಉಲ್ಲೇಖ(2)ರಂತೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿಗಧಿತ ಲೆಕ್ಕಶೀರ್ಷಿಕೆಯಡಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಸರ್ಕಾರದ ಆದೇಶಗಳನ್ನು ಅನುಸರಿಸಿ ಆಯಾಯ ಅನುಷ್ಠಾನಾಧಿಕಾರಿಗಳು ಕೂಡಲೇ ಕ್ರಮವಹಿಸಲು ಸೂಚಿಸಿದೆ.

09 ರಿಂದ 10ನೇತರಗತಿಯ ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಮುಖ್ಯ ಶಿಕ್ಷಕರುಗಳೇ ಡಿಡಿಓಗಳಾಗಿರುವುದರಿಂದ ಅನುದಾನವನ್ನು ನೇರವಾಗಿ ಅವರುಗಳಿಗೆ ಬಿಡುಗಡೆ ಮಾಡಲು ಡಿಡಿಓ ಕೋಡ್‌ಗಳನ್ನು ಕ-2 ನಲ್ಲಿ ಮ್ಯಾಪಿಂಗ್ ಮಾಡಲಾಗುತ್ತಿದೆ. ಕೆ-2 ಮ್ಯಾಪಿಂಗ್ ಕಾರ್ಯ ಶೀಘ್ರದಲ್ಲಿ ಪೂರ್ಣಗೊಳ್ಳಲಿದ್ದು ಪೂರ್ಣಗೊಂಡ ನಂತರ ಕ-2ನಲ್ಲಿ ಆಯಾಯ ಡಿಡಿಓಗಳಿಗೆ ಮಕ್ಕಳ ಸಂಖ್ಯೆಗನುಗುಣವಾಗಿ ಶೂ ಮತ್ತು ಸಾಕ್ಸ್ ಖರೀದಿಗೆ ಅನುದಾನ ಬಿಡುಗಡೆ ಮಾಡಲಾಗುವುದು. ಸರ್ಕಾರಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರುಗಳು 09 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ಅನುದಾನ ಬಿಡುಗಡೆ ನಿರೀಕ್ಷಿಸಿ ಕೂಡಲೆ ಖರೀದಿ ಪ್ರಕ್ರಿಯೆಯನ್ನು (ಎಸ್‌.ಡಿ.ಎಂ.ಸಿ. ಸಭೆ, ದರಪಟ್ಟಿಗಳ ಆಹ್ವಾನ, ತುಲಾನಾತ್ಮಕ ಪಟ್ಟಿ ಸಿದ್ಧಪಡಿಸುವಿಕೆ ಹಾಗೂ ಕಾರ್ಯದೇಶವನ್ನು ನೀಡುವುದು) ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಚಾಲನೆ ಮಾಡಿ ಅನುಷ್ಠಾನಗೊಳಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯ ಶಿಕ್ಷಕರುಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು(ಆ), ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದೆ.

ಷರತ್ತುಗಳು:-

ಅರ್ಹ ವಿದ್ಯಾರ್ಥಿಗಳ ಪಾದರಕ್ಷೆಗಳ ಅಳತೆ ದಾಖಲಿಸಿ ಉತ್ತಮ ಗುಣಮಟ್ಟದ ಪಾದರಕ್ಷೆಗಳನ್ನು ಸ್ಥಳೀಯವಾಗಿ ಖರೀದಿಸಿ ವಿತರಣೆ ಮಾಡುವ ಜವಾಬ್ದಾರಿಯನ್ನು ಸಂಬಂಧಿಸಿದ ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ (ಎಸ್.ಡಿ.ಎಂ.ಸಿ.) ಗಳಿಗೆ ವಹಿಸಲಾಗಿದೆ.
ಒಂದು ಜೊತೆ ಕಪ್ಪು ಬಣ್ಣದ ಶೂ ಹಾಗೂ ಎರಡು ಜೊತೆ ಬಿಳಿ ಬಣ್ಣದ ಕಾಲು ಚೀಲ(ಸಾಕ್ಸ್) ಗಳನ್ನು ಖರೀದಿಸಿ ವಿತರಿಸುವುದು. ಪೂ ಹಾಗೂ ಕಾಲುಚೀಲಗಳನ್ನು ಖರೀದಿಸುವ ಮುನ್ನ ರಾಜ್ಯದಲ್ಲಿನ ವಿವಿಧ ಭಾಗಗಳಲ್ಲಿ ಆಯಾ ಭಾಗದ ಪರಿಸರಕ್ಕೆ ಹೊಂದಿಕೆಯಾಗುವಂತಹ ಅಂದರೆ ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ವರ್ಷದಲ್ಲಿ ಮೂರರಿಂದ ನಾಲ್ಕು ತಿಂಗಳು ಅತೀ ಹೆಚ್ಚು ಮಳೆ ಬೀಳುವುದರಿಂದ ವಿದ್ಯಾರ್ಥಿಗಳಿಗೆ ಹೂಗಳು ಸಮರ್ಪಕ ಎನಿಸದಿದ್ದಲ್ಲಿ, ಅದೇ ರೀತಿ ಉತ್ತರ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚು ಉಷ್ಣಾಂಶದ ವಾತಾವರಣ ಇರುವುದರಿಂದ ಶೂ ಅಷ್ಟೊಂದು ಸಮಂಜಸ ಎನಿಸದಿದ್ದಲ್ಲಿ, ಹಾಗೂ ಇಂತಹ ಇತರ ವಾತಾವರಣ ವೈಪರೀತ್ಯದ ಪ್ರದೇಶದಲ್ಲಿ ವಾತಾವರಣದ ಸ್ಥಿತಿಗಳನ್ನು ಅನುಸರಿಸಿ ಹಾಗೂ ಧರಿಸಲು ಮತ್ತು ತೆಗೆಯಲು ಸುಲಭವಾಗುವಂತಹ ಸ್ಯಾಂಡಲ್‌ಗಳನ್ನು ಧರಿಸಬಹುದೆಂಬ ಅಭಿಪ್ರಾಯವಿದ್ದರೆ.ಇಂತಹ ಪ್ರದೇಶದಲ್ಲಿ ಹೂ ಅಥವಾ ಸ್ಯಾಂಡಲ್‌ಗಳ ಆಯ್ಕೆಯನ್ನು ಆಯಾ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ತೀರ್ಮಾನಕ್ಕೆ ಬಿಡಲಾಗಿದೆ.

ಶೂ ಮತ್ತು ಸಾಕ್ಸ್ಗಳ ಖರೀದಿ ಪ್ರಕ್ರಿಯೆ ಪ್ರಾರಂಭಿಸುವ ಮುನ್ನ ಎಸ್‌.ಡಿ.ಎಂ.ಸಿಯು ಕೆಳಕಂಡಂತೆ ಒಂದು ಅನುಮೋದಿತ ಸಮಿತಿಯನ್ನು ರಚಿಸಿ ಖರೀದಿ ಪ್ರಕ್ರಿಯೆ ಪ್ರಾರಂಭಿಸುವುದು.

ಪಾದರಕ್ಷೆ ಖರೀದಿ ಸಮಿತಿ


(ಮೂವರು ಸದಸ್ಯರನ್ನು ಆಯ್ಕೆ ಮಾಡಲು ಪ್ರತಿ ಎಸ್.ಡಿ.ಎಂ.ಸಿಯು ಈ ಬಗ್ಗೆ ಸಭೆ ನಡೆಸಲು ನಿರ್ದೇಶಿಸಲಾಗಿದ್ದು, ಎಸ್.ಡಿ.ಎಂ.ಸಿ ಸಮಿತಿಯ ಸಭೆಯಲ್ಲಿ ಕನಿಷ್ಟ ಸಮಿತಿಯ ಅರ್ಧದಷ್ಟು ಸದಸ್ಯರು ಹಾಜರಿರತಕ್ಕದ್ದು).

ಶೂ ಮತ್ತು ಸಾಕ್ಸ್‌ಗಳ ಖರೀದಿ ಪ್ರಕ್ರಿಯೆ ಪ್ರಾರಂಭಿಸುವ ಮುನ್ನ ಎಸ್.ಡಿ.ಎಂ.ಸಿಯು ಅನುಮೋದಿತ ಸಮಿತಿಯನ್ನು ರಚಿಸಿ ಖರೀದಿ ಪ್ರಕ್ರಿಯೆ ಪ್ರಾರಂಭಿಸುವುದು. ಒಂದು ವೇಳೆ ಸಂಬಂಧಿಸಿದ ಶಾಲಾ ಎಸ್.ಡಿ.ಎಂ.ಸಿ. ಕಾರ್ಯ ನಿರ್ವಹಿಸದಿದ್ದಲ್ಲಿ ರಚನೆಯಾಗದಿದ್ದಲ್ಲಿ ತಮ್ಮ ವ್ಯಾಪ್ತಿಯ ಸಕ್ಷಮ ಪ್ರಾಧಿಕಾರಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಅನುಮತಿ ಪಡೆದು ಶೂ ಮತ್ತು ಸಾಕ್ಸ್ ಖರೀದಿಯನ್ನು ವಿಳಂಬಕ್ಕೆ ಅವಕಾಶ ನೀಡದೆ ನಿಯಮಾನುಸಾರ ಕ್ರಮ ವಹಿಸತಕ್ಕದ್ದು.
ಶೂ ಮತ್ತು ಸಾಕ್ಸ್‌ಗಳನ್ನು ವಿದ್ಯಾರ್ಥಿಗಳ ನಿಯಮಿತ ಹಾಜರಾತಿಯನ್ನು ಗಣನೆಗೆ ತೆಗೆದುಕೊಂಡು ಅದಕ್ಕೆ ತಕ್ಕಂತೆ
ಖರೀದಿಸುವುದು. ಹೆಚ್ಚುವರಿ ಅಥವಾ ಕೊರತೆ ಆಗದಂತೆ ಎಚ್ಚರ ವಹಿಸುವುದು,

2023-24 ನೇ ಸಾಲಿನ ಈ ಯೋಜನೆಯ ಅನುಷ್ಟಾನಕ್ಕೆ ಆಯಾ ಶಾಲೆಯಲ್ಲಿನ ತರಗತಿವಾರು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೆಳಕಂಡ ದರದಲ್ಲಿ K-2 ಮೂಲಕ ಕ್ಷೇತ್ರಶಿಕ್ಷಣಾಧಿಕಾರಿಗಳ ಖಾತೆಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಕ್ಷೇತ್ರಶಿಕ್ಷಣಾಧಿಕಾರಿಗಳು ಅವರ ವ್ಯಾಪ್ತಿಯಲ್ಲಿ ಬರುವಂತಹ ಸರ್ಕಾರಿ ಪ್ರಾಥಮಿಕ ಶಾಲೆಗಳ ಎಸ್.ಡಿ.ಎಂ.ಸಿ. ಖಾತೆಗಳಿಗೆ ಕೆ-2ಮೂಲಕ ಅನುದಾನ ಬಿಡುಗಡೆ ಮಾಡುವುದು. ಈಗಾಗಲೇ ಶಾಲೆಗಳು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಕೂಡಲೇ ಮಕ್ಕಳ ಪಾದರಕ್ಷೆ ಅಳತೆ ತೆಗೆದುಕೊಂಡು ಅಳತೆಗನುಗುಣವಾಗಿ ಜುಲೈ-30 ರ ಒಳಗಾಗಿ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸತಕ್ಕದ್ದು.

ಈ ಯೋಜನೆಯ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಸೇವಾ ದೃಷ್ಟಿಯಿಂದ ದಾನಿಗಳು, ಖಾಸಗಿ ಸಂಘ ಸಂಸ್ಥೆಗಳು ಹೆಚ್ಚುವರಿ ಧನ ಸಹಾಯ ಮಾಡಿದಲ್ಲಿ ಅದನ್ನೂ ಬಳಸಿಕೊಂಡು ಇನ್ನೂ ಉತ್ತಮ ಗುಣಮಟ್ಟದ ಶೂ ಮತ್ತು ಸಾಕ್ಸ್‌ಗಳನ್ನು ಖರೀದಿಸಬಹುದು.

7. 2023-24ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ನಿಗಧಿತ ಸಮಯದಲ್ಲಿ ಶೂ ಮತ್ತು ಸಾಕ್ಸ್‌ಗಳ ಅನುದಾನವನ್ನು ಸಂಬಂಧಿಸಿದ ಬಿ.ಇ.ಓ, ರವರು ಮರುಹಂಚಿಕೆ ಮಾಡಿ, ಉಪನಿರ್ದೇಶಕರು(ಆ)ರವರ ಜೊತೆ ಮೇಲ್ವಿಚಾರಣೆ ಮಾಡುವುದು.ಖರೀದಿ ಪ್ರಕ್ರಿಯೆಯಲ್ಲಿ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರಿಗಾಗಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗಾಗಲಿ, ಇ.ಸಿ.ಓ, ಬಿ.ಆರ್.ಪಿ ಮತ್ತು ಸಿ.ಆರ್.ಪಿ ಗಳಿಗಾಗಲಿ ಯಾವುದೇ ಅಧಿಕಾರವನ್ನು ನೀಡಿಲ್ಲ. ಈ ವಿಚಾರದಲ್ಲಿ ಅಂದರೆ ಸರ್ಕಾರದ ಯೋಜನೆಯಾದ ಶಾಲಾ ಮಕ್ಕಳಿಗೆ ಸರ್ಕಾರದ ಬಜೆಟ್‌ನಿಂದ ಬಿಡುಗಡೆಯಾದ ಹಣದಲ್ಲಿ ಉಚಿತ ಶೂ ಮತ್ತು ಸಾಕ್ಸ್ ಖರೀದಿಯಲ್ಲಿ ಯಾವುದೇ ಜಿಲ್ಲಾ ಉಪನಿರ್ದೇಶಕರಾಗಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಲಿ, ಬಿ.ಆರ್.ಪಿ ಮತ್ತು ಸಿ.ಆರ್.ಪಿ ಗಳಾಗಲಿ ಹಸ್ತಕ್ಷೇಪ ಮಾಡದಂತೆ ಈ ಮೂಲಕ ಎಚ್ಚರಿಕೆ ನೀಡಲಾಗಿದೆ.

8. ಒಂದು ವೇಳೆ ಯಾರಾದರೂ ಅಧಿಕಾರಿಗಳು ಹಸ್ತಕ್ಷೇಪ ನಡೆಸಿರುವ ಬಗ್ಗೆ ದೂರುಗಳು ಬಂದಲ್ಲಿ, ಅಂತಹ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ, ಅಲ್ಲದೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಈ ಮೂಲಕ ಕಟ್ಟು ನಿಟ್ಟಾಗಿ ಸೂಚಿಸಲಾಗಿದೆ.

9. ಹೆಚ್ಚಿನ ಶಾಲೆಗಳಲ್ಲಿ ಖರೀದಿ ವೆಚ್ಚವು ಐದು ಲಕ್ಷಕ್ಕಿಂತ ಕಡಿಮೆ ಆಗುವುದರಿಂದ ಅಂತಹ ಶಾಲೆಗಳು ಮೂರು ಸಂಸ್ಥೆಗಳಿಂದ ಕೊಟೇಶನ್ ಪಡೆದು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮದ ಪ್ರಕಾರವಾಗಿ(ಕೆ.ಟಿ.ಟಿ.ಪಿ ಆಕ್ಟ್ 1999) ಖರೀದಿ ಪ್ರಕ್ರಿಯೆಯನ್ನು ನಿರ್ವಹಿಸುವುದು,ಕನಿಷ್ಠ ಮೂರು ಸಂಸ್ಥೆಗಳಿಂದ ದರಪಟ್ಟಿಗಳನ್ನು ಹೊಂದಿರಲೇಬೇಕು, ಖರೀದಿ ಮಾಡುವಂತಹ ಸಂಸ್ಥೆಯು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನೋಂದಣಿಯಾಗಿರಬೇಕು ಹಾಗೂ ಜೆಎಸ್‌ಟಿ ಸಂಖ್ಯೆ ಹೊಂದಿರಬೇಕು.

10. ಪ್ರತಿ ಶಾಲೆಯ ಪ್ರತ್ಯೇಕವಾಗಿ ಖರೀದಿ ಮಾಡತಕ್ಕದ್ದು, ಯಾವುದೇ ಕಾರಣಕ್ಕೂ ಒಂದಕ್ಕಿಂತ ಹೆಚ್ಚು ಶಾಲೆಗಳಾಗಲೀ ಅಥವಾ ಬ್ಲಾಕ್ ಮಟ್ಟದಲ್ಲಿ ಯಾವುದೇ ಕೇಂದ್ರೀಕೃತ ಮಾದರಿಯಲ್ಲಿ ಖರೀದಿ ಪ್ರಕ್ರಿಯೆ ಕೈಗೊಳ್ಳುವುದನ್ನು ನಿಷೇಧಿಸಲಾಗಿದೆ.

11. ಶೂಗಳ ಮೇಲ್ಪದರ ಪಾಲಿವಿನೈಲ್ (ಪಿ.ವಿ.ಸಿ) ಕೋಟೆಡ್ ವಿಸ್ಕೋಸ್ /ಪಾಲಿಯೆಸ್ಟರ್ /ಪಾಲಿಯೆಸ್ಟರ್ ಕಾಟನ್ ಫ್ಯಾಬ್ರಿಕ್ 1.5 ಎಂ.ಎಂ ಹೊಂದಿದ ಮತ್ತು ಎಕ್ಸ್‌ಟೆಂಡೆಡ್ ಪಾಲಿವಿನೈಲ್‌ ಕ್ಲೋರೈಡ್ (ಪಿ.ಎ.ಸಿ) ಸೋಲ್ ಹೊಂದಿದ ಹಾಗೂ ಪಾದರಕ್ಷಣೆಯ ಒಳಪದರು (Insock) ಬಟ್ಟೆ/ಫ್ಯಾಬ್ರಿಕ್‌ಯಿಂದ ಕೂಡಿರುವ (ಅಂದಾಜು 0.8 ಎಂ.ಎಂ. ದಪ)ಶೂಗಳನ್ನು ಖರೀದಿಸುವುದು ಎಸ್.ಡಿ.ಎಂ.ಸಿ.ಗಳು ಸ್ಯಾಂಡಲ್‌ಗಳನ್ನು ಖರೀದಿಸಲು ಪರಿಗಣಿಸಿದಲ್ಲಿ ವೆಲ್‌ ಸ್ಯಾಂಡಲ್ಲಗಳು (Velcro sandals) ಮತ್ತು 3-ಲೈನಿಂಗ್ ಸಾಕ್ಸ್ ಖರೀದಿಸಿ ವಿತರಿಸುವುದು.

12. ರಾಷ್ಟ್ರ ಮಟ್ಟದ ಪ್ರತಿಷ್ಠಿತ ಕಂಪನಿ/ಸಂಸ್ಥೆಗಳ ಮೊದಲ ಗುಣಮಟ್ಟ (FIRST QUALITY) ದಿಂದ ಕೂಡಿರುವ ಶೂ ಸಾಕ್ಸ್‌ಗಳನ್ನೆ ಕಡ್ಡಾಯವಾಗಿ ಖರೀದಿಸತಕ್ಕದ್ದು,

13. ಕ್ಷೇತ್ರಶಿಕ್ಷಣಾಧಿಕಾರಿಗಳು, ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರ ಸಭೆ ನಡೆಸಿ, ನಡಾವಳಿ ಮಾಡಿ ಖರೀದಿ ಪ್ರಕ್ರಿಯೆ ಚಾಲನೆ ಮಾಡುವಂತೆ ನಿರ್ದೇಶನ ನೀಡುವುದು, ಸದರಿ ಖರೀದಿ ಪ್ರಕ್ರಿಯೆಯು ಪಾರದರ್ಶಕವಾಗಿರುವಂತೆ ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿಯು ಕ್ಷೇತ್ರಶಿಕ್ಷಣಾಧಿಕಾರಿಗಳದ್ದೇ ಆಗಿರುತ್ತದೆ.

14. ನಿಯಮಾನುಸಾರ ಖರೀದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಖರೀದಿ ಬಳಕೆ ಪ್ರಮಾಣ ಪತ್ರವನ್ನು ಮತ್ತು ಖರೀದಿ ಸ್ವೀಕೃತಿಗಳನ್ನು ಸಂಬಂಧಿತ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಒದಗಿಸುವುದು ಮತ್ತು ಈ ವೆಚ್ಚಗಳನ್ನು ಆಡಿಟ್‌ಗೆ ಒಳಪಡಿಸುವುದು.

15. ಉತ್ತಮ ಗುಣಮಟ್ಟದ ಶೂ ಮತ್ತು ಸಾಕ್ಸ್‌ಗಳನ್ನು ಸಕಾಲದಲ್ಲಿ ವಿತರಣೆಯಾಗುವಂತೆ ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಉಪನಿರ್ದೇಶಕರುಗಳು ನಿಗಾವಹಿಸಿ ಸೂಕ್ತ ಮೇಲ್ವಿಚಾರಣೆ ಮಾಡುವುದು.

16. ಈ ಸಂಬಂಧ ಖರೀದಿ ಪ್ರಕ್ರಿಯೆ ಮುಗಿದ ನಂತರ ಗುಣಮಟ್ಟದ ಯಾದೃಚ್ಛಿಕ (Random) ಪರಿಶೀಲನೆಗಾಗಿ ಉಪನಿರ್ದೇಶಕರುಗಳು(ಆ)ರವರು ಪ್ರತಿ ಜಿಲ್ಲಾ ಹಂತದಲ್ಲಿ ಒಂದು ಸಮಿತಿಯನ್ನು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮಾರ್ಗದರ್ಶನದಲ್ಲಿ ರಚಿಸಿ ಪ್ರತಿ ತಾಲ್ಲೂಕಿನ ಶೇ 5 ರಷ್ಟು ಶಾಲೆಗಳಲ್ಲಿ ಗುಣಮಟ್ಟ ಪರಿಶೀಲಿಸಬೇಕು. ಹಾಗೂ ವರದಿಯನ್ನು ರಾಜ್ಯ ಕಛೇರಿಗೆ ದೃಢೀಕರಣದೊಂದಿಗೆ ಸಲ್ಲಿಸುವುದು.

17. ಉಪನಿರ್ದೇಶಕರ ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಬ್ಬ ಅಧಿಕಾರಿಯನ್ನು ಶೂ ಮತ್ತು ಸಾಕ್ಸ್ ನೋಡಲ್ ಅಧಿಕಾರಿಯನ್ನಾಗಿ ಮಾಡಿ ಪ್ರತಿ ಮಾಹೆಯ ಅಂತ್ಯಕ್ಕೆ ಶೂ ಮತ್ತು ಸಾಕ್ಸ್ ವಿತರಣೆ ಮಾಡಿರುವ ಮತ್ತು ಅನುದಾನ ಬಳಕೆ ಮಾಡಿಕೊಂಡಿರುವ ಬಗ್ಗೆ ಎಲ್ಲಾ ತಾಲ್ಲೂಕುಗಳಿಂದ ಮಾಹಿತಿ ಪಡೆದು ರಾಜ್ಯ ಕಛೇರಿಗೆ ಮಾಹಿತಿ ಸಲ್ಲಿಸುವಂತೆ ಕ್ರಮವಹಿಸಲು ಎಲ್ಲಾ ಉಪನಿರ್ದೇಶಕರುಗಳಿಗೆ ಸೂಚಿಸಿದೆ.

18. ತಾಲ್ಲೂಕು ಹಂತದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳು ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಅನುದಾನವನ್ನು ಸರಿದೂಗಿಸಿಕೊಂಡು ಅಂದರೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವ ಶಾಲೆಗಳಿಂದ ಉಳಿಕೆಯಾಗುವ ಅನುದಾನವನ್ನು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವ ಶಾಲೆಗಳಿಗೆ ಹೊಂದಾಣಿಕೆ ಮಾಡಿಕೊಂಡು ಅಂತಿಮವಾಗಿ ಉಳಿಕೆಯಾಗುವ ಅನುದಾನವನ್ನು ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರಿಗೆ ಚೆಕ್ ಮುಖಾಂತರ ಪಾವತಿಸುವುದು. ಅದೇ ರೀತಿ ಅನುದಾನ ಕೊರತೆಯಾದಲ್ಲಿ ಜಿಲ್ಲಾ ಉಪನಿರ್ದೇಶಕರಿಗೆ ವರದಿ ಮಾಡತಕ್ಕದ್ದು,

19. ಅದೇ ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು ವಿದ್ಯಾರ್ಥಿಗಳ ಮಾಹಿತಿಯನ್ನು ಮತ್ತು ಉಳಿಕೆ/ಕೊರತೆಯಾಗುವ ಅನುದಾನವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪಡೆದು ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲಿ ಕೊರತೆಯಾಗುವ ತಾಲ್ಲೂಕಿಗೆ ಹೊಂದಾಣಿಕೆ ಮಾಡಿ ಅಂತಿಮವಾಗಿ ಉಳಿಯುವ ಕೊರತೆ/ಉಳಿಯುವ ಅನುದಾನವನ್ನು Account Holder Name:- CPI, AC.NO: 54034600713. IFSC CODE:- SBIN0040526 ಈ ಖಾತೆಗೆ RTGS/NEFT ಮಾಡುವುದು,

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೂಲಕ ಆದೇಶ ಡೌನ್‌ಲೋಡ್ ಮಾಡುವುದು.



Which Department : Education



Central OR State Information: State



Location : Karnataka



Published Date : 01-07-2023



Information Term : Short



Purpose of Information : Teachers



Information Format : PDF



Information Size :854kb



Number of Pages : 12



Scanned Copy : Yes



Information Editable Text : No



Password Protected : No



Image Available : Yes



Download Link Available : Yes



Copy Text : No



Information Print Enable : Yes



File Quality : High



File size Reduced : No



File Password : No



File size Reduced : No



File Password : No


Rate : Free of cost


For Personal Use Only


logoblog

Thanks for reading About running the process of purchase of shoes and socks being provided free of charge to all children studying in class 1 to 10 in government schools in the state for the year 2023-24.

Previous
« Prev Post

No comments:

Post a Comment